ಅಪ್ಪ ನಿಲುಕದ ಆಕಾಶ
ನಾ ಕಣ್ಣ ಬಿಟ್ಟ ದಿನದಿಂದ
ಕಾಣದ ಕೈಲಾಸ
ಒಮ್ಮೆಯೂ ಬರಲಿಲ್ಲ ಮನದಲ್ಲಿ
ಅಮ್ಮನ ವಿನಃ ಬೇರೆ ದೇವರು
ತಪ್ಪು ನನ್ನದಲ್ಲಾ
ತಪ್ಪು ಅಮ್ಮನದಲ್ಲಾ
ಆದರೂ ಈ ಘೋರ ವಿಧಿ ಆಟಕ್ಕೆ
ನಾವೂಗಳು ದೂರ
ಆ ಕಾಣದ ಕೈಲಾಸಕೆ
ಭಾವವೆ ಮೂಡಲಿಲ್ಲ
ಬಾನು ಬೇಕೆಂದು ಯಾವಾಗಲೂ
ಅನಿಸಲಿಲ್ಲ
ಅಮ್ಮನ ಮಡಿಲೆ ಕೈಲಾಸ ನನಗೆ
ಅಮ್ಮನ ಹೆಗಲೆ ವೈಕುಂಠವೂ
ತಪವಿಟ್ಟು ಸಾಕುತ್ತಿದ್ದಾಳೆ
ತಲುಪಲು ನನ್ನ ಗುರಿಯನ್ನು
ನನ್ನಲ್ಲಿ ಅವಳಿಗೆ ಜೀವನ ಸಾರವೂ
ಕೈಯಾ ಮುಗಿಯುವೇ ಓ ಭಗವಂತ
ಈ ದೇವರು ಇರಲಿ ಎಲ್ಲರ ಗುಡಿಯಲ್ಲಿ
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
👌👌👌
👌👍