ಸಾಹಿತ್ಯದ ಓದು, ಶ್ರದ್ಧೆ, ಶಿಸ್ತು, ಸಂಯಮ ಮತ್ತು ಸಂವಾದ ನಮ್ಮನ್ನು ಮತ್ತೆ ಮತ್ತೆ ಪೊರೆಯುತ್ತವೆ.
ಮೊದಲ ಕಮ್ಮಟದ ಅಭಿಪ್ರಾಯದಿಂದಾಗಿ ಈ ಬಾರಿ ಬಂದ ಅರ್ಜಿಗಳ ಸಂಖ್ಯೆಯು ಹೆಚ್ಚಿತ್ತು. ವಿಶೇಷವಾಗಿ ಈ ಬಾರಿ ಉತ್ತರ ಕರ್ನಾಟಕ ಭಾಗದ ಗೆಳೆಯರು ಅತಿ ಹೆಚ್ಚು ಇದ್ದರು. ಒಟ್ಟಾರೆಯಾಗಿ ಕರ್ನಾಟಕದ ಎಲ್ಲಾ ಭಾಗದ ಗೆಳೆಯರು ಇದ್ದರು. ಪರಸ್ಪರ ಸಹಕಾರ, ಗೌರವ ಮತ್ತು ಪ್ರೀತಿ ಕೂಡ ನಮ್ಮನ್ನು ಮತ್ತೆ ಮತ್ತೆ ಪೊರೆಯುತ್ತವೆ.
ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳ ಸಹಕಾರದಿಂದಾಗಿ ಕುಪ್ಪಳಿಯಲ್ಲಿ ನಡೆದ ಎರಡು ದಿನಗಳ ಮಿಂಚುಳ್ಳಿ ಕಮ್ಮಟವು ಬಹಳ ಯಶಸ್ವಿಯಾಗಿದೆ, ವಿಶೇಷವಾಗಿ ಮಾರ್ಗದರ್ಶನ ನೀಡಿದ ನಾಡಿನ ಖ್ಯಾತ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್. ಎನ್. ಮುಕುಂದರಾಜ್ ಮತ್ತು ಕಥಾ ಗೋಷ್ಠಿಗಳ ಸಂಪನ್ಮೂಲ ವ್ಯಕ್ತಿಗಳಾದ ಡಾ. ಕರೀಗೌಡ ಬೀಚನಹಳ್ಳಿ, ಡಾ. ಅಮರೇಶ ನುಗಡೋಣಿ, ಕಾವ್ಯ ಮತ್ತು ಕಥಾ ಸಂವಾದ ಗೋಷ್ಠಿಗಳ ಸಮನ್ವಯ ಮಾಡಿದ ಡಾ. ರವಿಕುಮಾರ್ ಪಿ.ಜಿ. ಮತ್ತು ಡಾ. ಗುರುಸ್ವಾಮಿ ಸಿ. ಅನ್ನೇಹಾಳ್, ನವಿಲುಕಲ್ಲು ಸೂರ್ಯೋದಯ ಸಮನ್ವಯ ನಡೆಸಿಕೊಟ್ಟ ಡಾ. ಹಕೀಮ್ ಮತ್ತು ಫೋಟೋಗಳನ್ನು ಕ್ಲಿಕ್ಕಿಸಿದ ಅಜಯ್ ಕುಮಾರ್, ಸೋಮೇಶ್ ಸಿ.ಎಸ್. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ಶಂಕರ್ ಸಿಹಿಮೊಗ್ಗೆ
ಸಂಪಾದಕ
ಮಿಂಚುಳ್ಳಿ ಸಾಹಿತ್ಯ ಪತ್ರಿಕೆ
ನೋಂದಾವಣಿಯ ಸಮಯ:-
ಉದ್ಘಾಟನೆ ಮತ್ತು ಗೋಷ್ಠಿಗಳು @ಹೇಮಾಂಗಣ :-
ನವಿಲುಕಲ್ಲು ಸೂರ್ಯೋದಯ ಮತ್ತು ಚಿಬ್ಬಲು ಗುಡ್ಡೆ ಪ್ರವಾಸ :-
ಆಯ್ದ ಕಾವ್ಯ ಮತ್ತು ಕಥಾ ಸಂವಾದ :-
ಕುವೆಂಪು ಜನ್ಮಸ್ಥಳ ಹೀರಿಕೊಡಿಗೆ ಪ್ರವಾಸ :-
ದೇವರು ರುಜು ಮಾಡಿದನು @ಚಿಬ್ಬಲು ಗುಡ್ಡೆ ಪ್ರವಾಸ
ಕವಿಶೈಲದಲ್ಲಿ ಮಿಂಚುಳ್ಳಿ ಕವಿಗೋಷ್ಠಿ :-
ಕಮ್ಮಟದ ಆಹ್ವಾನ ಪತ್ರಿಕೆ :-
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಮಿಂಚುಳ್ಳಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು
ಕಥಾ ಮತ್ತು ಕಾವ್ಯ ಕಮ್ಮಟಕ್ಕೆ ಬಂದಂತಹ ಶಿಬಿರಾರ್ಥಿಗಳು ರೂಪಕ, ಉಪಮೆ, ಪ್ರತಿಮೆಗಳನ್ನು ಬಳಸಿ ಪ್ರಬುದ್ಧಮಾನವಾಗಿ ತಮ್ಮ ಸ್ವ ರಚಿತ ಕಾವ್ಯಗಳನ್ನು ವಾಚನ ಮಾಡಿದರು. ಕವಿತೆಯ ವಸ್ತುಗಳಲ್ಲಿ ತುಂಬಾ ವಿಭಿನ್ನತೆ ಇತ್ತು. ಸಮಾಜ, ಸಂಸ್ಕೃತಿ, ಧರ್ಮ ಸಹಿಷ್ಣತೆಯನ್ನು ಕುರಿತು ಅನೇಕ ಯುವಕವಿಗಳು ಕವಿತೆಗಳನ್ನು ವಾಚಿಸಿದ್ದು ಗಮನಾರ್ಹ.
ಕಮ್ಮಟದ ಆಯೋಜಕರು ಶಿಸ್ತುಭದ್ಧವಾಗಿ ಕಾಲ ಕಾಲಕ್ಕೆ ಶಿಬಿರಾರ್ಥಿಗಳಿಗೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿದ್ದರು. ಪ್ರಾಯೋಗಿಕವಾಗಿ ಕವಿತೆಗಳನ್ನು ಕಟ್ಟುವ ಬಗೆಯನ್ನು ಒಳಹುಗಳನ್ನು ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟರು.
ಊಟ ವಸತಿ ಪ್ರವಾಸ ಕಾವ್ಯಗೋಷ್ಠಿ ಕಥಾ ಗೋಷ್ಠಿ ಎಲ್ಲವೂ ಶಿಸ್ತುಬದ್ಧವಾಗಿ ಅಚ್ಚುಕಟ್ಟಾಗಿ ಏರ್ಪಟ್ಟಿದ್ದವು . ಹಿರಿಯ ಕವಿ, ಕಥೆಗಾರರು, ಲೇಖಕರು ಶಿಬಿರಾರ್ಥಿಗಳ ಜೊತೆಗೆ ಮುಕ್ತ ಮಾತುಕತೆಗೆ ಅವಕಾಶವಿತ್ತು.
ಇಂತಹ ಕಮ್ಮಟಗಳಿಗೆ ಮತ್ತೆ ಮತ್ತೆ ಪಾಲ್ಗೊಳ್ಳುವುದು ಹೊಸ ತಲೆಮಾರಿನ ಬರಹಗಾರರಿಗೆ ಅವಶ್ಯಕ ಮತ್ತು ಅಗತ್ಯ.
ವಂದನೆಗಳು
ಮಿಂಚುಳ್ಳಿ..