ಡಾ. ಸುರೇಶ ನೆಗಳಗುಳಿ ಅವರು ಬರೆದ ಕವಿತೆ ‘ಒಕ್ಕೊರಲ ಕರೆ’



ಈಗ ಎಲ್ಲಾ ಕಡೆ ಬಿಸಿಲು
ರಣರಣ
ಬಿಸಿ ಬಹಳಷ್ಟು ಖಾರ 
ಮತ ದಾನದ್ದೂ ಕೂಡಾ

ತಂಪಿಲ್ಲ ಕಂಪಿಲ್ಲ
ಕೆಂಪಾಗಿದೆ ಎಲ್ಲಾ
ಮುಖ ಮೈದಾನವಾಗಿ

ನೀರೋ 
ಝಳ ಝಳ ಇಳಿಯುವುದು
ಬೆನ್ನಿನ ಹಳ್ಳದಲ್ಲಿ
ಮಾತ್ರ
ಮತ್ತು ನೇತ್ರಾವತಿ ಒಣಗಿದರೂ
ನೇತ್ರ ಮಾತ್ರ ತೇವ
ಬಳಲಿ ಬೆಂಡಾಗಿ.


ಕವಿ ಡಾ. ಸುರೇಶ ನೆಗಳಗುಳಿ

ಈ 
ವರುಣನ ಋಣ
ಬಾಕಿ ಇಲ್ಲ ಅನಿಸುತ್ತದೆ
ಅಥವಾ
ಯುದ್ಧದಲ್ಲಿ ಸೂರ್ಯ
ಗೆದ್ದನೋ.

ನಾವೆಲ್ಲ ಮತ ನೀಡುತ್ತೇವೆ
ವರುಣಾ
ನೀನು ಗೆಲ್ಲ ಬೇಕು
ನಮಗೆ ಜಲ ಬೇಕು
ಕಾರ್ಮೋಡ ಹಾಕಲಿ
ನಾವಿನ್ನು ಕಾಂಕ್ರೀಟ್ ಕಾಡು
ಮಾಡಲು ಬಿಡುವುದಿಲ್ಲ.

ಒಣ ಮಹೋತ್ಸವ ಬೇಡ
ವನ ಮಹೋತ್ಸವ ಇರಲಿ
0
0
Your Cart
Your cart is emptyReturn to Shop