ಜನ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಸಂಸ್ಥೆ ಮತ್ತು ಬೆಂಗಳೂರು ಆರ್ಟ್ ಫೌಂಡೇಷನ್ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮವು ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಕಾಡುವ ಕಿರಂ 2023 ದಶಮಾನೋತ್ಸವ ಕಾರ್ಯಕ್ರಮವು ಆಗಸ್ಟ್ 7 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಹೋರಾತ್ರಿ ನಡೆಯಲಿದೆ. ಕಿರಂ ಅವರ ನೆನಪಿಗಾಗಿ ಅವರು ದೇಹಾಂತ್ಯ ಮಾಡಿದ ದಿನದಂದೇ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ನಾಡಿನ ಬಹುತೇಕ ಬೇರೆ ಬೇರೆ ಜಿಲ್ಲೆಗಳ ಒಟ್ಟು ನೂರು ಜನ ಕವಿಗಳು ಐದು ಕವಿಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯಿಂದ ಸಂಪಾದಿತ ಕವಿತೆಗಳ ಮತ್ತು ಆಯಾ ಗೋಷ್ಠಿಗಳ ವಿಮರ್ಶೆ ಇರುವ ಕಿರಂ ಹೊಸ ಕವಿತೆ 2023 ಪುಸ್ತಕವು ಬಿಡುಗಡೆಯಾಗಲಿದೆ.
#ಆಗಸ್ಟ್7,2023,ಸೋಮವಾರಸಂಜೆ6ರಿಂದಬೆಳಿಗ್ಗೆ6ರವರೆಗೆ
#ಸ್ಥಳ,ಬೆಂಗಳೂರಿನ,ರವೀಂದ್ರ,ಕಲಾಕ್ಷೇತ್ರ
#ಜನಸಂಸ್ಕೃತಿಪ್ರತಿಷ್ಠಾನಬೆಂಗಳೂರು
#ಬೆಂಗಳೂರು ಆರ್ಟ್ ಫೌಂಡೇಷನ್
#ಮಿಂಚುಳ್ಳಿ ಸಾಹಿತ್ಯ ಪತ್ರಿಕೆ
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ನಾಡಿನ ಅಸ್ಮಿತೆ