ಅಂಜನ್ ಕುಮಾರ್ ಅಪ್ಪಣ್ಣನಹಳ್ಳಿ ಅವರು ಬರೆದ ಕವಿತೆ ‘ಕಾಸಿನ ಬೀಗ’

ಮನದ ನೋವಿಗೆ
ಮಸಣದ ಮೌನವು ಕೂಗಿದೆ
ಕನಸಿನ ಬಾಗಿಲಿಗೆ
ಕಾಸಿನ ಬೀಗವು ತೂಗಿದೇ
ಆಸೆ ಕರಗಿರಲು
ಕನಸು ಕಾದಿರಲು
ಮನಸಲಿ ನಿನ್ನಯ
ನೆನಪಿನ ಹಣತೆಯು
ನೋವಿನ ಎಣ್ಣೆಯಲ್ಲಿ ಉರಿದಿದೆ.

ಕಣ್ಣ ಕಣ್ಣೀರ್ಗೇ
ಕಾಗದದ ಕವಿತೆಯು
ಸಾಂತ್ವಾನ ನೀಡಿದೆ
ಸಿಗದ ಪ್ರೀತಿಗೆ
ಕಾಣದ ಕಲ್ಪನೆಯು
ಕನಸನ್ನು ಕಟ್ಟಿದೆ……

ಚಲಿಸುವ ಕಾಲದಲಿ
ಮನುಷ್ಯನ ಸ್ವಭಾವವು
ಸತ್ಯ ಧರ್ಮವ ತೊರೆದಿದೆ
ಕಾಸಿನ ಕಣ್ಣಿಗೆ
ಮನದ ಬಯಕೆಗಳು
ಕತ್ತಲ ಕೋಣೆಯ ಸೇರಿವೆ.

ಮನಸಿಗೆ ಬೇಸರ
ಸಾವಿಗೆ ಸಡಗರ
ಮಾಸಿದ ಮನಸಿಗೆ
ಬಾಡಿದ ಹೂಆಸೆಗೆ
ಅಳುವ ಕಣ್ಣಿಗೆ
ನಿನ್ನ ಪ್ರೀತಿಯೇ ಚೈತನ್ಯ ತಂದಿದೆ.

0
    0
    Your Cart
    Your cart is emptyReturn to Shop