ರಾಘವೇಂದ್ರ ಮಂಗಳೂರು ಅವರು ಬರೆದ ನ್ಯಾನೋ ಕಥೆಗಳು

ನಾಸ್ತಿಕ
====
” ನಾನು ನಾಸ್ತಿಕ ಗೊತ್ತಾ?…”
ಹೇಳಿದ ಆತ.
“ಅಂದರೆ ದೈವ ಶಕ್ತಿಯನ್ನು
ನಂಬುವುದಿಲ್ಲವೇ..?” ಕೇಳಿದೆ.
” ದೈವಶಕ್ತಿಗೆ ಕೂಡ ಆಧಾರವಾದ
ಮಹಾಶಕ್ತಿಯನ್ನು ಮಾತ್ರ ನಾನು
ನಂಬುತ್ತೇನೆ…” ಎಂದು
ಉತ್ತರಿಸಿದ ಆತ.

ಪಾನಿ ಪೂರಿ
=======
ಯು ಎಸ್ ನಿಂದ
ಜಿಗ್ರೀ ದೋಸ್ತ್ ಬಂದ.
” ಎಲ್ಲಿಗೆ ಹೋಗೋಣ…?”
ಇಟಾಲಿಯನ್ ರೆಸ್ಟೋರೆಂಟ್…
ಚೈನಿಸ್ ಫುಡ್ ಕೋರ್ಟ್…
ಕೇಳಿದೆ ಗೆಳೆಯನನ್ನು.
” ನಮ್ಮ ಕಾಲೋನಿಯ
ಪಾನಿ ಪುರಿ ಬಂಡಿ ಕಡೆಗೆ…”
ಉತ್ಸಾಹದಿಂದ ಹೇಳಿದ.
ಸ್ಪಷ್ಟವಾಗಿ ಅರ್ಥವಾಯಿತು…
ನನ್ನ ದೋಸ್ತ್ ಎಂದಿಗೂ
ಬದಲಾಗೊಲ್ಲ!

ಜನಸಂಖ್ಯೆ
======
ಮೆಟ್ರೋ ರೈಲು
ಪ್ರಯಾಣಿಕರಿಂದ
ಕಿಕ್ಕಿರಿದು ತುಂಬಿತ್ತು.
ಸ್ಟೇಷನ್ – ಸ್ಟೇಷನ್
ಮಧ್ಯೆ ಮತ್ತಷ್ಟು
ರಶ್ ಜಾಸ್ತಿ ಆಗುತ್ತಿತ್ತು.
ಆ ನೂಕಾಟದ
ಕಾರಣದಿಂದ ಇಬ್ಬರೂ
ತುಂಬಾ ಸನಿಹ ನಿಂತರು.
ಆತ ಆಕೆಗಷ್ಟೆ ಕೇಳುವ
ಹಾಗೆ ಪಿಸು ಧ್ವನಿಯಲ್ಲಿ ಉಸುರಿದ
“ವಿಶ್ವ ಜನಸಂಖ್ಯಾ ದಿನದ
ಹಾರ್ದಿಕ ಶುಭಾಶಯಗಳು…”!

ಹೆಣ್ಣು ನೋಡುವ ಶಾಸ್ತ್ರ..
=============
ತಾನು ಇಷ್ಟ ಪಟ್ಟ ಹುಡುಗ
ತನ್ನನ್ನು ನೋಡಲು
ಬಂದದ್ದು ಕಂಡು ಮನಸು
ಮುದಗೊಂಡಿತು.
ತನ್ನ ಮನಸನ್ನು ಅರಿತ
ಅಪ್ಪನೇ ಕರೆತಂದಿದ್ದಾನೆ
ಎಂದು ಗೊತ್ತಾದರೆ ಆಕೆಯ
ಸಂತಸ ದುಪ್ಪಟ್ಟಾಗುವದರಲ್ಲಿ
ಎಳ್ಳಷ್ಟೂ ಸಂಶಯವಿಲ್ಲ!

ಏನಲೇ …
======
ವೃದ್ಧಾಶ್ರಮದಲ್ಲಿನ ಹೊರಗಡೆ
ಯಾರೊಂದಿಗೋ ಫೋನಿನಲ್ಲಿ
ಮಾತನಾಡಿದ ಬಳಿಕ ಆತನ
ಮುಖ ಚರ್ಯೆ ಬದಲಾಯಿತು.
” ಯಾಕೆ… ಏನಾಯ್ತು…?”
ಕೇಳಿದ ವೃದ್ಧಾಶ್ರಮದಲ್ಲಿನ
ಸಹವರ್ತಿ.
” ನನ್ನನ್ನು ಎನಲೇ… ಎಂದು
ಏಕ ವಚನದಲ್ಲಿ
ಮಾತನಾಡಿಸುತ್ತಿದ್ದ
ಕಟ್ಟ ಕಡೆಯ ವ್ಯಕ್ತಿ
ಕೂಡ ಹೊರಟು ಹೋದ…”
ಕಣ್ಣೀರು ಒರೆಸಿಕೊಳ್ಳುತ್ತಾ
ಆತ ಭಾರವಾದ ಹೃದಯದಿಂದ
ಒಳಗೆ ಹೋದ!

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop