ಕವಿತೆಗಳು

ದ್ವಾರನಕುಂಟೆ ಪಿ.ಚಿತ್ತಣ್ಣ ಅವರು ಬರೆದ ಕಥನ ಕವಿತೆ ‘ನವಿಲು ಕುಣಿದಾಗ’

ಅಯ್ಯೋ! ಭುವಿಯೇ ಬಿರಿಯುವ ಬರವು
ಬಂದಿತು ಒಂದು ಕಾಲದಲಿ
ಜನಗಳ ಮೊಗದಲಿ ನಗುವೆ ಇಲ್ಲ
ಹರಡಿತು ಹಸಿವಿನ ಬಿರುಗಾಳಿ

ಎಲೆಗಳು ಒಣಗಿ ಮರಗಳು ಸೊರಗಿ
ಮನಗಳ ಒಳಗೆ ಮರುಕದನಿ
ಕಣ್ಣಿಯ ಕಳಚಿ ಬಿಟ್ಟರು ದನಕರು
ಊರಿನ ಹೋರಗೆ ಜೀವ ದನಿ

ಕುಡಿಕೆಯ ಹೊನ್ನು ಕರಗುತಲಿತ್ತು
ಮಣ್ಣಿನ ಮಡಿಕೆಯು ಒಣಗುತ್ತ
ವಾಡೆಯ ಧಾನ್ಯವು ಮುಗಿಯುತ್ತಲಿತ್ತು
ಕೆಲವರ ಮನೆಗಳು ಹಸಿರಾಗಿ

ಹಟ್ಟಿಯ ಸಾಮಿಗೆ ಹೂವುಗಳಿಲ್ಲದೆ
ಹೊತ್ತಿನ ಪೂಜೆಯು ನಿಂತಿತ್ತು
ಹೊತ್ತಿಗೆ ಹೊತ್ತು ಕಳೆಯುವ ಕತ್ತಿನ
ಮೇಲೆಯೇ ಮೋಡವು ತೂಗಿತ್ತು

ದಿನದಿನ ಹೀಗೆಯೇ ಆದರೆ ಹೇಗೋ?
ಊರಿನ ಕಟ್ಟೆಯ ಮಾತುಕತೆ
ಮಳೆಯೇ ಬಗ್ಗದು ಭೂಮಿಯ ಕಡೆಗೆ
ಜೀವಗಳಿಗಿನ್ನು ಅಧೋಗತಿ

ಬಣಬಯಲಿನ ಒಳಗೆ ಕುಣಿಯುವ
ಹಿಂಡಿನ ನವಿಲನು ಕಂಡನು ರಂಗಜ್ಜ
ಇಂದೇ ಸಂಜೆ ಮಳೆರಾಯನು ಬರುವನು
ನೋಡಿರೋ ದೂತರ ನರ್ತನವೆಂದ

ಬಿಟ್ಟ ಕಣ್ಣುಗಳ ಬಿಟ್ಟಂತೆಯೇ
ಕಣ್ಮನ ತುಂಬಿತು, ಅಜ್ಜನ ಮಾತನು
ಊರಜನ ಅಲ್ಲಗಳೆಯುವ
ಹೊತ್ತಿಗೆ ಬಿತ್ತು ಜೋರು ಮಳೆ

ಮರಗಳ ನೆಟ್ಟರು ವನಗಳಬಿಟ್ಟರು
ಗೋಮಾಳವು ಇತ್ತು ಊರಿನಲಿ
ಬರವು ಬರದೇ ಸಾಕುತಲಿದ್ದವು
ಸಂತೃಪ್ತಿಯ ಕೆರೆಕಟ್ಟೆಗಳ ತುಂಬುತಲಿ

ಜನಗಳ ಹೆಜ್ಜೆ ನದಿಕೆರೆಗಳ ಮುಚ್ಚಿ
ಜೀವಿಸುವವರೆದುರು ಮರ ಕಾಣೆ!
ದುಡ್ಡಿನ ಬಡಾಯಿ ಬಾಳುವವರಲಿ
ನವಿಲು ನರ್ತನದ ಮನಕಾಣೆ.

ಅರ್ಥ

ಕಣ್ಣಿ: ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಲು ಬಳಸುವ ಹಗ್ಗ.

SHANKAR G

Share
Published by
SHANKAR G

Recent Posts

ಇದೇ ಭಾನುವಾರ ಕೊಪ್ಪಳದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.

ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…

55 years ago

ಕೊಪ್ಪಳದಲ್ಲಿ 2024ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ

ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…

55 years ago

ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ; ಡಾ. ಮಲ್ಲಿನಾಥ ಎಸ್. ತಳವಾರ

ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…

55 years ago