ಸಾಹಿತ್ಯ ಸುದ್ದಿ

ಹಿರಿಯ ಸಾಹಿತಿ ಡಾ. ರಹಮತ್ ತರೀಕೆರೆ ಸೇರಿದಂತೆ ಒಟ್ಟು 12 ಜನರಿಗೆ ಶಿವಮೊಗ್ಗ ಕರ್ನಾಟಕ ಸಂಘ 2023ನೇ ಸಾಲಿನ ಪುಸ್ತಕ ಬಹುಮಾನ ಘೋಷಣೆ.

 

1 ಕುವೆಂಪು (ಕಾದಂಬರಿ) – ಕೊಳ್ಳ – ಡಾ ಕೆ.ಬಿ. ಪವಾರ
2 ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ (ಅನುವಾದ) – ಎಂ. ಡಾಕ್ಯುಮೆಂಟ್ – ಶ್ರೀ ರಾಜಾರಾಂ ತಲ್ಲೂರು
3 ಶ್ರೀಮತಿ ಎಂ.ಕೆ. ಇಂದಿರಾ (ಮಹಿಳಾ ಸಾಹಿತ್ಯ) – ಇರವಿನ ಅರಿವು – ಡಾ. ಕಾತ್ಯಾಯನಿ ಕುಂಜಿಬೆಟ್ಟು
4 ಶ್ರೀ ಪಿ. ಲಂಕೇಶ್ (ಮುಸ್ಲಿಂ ಬರಹಗಾರರು) – ಸಂಪಿಗೆಯ ಪರಿಮಳ – ಶ್ರೀ ಅದೀಬ್ ಅಕ್ತರ್
5 ಡಾ. ಜಿ. ಎಸ್. ಶಿವರುದ್ರಪ್ಪ (ಕವನ ಸಂಕಲನ) – ಒದ್ದೆಗಣ್ಣಿನ ದೀಪ – ಶ್ರೀ ಚಾಂದ್ ಪಾಷ ಎನ್. ಎಸ್.
6 ಡಾ. ಹಾ.ಮಾ. ನಾಯಕ (ಅಂಕಣ) – ಹಸಿರು ಮಂಥನ – ಶ್ರೀ ಗುರುರಾಜ್ ಎಸ್. ದಾವಣಗೆರೆ
7 ಡಾ. ಯು.ಆರ್. ಅನಂತಮೂರ್ತಿ (ಸಣ್ಣ ಕಥಾ ಸಂಕಲನ) – ನಕ್ಶತ್ರಕ್ಕಂಟಿದ ಮುತ್ತಿನ ನೆತ್ತರು – ಶ್ರೀ ಗೋವಿಂದರಾಜು ಎಂ. ಕಲ್ಲೂರು
8 ಡಾ. ಕೆ.ವಿ. ಸುಬ್ಬಣ್ಣ (ನಾಟಕ) – ಒಂದು ಕಾನೂನಾತ್ಮಕ ಕೊಲೆ – ಶ್ರೀ ಶಿವಕುಮಾರ ಮಾವಲಿ
9 ಶ್ರೀ ಕುಕ್ಕೆ ಸುಬ್ರಮಣ್ಯ ಶಾಸ್ತ್ರೀ (ಪ್ರವಾಸ ಸಾಹಿತ್ಯ) – ಜೆರುಸಲೆಮ್ – ಡಾ. ರಹಮತ್ ತರೀಕೆರೆ
10 ಶ್ರೀ ಹಸೂಡಿ ವೆಂಕಟಶಾಸ್ತ್ರೀ (ವಿಜ್ಞಾನ ಸಾಹಿತ್ಯ) – ಜೀವವೈವಿಧ್ಯ ವನ್ಯಜೀವಿಗಳು ಮತ್ತು ಸಂರಕ್ಷಣೆ – ಡಾ. ಎನ್.ಎಸ್. ಹೆಗಡೆ
11 ಡಾ. ನಾ. ಡಿಸೋಜ (ಮಕ್ಕಳ ಸಾಹಿತ್ಯ) – ಬ್ಯುಟಿ ಹಕ್ಕಿ – ಡಾ. ಲಲಿತಾ ಕೆ. ಹೊಸಪ್ಯಾಟಿ
12 ಡಾ. ಎಚ್.ಡಿ. ಚಂದ್ರಪ್ಪಗೌಡ (ವೈದ್ಯ ಸಾಹಿತ್ಯ) – ಕಣ್ಣ ಬೆರಗು ಬವಣೆ – ಡಾ. ಶ್ರೀಲಕ್ಷ್ಮಿ ಶ್ರೀನಿವಾಸನ್

ವಿಜೇತರಿಗೆ ತಲಾ 1೦,೦೦೦ ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. ಪುಸ್ತಕ ಬಹುಮಾನ ಕಾರ್ಯಕ್ರಮವು ದಿನಾಂಕ 22/09/2024 ಭಾನುವಾರದಂದು ಕರ್ನಾಟಕ ಸಂಘದ ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ, ಇದಕ್ಕೂ ಮೊದಲು ಮಧ್ಯಾಹ್ನ 3 ಗಂಟೆಗೆ ವಿಜೇತ ಸಾಹಿತಿಗಳೊಂದಿಗೆ ಸಂವಾದ ಇರಲಿದೆ.

 

SHANKAR G

View Comments

  • ಎಷ್ಟೊಂದು ಹಳೆಯ ಕರ್ನಾಟಕ ಸಂಘ. ಸಾವಿರಾರು ಜನ ಪುಸ್ತಕಗಳನ್ನು ಕಳಿಸಿರುತ್ತಾರೆ. ಒಳ್ಳೆಯ ಕೆಲಸ ಮಾಡಿಕೊಂಡು ಬರುತ್ತಿದೆ, ಆದರೆ ತೀರ್ಪುಗಾರರ ಟಿಪ್ಪಣಿಗಳು ಇರದೆ ಹೋದರೆ ಬಹುಮಾನಗಳಿಗೆ ಇರುವ ಘನತೆ ಕಡಿಮೆಯಾಗುತ್ತದೆ. ಇನ್ನೂ ಮುಂದೆ ಕರ್ನಾಟಕ ಸಂಘ ಘೋಷಣೆಯ ಸಮಯದಲ್ಲಿ ತೀರ್ಪುಗಾರರ ಟಿಪ್ಪಣಿಯನ್ನು ಹೇಳಿದರೆ ಈ ಬಹುಮಾನಗಳು ಪಾರದರ್ಶಕವಾಗಿವೆ ಎನ್ನಬಹುದು.

    • ಸಾವಿರಾರು ಜನ ಪುಸ್ತಕಗಳನ್ನು ಕಳಿಸಿರುತ್ತಾರೆ.

  • ರಹಮತ್ ತರೀಕೆರೆ ಇವರೇ ಒಂದು ಜ್ಞಾನ ನಿಧಿ ಆಗಿದ್ದು ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಿ ಬೇಕಿರಲಿಲ್ಲ. ಅವರೇ ಇದನ್ನು ಏರ್ಪಡಿಸಿ ಬಹುದಿತ್ತು

    • ಅವರು ಕಳುಹಿಸಿರಲಿಕ್ಕಿಲ್ಲ. ಪ್ರಕಟಿಸಿದ ಪ್ರಕಾಶಕರು ಕಳುಹಿಸಿರಬಹುದು

Recent Posts

2024ನೇ ಸಾಲಿನ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಗೆ ವಿವಿಧ ಪ್ರಕಾರದ ಕೃತಿಗಳ ಆಹ್ವಾನ

ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ. ಜಿ. ಬಾಗಲಕೋಟೆ, ಇವರಿಂದ ರಾಜ್ಯಮಟ್ಟದ "ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024"ಕ್ಕೆ ಕೃತಿಗಳನ್ನು ಆಹ್ವಾನಿಸಿದೆ.…

55 years ago

Latest Update; International Poetry Meet; “The Poet’s Village” (One World, Many Poets)

Dear Poets, As per many poets' requests, we have changed the timings a little bit;…

55 years ago

ಕೊಪ್ಪಳದಲ್ಲಿ ನಡೆದ ಗವಿಸಿದ್ಧ ಎನ್. ಬಳ್ಳಾರಿ ಕಾರ್ಯಕ್ರಮದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಕೃತಿ ಲೋಕಾರ್ಪಣೆಗೊಂಡಿತು.

ಕೊಪ್ಪಳದಲ್ಲಿ ನಡೆದ ಗವಿಸಿದ್ಧ ಎನ್. ಬಳ್ಳಾರಿ ಕಾರ್ಯಕ್ರಮದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ, ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಪ್ರಕಟಿಸಿರುವ "ಇನ್ನು…

55 years ago