ಅಮ್ಮಂದಿರ ದಿನದ ವಿಶೇಷತೆಗೆ ಮೃಣಾಲಿನಿ ಅವರು ಬರೆದ ಕವಿತೆ ‘ಅವ್ವ’

ಅವ್ವ

ಕರುಳ ಬಳ್ಳಿಯನ್ನು
ತನ್ನ ಜೀವಕ್ಕಿಂತ ಹೆಚ್ಚಿನ
ಕಕ್ಕುಲಾತಿಯನ್ನು ಕೊಟ್ಟು,
ಪೋಶಿಸಿ, ಪ್ರೀತಿಸಿ
ತನ್ನ ಉಸಿರನ ಕೊನೆಯವರೆಗೂ
ಬಿಟ್ಟು ಕೊಡದ

ಕೊರಗಿ, ಸೊರಗಿ
ಸಾಕಿ ಸಲುಹಿ, ಸಂಬಾಳಿಸುವ,
ತಲೆ ಸವರಿ ಆಶೀರ್ವದಿಸಿವ,
ಬೈದು ಬುದ್ಧಿ ಹೇಳುವ
ತಿದ್ದಿ ತೀರ್ಪು ಕೊಡುವ,
ಮೆಚ್ಚಿದರೂ ಹೆಚ್ಚಿಗೆ ಹೇಳದ,
ಬೆಚ್ಚಿದರೆ ಬಿಗಿದಪ್ಪುವ,
ಬಿದ್ದರೆ ಮೇಲೆತ್ತುವ

ಸೋತರೆ,
ಸ್ಫೂರ್ತಿ ತುಂಬುವ,
ಗೆದ್ದರೆ ದೇವರಿಗೆ ಕೈ ಮುಗಿವ ಕೈ..
ಜಗತ್ತಿನ ಏಕೈಕ ಜೀವ ಅದು ತಾಯಿ,
ಅಮ್ಮ, ಅವ್ವ, ಮಾ.

ತನ್ನನ್ನು ತನ್ನ ಸಂತಾನಕ್ಕೆ ಅರ್ಪಿಸಿ,
ಜೀವ ಹಿಂಡಿ ಅದಕ್ಕುಣಿಸುವ,
ದೇಹದ ನೀರಿಗೆಗಳನ್ನು ಮುಟ್ಟಿ
ತಾಯ್ತನದ ಕುರುಹಾಗಿ ಕಾಪಾಡುವ

ತಾರೆ ಚಂದ್ರನನ್ನು
ಸೆರಗಲ್ಲಿ ಕಟ್ಟಿ ಕಥೆಹೇಳುವ,
ಮೆದುವಾದ ಮಮ್ಮುವನ್ನು ಕಿವುಚಿ
ಹದ ಮಾಡುವ
ದೃಷ್ಟಿ ತಾಗಿತು ಎಂದು
ತಾನೇ ತನ್ನ ದೃಷ್ಟಿಯನ್ನು
ಬೇರೆಡೆ ನೆಡುವ

ನಿದ್ದೆಗೆಟ್ಟು, ಊಟ ಬಿಟ್ಟು,
ಜೀವವನ್ನು ಒತ್ತೆ ಇಟ್ಟು ಬೆಳೆಸುವ..
ಜಗತ್ತಿನ ಏಕೈಕ ಜೀವ ಅದು ತಾಯಿ,
ಅಮ್ಮ, ಅವ್ವ, ಮಾ.

0
    0
    Your Cart
    Your cart is emptyReturn to Shop