ಡಾ.ಸದಾಶಿವ ದೊಡಮನಿ ಅವರಿಗೆ ದ.ಸಾ.ಪ “ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ”

ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ, ಕವಿ ಡಾ.ಸದಾಶಿವ ದೊಡಮನಿ ಅವರ ‘ಇರುವುದು ಒಂದೇ ರೊಟ್ಟಿ’ ಕವನ ಸಂಕಲನಕ್ಕೆ 2021ನೆಯ ಸಾಲಿನ ದಲಿತ ಸಾಹಿತ್ಯ ಪರಿಷತ್ತಿನ ‘ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ’ ಲಭಿಸಿದೆ. ಡಾ. ಸದಾಶಿವ ಅವರು ಇದೂವರೆಗೆ ‘ಧರೆಹತ್ತಿ ಉರಿದೊಡೆ’, ‘ನೆರಳಿಗೂ ಮೈಲಿಗೆ’, ‘ಇರುವುದು ಒಂದೇ ರೊಟ್ಟಿ’ ಕವನ ಸಂಕಲನಗಳನ್ನು; ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು: ಒಂದು ಸಾಂಸ್ಕೃತಿಕ ಅಧ್ಯಯನ’ ಸಂಶೋಧನಾ ಮಹಾಪ್ರಬಂಧವನ್ನು; ‘ಪ್ರತಿಸ್ಪಂದನ’ ವಿಮರ್ಶೆಯನ್ನು; ‘ದಲಿತ ಸಾಹಿತ್ಯ ಸಂಚಯ’ ಸಂಪಾದನಾ ಕೃತಿಯನ್ನು ಪ್ರಕಟಿಸಿದ್ದಾರೆ. ಅವರ ‘ಇರುವುದು ಒಂದೇ ರೊಟ್ಟಿ’ ಕವನ ಸಂಕಲನಕ್ಕೆ 2021 ನೇ ಸಾಲಿನ ‘ಸೃಷ್ಟಿಕಾವ್ಯ ಪುರಸ್ಕಾರ’ ಸಂದಿದೆ.

ಜುಲೈ 29 ಹಾಗೂ 30 ರಂದು ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ‘ಬೆಳ್ಳಿ ಸಂಭ್ರಮ’ ಪ್ರಯುಕ್ತ ಆಯೋಜಿಸಲಾಗಿರುವ ಹತ್ತನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಸದಾಶಿವ ದೊಡಮನಿ ಅವರಿಗೆ ‘ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದೆಂದು ದ.ಸಾ.ಪ ರಾಜ್ಯ ಘಟಕದ ಅಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop