ವರುಷಗಳಿಂದ ದೂಳು ಬಿದ್ದಿದ್ದ
ಹೃದಯದ ಕೋಣೆಯನೊಮ್ಮೆ ತೆರೆದೆ
ಅಲ್ಲಿ ಕಂಡದ್ದು ನೋವಿನ ಅಲೆದಾಟ
ಅಸುನೀಗದೆ ನರಳುತಿಹ ವಿರಹದ ಚೀರಾಟ
ಅಲ್ಲೆಲ್ಲೋ ಮೂಲೆಯಲ್ಲಿ ಕೇಳಿಸಿತು
ಅಗಲಿದ ಪ್ರೇಮಿಯ ಹೆಸರಿನ ಕನವರಿಕೆ
ಸಂತೈಸುವರಿಲ್ಲದೆ ಜೀವ ಕೊರಗುತಿತ್ತು
ಆಡದೇ ಉಳಿದ ಮಾತು ಕೋಣೆಯ ಸುತ್ತ ಗುನುಗುತಿತ್ತು
ಸತ್ತಿಹ ಕನಸುಗಳ ಗೋರಿಗಳ ಮೇಲೆ
ಹೊಸದೊಂದು ಬಯಕೆಯ ಚಿಗುರಿ ಕೇಳುತಿದೆ
ಎಂದಾದರೂ ಬರುವಳೇ ನನ್ನವಳು ಕಣ್ಮುಂದೆ
ಉತ್ತರಿಸಲಾಗದೆ ನಾ ಮೌನಿಯಾದೆ
ಮನ ಹೇಳಿತು ಮುರಿದ ಭಾವಗಳ ಎಸೆದು
ಎಣೆದ ನೋವಿನ ಬಲೆಗಳ ಬಿಡಿಸೆಂದು
ಮಡಿದ ಕನಸುಗಳನು ಗುಡಿಸೆಂದು
ಹೊಸ ಜೀವ ಜ್ಯೋತಿಯ ಬೆಳಗೆಂದು
ಸುಚಿಗೊಳಿಸಲು ಕೈಯಿಟ್ಟೆ ಎದೆಯೊಳಗೆ
ಮಲಗಿದ್ದ ಭಾವಗಳು ಸಿಡಿದೆದ್ದು ಗದರಿದವು
ಮುಟ್ಟದಿರೂ ಏನನ್ನು ಅದು ನನ್ನ ಉಸಿರೆಂದು
ನೆನಪಿಲ್ಲದೇ ಇರಲಾರೆ ಅದು ನನ್ನ ಬದುಕೆಂದು
ಕಣ್ಮುಚ್ಚಿ ಕರಗಿದೆನು ಈ ಪರಿಯ ಒಲವ ನೋಡುತ್ತ
ವಿರಹದಲಿ ಸೊರಗಿರುವ ಪ್ರೀತಿಗೆ ನಮಿಸುತ್ತ
ಬಾಗಿಲನು ಮುಚ್ಚಿದೆನು ಕೊನೆಯಾಸೆ ಫಲಿಸಲಿ ಎಂದು
ಅರಸುತ್ತ ಹಿಂದುರುಗಿದೆ ಅಮರವಿದು ಒಲವೆಂದು
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…