ಓ ಮಳೆಯೇ ನೀ ಸುರಿಯೇ..
ನಬೆಯ ಕಪ್ಪಾದ ಮೋಡದಿ,
ಗುಡುಗು ಮಿಂಚಿನ
ರೌದ್ರ ನತ೯ನದ,
ದಶ೯ನವ ತೋರು
ಇಳೆಯು ಬಿರು ಬಿಸಿಲಿಗೆ
ಬೆಂದು ಬೆಂಡಾಗಿ ಹೋಗಿಹಳು,
ನಿನ್ನ ಆಸೆ ಕಂಗಳಿಂದ ನೋಡುತಿಹಳು,
ಓ ಮಳೆಯೇ ನೀ ಸುರಿದು,
ಅವಳ ಒಡಲನು ತಂಪೆರಚು
ಕೆರೆ ಕಟ್ಟೆಗಳು ಜೀವಕಳೆ ಇಲ್ಲದೇ
ಒಣಗಿ ನಿಂತಿವೆ,
ಪ್ರಾಣಿ ಪಕ್ಷಿಗಳು ನೀರಿಗಾಗಿ
ಹಪಹಪಿಸುತ್ತಿವೇ,
ನೀ ಬೇಗ ಸುರಿಯೇ,
ಕೆರೆ ಕಟ್ಟೆಗಳೆಲ್ಲಾ ಮೈದುಂಬಿ ಹರಿಯಲಿ,
ಪ್ರಾಣಿ ಪಕ್ಷಿಗಳ ಒಡಲಿಗೆ ತಂಪೆರದು,
ಅವುಗಳ ಚಿಲಿಪಿಲಿ ನಾದ
ಜೇಂಕರಿಸಲಿ ಎಲ್ಲೆಲ್ಲೂ
ರೈತರು ಭೂಮಿಯೆಲ್ಲಾ
ಹಸನು ಮಾಡಿ
ನಿನ್ನ ಬರುವಿಕೆಗಾಗಿ
ಆಸೆ ಕಂಗಳಿಂದ,
ಹಣೆಗೆ ಕೈ ಹಚ್ಚಿ
ಆಕಾಶದಿ ಮುಖ ಮಾಡಿ
ಕಾಯುತ್ತಿರುವರು,
ಓ ಮಳೆಯೇ ನೀ ಸುರಿದರೆ,
ಮುಂಗಾರು ಬಿತ್ತನೆ ಯು
ಬಲು ಜೋರು,
ರೈತರ ಮೊಗದಲ್ಲಿ
ಸಂತಸದ ತೇರು
ಗಿಡ ಮರಗಳೆಲ್ಲಾ
ನೀ ಇಲ್ಲದೇ
ಒಣಗಿ ಬರಡಾಗಿ ನಿಂತಿವೆ,
ನೀ ಸುರಿದರೆ
ಅವೆಲ್ಲಾ ಮತ್ತೆ ಹಚ್ಚ ಹಸಿರಾಗಿ,
ನಿಸಗ೯ ದೇವತೆಯು
ಮೈದುಂಬಿ ನಗುವಳು
ಓ ಮಳೆಯೇ
ನೀ ಇದ್ದರೆ ಸಮೃದ್ಧಿ,
ನಿನ್ನಿಂದಲೇ ಜೀವಕಳೆ,
ನೀನೇ ಸಂತಸದ ಹೊನಲು,
ನೀ ಇದ್ದರೇ ಎಲ್ಲಾ,
ನೀ ಇಲ್ಲದೇ ಹೋದರೆ ಏನಿಲ್ಲ