ಮಹಾದೇವ ಹಳ್ಳಿ ಚಿಕ್ಕಸೂಗೂರು ಅವರು ಬರೆದ ಕವಿತೆ ‘ವೇಶ್ಯೆಯಿವಳಲ್ಲ’

ಮುಪ್ಪಾದ ತಂದೆ ತಾಯಿಯ
ತುತ್ತಿನ ಚೀಲ ತುಂಬಿಸಲು
ಮೈ ಮಾರಿಕೊಂಡವಳನು
ಕರೆಯದಿರಿ ವೇಶ್ಯೆಯಂದು….!

ಅಸಹಾಯಕ ತಂಗಿ ತಮ್ಮಂದಿರನು
ವಿದ್ಯಾವಂತರನ್ನಾಗಿಸಲು
ಬೆತ್ತಲಾದವಳ ಕರೆಯದಿರಿ
ವೇಶ್ಯೆಯೆಂದು….!

ಬಾಣಲೆಯಲ್ಲಿ ಸುಟ್ಟು ಕರಕಲಾದ
ಎಣ್ಣೆಯಂತೆ ತನ್ನ ಕುಟುಂಬವ
ಸಲಹುವುದಕ್ಕಾಗಿ ಯೌವ್ವನವನ್ನೇ
ಬಸಿದವಳ ಕರೆಯದಿರಿ ವೇಶ್ಯೆಯಂದು….!

ಬಡತನದ ಬೆಂಕಿಯಲಿ ತಾ ಬೆಂದು
ತನ್ನವರ ಬಾಳಿಗೆ ಬೆಳಕಾಗಿಹಳು
ಇಂತಹ ತ್ಯಾಗಮಯಿ ಹೆಣ್ಣನ್ನು
ಕರೆಯದಿರಿ ವೇಶ್ಯೆಯಂದು….!

ಪರಿಸ್ಥಿತಿಯ ಕೈಗೊಂಬೆಯಾಗಿ
ಬಿದ್ದಳವಳು ಈ ನರಕದೊಳಗೆ
ವಿಧಿಯಾಟಕ್ಕೆ ತಲೆಬಾಗಿ ಕೊನೆಗೆ
ಜರಿಯದಿರಿ ಅವಳನು ವೇಶ್ಯೆಯಂದು….!

0
    0
    Your Cart
    Your cart is emptyReturn to Shop