ದಾರಿಯಲ್ಲೊಂದು
ಪರಿಚಿತ ಮುಖವ
ಕಂಡು ನಾ ನಗಲು,
ಮುಖಗಂಟಿಕ್ಕಿ ನಡೆವ
ಅವರು ಹೀಗೇಕೆಂದು
ನಾ ಪೆಚ್ಚಾಗುತ್ತೇನೆ.
ಮತ್ತೊಂದು ಮುಖ
ಎದುರಾಗೆ, ನಾ
ಮುಖ ತಿರುವಿದಾಗ,
ಆ ಮುಖದಲ್ಲಿ ನಗೆಯ
ಕಂಡು ಒಂದು ಕ್ಷಣ
ಕಕ್ಕಾಬಿಕ್ಕಿಯಾಗುತ್ತೇನೆ.
ನನ್ನಂತರಂಗವ ತಿಳಿದು,
ಗುಟ್ಟುಗಳ ರಟ್ಟು ಮಾಡುವ
*ಹಿತೈಷಿ* ಯ? ಮೋಸಕ್ಕೆ
ಬಟ್ಟಬಯಲಿನಲಿ
ಬೆತ್ತಲಾದಂತಾಗಿ
ನಾ ಬೆಚ್ಚಿ ಬೀಳುತ್ತೇನೆ.
ದಾರಿಯಲಿ ಮುಗ್ಗರಿಸೆ,
ಅಪರಿಚಿತರಾರೋ
ಆಧರಿಸಿ, ಆಶ್ರಯವಿತ್ತಾಗ
ಮುಖವಾಡಗಳ ನಡುವೆ
ನಿಜ ಮುಖದಿಂದಿರುವವರ
ಕಂಡು ಧನ್ಯಳಾಗುತ್ತೇನೆ.
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಜೀವನ ನಾವು ನೋಡುವ ರೀತಿ ಮತ್ತು ಅದು ನಮ್ಮ ಮುಂದೆ ತೆರೆದುಕೊಳ್ಳುವ ರೀತಿ ಭಿನ್ನ ಭಿನ್ನ ಎಂದು ಸರಳವಾಗಿ ತಿಳಿಸಿರುವಿರಿ👌
ತುಂಬಾ ಚೆನ್ನಾಗಿದೆ ಸರ್ 👌👌👌