ಕಸಿ ವಿಸಿಗೊಂಡಾ ಹೆಂಡತಿ ಗಂಡ
ಸಿಹಿ ನೋಡೆಂದೊಡೆ ಕಹಿ ಸಿಹಿಗೊಂಡಾ
ಹಸಿ ಬಿಸಿ ಉಂಡಾ ಇವ ಬಲು ಭಂಡಾ
ಬಂಡಿಯ ಮೇಲೆ ಹೆಂಡತಿ ಕಂಡಾ
ಕೆಂಡವ ಹೊತ್ತಾ ಬಸವನ ಕಂಡಾ
ಹಂಡೆಯ ಮೇಲೆ ತಾ ಕುಂತುಂಡ
ನಕ್ಕನು ಇವನು ಯಾರೋ ಮಹಿಳೆಯ ನೋಡಿ
ನಕ್ಕಳು ಹೆಂಡತಿ ಇವನಾ ನೋಡಿ
ಅತ್ತನು ಇವನು ಬೆತ್ತವ ನೋಡಿ
ಅತ್ತೆಯ ಇಳಿದಳು ಹೊತ್ತಿಗೆ ತಂದಳು
ಸುತ್ತಿಗೆ ಹಿಡಿದು ನೆತ್ತಿಗೆ ಬಿಟ್ಟಳು
ಮೆತ್ತಗೆ ನುಡಿದಳು ಕಾಲೊತ್ತೆಂದಳು
ಗೆಳಯರು ಬಂದರು ಕೊಡು ನೀರೆಂದರು
ಅವಳನು ಕಂಡರು ಬಿಡು ಬೇಡೆಂದರು
ಗರಿ ಗೆದರೆದ್ದಳು ಬರ್ರನೆ ಹೊರಟರು
ಅನುಜನು ಬಂದನು ಅಂಜುತಲೆಂದನು
ಅಟ್ಟಡವಿಗೆ ಸಿಕ್ಕ ಹೋರಿಯ ಕಂಡನು
‘ವರ’ಕರು ನಾ ವ್ಯಾಘ್ರನಡಿ ದೂಕದಿರು ಎಂದನು
ಅತ್ತಿಗೆ ಬಂದಳು ನಯವಾಗಿ ಅಂದಳು
ಹೆಣ್ಣನು ಅರಿಯದೆ ಹೊನ್ನವ ನುಂಗಿ
ಬಾಳನು ಕತ್ತಲೆ ಮಾಡದಿರು ಎಂದಳು
ಕರಗಿತು ಮನ ಮರುಗಿದ ಮಡದಿಯ ಕಂಡು
ಹರಿದು ಹೋಗುವ ಧನವನು ಸುಲಿದು
ಮದುವೆಗೆ ಬಂದ ತನ್ನ ತಂಗಿಯ ನೆನೆದು
ಎಂದನು ಮಡದಿಗೆ ಎಡವಿದನೆಂದು
ಸುಂದರ ಬಾಳನು ಕದಡಿದೇನೆಂದು
ಮನದ ಜ್ವಾಲೆ ನಂದಿಸಲೆಂದು
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
ಉತ್ತಮ ಕವಿತೆ ಸರ್..
ಇದು ಅನುಭವವಲ್ಲ, ಆದರು ಸ್ವರಸ್ಯ ಭರಿತ ನೈಜ ಸಾಲುಗಳು.......
ಉತ್ತಮವಾಗಿದೆ
ಆರಂಭದ ಸಾಲುಗಳು ಹಾಸ್ಯ ಪ್ರಧಾನವಾಗಿದ್ದು ಕೊನೆಯ ಸಾಲುಗಳು ವರದಕ್ಷಿಣೆಯ ಬಗೆಗೆ ಒತ್ತಿ ಹೇಳಿದೆ ...super sir .....