ಕನಸುಗಳ ಮಾರುಕಟ್ಟೆಯಲಿ
ಕನಸುಗಳ ಮಾರಲು ಬಂದಿಹೆನು
ಇಲ್ಲಿ ತರಹೇವಾರಿ ಕನಸುಗಳು ಲಭ್ಯ
ಮಕ್ಕಳ ಲೋಕದಿಂದ ಕಿನ್ನರ ಲೋಕದವರೆಗೂ..
ಸಾಮಾಜಿಕ, ರಾಜಕೀಯ, ಶೈಕ್ಷಣಿಕ,
ಆರ್ಥಿಕ, ಧಾರ್ಮಿಕ….
ಯಾರಿಗೆ ಯಾವುದು ಬೇಕೋ ಆಯ್ದುಕೊಳ್ಳಿ
ಕೆಲವೊಂದು ಬಿಕರಿಯಾಗದೆ
ಹಾಗೆ ಉಳಿದಿವೆ ಧೂಳಿಡಿದು
ರಂಗು ರಂಗಿನ ಕನಸುಗಳು ಮಾತ್ರ
ಚೌಕಾಸಿ ಇಲ್ಲದೆ ಮಾರಾಟವಾಗುತಿವೆ
ಸತ್ವವಿದ್ದು, ತಳುಕು ಬಳಕು ಇಲ್ಲದವು
ಸುಮ್ಮನಿದ್ದು ಬಿಟ್ಟಿವೆ ಲೋಕದ
ರೀತಿ ರಿವಾಜು ಕಂಡು
ಗ್ರಾಹಕರು ಕಡಿಮೆ ಎಂದಲ್ಲ
ಆಯ್ದುಕೊಳ್ಳುವವರು ಕಡಿಮೆ ಎಂದು
ಸ್ವರ್ಗದ ಆಸೆಯ ಕನಸುಗಳು
ಬೇಗ ಬೇಗ ಖಾಲಿಯಾಗುತಿವೆ
ಯಾವುದೇ ರಿಯಾಯಿತಿ ಇಲ್ಲದೆ..
ಮಾಡಿದ್ದು ಕೆಟ್ಟದ್ದಾದರೂ
ನರಕದ ಕನಸುಗಳು ಬೇಡವಾಗಿವೆ
ಹಾಗಿದ್ದರೆ ಹೇಳಿಬಿಡಿ,
ನಿಮಗೆ ಯಾವುದು ಇಷ್ಟ ಅದೇ
ಮಾರುವೆ ನಿಮ್ಮಿಷ್ಟದ ದರದಲಿ….
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
ಉತ್ತಮ ಕವನ ಮಲ್ಲಕ್
ಕನಸುಗಳು ಮಾರಾಟಕ್ಕಿವೆ ಎಂದೊಡನೆ, ಕನಸು ಕಾಣುವವರು ಕೊಂಬರೇ? ರಂಗಿನ ಕನಸುಗಳ ಕೊಂಡೆನೆಂದು ಕನಸು ಕಾಣುತಲಿರಿವರೆಲ್ಲಾ ಬದುಕಿಹರು...