ಊರ ದಾರಿಯು ನೇರವಿಲ್ಲ, ಇಟ್ಟ ಗುರಿಯು ನೆಟ್ಟಗಿರಲಿ, ಕೊನೆಗೆ
ಕೊಟ್ಟ ಮಾತಿಗೆ ತೊಟ್ಟ ಬಟ್ಟೆಗೆ, ಕಪ್ಪು ಕಲೆಯು ತಟ್ಟದಿರಲಿ, ಕೊನೆಗೆ. ||
ಜಗದ ಸುತ್ತ ಹುತ್ತ ಚಾಚಿದೆ, ಬಿತ್ತಿ ಬೆಳೆಯಲು ಬಿಟ್ಟರದು ಬರಡು
ನೆರೆದ ಮಂದಿಯ ನೂರು ಮಾತಿಗೆ ಕೆರೆಯು ಬತ್ತದಿರಲಿ, ಕೊನೆಗೆ. ||
ಹೊತ್ತು ಗೊತ್ತಿನ ಹುರುಳು ಇಲ್ಲದ ಕೊರಳೊಂದು ಕೆರಳಿದೆ ಬಿಡದೇ
ಸೋತು ಸವಿದು ಒಣಗಿರುವ ಬದುಕಿಗೆ ಬೆಂಕಿ ಹಚ್ಚದಿರಲಿ, ಕೊನೆಗೆ. ||
ಬೆಡಗು ಬೆಂಗುಡಿಗೆ ನಡುಗಿದೆ ಮನ, ಕಡೆಗೂ ತಡೆವವರು ಯಾರು ?
ಚುಚ್ಹುದುಲ ಹೊಳೆಯಲಿ, ದೋಣಿ ದಾರಿಯು ಮುಚ್ಚದಿರಲಿ, ಕೊನೆಗೆ. ||
ಮಬ್ಬಿನಲಿ ಹಬ್ಬಿದ ಹೊಗೆಯು, ಇಬ್ಬನಿಯು ತರದು, ಹುಬ್ಬೇರಿಸದಿರು
ಕಡಿಯುವುದೆ ಕತ್ತಲಿನ ನಾಯಿ ನೆರಳು, ಹುಸಿಯು ಹಬ್ಬದಿರಲಿ, ಕೊನೆಗೆ. ||
ಅಷ್ಟೂ ದಿಕ್ಕಿಗೂ ಎಷ್ಟು ತೂರಿದರೇನು ಕಸವು, ಗಾಳಿ ಬೀಸದೆ “ಬೋಧಿ”
ಸೊಕ್ಕಿದ ಸುಳಿಗಾಳಿಯ ದಿಕ್ಕಿಗೆ, ಮಿಕ್ಕಿ ತೆಕ್ಕೆಯು ಚಾಚದಿರಲಿ, ಕೊನೆಗೆ. ||
೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಯ ನಿಯಮಗಳಲ್ಲಿ ಬಹಳಷ್ಟು…
೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು"…
ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ…
View Comments
Sir chenagide nimma gajal
ಸರ್, ಗಜಲ್ ಚೆನ್ನಾಗಿದೆ. ಆದರೆ 'ಚುಚ್ಹುದುಲ ಹೊಳೆಯಲಿ' ಅಂದರೆ ಏನು?
ಸರ್. ಅದು ಹುಚ್ಚುದುಲ ಆಗಬೇಕಿತ್ತು. ತಪ್ಪಾಗಿ ನಮೂದಾಗಿದೆ. ಕ್ಷಮಿಸಿ.
ನಿಮಗೆ ತಿಳಿಯದೆಯ ಅದಕ್ಕು ಕೂಡ ಅರ್ಥವಿದೆ ನೋಡಿ, ಮನಸ್ಸನ್ನು ಚುಚ್ಚುವ ಹುದುಲ ಚುಚ್ಚ್ಹುದುಲ ಆದರೆ..
ಸರಿಯಾದ ಅರ್ಥ ಸರ್.
ಹುದುಲ - ಗೋಜಲು, ಕೆಸರು, ಗೊಂದಲ
ಧನ್ಯವಾದಗಳು ಸರ್.