Sale!

ಒಂದು ಹೆಣ್ಣು ಒಂಟೆಯ ಹತ್ಯೆ

ಮಿಂಚುಳ್ಳಿ ಮಾತು

ಕನ್ನಡದ ಮಹತ್ವದ ಕವಿಯಾಗಿರುವ ಪ್ರತಿಭಾ ನಂದಕುಮಾರ್ ಅವರ ಅನುವಾದ ಸಂಕಲನವಾದ ‘ಒಂದು ಹೆಣ್ಣು ಒಂಟೆಯ ಹತ್ಯೆ ‘ ಸಂಕಲನವು ಕಾಲ, ಸಮಾಜ ಮತ್ತು ಮಾನವೀಯ ಅನುಭವಗಳ ಸೂಕ್ಷ್ಮ ಅಲೆಯನ್ನೇ ಓದುಗರ ಮುಂದೆ ತೆರೆದಿಡುತ್ತದೆ. ವಿಭಿನ್ನ ದೇಶ–ಭಾಷೆ ಕವಿಗಳ ಧ್ವನಿಗಳು ಇಲ್ಲಿ ಒಂದೇ ವೇದಿಕೆಯಲ್ಲಿ ಸಂಗಮಗೊಂಡು, ಬದುಕಿನ ನೋವು–ನಲಿವು, ಅಸಮಾನತೆ, ಸ್ತ್ರೀ-ತತ್ವ, ಹಿಂಸೆ, ಪ್ರೀತಿ ಮತ್ತು ಪ್ರತಿರೋಧಗಳ ಕುರಿತು ಆಳವಾದ ಸಂವಾದವನ್ನು ನಿರ್ಮಿಸುತ್ತವೆ. ಪ್ರತಿ ಕವಿತೆಯೂ ತನ್ನದೇ ಆದ ಭಾಷಿಕಸೌಂದರ್ಯ ಮತ್ತು ವಿಚಾರದ ತೀವ್ರತೆಯೊಂದಿಗೆ ಓದುಗರ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತದೆ. ಮೂಲ ಕವಿತೆಗಳ ಆತ್ಮವನ್ನು ಕಾಪಾಡಿಕೊಂಡು ಕನ್ನಡಕ್ಕೆ ತಂದಿರುವ ಅನುವಾದಗಳು, ಭಾಷಾಂತರವೆಂಬುದು ಕೇವಲ ಪದಗಳ ವರ್ಗಾವಣೆ ಅಲ್ಲ; ಅದು ಸಂಸ್ಕೃತಿಗಳ ಮಧ್ಯೆ ಸೇತುವೆಯನ್ನು ನಿರ್ಮಿಸುವ ಸೃಜನಾತ್ಮಕ ಕ್ರಿಯೆಯೆಂಬುದನ್ನು ಸಾಬೀತುಪಡಿಸುತ್ತವೆ.
ಈ ಸಂಕಲನದ ಕವಿತೆಗಳು ಸುಲಭ ಓದಿಗೆ ಸಿಗುವುದಿಲ್ಲ, ಚಿಂತನೆಗೆ, ಪ್ರಶ್ನೆಗೆ ಮತ್ತು ಸಂವೇದನೆಗೆ ಒಳಗೊಳ್ಳುತ್ತವೆ. ಸಮಕಾಲೀನ ಜಗತ್ತಿನ ಸಂಕೀರ್ಣತೆಯನ್ನು ಕವಿತೆಯ ಮೂಲಕ ಅರಿಯಲು ಆಸಕ್ತರಾದ ಎಲ್ಲರಿಗೂ ಇದು ಅರ್ಥಪೂರ್ಣವಾದ ಕವಿತಾ ಸಂಕಲನವಾಗಲಿದೆ ಎಂಬ ನಂಬಿಕೆಯಿದೆ. ಈ ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸುತ್ತಿರುವುದು ಹೆಮ್ಮೆಯ ವಿಷಯ. ಓದುಗರ ಪ್ರೀತಿಯೂ ಈ ಕೃತಿಗೆ ಜೀವ ತುಂಬಲಿ ಎಂಬುವುದು ನನ್ನ ಆಶಯ.

– ಸೂರ್ಯಕೀರ್ತಿ

Original price was: ₹250.00.Current price is: ₹225.00.

0
    0
    Your Cart
    Your cart is emptyReturn to Shop