ಎ. ಎಸ್. ಮಕಾನದಾರ ಅವರು ಬರೆದ ಕವಿತೆ ‘ಹೇಗಾಗಬಲ್ಲ ಅವ ಗೆಣೇಕಾರ’

ರಾತ್ರಿ ಬೆಲೆಯ ಗುಣಿಸುವ
ಗುಣಿಕಾರ
ಹೇಗಾಗ ಬಲ್ಲ
ಅವ ನನ್ನ ಗೆಣೆಕಾರ ?

ಉಬ್ಬು ತಗ್ಗು
ಮುಟ್ಟಿ ಸವರಿ
ಕಚ್ಚಿ ಕಲೆ ಉಳಿಸಿ
ದುರ್ನಾತ ಬೀರಿ
ಕಕ್ಕುವವ ಹೇಗಾಗಬಲ್ಲ
ಅವ ನನ್ನ ಗೆಣೇಕಾರ ?

ಗಲ್ಲ ತೀಡಿ ಮುದ್ದು ಮಾಡಿ
ಅಚ್ಚೇ ದಿನ್ ಬರುವ ಕುರಿತು
ಆಶ್ವಾಸನೆ ನೀಡಿ
ಮುಗಿಲ ಕಡೆ ಮಾರಿ
ನೋಡುವಂತೆ ಮಾಡಿಹೋದವ
ಹೇಗಾಗ ಬಲ್ಲ
ಅವ ನನ್ನ ಗೆಣೆಕಾರ ?

ಬೊಚ್ಚುಬಾಯಿ ಮುದುಕನ
ಮಾಸಿದ ನೋಟು
ಮೊಲೆಯ ಸಂದಿಗೆ ತುರುಕಿ
ಕಣ್ಣೆತ್ತಿ ನೋಡಿಯೂ ನೋಡದೆ
ಹೋದವ ಹೇಗಾಗ ಬಲ್ಲ
ಅವ ನನ್ನ ಗೆಣೆಕಾರ ?

ಚಂದಾದಾರರಾಗಿ
ವಿಭಾಗ
2 ಪ್ರತಿಕ್ರಿಯೆಗಳು
Inline Feedbacks
View all comments
ಮಲ್ಲಿಕಾರ್ಜುನ ಶೆಲ್ಲಿಕೇರಿ
20 June 2023 23:19

ವೈವಿಧ್ಯಮಯ ಸಾಹಿತ್ಯವಿದೆ

ಬಸವರಾಜ
19 June 2023 08:33

ಅದ್ಭುತವಾದ ಬರವಣಿಗೆ.

0
    0
    Your Cart
    Your cart is emptyReturn to Shop