ಏನೆನ್ನಲಿ ಗೆಳೆಯ ನಿನ್ನ ಬಗ್ಗೆ,
ಒಳ್ಳೆಯವನೆಂದೊ ಕೆಟ್ಟವನೆಂದೊ,
ಬದುಕು ನಿನ್ನ ಒಳ್ಳೆಯತನವನ್ನು ಕಸಿಯಿತೆಂದೋ..
ನೀನು ಕತ್ತಲೆಯ ಕೆಳಗೆ ನಿಂತು,
ಬೆಳಕಿನ ಪ್ರಪಂಚವನ್ನು ನೋಡುತ್ತಿರುವೆ.
ಹಾಗಾಗಿ ನೀನು ಯಾರಿಗೂ ಕಾಣಿಸುತ್ತಿಲ್ಲ.
ಆದರೆ ನಿನಗೋ ಎಲ್ಲವೂ ಸ್ಪುಟ.
ಬೆಳಕಿಗೆ ಬಂದು ನಿನ್ನ ಬಾಳ ಕತ್ತಲೆಗೂ ಬೆಳಕ ಹರಿಸು…
ಆಗ ಕಾಣುವುದೆಲ್ಲಾ ನಿಚ್ಚಳ.
ನೀನೂ,ನಿನ್ನ ಬದುಕು,ಹಾಗೂ ನೀ ನೋಡುವ ನೋಟ,
ಎಲ್ಲವೂ ಬೆಳ್ಳಂಬೆಳಕಾಗಲಿ,
ಪ್ರಪಂಚವನ್ನೇ ಬೆಳಗಿದರೂ ಹಣತೆ,
ಹೋಗಲಾಡಿಸಲಾಗಲಿಲ್ಲ ತನ್ನ ಕೆಳಗಿನ ಕತ್ತಲೆಯ.
ಹಾಗೆಯೇ ಪ್ರಪಂಚವನ್ನೇ ತಿದ್ದಬಲ್ಲವರು,
ತಮ್ಮನ್ನು ತಾವು ತಿದ್ದಿಕೊಳ್ಳಲಾರರು.
ಬೇರೆ ದೀಪವೇ ಬೇಕು,
ಆ ದೀಪದ ಕೆಳಗಿನ ಕತ್ತಲೆಯ ಓಡಿಸಲು.
ಹಾಗೆಯೇ ಬೇರೆ ವ್ಯಕ್ತಿಯ ಬೇಕು,
ನಿನ್ನ ಮನ ಕರಗಿಸಲು.