ಸಾಹಿತ್ಯ ಸುದ್ದಿ

ಧೀರ್ಘ ಕಾಲದ ಕಥೆಗಳಾಗಿ ಉಳಿಯಬೇಕು : ಅಮರೇಶ ನುಗಡೋಣಿ

ಜಿಲ್ಲಾ ಕಸಾಪ ಕಥಾ ಕಮ್ಮಟ
ರಾಯಚೂರು ಜು 16

ಕಥೆಗಳನ್ನು ಬರೆಯುವ ಮೊದಲು ಅದರ ಸಾರಾಂಶ ಅರಿತು, ಕೇಡುಗಳನ್ನು ವರ್ತಮಾನದ, ವಿದ್ಯಮಾನಗಳ ಪ್ರವೃತರಾಗಬೇಕು, ಸುಳ್ಳು ಸುದ್ದಿ, ವದಂತಿಗಳನ್ನು ಮೆಟ್ಟಿ ಕಥೆಯ ಸತ್ಯವನ್ನು ಅರಿತು, ಸುಳ್ಳಿಗೆ ಪ್ರತಿರೋಧದ ವಿರುದ್ಧ ಬರೆಯಬೇಕು, ಕಥೆಯಲ್ಲಿ ಸತ್ಯತೆಯಿರಲಿ, ಕೆಲವು ಸಾಮಾಜಿಕ ಜಾಲತಾಣದ ವರದಿಗಳು ಸುಳ್ಳು ಇರುವದು, ಅದನ್ನು ತಿಳಿದಿಕೊಂಡು, ಪ್ಯಾಶನ್ ಗಾಗಿ ಕಥೆಯನ್ನು ಬರೆಯದೆ, ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಕಥೆಗಳು ಬರೆಯಬೇಕು, ನಮ ಪ್ರಾಂತ್ಯದ, ಜಿಲ್ಲೆ ಘಟನೆಗಳನ್ನ ಸೇರಿಸಿ ಬರೆಯಬೇಕು,ಸತ್ಯದ ಕಥೆಗಳು ಹೊರಹೊಮ್ಮಬೇಕು, ಕತೆಗಳು ಜೀವಂತಿಕೆಯನ್ನು ಉಳಿಯಬೇಕು ಧೀರ್ಘ ಕಾಲದ ಕಥೆಗಳಾಗಿ ಉಳಿಯಬೇಕೆಂದು ಹಿರಿಯ ಸಾಹಿತಿ ಹಾಗೂ ಕಥೆಗಾರರಾದ ಡಾ.ಅಮರೇಶ ನುಗಡೋಣಿಯವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಕಥೆ ರಚನೆಯ ಕುರಿತು ವಿಶೇಷವಾಗಿ ಮಾರ್ಗದರ್ಶ ಮಾಡಿದ ಹಿರಿಯ ಕಥೆಗಾರರಾದ ಅಮರೇಶ ನುಗಡೋಣಿ ಮಾತಾನಾಡುತ್ತಾ ಯಾವುದೇ ಒಬ್ಬ ಮನುಷ್ಯನಲ್ಲಿ ಹುಟ್ಟುತ್ತಲೆ ಮೊಳಕೆಯೊಡೆಯದ ಬೀಜವನ್ನಿಟ್ಟುಕೊಂಡು ಜನಿಸಿರುತ್ತಾರೆ ನಾವು ವಯಸ್ಕರಾಗುತ್ತಿದ್ದಂತಯೇ ಬೀಜ ಮೊಳಕೆಯೊಡೆಯಲು ಆರಂಭಿಸುತ್ತದೆ ನಮ್ಮಯ ಮನಸ್ಸು ದಿಕ್ಕಿನಲ್ಲಿ ಯೋಚನೆಯ ಆರಂಭವಾಗುತ್ತಿದ್ದಂತೆ ತಕ್ಷಣ ನಮ್ಮ ಕೌಶಲ್ಯ ಆರಂಭವಾಗುತ್ತದೆ ಇದರಿಂದಾಗಿಯೇ ನಿಮಗೆ ಕಥೆ ಬರೆಯುವಷ್ಟು ಬುದ್ದಿ ಶಕ್ತಿ ಆರಂಭವಾಗುತ್ತದೆ ಇದನ್ನು ಅರಿತುಕೊಂಡ ನಾವುಗಳು ಸಾಗಿದಾಗ ಮಾತ್ರ ನಾವು ಅಂದುಕೊಂಡ ಕ್ಷೇತ್ರದಲ್ಲಿ ಸಾಧನೆ ಮಾಡುವುದಕ್ಕೆ ಸಾಧ್ಯ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಥಾ ಕಮ್ಮಟ ಕಾರ್ಯಕ್ರಮವನ್ನು ಕೃಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಶಿಬಿರದ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದ ಕುರಿತು ಕಸಪಾ ಮಾಜಿ ಜಿಲ್ಲಾಧ್ಯಕ್ಷ ಮಹಾತೇಶ ಮಸ್ಕಿ ಮಾತಾನಾಡಿದರು.

ತಾಲೂಕು ಕಸಾಪ ಅಧ್ಯಕ್ಷರಾದ ವೆಂಕಟೇಶ್ ಬೇವಿನಬೆಂಚಿ ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನಾಡಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ತಾಯಪ್ಪ ಹೊಸೂರು ಸ್ವಾಗತವನ್ನು ಮಾಡಿದರು, ಬಿ. ವಿಜಯ ರಾಜೇಂದ್ರ ನಿರೂಪಣೆಯ ಕಾರ್ಯ ಅಚ್ಚುಕಟ್ಟಾಗಿ ಮಾಡಿದರು,ದಂಡಪ್ಪ ಬಿರಾದಾರ, ಕಾರ್ಯಕ್ರಮದಲ್ಲಿ,ಮಂಜುನಾಥ್ ಕಾಮಿನ್, ರಾವುತರಾವ್ ಬರೂರ, ಡಾ. ಯೇಶಪ್ಪ ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಕಸಾಪ ಪದಾಧಿಕಾರಿಗಳು ಹಾಗೂ ಕಥಾಕಮ್ಮಟದ ಶಿಬಿರಾರ್ಥಿಗಳು,ಸಾಹಿತಿಗಳು ಹಾಗೂ ಕೃಷಿ ತಾಂತ್ರಿಕ ಮಹಾ ವಿದ್ಯಾಲಯದ ಎನ್. ಎಸ್. ಎಸ್ . ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಣ್ಣ ಪಾಟೀಲ್ ಕಸಾಪ ಜಿಲ್ಲಾಧ್ಯಕ್ಷರು ರಾಯಚೂರು ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಡಾ. ಬಿ. ಎಂ. ಶರಬೇಂದ್ರ ಸ್ವಾಮಿ ಹಿರಿಯ ಸಾಹಿತಿಗಳು ವಿಶ್ರಾಂತ ಮುಖ್ಯಸ್ಥರು ಆಕಾಶವಾಣಿ ರಾಯಚೂರು, ಮಹಾಂತೇಶ್ ಮಸ್ಕಿ ಮಾಜಿ ಜಿಲ್ಲಾ ಅಧ್ಯಕ್ಷರು ಕಸಾಪ ರಾಯಚೂರು, ಡಾ.ಎಂ. ಎಸ್.ಅಯ್ಯನಗೌಡ ಡೀನ್ ಪ್ರಭಾರಿ ಕೃಷಿ ತಾಂತ್ರಿಕ ವಿಶ್ವವಿದ್ಯಾಲಯ ರಾಯಚೂರು,ಹಿರಿಯ ಸಾಹಿತಿ ಅಂಜಿನಯ್ಯ ಜಾಲಿಬೆಂಚಿ, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯಪ್ಪ ಬಿ. ಹೊಸೂರು, ಬಸವಕೇಂದ್ರ ಉಪಾಧ್ಯಕ್ಷ ವಿಜಯ್ ಕುಮಾರ್ ಸಜ್ಜನ್, ಹಿರಿಯ ಸಾಹಿತಿ ವೀರಹನುಮಾನ್, ಹೆಚ್ ಹೆಚ್ ಮ್ಯಾದಾರ್, ಎನ್.ನರಸಪ್ಪ, ಸಂಘಟನಾ ಕಾರ್ಯದರ್ಶಿ ರೇಖಾ ಬಡಿಗೇರ್, ಸಿರಿವಾರ ತಾಲೂಕ ಕಸಾಪ ಅಧ್ಯಕ್ಷ ಸುರೇಶ ಹೀರಾ, ಅಣ್ಣಪ್ಪ ಮೇಟಿಗೌಡ, ಕವಿಗಳಾದ ಚಂದ್ರಶೇಖರ ಮದ್ಲಾಪೂರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

SHANKAR G

Recent Posts

ಇದೇ ಭಾನುವಾರ ಕೊಪ್ಪಳದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.

ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…

55 years ago

ಕೊಪ್ಪಳದಲ್ಲಿ 2024ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ

ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…

55 years ago

ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ; ಡಾ. ಮಲ್ಲಿನಾಥ ಎಸ್. ತಳವಾರ

ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…

55 years ago