ಡೇಟಾ ಮತ್ತು ಮಾನವರ ಸಂಬಂಧ ಸಮೀಪ ಇದ್ದರು ಬಹಳ ದೂರ.
ಗುರುರಾಜ್ ಅವರು ಬರೆದಿರುವ ಡೇಟಾ ದೇವರು ಬಂದಾಯ್ತು ಎಂಬ ಪುಸ್ತಕವು ತನ್ನದೇ ಆದ ವಿಶೇಷ ಅನುಭವವನ್ನು ಓದುಗರಿಗೆ ಕೊಡುತ್ತದೆ. ಹಿಂದೆ ದೇವರು ಅಂತ ಅಂದಾಗ ಗುಡಿ ಮಂದಿರ ಮತ್ತು ಮಸೀದಿಗಳಲ್ಲಿ ಇರುವ ದೇವರುಗಳ ಹತ್ತಿರ ನಮ್ಮ ಅಮ್ಮ ಅಪ್ಪ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗಿನ ಯುವ ಜನಾಂಗಕ್ಕೆ ದೇವರು ಎಂದರೆ ಅದು ಡೇಟಾ ದೇವರು. ಈ ಮಾಹಿತಿ ಕ್ರಾಂತಿ ಮನುಕುಲಕ್ಕೆ ಸಾಕಷ್ಟು ಅನುಕೂಲಗಳನ್ನು ಒದಗಿಸಿದೆ. ಅನುಕೂಲಗಳ ಜೋತೆಯಲ್ಲಿ ಅನಾನುಕೂಲಗಳನ್ನು ಕೂಡ ಕೊಟ್ಟಿದೆ. ಇಂಥ ಮಾಹಿತಿ ಹಂಚುವಿಕೆ ಇಂದಾಗಿ ಅವು ನಮ್ಮನ್ನೇ ನಿಯಂತ್ರಿಸುವ ಹಂತಕ್ಕೂ ತಲುಪಿವೆ. ನಾವು ಮೊಬೈಲ್ ನಲ್ಲಿ ಪ್ರತಿದಿನ ಏನನ್ನು ಹುಡುಕುತ್ತೇವೋ ಯಾವುದನ್ನು ಖರೀದಿ ಮಾಡುತ್ತಿವೋ ಮತ್ತು ನಾವು ಆಸಕ್ತಿ ವಹಿಸುವ ವಿಷಯಗಳು ಮತ್ತು ನಾವು ಯಾವುದನ್ನು ಮಾಹಿತಿ ರೂಪದಲ್ಲಿ ಪಡೆದುಕೊಳ್ಳುತ್ತಿವೋ ಅದೇ ಅಲ್ಗೊರಿದ್ದಂ. ಅಲ್ಗೊರಿದ್ದಂ ನಾವು ಏನು ಹುಡುಕುತ್ತೇವೆ ಅದು ನಮ್ಮೆದುರಿಗೆ ತಂದಿಡುತ್ತದೆ.
ಇತ್ತೀಚಿಗೆ ನಾನು ಕೇವಲ ಟೆಕ್ನಿಕಲ್ ಗೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿದ್ದು. ಇದರಿಂದ ಈ ನಾನು ಯಾವುದೇ ಅಪ್ಲಿಕೇಶನ್‌ಗೆ ಭೇಟಿ ನೀಡಿದರೆ ಇದಕ್ಕೆ ಸಂಬಂಧಿಸಿದ ಕೆಲವೊಂದಿಷ್ಟು ಜಾಹೀರಾತುಗಳು ಪ್ರತಿದಿನ ನನಗೆ ಕಾಡುತ್ತಿವೆ. ಅಲ್ಗೊರಿದ್ದಂ ನಮ್ಮ ಮಾಹಿತಿಯನ್ನು ತನ್ನ ತೆಕ್ಕಿಗೆ ತೆಗೆದುಕೊಂಡು ನಮ್ಮ ಪ್ರತಿ ಆಯ್ಕೆಗಳನ್ನು ಅದೇ ನಿರ್ಧರಿಸುವ ಹಾಗೆ ತನ್ನ ಹೀಡಿತಕ್ಕೆ ನಮ್ಮನ್ನು ತೆಗೆದು ಕೊಂಡಿದೆ. ಅಲ್ಗೊರಿದ್ದಂ ಎನ್ನುವಂತದ್ದು ಡೇಟಾ ಸಂಗ್ರಹಕವಾಗಿದ್ದು ಇದರಿಂದಾಗಿ ನಮ್ಮ ದಿನಚರಿಯನ್ನು ಇದೆ ನಿರ್ಧರಿಸುವ ಹಾಗೆ ಕೂಡ ಮುಂದುವರೆದಿದೆ.
ಇದು ಕೃತಕ ಬುದ್ಧಿ ಮತ್ತೆ ಹಾಗೆ ಕೆಲಸ ಮಾಡುತ್ತದೆ. ಇಷ್ಟು ಮಾತ್ರವಲ್ಲದೆ ರೋಬೋಟ್ ಗಳಂತೆ ಮನುಷ್ಯ ದೇಹದೊಳಗೆ ಚಿಪ್ ಒಂದನ್ನು ಅಳವಡಿಸಿಕೊಂಡು ನಮ್ಮಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ಒಂದು ಕ್ರಮವಾಗಿದೆ. ಈ ರೀತಿ ಚಿಪ್ ಅಳವಡಿಸಿಕೊಂಡು ಸಾಮಾನ್ಯರಲ್ಲಿ ವಿಶೇಷ ವ್ಯಕ್ತಿಗಳಾಗಿ ಕಾಣುತ್ತಾರೆ. ಈಗ ನಾವು ವೇಗವಾಗಿ ಉತ್ತರ ಅಥವಾ ಮಾಹಿತಿಯನ್ನು ಪಡೆಯುವುದಕ್ಕಾಗಿ ಬಳಸುತ್ತಿರುವ ಕೃತಕ ಬುದ್ಧಿ ಮತ್ತೆಯು ಮಾನವನ ಅವಶ್ಯಕತೆ ಇಲ್ಲದೆ ಮನುಷ್ಯರು ಯೋಚಿಸುವಂತೆ ಆಲೋಚಿಸಿ ನಮಗೆ ಬೇಕಾದ ಹಾಗೆ ಮತ್ತು ನಾವು ಸರಿ ಎಂದು ಒಪ್ಪಿಕೊಳ್ಳುವ ರೀತಿಯ ಉತ್ತರಗಳನ್ನು ನಮಗೆ ಅದು ನೀಡುತ್ತದೆ. ಇದು ವೇಗವಾಗಿ ನಮ್ಮ ಆಲೋಚನೆ ಮತ್ತು ಭಾಷೆಯ ವಿಚಾರ ಕ್ರಮಗಳನ್ನು ಬಳಸಿಕೊಂಡು ಇದು ಸಾಧ್ಯನಾ ಎನ್ನುವಂತಹ ಮಾಹಿತಿಯನ್ನು ಕಲೆಹಾಕಿ ನಮ್ಮ ಎದುರಿಗೆ ಮಾಹಿತಿಗಳ ಗುಡ್ಡೆಯನ್ನು ತಂದು ಹಾಕುತ್ತದೆ. ಈ ಕೃತಕ ಬುದ್ಧಿಮತ್ತೆ ತಂತ್ರಾಂಶ ಇಂತಹ ಕಾರಣಗಳಿಂದಾಗಿ ಭಾರತವು ಸಹ ತನ್ನ ನೀತಿ ಆಯೋಗದಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಂಡಿದೆ.
ಹಾಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ಬಳಕೆಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಈ ಕೃತಕ ಬುದ್ಧಿಮತ್ತೆಯನ್ನು ಮೊದಲ ಬಾರಿಗೆ ಸಂಶೋಧನೆ ಮಾಡಿ ಬಳಕೆಗೆ ತಂದಿದ್ದು 1956ರ ಸುಮಾರಿನಲ್ಲಿ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿಯ ಜಾನ್ ಮೆಕಾರ್ಥಿ ಇದನ್ನು ಪ್ರಯೋಗಿಸಿದವರಲ್ಲಿ ಪ್ರಮುಖರು. ಇವರೊಂದಿಗೆ ಹಲವು ದೇಶಗಳ ಗಣಿತ ತಜ್ಞರು ಇದರ ಪಾಲುದಾರಿಕೆಯನ್ನು ಹೊಂದಿದ್ದಾರೆ. ವಿಶ್ವಾದಂತ್ಯ AI ಬೆಳಕೆ ಹೆಚ್ಚಾಗುತ್ತಿದ್ದಂತೆ ಇದು ಬೇಕು ಬೇಡ ಎನ್ನುವ ಬಹುದೊಡ್ಡ ಚರ್ಚೆ ಶುರುವಾಗಿದೆ. ಇದು ಮಾನವ ಮಾಡುವ ಎಲ್ಲಾ ಬಗೆಯ ಕೆಲಸಗಳನ್ನು ಮಾಡುತ್ತಿರುವ ಕಾರಣಕ್ಕೆ. ಮಾನವ ಸಂಪನ್ಮೂಲಕ್ಕೆ ಬಹುದೊಡ್ಡ ಹೊಡೆತ ಬೀಳಬಹುದು ಎಂದು ಅಂದಾಜಿಸಲಾಗುತ್ತಿದೆ. ಭಾರತದಂತಹ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ನಿರುದ್ಯೋಗ ತಾಂಡವ ಆಡುವುದಂತು ಖಚಿತವಾಗಿದೆ.
ಇದರೊಂದಿಗೆ ಡ್ರೋನ್ ಗಳ ಹವಾ ಕೂಡ ಜಾಸ್ತಿಯೇ ಆಗಿದೆ. ಈ ಹಿಂದೆ ಕೇವಲ ವಿಶೇಷ ಸಂದರ್ಭಗಳಾದ ಮದುವೆ ಮತ್ತು ಬೃಹತ್ ಕಾರ್ಯಕ್ರಮದಲ್ಲಿ ಮಾತ್ರ ಬಳಕೆ ಆಗುತ್ತಿತ್ತು.ಆಗ ಇದೆ ನಮಗೆಲ್ಲ ವಿಶೇಷ ಎಂದೆನಿಸುತ್ತಿತ್ತು. ಆದರೆ ಈಗ ಡ್ರೋನ್ ಗಳು ಇರದ ಮತ್ತು ಕೆಲಸ ನಿರ್ವಹಿಸದ ಕೆಲಸಗಳೇ ಇಲ್ಲ. ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಬೃಹದಾಕಾರದ ಡ್ರೋನ್ ಗಳನ್ನು ಖರೀದಿ ಮತ್ತು ಉತ್ಪಾದನೆಯನ್ನು ಮಾಡುತ್ತಿವೆ. ಡ್ರೋನ್ ಗಳು ಕೇವಲ ಯಂತ್ರಗಳ ಉಳಿಯದೆ ನಮ್ಮ ಜೀವ ರಕ್ಷಣೆಯ ಆಪತ್ ಬಾಂಧವರಂತೆ ಕೆಲಸ ನಿರ್ವಹಿಸುತ್ತೇವೆ. ಡ್ರೋನ್ ಗಳನ್ನು ನೆರೆ ಸಂತ್ರಸ್ತರನ್ನು ಸುರಕ್ಷಿತವಾಗಿ ದಡ ಸೇರಿಸಲು ಮತ್ತು ತುರ್ತು ಸಂದರ್ಭದಲ್ಲಿ ಮೆಡಿಸಿನ್ ಗಳನ್ನು ರವಾನೆ ಮಾಡುವ ಹಂತಕ್ಕೆ ಈ ಡ್ರೋನ್ ಗಳ ಸೇವೆ ನಮಗೆ ಒದಗಿ ಬರುತ್ತಿದೆ.
2019ರಲ್ಲಿ ನಡೆದಂತಹ ಪಠಾಣ್ ಕೋಟ್ ದಾಳಿಯ ಸಮಯದಲ್ಲಿಯು ಕೂಡ ಡ್ರೋನ್ ಗಳನ್ನು ಬಳಸಲಾಗಿತ್ತು ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಡ್ರೋನ್ ತಯಾರಿ ಮಾಡಿದ್ದಾಗಿನಿಂದಲೂ ಅದು ತನ್ನ ಕೆಲಸ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ ಎಂದು ಎಲ್ಲರೂ ಭಾವಿಸಿದ್ದಾರೆ. ನಮ್ಮ ದಿನನಿತ್ಯದ ಬದುಕಿನ ಜೀವನದಲ್ಲಿ ಎಲ್ಲವನ್ನು ತಾಂತ್ರಿಕವಾಗಿ ಮತ್ತು ರೆಡಿಮೇಡ್ ಗಳಾಗಿ ಮಾಡಿದಾಗ ಸಹಜವಾಗಿ ಮಾನವ ಸೋಮಾರಿ ಆಗುವುದಂತೂ ನಿಜ. ಆದರೆ ಯಂತ್ರಗಳನ್ನು ಮತ್ತು ಕೃತಕ ಬುದ್ಧಿಮತ್ತೆ ಗಳಿಗೆ ಸಂಬಂಧಿಸಿದ ತಂತ್ರಗೂ ನಮಗೆ ಬೇಕಾದಾಗ ಮಾತ್ರ ಬಳಸುವುದರಿಂದ ಬಹಳಷ್ಟು ಉಪಯೋಗವಿದೆ. ಕೇವಲ ರೋಬೋರ್ಟ್‌ಗಳಾಗಲಿ ಅಥವಾ 4G, 5G ಮತ್ತು 6G ಇಂಟರ್ನೇಟ್ ಗಳನ್ನು ಬಳಸುವ ಮುನ್ನ ನಮ್ಮ ಸುತ್ತಮುತ್ತಲು ಇದರಿಂದ ಆಗುವಂತೆ ಪರಿಣಾಮಗಳ ಬಗ್ಗೆ ಆಲೋಚಿಸಿ ಸೂಕ್ತ ರೀತಿಯಲ್ಲಿ ಬಳಕೆ ಮಾಡುವುದು ಉತ್ತಮ.
ಮಾನವ ಏನಿಲ್ಲಾ ಸಂಶೋಧನೆ ಮಾಡಿದರು ಪ್ರಕೃತಿಯನ್ನು ಮೀರಿಸಲು ಎಂದಿಗೂ ಸಾಧ್ಯವಾಗುವುದಿಲ್ಲ. ಮಳೆ ಈಗ ಬರುತ್ತೆ ನಾಳೆ ಬರುತ್ತೆ ಅಂತೆಲ್ಲ ತಿಳಿಯಬಹುದಾದರೂ ಮಳೆಯನ್ನು ನಿಯಂತ್ರಿಸುವ ಅಂತಕ್ಕೆ ತಂತ್ರಜ್ಞಾನದ ಬೆಳವಣಿಗೆ ಸಾಧ್ಯವಾಗಿಲ್ಲ. ಹೀಗೆ ನಾವು ಎಷ್ಟೇ ಮುಂದುವರೆದರು ನಿಸರ್ಗದ ಮುಂದೆ ಬಾಗಲೇಬೇಕು.
೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು"…
ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ…