ಪುಸ್ತಕದ ಹೆಸರು:- ‘ಸದ್ಧು! ಸಂಶೋಧನೆ ನಡೆಯುತ್ತಿದೆ’
ಲೇಖಕರು:- ಸುಧೀಂದ್ರ ಹಾಲ್ದೊಡ್ಡೇರಿ
ವಿಜ್ಞಾನವನ್ನು ಸರಳವಾಗಿ ಕನ್ನಡ ಲೇಖನಗಳ ಮೂಲಕ ಓದುಗರಿಗೆ ಪ್ರೇರಣೆಯಾದ ಪುಸ್ತಕ ಸದ್ದು! ಸಂಶೋಧನೆ ನಡೆಯುತ್ತಿದೆ. ವಿಜ್ಞಾನ ತಂತ್ರಜ್ಞಾನ ಎಂದಾ ತಕ್ಷಣ ಸಾಮಾನ್ಯರಿಗೆ ಅರ್ಥವಾಗದ ಕ್ಲಿಷ್ಟಕರ ಭಾಷೆ. ಅಂತದರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನು ಲೇಖನ ರೂಪದಲ್ಲಿ ಇಳಿಸುವುದೆಂದರೆ ಮೆದುಳಿಗೆ ಹುಳ ಬಿಟ್ಟ ಹಾಗೇನೆ. ಆದರೆ ಇಲ್ಲೊಬ್ಬ ವಿಜ್ಞಾನಿ ವಿಜ್ಞಾನ, ತಂತ್ರಜ್ಞಾನ ಕುರಿತು ಸರಳ ಪದಗಳ ಮೂಲಕ ಕನ್ನಡದಲ್ಲಿ ಲೇಖನಗಳನ್ನ ಬರೆದಿದ್ದಾರೆ. ಅವರು ಬರೆದಂತಹ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಲೇಖನಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ. ಹಾಗಾದರೆ ಆ ಪುಸ್ತಕ ಯಾವುದು ಮತ್ತು ಆ ವಿಜ್ಞಾನಿ ಯಾರು ಎಂಬುದನ್ನು ತಿಳಿದುಕೊಳ್ಳೋವೇ? ‘ಸದ್ದು! ಸಂಶೋಧನೆ ನಡೆಯುತ್ತಿದೆ’ ಸುಧೀಂದ್ರ ಹಾಲ್ದೊಡ್ಡೇರಿ ಎಂಬ ವಿಮಾನ ವಿಜ್ಞಾನಿ ಎಂಬವರು ತಮ್ಮ ಲೇಖನ ಕಲೆಯನ್ನು ಅತ್ಯದ್ಭುತವಾಗಿ ಸಾಮಾನ್ಯರಿಗೂ ಅರ್ಥವಾಗುವ ಸರಳ ಪದಗಳ ಬಳಕೆಯ ಮೂಲಕ ಈ ಪುಸ್ತಕದಲ್ಲಿ ಪ್ರದರ್ಶಿಸಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಬರೆದ 42 ಬರಹಗಳ ಸಂಕಲನವೇ ‘ಸದ್ದು! ಸಂಶೋಧನೆ ನಡೆಯುತ್ತಿದೆ’.
ಈ ಪುಸ್ತಕ ಒಟ್ಟು 42 ಪರಿವಿಡಿ ಒಳಗೊಂಡ ಪುಟ್ಟ ಪುಟ್ಟ ಲೇಖನಗಳ ಸಂಕಲನ. ವಿಜ್ಞಾನ ತಂತ್ರಜ್ಞಾನ ಎಂದಾಕ್ಷಣ ಕೇವಲ ನೆನಪಿಗೆ ಬರುವುದು ಫಾರ್ಮುಲಾ, ಬ್ಯಾಕ್ಟೀರಿಯಾ, ಹಾಗೂ ಮಾಹಿತಿ. ವಿಜ್ಞಾನ ಹಾಗೂ ತಂತ್ರಜ್ಞಾನವು ಕ್ಲಿಷ್ಟಕರ ಪದಗಳನ್ನ ಒಳಗೊಂಡಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ಅದರಲ್ಲಿ ಸಾಮಾನ್ಯ ಜನರು ಅದರತ್ತ ನುಸುಳುವುದೇ ಇಲ್ಲ. ಇಂತದ್ರಲ್ಲಿ ಅವುಗಳನ ಲೇಖನದ ರೂಪದಲ್ಲಿ ಇಳಿಸುವುದು ಸಾಮಾನ್ಯದ ಕೆಲಸವಲ್ಲ. ಅದರಲ್ಲೂ ವಿಜ್ಞಾನಿಯಾದ ಸುಧೀಂದ್ರ ಅವರು ಸರಳ ರೂಪದಲ್ಲಿ ಕನ್ನಡ ಲೇಖನದಲ್ಲಿ ಇಳಿಸಿರುವುದು ಮೆಚ್ಚಲೇಬೇಕಾದ ಸಂಗತಿ.
ಸುಧೀಂದ್ರ ಹಾಲ್ದೊಡ್ಡೇರಿ ವಿಜ್ಞಾನಿ ಮತ್ತು ವಿಜ್ಞಾನ ವಿಷಯಗಳ ಅತ್ಯುತ್ತಮ ಕನ್ನಡದ ಸಮಕಾಲಿನ ಬರಹಗಾರರಾಗಿದ್ದವರು. ಇಂದಿನ ಮಾಧ್ಯಮ ಓದುಗರಿಗೆ ಮತ್ತು ವೀಕ್ಷಕರಿಗೆ ಭಾರತೀಯ ವಿಜ್ಞಾನದ ಸಾಧನೆ ಮತ್ತು ಪ್ರಯೋಗವನ್ನು ಪರಿಚಯಿಸಲು ಅಪಾರ ಆಸಕ್ತಿ, ಶ್ರದ್ಧೆ ಮತ್ತು ಅಧ್ಯಯನ ನಡೆಸಿದ್ದಾರೆ. ವಿಭಿನ್ನ ಹೆಸರಿನ ಈ ಸಂಕಲನದಲ್ಲಿ ಅಷ್ಟೇ ವಿಭಿನ್ನ ವಿಷಯಗಳನ್ನು ಕುರಿತು ಆಸಕ್ತಿ ಹುಟ್ಟಿಸುವ ಬರಹಗಳಿವೆ. ಅಷ್ಟೇ ಅಲ್ಲದೆ ವಿಜ್ಞಾನ ಸಾಹಿತ್ಯ ಪ್ರಕಾರದಲ್ಲಿ 2018ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಲಭಿಸಿದ ಕೃತಿಯಾಗಿದೆ.
ಸುಧೀಂದ್ರ ಹಾಲ್ದೊಡ್ಡೇರಿ ಅವರು ಈ ಪುಸ್ತಕದಲ್ಲಿ ಆಕ್ಸಿಟಾಸಿನ್, ಇ – ಕೋಲಿ, ಪಾಲಿಗ್ರಾಫ್ ಬ್ಯಾಕ್ಟೀರಿಯಾ, ಕ್ಯಾನ್ಸರ್, ಪ್ಲಾಸ್ಮಾ ಗನ್, ಡಿಜಿಟಲ್ ಇಮೇಜ್ ಫಾರೆನ್ಸಿಕ್ , ಅನಾಫಿಲೀಸ್ ಸ್ಟೆಫೆನ್ಸಿ, ಸೂಪರ್ ಕಂಡಕ್ಟರ್, ಸೈಲೆನ್ಸರ್, ಹೀಗೆ ಬಗೆ ಬಗೆಯಾದ ವಿಜ್ಞಾನದ ಜೊತೆಗೆ ತಂತ್ರಜ್ಞಾನದ ಕುರಿತು ಲೇಖನಗಳಲ್ಲಿ ವಿವರಿಸಿದ್ದಾರೆ. ಅವುಗಳ ಕಾರ್ಯಗಳೇನು, ಅವುಗಳು ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತವೆ, ಜೊತೆಗೆ ಕೆಲವು ಸಮಸ್ಯೆ ನಿವಾರಕವೂ ಹೌದು ಸಮಸ್ಯೆಯೂ ಹೌದು. ಎಂದು ಸರಳವಾಗಿ ಅರ್ಥವಾಗುವ ಹಾಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಅದರಲ್ಲಿ ಆಕ್ಸಿಟಾಸಿನ್ ಹಾರ್ಮೋನ್, ಗ್ಲುಟಿನ್ – ಫ್ರೀ ಆಹಾರ, ಎಲೆಕ್ಟ್ರಾನಿಕ್ ನಾಸಿಕ, ಮುಂತಾದ ಹಲವಾರು ಹೊಸ ವಿಷಯಗಳನ್ನು ಲೇಖನಗಳು ನಮಗೆ ಪರಿಚಯಿಸುತ್ತವೆ. ಹೊಸ ವಿಷಯಗಳ ಬಗ್ಗೆ ಹೇಳುವಾಗ ಅದಕ್ಕೆ ಬೇಕಾದ ಮಾಹಿತಿಯನ್ನು ಸರಳವಾಗಿ ವಿವರಿಸಿರುವುದು ಹೆಗ್ಗಳಿಕೆ. ಉದಾಹರಣೆಗೆ ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದ ಹೊಸ ಬೆಳವಣಿಗೆಗಳ ಬಗ್ಗೆ ನಾವು ಅಲ್ಲಲ್ಲಿ ಓದುತ್ತಿರುತ್ತೇವೆ. ಆದರೆ ಅಂತಹ ಬಹುತೇಕ ಲೇಖನಗಳಲ್ಲಿ ಕ್ವಾಂಟಮ್ ಕಂಪ್ಯೂಟ್ ಎಂದರೇನು ಎಂಬ ವಿಷಯ ಇರುವುದಿಲ್ಲ. ಆದರೆ ಸುಧೀಂದ್ರ ಅವರಬರಹ ಕ್ವಾಂಟಮ್ ಕಂಪ್ಯೂಟರ್ ಬಗ್ಗೆ ಸರಳ ಪರಿಚಯ ನೀಡುತ್ತದೆ.
ವಿಜ್ಞಾನ ವಿಷಯಗಳ ಪರಿಚಯ ಆಗಿರಲಿ ಆ ಪರಿಚಯ ಹೇಗಿರಬೇಕು ಎನ್ನುವುದರ ಮಾದರಿಯಾಗಿರುವುದು ಈ ಸಂಕಲನವನ್ನು ನೋಡಬಹುದು. ಹೊಸ ಪದಗಳನ್ನು ಬಳಸಿರುವ ಪರಿಯ ಅನುಕರಣೀಯವಾಗಿದೆ. ಉದಾಹರಣೆಗೆ ಹ್ಯಾಕರ್ ಗೆ ಕೊಚ್ಚಪ್ಪ, ಕಳೆದ ಬ್ಯಾಗ ಹುಡುಕಿ ಬ್ಯಾಗ ಬ್ಯಾಗ, ಹಲ್ಲು ಹುಳುಕಾದರೆ ಬಾಯಿಗೆ ಮೊಸರು, ಒಂದೇ ತಂತಿಯಲ್ಲಿ ಇನ್ನು ನಾನು ನೀನು, ಒಗ್ಗದ ರಾಸಾಯನಿಕಗಳು ನಮ್ಮ ಒಗ್ಗರಣೆಯಲ್ಲಿ ಸಿಡೀತೆ, ಹೀಗೆ ಹೊಸದಾದಂತಹ ಪದಗಳು ಮತ್ತು ವ್ಯಕ್ಯಗಳನ್ನ ಲೇಖನದಲ್ಲಿ ಬಳಸಿದ್ದಾರೆ. ಪ್ರಸುತ ದಿನಗಳು ವಿಜ್ಞಾನ ಮಾಯವಾಗಿದೆ. ಆದ್ದರಿಂದ ವಿಜ್ಞಾನದ ಕುರಿತು ಸಾಮಾನ್ಯರಲ್ಲೂ ಮಾಹಿತಿ ಇರಬೇಕು. ಅದಕ್ಕಾಗಿ ಈ ಪುಸ್ತಕ ತುಂಬಾ ಉಪಯುಕ್ತಕರ. ವಿಜ್ಞಾನದ ಬಗ್ಗೆ ತಿಳಿದು ಕೊಳ್ಳುವ ಆಸಕ್ತಿ ಇರುವವರು, ಅಲ್ಲದೇ ವಿಜ್ಞಾನ ವಿಷಯದ ಕುರಿತು ಲೇಖನ ಬರೆಯಲು ಆಸಕ್ತಿ ಇರುವವರು ತಪ್ಪದೇ ಈ ಪುಸ್ತಕ ಓದಿ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…