ಮಿಂಚುಳ್ಳಿ ಪ್ರಕಾಶನ

ಮಿಂಚುಳ್ಳಿ ಪಬ್ಲಿಕೇಷನ್ನಿನ ಹೊಸ ಪುಸ್ತಕ ‘Love is a Divine Fragrance’

‘Love is a Divine Fragrance’
An anthology of world poetry in gender issues.
Publisher: Minchulli Publications
Editors:
Suryakeerthy
Shankar Sihimogge

ಇದು ಜಗತ್ತಿನ ಬೇರೆ ಬೇರೆ ದೇಶಗಳ ಕವಿಗಳ ಇಂಗ್ಲಿಷ್ ಕವಿತೆಗಳನ್ನು ಒಳಗೊಂಡಿರುವ ಹೊಸ ಪುಸ್ತಕ. ಮಿಂಚುಳ್ಳಿ ಪಬ್ಲಿಕೇಷನ್ ಇದನ್ನು ಪ್ರಕಟಿಸುತ್ತಿದೆ. ಸದ್ಯದಲ್ಲಿಯೇ ಅಚ್ಚಾಗಲಿದೆ. ಇದರಲ್ಲಿ ಭಾರತ, ನೈಜೀರಿಯಾ, ಮಾಲ್ಟಾ, ಫಿಲಿಪೈನ್ಸ್, ಮಯನ್ಮಾರ್, ಕೀನ್ಯಾ, ಭೂತಾನ್, ಮಾರಿಷಸ್, ಪೋಲೆಂಡ್, ಮಡಗಾಸ್ಕರ್, ಯುಎಸ್ಎ (ಅಮೆರಿಕಾ), ಸರ್ಬಿಯಾ, ಕ್ಯಾಮರೂನ್, ಘಾನಾ, ಟರ್ಕಿ, ಮೊರಾಕೊ, ಜರ್ಮನಿ, ಫ್ರಾನ್ಸ್, ಇಟಲಿ, ಕ್ರೊಯೇಷಿಯಾ, ಇಸ್ರೇಲ್, ನೇಪಾಳವು ಸೇರಿದಂತೆ ಒಟ್ಟು 22 ದೇಶಗಳ 67 ಕವಿಗಳ ಆಯ್ದ ಪದ್ಯಗಳು ಇವೆ. ಈ ಸಂಕಲನದ ಆಯ್ಕೆಗಾಗಿ ಬೇರೆ ಬೇರೆ ದೇಶಗಳ ಐನೂರಕ್ಕು ಅಧಿಕ ಕವಿತೆಗಳು ಬಂದಿದ್ದವು, ಅವುಗಳನ್ನು ಸಮಯ ತೆಗೆದುಕೊಂಡು ಓದಿ ಇಷ್ಟು ಕವಿತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜಗತ್ತಿನ ಬೇರೆ ಬೇರೆ ಮೂಲೆಯ ಕವಿಗಳ ಕವಿತೆಗಳನ್ನು ಓದುತ್ತಾ ಅವರೊಂದಿಗೆ ಸಂವಹನ ನಡೆಸಿದ್ದು ನಿಜಕ್ಕೂ ಒಂದು ಹೊಸ ಅನುಭೂತಿಯನ್ನೇ ನೀಡಿತು. ಇದಕ್ಕೆ ಡಾ. ಸಯಾನ್ ಡೇ, ಪೋಸ್ಟ್‌ಡಾಕ್ಟರಲ್ ಫೆಲೋ, ವಿಟ್ಸ್ ಸೆಂಟರ್ ಫಾರ್ ಡೈವರ್ಸಿಟಿ ಸ್ಟಡೀಸ್, ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾಲಯ, ದಕ್ಷಿಣ ಆಫ್ರಿಕಾ, ಇವರು ಬೆನ್ನುಡಿ ಬರೆದು ಕೊಟ್ಟಿದ್ದಾರೆ. ಆಯ್ಕೆಗಾಗಿ ಕವಿತೆಗಳನ್ನು ಕಳಿಸಿಕೊಟ್ಟ ಎಲ್ಲಾ ದೇಶದ ಕವಿಗಳು ಮತ್ತು ಡಾ. ಸಯಾನ್ ಡೇ ಅವರಿಗೆ ಮಿಂಚುಳ್ಳಿ ಪಬ್ಲಿಕೇಷನ್ ಪರವಾಗಿ ಧನ್ಯವಾದಗಳು.

ಧನ್ಯವಾದಗಳೊಂದಿಗೆ,
ಸಂಪಾದಕರು,
ಮಿಂಚುಳ್ಳಿ ಪಬ್ಲಿಕೇಷನ್ಸ್
SHANKAR G

Recent Posts

ಇದೇ ಭಾನುವಾರ ಕೊಪ್ಪಳದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.

ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…

55 years ago

ಕೊಪ್ಪಳದಲ್ಲಿ 2024ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ

ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…

55 years ago

ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ; ಡಾ. ಮಲ್ಲಿನಾಥ ಎಸ್. ತಳವಾರ

ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…

55 years ago