ನನಗೆ ಸಾಯುವುದಕ್ಕೆ ಇಷ್ಷವೇ
ನಿನ್ನ ಪ್ರೇಮದ ಮಡಿಲಲ್ಲಿ
ಮಾತ್ರ!
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!
ನನಗೆ ಸಾಯುವುದಕ್ಕೆ ಇಷ್ಟವೇ
ನಿನ್ನ ಅಂಗಾಲಿನ ನೋವಿಗೆ
ಮುಲಾಮಗುತ್ತಾ
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!
ನನಗೆ ಸಾಯುವುದಕ್ಕೆ ಇಷ್ಟವೇ
ರುರುವಿನಂತೆ ಅರ್ಧಾಯುಷ್ಯ ಧಾರೆಯೆರೆದು:
ನಿನ್ನೆಲ್ಲಾ ನೋವಿಗೂ
ನಾನಿರುವೆಯೆಂಬ ಭರವಸೆಯಾಗಿ
ಹೀಗೆ ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!
ನನಗೆ ಸಾಯುವುದಕ್ಕೆ ಇಷ್ಟವೇ
ನಿನ್ನ ಚೆಲುವ ಮುಂದೆ;
ನಿನ್ನ ಹದರ,ನಸುಗನ್ನೆ
ಅಂಗಾಲಿಗೆ ಮುತ್ತಿನ
ಮಳೆಸುರಿಸುತಾ
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!
ನನಗೆ ಸಾಯುವುದಕ್ಕೆ ಇಷ್ಷವೇ
ನಿನ್ನ ಕಣ್ಣನೋಟಕ್ಕೆ
ಅರೆಕ್ಷಣ ಹೃದಯ ನಿಂತಾಗ
ನಿನ್ನ ಅಪ್ಪುಗೆಯ ಆಲಿಂಗನವ
ಬಯಸುತಾ
ಪ್ರೇಮದಲ್ಲಿ ಸಾಯುವುದೆಂದರೆ
ಮರಣವಲ್ಲ!
ಎಲ್ಲಿರುವೆ ಗೆಳತಿ ನೀನು..?