ಪುಷ್ಪಾ ನಾಗತಿಹಳ್ಳಿ ಅವರು ಬರೆದ ಕವಿತೆ ‘ಕ್ಷಮಯಾಧರಿತ್ರಿ’

ಇಲ್ಲಿ ಏನೇ ಮಾಡಿದರೂ
ಜಯಿಸಬಹುದು..

ಇಲ್ಲಿ ನ್ಯಾಯ ಅನ್ಯಾಯಗಳ
ತೂಗುವ ತಕ್ಕಡಿ ಬೇಕಿಲ್ಲ..
ತೂಕದ ಬಟ್ಟುಗಳಲ್ಲಿ
ಅಂಕಿಗಳೇ ಇಲ್ಲ..

ತಕ್ಕಡಿ ಹಿಡಿದವನ ಕೈಲಿ ಹೆಬ್ಬೆರಳೇ ಇಲ್ಲ
ಭರತಮಾತೆ ಕ್ಷಮಯಾಧರಿತ್ರಿ.
ಕರೆಯದೆ ಬಂದ
ಭಂಡರಿಗೆಲ್ಲಾ ಜಾಗಕೊಟ್ಟು

ಬೆಳ್ಳಿ ಬಂಗಾರ ನವರತ್ನ,
ಸಂಪತ್ತು,ಉಡಿತುಂಬಿ ಕಳಿಸಿದವಳು.
ಉಂಡುಟ್ಟು ಹೊತ್ತುಹೋದವರ
ಬಗ್ಗೆಯೂ ಕರುಣಿತೋರಿದವಳು
ಹೊಡೆದ ದೇಗುಲಗಳ ಊನ ಶಿಲ್ಪಗಳ
ಮೌನವಾಗಿ ದಿಟ್ಟಿಸಿ ನಿಟ್ಟುಸಿರಾದವಳು
ಏಕೆಂದರೆ ಇವಳು ದಯಾಮಯಿ..

ಇಲ್ಲೀ ಏನು ಮಾಡಿದರೂ ಜಯಿಸಬಹುದು.
ಇಲ್ಲಿ ನೀನೂಮಂತ್ರಿಯಾಗಬಹುದು..
ಷಡ್ಯಂತ್ರಿ ಯಾಗಬಹುದು..

ಹೆಂಡ ಖಂಡಗಳ ದಾನಮಾಡಿ,
ಮಸ್ತಿ ಮೋಜಿನ ಪಾನಮಾಡಿ,
ಜೂಜು ಬಾಜಿನ ಅಡ್ಡ ತೋಡಿ,
ಓಟು ಕೊಂಡು ,ಘಾಟುಘಾಟು
ಮಾಂಸದೂಟ ಮಾಡಿ ಗೆಲ್ಲಬಹುದು,
ನೀನಿಲ್ಲಿ ಸಲ್ಲಬಹುದು ..
ಗದ್ದಿಗೆ ಏರಿ ಗುದ್ದಬಹುದು..
ಸಿಕ್ಕಿದನೆಲ್ಲ ಮೆದ್ದಬಹುದು..
ಖುರ್ಚಿ ಅಲುಗಾಡದಂತೆ ಗಟ್ಟಿಯಾಗಿರಲು
ದುಡ್ಡಿನ ತಳಪಾಯ ಸುಳ್ಳು ಗಾರೆಯ
ಲೇಪ ಹಚ್ಚಿದರೆ ಸಾಕು
ನೀನೂ ರಾಜ್ಯವಾಳಬಹುದು..
ಏಳ್ಗೆಗೆ ಶ್ರಮವೇಇಲ್ಲ..
ಓಟುಒತ್ತಿದವನ ನೆನಪು ಬೇಕಿಲ್ಲ..
ಇಲ್ಲಿ ಎಲ್ಲವನು ಜಯಿಸಬಹುದು!

0
    0
    Your Cart
    Your cart is emptyReturn to Shop