ದೊಡ್ಡಬಸಪ್ಪ ಯಾದಗಿರಿ ಅವರು ಬರೆದ ಕವಿತೆ ‘ಮನದ ನೋವು’

ಜಾರಿ ಹೋದ ಮಧುರ ಬಯಕೆ
ಹೃದಯ ನೆನೆದು ಹಾಡಿದೆ
ನಿನ್ನ ಮನದ ನೋವನರಿತ
ಕನಸಿಗಿಂದು ನೆನಪಿದೆ

ಮನದ ಭಾವ ಮಿಲನದೊಳಗೆ
ಕಳೆದ ಗಳಿಗೆ ನೋವಿದೆ
ನನ್ನೊಲವೇ ಪ್ರೇಮ ಸುರಿದು
ನೂರು ತೊರೆಯು ಮಾಡಿದೆ

ಪ್ರೀತಿ ಮಿಡಿತ ಹೃದಯ ಬಡಿತ
ನಾನರಿತೆ ಕ್ಷಣದಲಿ
ಅರಿಯದವಳ ಒಲವಿಗಾಯ್ತೆ
ಬದುಕು ಆಹುತಿ ಜಗದಲಿ

ಪೆದ್ದು ಗೆಳತಿ ಮುಗ್ಧ ಮನದ
ಸಲುಗೆಯೆಂಬ ಬಳ್ಳಿಯು
ಒಡಲ ಜಲವ ಹೀರಿ ಬೆಳೆದು
ಒಲವು ಬಳುಕಿ ಚಿಗುರಲಿ

ಒಲವಿನಾಸೆ ನೆಪವನೂಡಿ
ಬಯಸಿ ಬಂದೆ ನನ್ನಲಿ
ಏನು ಅರಿಯದ ಹೃದಯ ಗೂಡು
ಹೇಗೆ ನಂಬಿ ತೂಗಲಿ?

ಚಂದಾದಾರರಾಗಿ
ವಿಭಾಗ
2 ಪ್ರತಿಕ್ರಿಯೆಗಳು
Inline Feedbacks
View all comments
Irene
19 August 2023 19:30

Nice dodbasu

ಜಯಪ್ರಕಾಶ ಹಬ್ಬು, ಬಿದರಲ್ಲಿ, ಶಿರಸಿ
19 August 2023 11:59

ದೊಡ್ಡಬಸಪ್ಪ ಅವರ ಮನದಾಳದ ನೋವು ಕವನದಲ್ಲಿ ಪ್ರಾಸಬದ್ದವಾಗಿ ಅನುಭವಿಸಿ ಬರೆದಿದ್ದಾರೋ ಎನ್ನುವಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಅಭಿನಂದನೆಗಳು

0
    0
    Your Cart
    Your cart is emptyReturn to Shop