ಕಟುಸತ್ಯವನ್ನು ಅನಾವರಣಗೊಳಿಸಿದ ಫೋಟೋ
ಜೈ ಭೀಮ, ವಕೀಲ್ ಸಾಬನಂತಹ ಇನ್ನು ಮುಂತಾದ ಸಿನಿಮಾಗಳನ್ನು ನೋಡಿದಾಗ, ಕಾಡೋದು ಒಂದೇ ಒಂದು ಪ್ರಶ್ನೆ. ಯಾಕೆ ಇಂತಹ ಘಟನೆಗಳ ಆಧಾರಿತ ಸಿನಿಮಾಗಳು ಕನ್ನಡದಲ್ಲಿ ಬರುತ್ತಿಲ್ಲವೆಂದು. ಆ ಒಂದು ಪ್ರಶ್ನೆಗೆ ಸಮಾಧಾನದ ಉತ್ತರವೆಂಬತೆ, ಇತೀಚಿಗೆ ‘ಫೋಟೋ’ ಸಿನಿಮಾ ತೆರೆ ಕಂಡಿತು. 14ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ನಾನು ನೋಡಿದ ಸಿನಿಮಾಗಳಲ್ಲಿ, ಮನದಲ್ಲಿ ಅಚ್ಚ ಅಳಿಯದೆ ಉಳಿದ ಛಾಯೆ ಎಂದರೆ ಅದು “ಫೋಟೋ” ಸಿನಿಮಾ.
ಮೊದಲಿಗೆ ಸಿನಿಮಾ ಉತ್ತರ ಕರ್ನಾಟಕದ ಭಾಷೆಯ ಸೊಗಡು, ಎಷ್ಟು ಚಂದವಾಗಿ ನೋಡುಗರನ್ನು ಆಳಕ್ಕಿಳಿಯುವಂತೆ ಮಾಡುತ್ತೆ. ಅಷ್ಟೇ ಸ್ಪಷ್ಟವಾಗಿ ಉತ್ತರ ಕರ್ನಾಟಕದ ಜನರು ನಿರುದ್ಯೋಗದ ಕಾರಣ, ವಲಸೆ ಹೋಗುವ ಕಥೆಯ ಕರಾಳತೆಯನ್ನು ಎತ್ತಿ ತೋರಿಸಿದೆ. ಸಿನಿಮಾ ಮೊದಲಿಗೆ ಸಣ್ಣ ಹುಡುಗನೊಬ್ಬನು ವಿಧಾನ ಸೌಧದ ಎದುರಿಗೆ ನಿಂತು ಫೋಟೋ ತೆಗೆದುಕೊಳ್ಳುವ ಆಸೆಯೊಂದಿಗೆ ಹೆಣೆಯಲಾಗಿದೆ.
ಕಥೆಯ ಅರ್ಧ ಭಾಗದವರೆಗೂ ಗುಟ್ಟು ಅರೆಯದಂತೆ ಸೆಳೆದುಕೊಂಡು ಹೋಗುತ್ತೆ ಸಿನಿಮಾ. ಆ ಹುಡುಗನ ಆಸೆಗೆ ಅವನ ತಂದೆ ತಾಯಿಯು ನೋಡುವಂತೆ, ಮಗ ವಿಧಾನ ಸೌಧ ಎಂದು ಪೊರೆಯುವ ಬಗೆ. ಎಲ್ಲವೂ ನಮ್ಮ ನಮ್ಮ ಹಳ್ಳಿ ಊರುಗಳಲ್ಲಿ ಮಕ್ಕಳ ಆಸೆಗೆ ತಂದೆ ತಾಯಿಯರು ಭರವಸೆ ನೀಡುವ ಬಗೆ. ಒಂದು ಕ್ಷಣ ನಮಗೆ ಪ್ರವಾಸ ಕಳಿಸಲು, ದುಡ್ಡು ಜಮಾಯಸಿ ಕೊಡುವ ಕ್ಷಣ ನೆನಪಾಯಿತು.
ಕೊರೋನಾ ನಿಮಿತ್ಯ ಶಾಲಾ ರಜೆ ಘೋಷಣೆ ಎನ್ನುವ ಮಾತು ಮೊದಲಿಗೆ ಕಿವಿಗಿ ಬಿದ್ದರು. ಕಥೆಯ ಜಾಡು ಇದೆ ಎನ್ನುವದನ್ನು ಅರಿಯಲಾರದಷ್ಟು, ಹುಡುಗನ ಫೋಟೋ ಆಸೆ ನೋಡುಗರನ್ನು ಮಗ್ನರಾಗಿ ಮಾಡಿಬಿಡುತ್ತದೆ.
ಇನ್ನೇನು ಹುಡುಗ ಫೋಟೋ ತೆಗಿಸಿಕೊಳ್ಳುವುದು , ಭೇಟಿ ಮಾಡುವ ಆಸೆ ಈಡೇರಿಸಿಕೊಳ್ಳುವ ದಿನ ಬಂತು ಎನ್ನುವಾಗ, ಲಾಕ್ ಡೌನ್ ಪದ ನನಗೆ ಮಾರ್ಚ್ 2019ರಲ್ಲಿ ಕಿವಿಗೆ ಬಿದ್ದಾಗ ಆದ ಆಘಾತವೇ ನೆನಪಿಸಿತು. ಹುಟ್ಟಿದ ಊರಿಗೆ ವಾಪಸ ಹೋಗುವ ಸಂದರ್ಭದಲ್ಲಿ ಗುತ್ತಿಗೆದಾರನು ಕೊಡುವ ಕೂಲಿ ಬಾಕಿ ಇಟಕೊಳ್ಳುವ ಸ್ಥಿತಿ ನಿನ್ನೆ ಮೊನ್ನೆ ನಡೆದ ಘಟನೆಗೆ ಹೋಲಿಸಬಹುದು. ಹೊಟ್ಟೆ ಪಾಡಿಗಾಗಿ ಊರು ಬಿಟ್ಟು ಹೋಗುವವರ ಸಂಖ್ಯೆ ಇದ್ದಷ್ಟೇ, ದೇಶ ಬಿಟ್ಟು ದೇಶಕ್ಕೆ ಬರುವವರ ಸಂಖ್ಯೆ ಗಣನೀಯವಾಗಿದೆ. ದೇಶ ಬಿಟ್ಟು ದೇಶಕ್ಕೆ ದುಡಿಯಲು ಬಂದವರಿಗೆ. ಕೂಲಿ ಕೊಡದೆ ಕೊನೆಗೆ ಅವರ ಊರಿಗೆ ನಡೆದು ಕೊಂಡೆ ಹೋಗುವಂತ ಪರಿಸ್ಥಿತಿಗೆ ಕಾರಣವಾಗುವಂತ ದಯನೀಯ ಸ್ಥಿತಿಯೂ ನಮ್ಮಲ್ಲಿ ಕಣ್ಣಿಗೆ ರಾಚುವಂತಿದೆ.
ಊರ ಬಿಟ್ಟು ಇದ್ದೂರಿಗೆ ಹೋಗುವಾಗ ಬಸ್ಗಳು ಇಲ್ಲ. ಮಗನಿಗೆ ವಿಧಾನ ಸೌಧಕ್ಕೆ ಹೋಗೋಣೊ ಬಾ ಎಂದು ಸುಳ್ಳು ಹೇಳಿ, ಕರೆದುಕೊಂಡು ಹೋಗುವಾಗ ಅಪ್ಪನಿಗೆ ಕಾಡುವ ನೋವು, ವಿಧಾನ ಸೌಧಕ್ಕೆ ಹೋಗುತ್ತಿಲ್ಲ ಎನ್ನುವ ಸತ್ಯ ತಿಳಿದ ಮಗ, ‘ಅಪ್ಪ ನಾನು ವಿಧಾನ ಸೌಧ ನೋಡಿದೆ ಎಂದು ಹೇಳು, ಇಲ್ಲಂದ್ರೆ ನನ್ನ ಸುಳ್ಳು ಬುರಕ ಎನ್ನುವರು ಸ್ನೇಹಿತರು’ ಎನ್ನುವ ಮಾತು ಪ್ರೆಸ್ಟೀಜ್ ಎನ್ನುವದು ಎಷ್ಟು ಕಾಡುತ್ತಲ್ಲ ಏನಿಸಿ ಕಣ್ಣೀರು ಬರುತ್ತೆ. ಬಸ್ ಇಲ್ಲ ಸಿಕ್ಕ ಸಿಕ್ಕ ಸಾಮಾನುಗಳನ್ನು ಹೊತ್ತು ಹೋಗುತ್ತಿರುವ ಟ್ರಕ್ ನಲ್ಲಿ ಹೋಗುವಾಗ ಅದು ಕೊನೆಯ ಮುಟ್ಟಿಸುವದಿಲ್ಲ. ಖಾಲಿ ಹೊರಟ ಕಾರಿನಲ್ಲಿ ಅರ್ಧ ಹಾದಿಯಲ್ಲಿ ಬಿಟ್ಟನಾದರೂ, ಸಹಾಯ ಮಾಡಿದೆ ಎನ್ನುವ ಬಿಟ್ಟಿ ಪ್ರಚಾರ. ಥೇಟ 10 ಕೆಜಿ ಫುಡ್ ಕೊಟ್ಟು ಫೋಟೋ ತೆಗಿಸಿಕೊಂಡ ಘಳಿಗೆಗಳು ಎಲ್ಲವು ಕಣ್ಣ ಮುಂದೆ ಮಸುಕು ಮಸುಕಾಗಿ ಹಾದು ಹೋದವು.
ಅರ್ಧದಾರಿಗೆ ಬಂದಾಗ ಕಾಲ ನಡಿಗೆಯೇ ಅನಿವಾರ್ಯ ಎಂದು ಹೆಜ್ಜೆ ಇಡುವಾಗ, ಎದುರಾಗುವ ತನ್ನ ಕಾಲ ಬ್ಯಾನಿ ಮಗನ ಜ್ವರ ಇನ್ನಷ್ಟು ಕಂಗೇಡಿಸಿತು. ಸಿಕ್ಕ್ ಸಿಕ್ಕ ಕಾರಿಗೆ ಕೈ ಅಡ್ಡ ಮಾಡಿ ನಿಲ್ಲಿಸಿದರೆ. ನಿಲ್ಲರಾರವು ನಿಂತರು ಕೊರೋನಾ ರೋಗಕ್ಕೆ ಹೆದರಿದ ಜನ ಮಾನವೀಯತೆ ಮಾರಿಕೊಂಡೆ ಬಿಟ್ಟರು. ಅತ್ತ ಊರಿಗೆ ಬೇಲಿ ಹಾಕಿದಾಗ ಮೇಲ್ವರ್ಗದ ಮತ್ತು ಕೆಳವರ್ಗದ ನಡುವಿನ ಜಟಾ ಪಟಿಯಲ್ಲಿ ನನ್ನೂರು ಅನ್ನುವ ಭಾವ ಬೇಲಿ ತೆಗಿಸಿದ ಖುಷಿ ಸಿನಿಮಾದಲ್ಲದಾರು ನೋಡಿದೆ ಅನ್ನುವ ಅಲ್ಪ ತೃಪ್ತಿ ಇದೆ.
ಊರಿನವರು ದವಾಖಾನೆಗೆ ಗಾಡಿ ಮುಗಿಸಿಕೊಂಡು ಬಂದು ನೋಡಿದಾಗ ಫೋಟೋ ಹುಡುಗ ಇನ್ನಿರುವುದಿಲ್ಲ. ತಂದೆಗೆ ದುಃಖದಲ್ಲಿ ಊರಿಗೆ ಬರುವ ಹೊತ್ತಿಗೆ, ಬಿಸಿ ರೊಟ್ಟಿ ಮಾಡಿ ಆಸೆಯಿಂದ ಕಾಯುತ್ತಿರುವ ತಾಯಿಗೆ ಮಗನ ಅಗಲಿಕೆ ಭರಿಸಲಾಗದ ದುಃಖವದು. ಆ ತಾಯಿಯ ದುಃಖ ನೋಡುವಾಗ, ಹೀಗೆ ಇನ್ನೇಷ್ಟೋ ಜನ ತಮ್ಮ ತಮ್ಮ ಮಕ್ಕಳು, ಗಂಡ,ಹೆಂಡತಿ,ಅಕ್ಕಾ, ತಮ್ಮ, ಅಣ್ಣ, ತಮ್ಮಂದೆರನ್ನು ಕಸಿದುಕೊಂಡು ಅನಾಥರ ಸೃಷ್ಟಿಗೆ ಕೋರನ ಕಾರಣವಾಯಿತೇನ್ನುವುದು, ನೆನಪಿಸಿಕೊಂಡರೆ ಮನಸು ಭಾರವಾಗುತ್ತದೆ.
ಕೊರೋನಾ ಮಾಯೆಯಲ್ಲಿ ಆಡಳಿತ ಸರಕಾರದ ದುರಡಾಳಿತಕ್ಕೆ, ಪ್ರಚಾರ ಪ್ರಿಯರ ತೆವಲಿಗೆ, ರೋಗದ ಭಯದಲ್ಲಿ ಮಾನವೀಯತೆ ಮಾರಿಕೊಂಡವರ ಕರಾಳತನಕ್ಕೆ ಫೋಟೋ ಹುಡುಗನಷ್ಟೇ ಅದೆಷ್ಟೋ ಜೀವಗಳ ಮುಗ್ದ ಕಂಗಳು ಬಳಲಿ ಬಳಲಿ ಪ್ರಾಣ ಬಿಟ್ಟಿದ್ದು ಕಾಡುತ್ತದೆ.
ಆ ಮುಗ್ದ ಜೀವಗಳು ಪ್ರಾಣ ಬಿಟ್ಟಿರುವುದಕ್ಕೆ ಕಾರಣ ಕಣ್ಣಿಗೆ ಕಾಣುವ ಬಡತನವಲ್ಲ. ಮೌಢ್ಯ ತುಂಬಿಕೊಂಡ ಸರಕಾರ, ಬೇಜವಾಬ್ದಾರಿತನ, ಸ್ಥಳೀಯ ದುರಾಡಳಿತ, ಮಾನವೀಯತೆಗಿಂತ ದೊಡ್ಡದಾಗಿ ಬೆಳೆದ ಧರ್ಮಾಂದತೆ, ಪ್ರಾಣ ಬಲಿ ಪಡೆದ ನಿಯಮಗಳು, ಆಸ್ಪತ್ರೆಯ ಕಟ್ಟು ನಿಟ್ಟಾದ ಪ್ರೊಸಿಸರ್ಗಳು, ಅಧಿಕಾರ ಎಂಬ ಭೂತ ಇವೆಲ್ಲವುಗಳು ಕೋರನ ಸಮಯದಲ್ಲಿ ಹಲವಾರು ಜೀವಗಳ ಬಲಿ ಪಡೆಯೋದಕ್ಕೆ ಕಾರಣವಾಗಿವೆ.
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಸ್ವಚ್ಛತೆಯ ಕುರಿತಾದ ಅತಿಯಾದ ಭ್ರಮೆ. ಇಲ್ಲಿ ಇನ್ನಿಷ್ಟು ವರ್ಗ ಸ್ಥಾನ ಮಾನಕ್ಕೆ ಎಡೆ ಮಾಡಿ ಕೊಟ್ಟಿತ್ತು. ಕೂಲಿ ಕಾರ್ಮಿಕರನ್ನು ಮನೆ ಕೆಲಸದವರನ್ನು ಇಂತಹ ದಯನೀಯ ಸ್ಥಿತಿಯಲ್ಲಿ ಮನೆ ಬಿಡಿಸಿದ್ದವರು, ಕೆಲಸ ಬಿಡಿಸಿದ್ದವರು ಹೆಚ್ಚು. ಇದ್ದವರ ತೋರಿಕೆ, ಬಗೆ ಬಗೆಯ ಭೋಜನ ಮಾಡಿ ತಿನ್ನುವುದರಲ್ಲಿತ್ತು, ಕೂಲಿ ಕಾರ್ಮಿಕರ ಸ್ಥಿತಿ ಅತಂತ್ರ ಮಾಡಿತು, ಅಷ್ಟೇ ಅಲ್ಲದೆ ಈ ಸಮಯದಲ್ಲಿ ಅತೀ ಹೆಚ್ಚು ಬಾಲ್ಯ ವಿವಾಹಗಳು ನಡೆದು ಹೋದವು.
ಬೇರೆ ದೇಶದಲ್ಲಿ ಹೇಗೋ ಏನೋ, ಆದರೆ ಭಾರತದಲ್ಲಿ ರೋಗ, ಬೆಲೆ ಏರಿಕೆ,ಆರ್ಥಿಕ ಮುಗ್ಗಟ್ಟು, ಎಲ್ಲವುಗಳು ಕಾಡುವುದು ಸಾಮಾನ್ಯ, ಪಡೆದುಕೊಳ್ಳುವುದು ಸಾಮಾನ್ಯ ಜನರ ಪ್ರಾಣವನ್ನೇ. ಫೋಟೋ ಮೂವಿ ಬಹಳ ಸರಳವಾಗಿ ಕಟು ಸತ್ಯವನ್ನು ಅನಾವರಣಗೊಳಿಸಿದೆ.
೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು"…
ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ…