ಸಂತೋಷ್ ಟಿ ಅವರು ಬರೆದ ಕವಿತೆ ‘ಮಾತು ಮುತ್ತಿನ ಹಾಗೆ’

ಮಾತು ಮುತ್ತಿನ ಹಾಗೆ ತುಟಿಗಳ
ಬಿರಿಯುವ ನಿನ್ನ ನಗೆಯ ಚುಂಬನ
ಮೈ ನವಿರೇಳುವ ರೋಮಾಂಚನ ಪುಳಕಂತೆ ನೀ
ದಂತದ ಬೊಂಬೆಯಂತೆ ರಂಜಿಸಿ
ನಡೆವ ನಿನ್ನ ನಡೆ ನಾಜೋಕಾ
ಬಣ್ಣಿಸುವ ರಸಿಕರ ಕನಸಿನ ಹರಿಣೀ ಸುಂದರಿ ನೀ

ಕನಸಿನ ರಾತ್ರಿಯಲಿ ಬಳಲುವರ
ಮದನನ ಕೈದು ವಲ್ಲಿ ತರುಣಿ
ನೀ ಚೆಲುವೆ ಚೆಂದುಳ್ಳಿ ಬೆಡಗಿ ತುಡಿಗಿ ಹಡಗೇ
ನವ ವಸಂತದ ಒಸಗೆಯ ಬೆಸುಗೆ
ತಳಿರ ತೋರಣ ಲತಾ ಕಾನನ
ಪಲ್ಲವದ ಚಿಗುರೆ ಕಲ್ಪನೆಯ ನಯನೇ ನೋಟವೇ

ಪರಿಸರದ ಸಹ್ಯಾದ್ರಿ ಮಡಿಲಲಿ
ಜೀವ ತೊಟ್ಟಿಲು ಕಟ್ಟಿ ಜೀಕು
ವ ಭೀಭಿತ್ಸ ರಮಣೀಯ ಛಾಯೆ ಜೀವಸಂಕುಲವಾ
ಪೊರೆದು ತೊರೆಯಾಗಿ ನದಿಯಾ
ಗಿ ಹರಿದು ರಕ್ಷಿಸಿದ ಕರುಳ ತಾ
ಯೆ ಹಸಿರು ಮರಗಳ ನಭವ ತಬ್ಬಿದ ಗಿರಿಜೆ ಮಯೇ

ತ್ರಿಗುಣಶೀಲನ ಪುರುಷ ರೂಪ
ನ ರುದ್ರ ರಮಣನ ಬೊಮ್ಮನ ಸಿ
ರಿ ಭೂರಮೆಯೆ ಬೆರಗ ತಣಿಸಿ ತುಂಬಿ ನಲಿಯುವ ಹೆಣ್ಣೇ
ನೆಲ್ಲ ಇಳೆಗಳ ಹಕ್ಕಿ ಕೊರಳ
ಕಡಲ ಮೊರೆತದ ಜುಳುಜುಳು ನಾ
ದ ಸಂಗೀತದ ಮನವ ಮಿಡಿವ ಸರಸ್ವತಿ ದೇವಿಯೇ

ಬಾನ ಬಯಲಲಿ ಕಾಡು ಮೇಡಲಿ
ಮಳೆಯ ಹನಿಯಲಿ ಬೆಟ್ಟಗುಡ್ಡದಿ
ಜಿನುಗಿ ಒಸರುವ ಜರಿಯ ತೊರೆಯಲಿ ಗಾಳಿಯಲೆಯಲಿ ನೀ
ಬೆಂಕಿ ಉರಿಯಲಿ ಅನಿಲ ಹಣತೆನಿ
ತಾಯ ಪಂಚೇಂದ್ರಿಯ ಪ್ರಾಣನಿ
ದೇಹ ಗೇಹದಲಿ ಜೀವಕುಸಿರು ಚೇತನದಾಯಿನೀ

ಶಿವನ ಜಾಟಾ ಜೂಟಿ ಗಂಗೆನಿ
ಚರಾಚರ ದಿವ್ಯವಾಸಿ ನೀ
ಕಿರಣ ವಿಕಿರಣ ಅಣುಪರಮಾಣು ಭೌತ ವಿಜ್ಞಾನೀ
ಭಾವಭಾವದಿ ಕಲೆ ಸೃಷ್ಟಿ ನಿ
ಜ್ಞಾತಿ ವಿಜ್ಞಾತಿ ಕ್ಷಿತಿಜ
ಧಾರಿಣಿ ಸಕಲ ಕಲಾ ಸಂಸ್ಕೃತಿ ಸಂಸ್ಕಾರ ನಿನೇ

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop