ಕತೆಗಳು

ರಾಜೇಂದ್ರ ಕುಮಾರ್ ಅವರ ಕಿರುಕಥೆ ‘ದೇವರು, ದೇವರು,ದೇವರು’


ಒಂದು ಕುಟುಂಬ, ಎಲ್ಲಾ ದೇವಾಲಯಗಳ ದರ್ಶನ ಮಾಡಿಬರಲು ಬಾಡಿಗೆಗೆ ಒಂದು ಟ್ಯಾಕ್ಸಿಕಾರು ಮಾಡಿಕೊಂಡು ಪ್ರವಾಸ ಹೊರಟರು, ತಂದೆ-ತಾಯಿ ಜೊತೆಗೆ ಒಂದು ಹಾಲುಗಲ್ಲದ ಮಗು, ಹೀಗೆ ನಾಲ್ಕೈದು ದಿನಗಳ ಪ್ರವಾಸ, ಆ ಮಗು ಕಾರು ಚಾಲಕನೊಡನೆ ತುಂಬಾ ಹೊಂದಿಕೊಂಡು ಬಿಟ್ಟಿತು, ಅವನೂ ಸಹ ಅದಕ್ಕೆ ಚಾಕಲೇಟು, ಐಸ್ಕ್ರೀಮ್ ಎಲ್ಲಾ ಕೊಡಿಸಿ ತುಂಬಾ ಪ್ರೀತಿ ಮಾಡುತ್ತಿದ್ದನು, ಹೀಗೆ ಎಲ್ಲಾ ದೇವಾಲಯಗಳ ದರ್ಶನ ಮಾಡಿಕೊಂಡು ಮನೆಗೆ ಹಿಂತಿರುಗಿದರು, ಚಾಲಕನೂ ಅವರನ್ನೆಲ್ಲಾ ಮನೆಗೆ ಬಿಟ್ಟು ತನ್ನಪಾಡಿಗೆ ತಾನು ಹೊರಟುಹೋದ.

ಮರುದಿನದಿಂದ ಆ ಮಗುವಿನಲ್ಲಿ ಒಂದು ಬದಲಾವಣೆ ಕಂಡಿತು, ಅಮ್ಮ- ಅಪ್ಪ ಅನ್ನುವ ಬದಲು ದೇವರು, ದೇವರು ಎಂದು ಹೇಳಲು ಶುರುಮಾಡಿತು, ಹಾಲು,ಆಹಾರ ಸೇವಿಸಲೂ ತುಂಬಾ ಹಟ ಮಾಡತೊಡಗಿತು, ನಿದ್ರೆಯಲ್ಲೂ ದೇವರು, ದೇವರು ದೇವರು ಎಂದು ಕನವರಿಸತೊಡಗಿತು, ತಂದೆ-ತಾಯಿಗಳಿಗೆ ತುಂಬಾ ಚಿಂತೆ ಕಾಡತೊಡಗಿತು , ಯಾವ ವೈದ್ಯರಿಗೆ ತೋರಿಸಿದರೂ ಏನೂ ಪರಿಹಾರ ಸಿಗದೆ ತುಂಬಾ ಕಳವಳಪಟ್ಟರು, ಹೋಗಿ ಬಂದ ದೇವರುಗಳಿಗೆಲ್ಲಾ ಮತ್ತೆ ಹರಕೆ ಕಟ್ಟಿಕೊಳ್ಳ ತೊಡಗಿದರು , ಎಲ್ಲಿ ಏನಾದರೂ ದೇವರ ದರ್ಶನದ ಸಮಯದಲ್ಲಿ ಅಪಚಾರವಾಯಿತಾ ಎಂದು, ಆದರೂ ಯಾವುದೂ ಪರಿಹಾರ ಕಾಣಲಿಲ್ಲ!

ಈ ವಿಷಯ ಬಾಯಿಂದ ಬಾಯಿಗೆ ತಲುಪಿ ಇಡೀ ಊರಿಗೆ ಊರೇ ಹರಡಿತು , ಓಹೋ ಮಗುವಿನ ಮೇಲೆ ಯಾವುದೋ ದೇವರ ಅನುಗ್ರಹವಾಗಿದೆ ಅದರ ದರ್ಶನಮಾಡಿದರೆ ಎಲ್ಲಾ ಶುಭವಾಗುವುದು ಎಂದುಕೊಂಡು ತಂಡೋಪತಂಡವಾಗಿ ಜನ ಬಂದು ಆ ಮಗುವಿಗೆ ದರ್ಶನ ಮಾಡಿಕೊಂಡು ಪೂಜೆ ಪುನಸ್ಕಾರ ಮಾಡತೊಡಗಿದರು, ಅವರ ಮನೆ ಹತ್ತಿರ ಹಣ್ಣು ಕಾಯಿ ಅಂಗಡಿಗಳು, ಮಗುವಿನ ವಿವಿಧ ಭಂಗಿಯ ಫೋಟೋಗಳು, ಹೋಟೆಲುಗಳು ಹೋಗಿಬರಲು ಆಟೋಗಳು ಎಲ್ಲಾ ಪ್ರಾರಂಭವಾದವು, ಟಿವಿ ಚಾನೆಲ್, ಪೇಪರ್ ಗಳಲ್ಲೆಲ್ಲಾ ಇದೇ ಮಗುವಿನ ವಿಷಯವೇ ಚರ್ಚೆಗೆ ಗ್ರಾಸವಾಯಿತು, ಇಡೀ ಬಡಾವಣೆಯ ಚಿತ್ರಣವೇ ಬದಲಾವಣೆ ಆಗೋಯ್ತು, ಆದರೆ ಮಗುವಿನ ತಂದೆ-ತಾಯಿಗಳಿಗೋ ಬರುಬರುತ್ತಾ ಹೆದರಿಕೆ ಜಾಸ್ತಿ ಆಗೋಯ್ತು.

ಎಲ್ಲಿ ಇರುವ ಒಂದು ಮಗುವೂ ಕೈತಪ್ಪಿ ಹೋಗುವುದೆಂದು, ಏನಾದರೂ ಇದಕ್ಕೆಲ್ಲಾ ಪರಿಹಾರವೇ ಸಿಗದಂತಾಯ್ತು , ಎಲ್ಲಾ ದೇವರುಗಳನ್ನು ಪ್ರಾರ್ಥಿಸತೊಡಗಿದರು, ಜನಮರುಳೋ ಜಾತ್ರೆ ಮರುಳೋ ಎಂಬಂತೆ ಜನ ಜಮಾಯಿಸ ತೊಡಗಿದರು, ಹೇಗೋ ಈ ವಿಷಯ ಆ ಕಾರು ಚಾಲಕನಿಗೂ ತಲುಪಿ ಅವನೂ ಆಶ್ಚರ್ಯ ದಿಂದ ತಾನೂ ಒಮ್ಮೆ ನೋಡಲು ಆ ಮಗುವಿನ ಮನೆಗೆ ಬಂದ, ಆ ಜನಜಂಗುಳಿಯಿಂದ ಹೇಗೋ ನುಗ್ಗಿ ಆ ಮಗುವಿನ ಎದುರಿಗೆ ಬಂದು ಆ ಮಗುವನ್ನು ನೋಡತೊಡಗಿದ, ಅಷ್ಟರಲ್ಲಿ ಬಂದ ಎಲ್ಲಾ ಜನರಲ್ಲೂ ದೇವರನ್ನೇ ಹುಡುಕುತ್ತಿದ್ದ ಆ ಮಗು ಒಮ್ಮೆಲೇ ತಾಯಿ ಬಳಿಯಿಂದ ಹಾರಿ ಚಾಲಕನ ತೋಳುಗಳಲ್ಲಿ ಕುಳಿತುಕೊಂಡು ಖುಷಿಯಿಂದ ದೇವರು, ದೇವರು, ದೇವರು ಎಂದು ಅವನನ್ನು ಖುಷಿಯಿಂದ, ನಗುನಗುತ್ತಾ ಮುದ್ದಿಸತೊಡಗಿತು, ಅವನೂ ಅದನ್ನು ಮುದ್ದಿಸಲಾರಂಭಿಸಿದ, ಅವನು ಒಂದು ಚಾಕಲೇಟು ತಂದಿದ್ದ, ಅದನ್ನು ತಿನ್ನಲು ಕೊಟ್ಟ, ಅದೂ ಖುಷಿಯಿಂದ ತಿನ್ನಲಾರಂಭಿಸಿತು, ಈ ಮಗುವಿನ ಬದಲಾದ ನಡವಳಿಕೆ ಕಂಡು ತಂದೆ-ತಾಯಿ ಆಶ್ಚರ್ಯ ಪಡತೊಡಗಿದರು, ಅವರ ಮನಸ್ಸೂ ಹಗುರವಾಯಿತು.

ಕಾರಣ ಇಷ್ಟೇ ಆ ಮಗು ಕನವರಿಸುತ್ತಿದ್ದದ್ದು ಭಗವಂತನನ್ನಲ್ಲ!
ಯಾವ ದೇವರೂ ಇದರ ಮೈಮೇಲೆ ಬಂದಿರಲಿಲ್ಲ, ಪ್ರಭಾವ ಬೀರಿರಲಿಲ್ಲ, ಅದು ನೆನೆಸಿಕೊಳ್ತಿದ್ದದ್ದು ಇದೇ ಡ್ರೈವರನ್ನು…. ಆ ಮಗುವಿನ ಭಾಷೆಯಲ್ಲಿ ದೇವರು …. ಎಂದರೆ ಡ್ರೈವರು… ಅವನು ತೋರಿಸಿದ ಪ್ರೀತಿ ಅಷ್ಟೊಂದು ಪ್ರಭಾವ ಬೀರಿತ್ತು ಅವನನ್ನು ಬಿಟ್ಟಿರಲಾರದೆ ಹೀಗೆ ಅವನನ್ನೇ ಕನವರಿಸುತ್ತಿತ್ತು,
ಇದರಿಂದ ನಿರಾಶಗೊಂಡು ಅಲ್ಲಿ ನೆರೆದಿದ್ದ ಜನ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿದರು ,
ಮರುದಿನದಿಂದ ಆ ಬಡಾವಣೆ ಬಿಕೋ ಎನ್ನತೊಡಗಿತು ಡೋಂಗಿ ಭಕ್ತರು ಹೊರಟುಹೊದರು, ಮಗು ತಂದೆ ತಾಯಿ ನಿರಾಳವಾಗಿದ್ದರು.

 

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago