# ಮಿಂಚುಳ್ಳಿ > ಕನ್ನಡ ಸಾಹಿತ್ಯ ಪತ್ರಿಕೆ ## Posts - [ಜುಲೈ 30ರಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಮತ್ತು ಉರ್ದು ಕವಿಗೋಷ್ಠಿ](https://minchulli.com/kendrasahityaakademikavigosti/) - [ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ](https://minchulli.com/arjunauvacha3/): ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ ನಗರದಲ್ಲಿ ನಿಂತಿದ್ದ. ಚಲಿಸುತ್ತಿರುವ ಕಾಲುಗಳನ್ನು ನಿಲ್ಲಿಸುವಂತೆ ಇತ್ತು ಆ ನಗರ. ಕಾಲದ ಚಲನಶೀಲತೆಯನ್ನು ಸಾರಿಹೇಳುವಂತಿತ್ತು ಆ ನಗರ. ಯಾವ ದಿಕ್ಕಿಗೆ ಕಣ್ಣು ಹಾಯಿಸಿದರೂ ಹರಿಯುತ್ತಿರುವ ತೊರೆಗಳು ಕೆರೆಗಳು. ದಿಶೆದಿಶೆಯಿಂದ ಬಂದು ನಾಸಿಕವನ್ನು ಪ್ರವೇಶಿಸುವ ಕುಸುಮ ಸುವಾಸನೆ. ಕಿವಿಯನ್ನು ತಂಪುಗೊಳಿಸುವ ದುಂಬಿಗಳ ಝೇಂಕಾರ. ಅಲ್ಲಿಯ ನೆಲವೆಲ್ಲಾ ರತ್ನಮಯ. ಅಪೂರ್ವವಾದ ಮಣಿಗಳಿಂದಲೇ ನಿರ್ಮಿಸಲಾಗಿದೆ ಪರ್ವತಗಳನ್ನು. ಗೋವುಗಳು ಆನೆಗಳು ಗುಂಪುಗುಂಪಾಗಿ ಪಥಸಂಚಲನ ನಡೆಸುತ್ತಿರುವ ನೋಟವದು ನಯನಮನೋಹರ. ಕಸ್ತೂರಿ ಮೃಗವಿತ್ತು ಅಲ್ಲಿ. ಶಿಷ್ಟ ವಿಶಿಷ್ಟವಾದ ಪಕ್ಷಿಗಳು. ಎತ್ತರೆತ್ತೆರದ ಕಟ್ಟಡಗಳು. ತುಂಬು ಸಂತಸದಿಂದ ಸಂಚರಿಸುತ್ತಿರುವ ಜನರು. ಹಂಸಗಳಿಲ್ಲದ ಕೊಳಗಳು ಅಲ್ಲಿರಲಿಲ್ಲ. ದುಂಬಿಗಳಿಲ್ಲದ ಉದ್ಯಾನಗಳಿರಲಿಲ್ಲ. ದುಂಬಿಗಳಿಗೆ ಮುದ ನೀಡದ ಕುಸುಮಗಳಿರಲಿಲ್ಲ. ಕುಸುಮಸಮೂಹಗಳನ್ನು ಹೊತ್ತುನಿಲ್ಲದ ಬಳ್ಳಿಗಳಿರಲಿಲ್ಲ. ಮಾವಿನ ಚಿಗುರುಗಳಿಲ್ಲದ ವನಗಳಿರಲಿಲ್ಲ. ಹೀಗಿತ್ತು ಭದ್ರಾವತಿ ನಗರ. ಬಂಜರು ಭೂಮಿಯನ್ನು, ಬಿಳಿಯ ತಾವರೆಗಳಿಲ್ಲದ ಕೊಳಗಳನ್ನು, ಸುಖವಿಲ್ಲದೆ ಸೊರಗಿದ ಜನರನ್ನು ಅಲ್ಲಿ ಕಾಣುವುದಕ್ಕೆ ಸಾಧ್ಯವೇ ಇರಲಿಲ್ಲ. - [ಧಾರವಾಡದಲ್ಲಿ ಜುಲೈ ೨೨ರಂದು "ಸಮಕಾಲೀನ ಕನ್ನಡ ಸಾಹಿತ್ಯದ ಚಹರೆಗಳು" ಒಂದು ದಿನದ ವಿಚಾರ ಸಂಕಿರಣ](https://minchulli.com/savicharasankirana2025/) - [ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ](https://minchulli.com/ksabelagaviyuvakavigosti2025/): ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಕನ್ನಡ ಭವನದ ನಿರ್ದೇಶಕರಾದ ಡಾ. ಬಸವರಾಜ ಜಗಜಂಪಿ ಅವರು ವಹಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಮೈತ್ರೇಯಿಣಿ ಗಡಿಗೆಪ್ಪಗೌಡರ ಅವರು ಆಶಯನುಡಿಗಳನ್ನಾಡುವರು. ಯುವಕವಿಗೋಷ್ಠಿಯ ಅಧ್ಯಕ್ಷತೆಯನ್ನು ಯುವಕವಿ ದೇವರಾಜ ಹುಣಸಿಕಟ್ಟಿ ಅವರು ವಹಿಸಲಿದ್ದಾರೆ. ಯುವಕವಿಗೋಷ್ಠಿಯ ನಿರ್ವಹಣೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀ ಮಹಾದೇವ ಬಸರಕೋಡ ಅವರು ಮಾಡಲಿದ್ದಾರೆ. ಇದೆ ಕಾರ್ಯಕ್ರಮದಲ್ಲಿ ಮಧ್ಯಾಹ್ನ ೨ ಗಂಟೆಗೆ ಡಾ. ಹೇಮಾ ಪಟ್ಟಣಶೆಟ್ಟಿ ಅವರು “ಕಾವ್ಯ – ಅನುಸಂಧಾನ” ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳಾದ ಕರಿಯಪ್ಪ ಎನ್., ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರುಗಳಾದ ಡಾ. ಮಲ್ಲಿಕಾರ್ಜುನ ಮಾನ್ಪಡೆ ಮತ್ತು ಬೆಳಗಾವಿ ಕನ್ನಡ ಭವನದ ಕಾರ್ಯದರ್ಶಿಗಳಾದ ಶ್ರೀ ಯ.ರು. ಪಾಟೀಲ ಉಪಸ್ಥಿತರಿರಲಿದ್ದಾರೆ. - [ಮಿಂಚುಳ್ಳಿ ಪ್ರಕಾಶನದ ಕವಿ ಚನ್ನಪ್ಪ ಅಂಗಡಿಯವರ "ಇನ್ನು ಕೊಟ್ಟೆನಾದೊಡೆ" ಕವನ ಸಂಕಲನಕ್ಕೆ ೨೦೨೪ನೇ ಸಾಲಿನ ರಾಜ್ಯ ಮಟ್ಟದ ಮುದಲ್ ಕಾವ್ಯ ಪ್ರಶಸ್ತಿ](https://minchulli.com/mudalprashasti2025/) - [ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ](https://minchulli.com/ksbengalurukavigosti/): ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಲೇಖಕಿಯರ ಸಂಘ ತುಮಕೂರು ಶಾಖೆ ಮತ್ತು ಜಿಲ್ಲಾ ಆಸ್ಪತ್ರೆ ಸಹಕಾರ ನೀಡಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರಿನ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಅವರು ವಹಿಸುವರು. ಯುವಕವಿಗೋಷ್ಠಿಯ ಅಧ್ಯಕ್ಷತೆಯನ್ನು ಯುವಕವಿ ಸೂರ್ಯಕೀರ್ತಿ ಅವರು ವಹಿಸಲಿದ್ದಾರೆ. ಯುವಕವಿಗೋಷ್ಠಿಯ ನಿರ್ವಹಣೆಯನ್ನು ಹಿರಿಯ ಪತ್ರಕರ್ತರಾದ ಗಣೇಶ ಅಮೀನಗಡ ಅವರು ಮಾಡಲಿದ್ದಾರೆ. ಇದೆ ಕಾರ್ಯಕ್ರಮದಲ್ಲಿ ಮಧ್ಯಾಹ್ನ ೨ ಗಂಟೆಗೆ ಡಾ. ನಟರಾಜ್ ಹುಳಿಯಾರ್ ಅವರು “ಕಾವ್ಯ ಎನ್ನುವುದು ಎಲ್ಲಿದೆ?” ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಅಸ್ಗರ್ ಬೇಗ್, ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳಾದ ಕರಿಯಪ್ಪ ಎನ್., ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರುಗಳಾದ ಪಿ. ಚಂದ್ರಿಕಾ, ಡಾ. ರವಿಕುಮಾರ್ ಬಾಗಿ, ಡಾ. ಕಾ.ವೆಂ. - [ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು - ಡಾ. ವಿಶ್ವನಾಥ ಎನ್ ನೇರಳಕಟ್ಟ](https://minchulli.com/arjunauvacha2/): ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು. ಹಳದಿ ಬಾಲವಿರಬೇಕು. ನಡಿಗೆ ಮೋಹಕವಾಗಿರಬೇಕು. ಒಂದೇ ಕಿವಿಯನ್ನು ಹೊಂದಿರಬೇಕು. ಇದು ವ್ಯಾಸಮುನಿಗಳು ಸೂಚಿಸಿದ ಕುದುರೆಯ ಲಕ್ಷಣ. ಯಜ್ಞದ ರೀತಿ ಹೇಗೆ ಎನ್ನುವುದನ್ನು ಅರುಹತೊಡಗಿದರು. ಯಜ್ಞದಲ್ಲಿ ಪಾಲು ಪಡೆಯುವ ಪಂಡಿತ ವರ್ಗವನ್ನು ಸಂಪ್ರೀತಗೊಳಿಸುವುದು ಯಾವ ಬಗೆಯಲ್ಲಿ ಎಂಬ ವಿವರಣೆಯಿತ್ತು ಅವರ ಆ ವರ್ಣನೆಯಲ್ಲಿ. ಇಪ್ಪತ್ತು ಸಾವಿರ ವಿದ್ವಾಂಸರ ಅಗತ್ಯವಿತ್ತು ಯಾಗಕ್ಕೆ. ಹಾಗೆ ಯಜ್ಞದಲ್ಲಿ ಪಾಲು ಪಡೆದ ಅನಿತೂ ಪಂಡಿತರಿಗೆ ವಸ್ತ್ರದಾನವನ್ನು ಮಾಡಬೇಕಿತ್ತು. ಒಬ್ಬೊಬ್ಬರಿಗೆ ಒಂದೊಂದು ಬಳ್ಳದಷ್ಟು ಮುತ್ತುಗಳನ್ನು ಕೊಡಬೇಕಿತ್ತು. ಒಬ್ಬೊಬ್ಬರಿಗೂ ಸಾವಿರ ಗೋವುಗಳನ್ನು ದಾನ ನೀಡಬೇಕಿತ್ತು. ಅಷ್ಟೂ ಜನರ ಮನ ಸಂತೃಪ್ತಿಯಾಗುವಷ್ಟು ಚಿನ್ನವನ್ನು ಹಂಚಬೇಕಿತ್ತು. ಈ ಬಗೆಯ ಗೌರವಾದರಗಳನ್ನು ಪಡೆದ ಪಂಡಿತರು ಅಪ್ಪಣೆಯನ್ನು ಕೊಟ್ಟ ಬಳಿಕ ‘ಉನ್ನತ ಪರಾಕ್ರಮಿಗಳೆನಿಸಿಕೊಂಡವರು ತಡೆಯಲಿ ಇದನ್ನು’ ಎಂಬ ಸಾಲನ್ನು ಬರೆದ ಪತ್ರವನ್ನು ಯಾಗದ ಕುದುರೆಯ ಹಣೆಗೆ ಕಟ್ಟಿ ಒಂದು ವರ್ಷ ಪರ್ಯಂತ ಅದನ್ನು ತಿರುಗಾಟಕ್ಕೆ ಬಿಡಬೇಕಿತ್ತು. ಹಾಗೆ - [ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. - ಲಿಖಿತ್ ಹೊನ್ನಾಪುರ](https://minchulli.com/yuvaloka3/): ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ, ಪ್ರಯತ್ನ, ಕನಸುಗಳು, ಹೋರಾಟ – ಇವು ಬಾಳಿನ ಅಡಿಪಾಯಗಳು. “ನಿಲ್ಲುವುದೇ ಸಾವು, ಚಲಿಸುವುದೇ ಬಾಳು” ಎಂಬ ಕುವೆಂಪುವಿನ ಈ ಎದೆಗಟ್ಟುವ ಸಾಲು ಈ ಎಲ್ಲಾ ಅರ್ಥಗಳನ್ನು ಒಳಗೊಂಡಿದೆ. ಈ ವಾಕ್ಯ ನಮ್ಮೆಲ್ಲರ ಜೀವನದಲ್ಲಿ ಒಂದು ದೀಪದಂತೆ ಬೆಳಗುತ್ತದೆ. ನಿಲ್ಲುವುದು ಅಂದರೆ ಮುಂದೆ ಸಾಗುವ ಬಾಗಿಲನ್ನು ಮುಚ್ಚುವುದು. ಚಲಿಸುವುದು ಅಂದರೆ ಹೊಸ ಹೆಜ್ಜೆ ಹಾಕುವುದು, ಹೊಸ ಅಲೆಯನ್ನು ಮೆಟ್ಟಿ ಎದುರು ನೋಡುವ ಧೈರ್ಯವನ್ನು ಹೊಂದುವುದು. ಈ ಮಾತು ಇಂದು ಯುವ ಜನತೆಗೆ ಮಾರ್ಗದೀಪವಾಗಬೇಕಾದ ಅನಿವಾರ್ಯತೆಯಾಗಿದೆ. ಇಂದಿನ ಯುವಜನತೆ – ಕನಸುಗಳಿಂದ ತುಂಬಿರುತ್ತಾರೆ, ಆದರೆ ಅವರ ಮುಂದೆ ನಿಂತಿರುವ ಸವಾಲುಗಳು, ಅಶಕ್ತತೆ, ಗೊಂದಲಗಳು, ನಿರೀಕ್ಷೆಗಳ ಒತ್ತಡ ಇವು ಮುಂದೆ ಸಾಗುವುದೇ ತೋಚದಷ್ಟು ಬಲಾಢ್ಯವಾಗಿವೆ. ಎಲ್ಲಿಯೂ ಸ್ಪಷ್ಟತೆ ಇಲ್ಲದ ಜಗತ್ತಿನಲ್ಲಿ ತಮ್ಮ ದಾರಿಗೆ ಬೇಕಾದ ಹಾದಿ ಹುಡುಕಿಕೊಳ್ಳುವ ಯತ್ನದಲ್ಲಿರುವ ಯುವಕರು ಕೆಲವೊಮ್ಮೆ ನಿಲ್ಲುತ್ತಾರೆ – ಆ - [ಜೂನ್ 2025 ಮಿಂಚುಳ್ಳಿ ಸಂಚಿಕೆ](https://minchulli.com/june2025sanchike/): ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ - [ಧರ್ಮವೀರನ ಚಿತ್ತ ಖಿನ್ನತೆ - ಡಾ. ವಿಶ್ವನಾಥ ಎನ್ ನೇರಳಕಟ್ಟೆ](https://minchulli.com/arjunauvacha1/): ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ ಕಲಹ. ಸರಿ ತಪ್ಪುಗಳ ಕಲಹ. ಯುದ್ಧದ ನೆಪದಲ್ಲಿ ಸೋದರರು ಸಂಬಂಧಿಗಳನ್ನು ಕೊಂದು ತಾನೆಲ್ಲಿ ತಪ್ಪು ಎಸಗಿದೆನೋ ಎಂಬ ಪಶ್ಚಾತ್ತಾಪ ಭಾವ ಅವನನ್ನು ಕಾಡತೊಡಗಿತ್ತು. ವಾಸ್ತವವಾಗಿ ಅವನ ಆಳ್ವಿಕೆಯಲ್ಲಿ ಪ್ರಜೆಗಳಿಗೆ ಯಾವ ತೊಂದರೆಯೂ ಇರಲಿಲ್ಲ. ರಾಜ್ಯ ಸುಭಿಕ್ಷವಾಗಿತ್ತು. ಚೋರರ ಚತುರತೆಗೆ ಆಸ್ಪದವಿರಲಿಲ್ಲ. ಕೊಲೆಗಡುಕರ ಕ್ರೂರತೆಗೆ ಅವಕಾಶವಿರಲಿಲ್ಲ. ಹಸ್ತಿನಾವತಿಯ ಯಾವ ದೆಶೆಗೆ ದೃಷ್ಟಿ ಹರಿಸಿದರೂ ಅಲ್ಲಿ ಸಂಪದದ ಕಾಣ್ಕೆ. ಯಾವ ದಿಕ್ಕಿಗೆ ನೋಟ ಬೀರಿದರೂ ಅಲ್ಲಿ ಸೊಗದ ದರ್ಶನ. ಇಂದ್ರನ ಅಮರಾವತಿಗೆ ಸ್ಪರ್ಧೆಯನ್ನೊಡ್ಡುವಂತಿತ್ತು ಹಸ್ತಿನಾವತಿ. ಇಂತಹ ಸುಖದ ಅತಿರೇಕಾವಸ್ಥೆಯಲ್ಲಿಯೂ ನನ್ನಣ್ಣನ ಧರ್ಮೋದಾತ್ತ ಚಿತ್ತ ಚಲಿಸಿದ್ದು ಗತಕಾಲದಲ್ಲಿ ನಡೆದುಹೋದ ಮನುಜ ಆಹುತಿಯೆಡೆಗೆ. ಕುರುಕ್ಷೇತ್ರ ರಣಭೂಮಿಯಲ್ಲಿ ಸತ್ತುಹೋಗಿದ್ದವರೆಲ್ಲರೂ ಅವನ ಮನದಲ್ಲಿ ಮರುಜನ್ಮ ಪಡೆದೂ ಪಡೆದೂ ಅವನನ್ನು ಸತಾಯಿಸತೊಡಗಿದ್ದರು. ಎಲ್ಲರ ಸಾವಿಗೂ ತಾನು ಕಾರಣನಾದೆನಲ್ಲಾ ಎಂಬ ಯೋಚನೆ ಧರ್ಮಶ್ರೇಷ್ಠನೆನಿಸಿಕೊಂಡ ಅವನನ್ನು ಕಾಡಿದ್ದು ಕೆಣಕಿದ್ದು ಅಸಹಜ ಸಂಗತಿಯೇನಲ್ಲ. ಹೀಗೆ ಖಿನ್ನತೆಯಲ್ಲಿ - [ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ "ಶರ್ಮಿಷ್ಠೆ" - ನಾ ದಿವಾಕರ](https://minchulli.com/sharmishtenatakavimarshe/): ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು ದಶಕಗಳಿಂದ ಶ್ರೀಮಂತಗೊಳಿಸುತ್ತಿರುವ ಒಂದು ರಂಗತಂಡ. ಭೌತಿಕವಾಗಿ ಕನ್ನಡ ರಂಗಭೂಮಿಯ ಸಮೃದ್ಧ ಬೆಳವಣಿಗೆ ಮತ್ತು ಕಲಾ ವಿಸ್ತರಣೆಗೆ ಅಪಾರ ಕೊಡುಗೆ ಸಲ್ಲಿಸಿರುವುದೇ ಅಲ್ಲದೆ, ನೂರಾರು ಕಲಾವಿದರನ್ನು ಪೋಷಿಸಿ, ಬೆಳೆಸಿ ಕನ್ನಡ ರಂಗಭೂಮಿಯ ಸೃಜನಶೀಲ ಬೆಳವಣಿಗೆಗೆ ಅಹರ್ನಿಶಿ ದುಡಿಯುತ್ತಿರುವ ಒಂದು ತಂಡ ರಂಗಸಂಪದ. ಈ ಐದು ದಶಕಗಳಲ್ಲಿ ಹಲವು ವಿಶಿಷ್ಟ ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ, ಹೊಸ ರಂಗಪ್ರಯೋಗಗಳಿಗೆ ಸದಾ ತೆರೆದ ಬಾಗಿಲಾಗಿರುವ ರಂಗಸಂಪದ ಈ ಬಾರಿ, ಭಾರತದ ಪೌರಾಣಿಕ ಜಗತ್ತಿನ ಅಪೂರ್ವ ಕಥನ ಯಯಾತಿಯನ್ನು ಸಂಧಿಸಿದ್ದು, ಈ ಕಥನದಲ್ಲಿ ವಿಶಿಷ್ಟ ಪಾತ್ರಧಾರಿಯಾಗಿ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ʼ ಶರ್ಮಿಷ್ಠೆ ʼ ಯನ್ನು ರಂಗದ ಮೇಲೆ ತರಲಾಗಿದೆ. ಯಶಸ್ವಿಯಾಗಿ ಎಂದು ಹೇಳಬೇಕಿಲ್ಲ. ಈ ಪ್ರಯೋಗದ ವೈಶಿಷ್ಟ್ಯ ಇರುವುದು ಶರ್ಮಿಷ್ಠೆಯ ಕಥನವನ್ನು ಏಕವ್ಯಕ್ತಿ ನಾಟಕದ ಮೂಲಕ ರಂಗದ ಮೇಲೆ ತಂದಿರುವುದು. ಸಾಮಾನ್ಯವಾಗಿ ರಂಗಭೂಮಿಯಲ್ಲೂ ಸಹ ಸಾಂಪ್ರದಾಯಿಕ - [ಮೇ 2025 ಮಿಂಚುಳ್ಳಿ ಸಂಚಿಕೆ](https://minchulli.com/may2025sanchike/): ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ - [ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು](https://minchulli.com/hrsujatha/): ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ ಬರವಣಿಗೆ ಶುರು ಮಾಡಿದೆ. ಕಾಲೇಜು ದಿನದಲ್ಲಿ ಒಂದೆರಡು ವರುಷ ಬರವಣಿಗೆ ಚುರುಕಾಗಿತ್ತು. ಮದುವೆ , ಸಂಸಾರದಲ್ಲಿ ಬರವಣಿಗೆ ಸಂಪೂರ್ಣ ಮುಳುಗಿಹೋಗಿ ಸಾಹಿತ್ಯ ಓದು ಮಾತ್ರ ಉಳಿದು ಹೋಗಿತ್ತು. ಕೆಲವು ಗಳಿಗೆಗಳಲ್ಲಿ ಬದುಕುವ ಅನಿವಾರ್ಯತೆ ಮತ್ತೇನೋ ಒಂದು ಆಧಾರವನ್ನು ಹಿಡಿದುಕೊಳ್ಳುತ್ತದೆ. ಹಾಗಾಗಿ ನನ್ನ ಆತ್ಮೀಯರ ಒತ್ತಾಸೆಯಿಂದ ಬರವಣಿಗೆಯ ಲೀಲೆ ನನ್ನ ಕೈ ಹಿಡಿತಕ್ಕೆ ದಕ್ಕಿತು ಅನ್ನಬಹುದು. 2. ನಿಮ್ಮ ಸಾಹಿತ್ಯದಲ್ಲಿ ಗ್ರಾಮೀಣ ಪ್ರದೇಶದ ಜನಜೀವನವನ್ನು ಕಾಣಬಹುದು. ಕುವೆಂಪು , ಶ್ರೀಕೃಷ್ಣ ಆಲನಹಳ್ಳಿ ಇತ್ಯಾದಿ ಲೇಖಕರು ಈ ದಾಖಲೀಕರಣದ ಸಾಹಿತ್ಯವನ್ನು ರಚಿಸಿದ್ದಾರೆ . ಇದು ನಿಮ್ಮ ಮೇಲೆ ಪ್ರಭಾವ ಬೀರಿದೆಯೇ? ಹೌದು, ನನ್ನ ಓದಿಗೆ ದಕ್ಕಿದ ಗಂಭೀರ ಲೇಖಕರೆಲ್ಲರ ಪ್ರಭಾವ ನನ್ನ ಮೇಲಿದೆ. ಅದರಲ್ಲಿ ಗ್ರಾಮೀಣ ಬದುಕಿನ ಹಸಿಹಸೀ ಹಸಿರಿನ ಮಡಿಲು ನನಗೆ ಪ್ರಿಯವಾದ್ದು . ಯಾಕೆಂದರೆ ನನ್ನ ಮೂಲ ವ್ಯವಸಾಯ ಮಾಡುವ ವಕ್ಕಲುತನದ - [2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ](https://minchulli.com/sahityaakademi2025translationprize/): ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ ಭಾಷೆಗಳಲ್ಲಿ “ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ”ಯನ್ನು ನೀಡುತ್ತಿದೆ. ಅಕಾದಮಿಯಿಂದ ಗುರುತಿಸಲ್ಪಟ್ಟ ಭಾರತೀಯ ಭಾಷೆಗಳಲ್ಲಿ ಅಂದರೆ ಅಸ್ಸಾಮಿ, ಬಂಗಾಳಿ, ಬೋಡೋ, ಡೋಗ್ರಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಅನುವಾದಕರು ಮಾಡಿದ ಅತ್ಯುತ್ತಮ ಅನುವಾದಗಳಿಗೆ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಬಹುಮಾನಗಳನ್ನು ಪ್ರತಿಷ್ಠಿತ ಸಮಾರಂಭದಲ್ಲಿ ನೀಡಲಾಗುತ್ತದೆ ಮತ್ತು ರೂ. 50,000/- ಮೊತ್ತ ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಸಾಹಿತ್ಯ ಅಕಾದೆಮಿಯು ಮಾನ್ಯತೆ ಪಡೆದ ಎಲ್ಲಾ 24 ಭಾರತೀಯ ಭಾಷೆಗಳಲ್ಲಿ 2025ರ ಸಾಲಿನ ಸಾಹಿತ್ಯ ಅಕಾದಮಿ ಅನುವಾದ ಪ್ರಶಸ್ತಿಗಾಗಿ ಭಾರತೀಯ ಅನುವಾದಕರು, ಅನುವಾದಕರ ಹಿತೈಷಿಗಳು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸುತ್ತದೆ. 2019, 2020, 2021, 2022 ಮತ್ತು 2023 ರಲ್ಲಿ (ಅಂದರೆ, - [ಬದಲಾಗಬೇಕಿದೆ ಸಮಾಜದ ಯುವಶಕ್ತಿ - ಲಿಖಿತ್ ಹೊನ್ನಾಪುರ](https://minchulli.com/yuvaloka2/): ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ದೇಶದ 65% ಜನಸಂಖ್ಯೆ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಅಂಕಿಅಂಶಗಳು ಗರ್ವ ತರುವಷ್ಟು ಶಕ್ತಿಯನ್ನೂ ಹೊಂದಿವೆ, ಜೊತೆಗೆ ಅದು ಹೊಣೆಯ ಬಗ್ಗೆಯೂ ಎಚ್ಚರಿಕೆಯನ್ನು ತರುವಂತೆಯೂ ಮಾಡುತ್ತವೆ. ಯುವಶಕ್ತಿ ಎಂದರೇನು? ಯುವಶಕ್ತಿ ಅಂದರೆ ಕೇವಲ ಶಾರೀರಿಕ ಶಕ್ತಿ ಅಥವಾ ಶಕ್ತಿಮೀಕ್ಷೆ ಅಲ್ಲ. ಇದು ಮನೋಬಲ, ಆತ್ಮಬಲ, ಮೌಲ್ಯಬದ್ಧತೆ, ಬದ್ಧತೆ ಮತ್ತು ಬದಲಾವಣೆ ತರಬಲ್ಲ ಸಾಮರ್ಥ್ಯದ ಸಮೂಹ ರೂಪ. ಇವರು ಮುಂದಿನ ರಾಜಕೀಯ ನಾಯಕರು, ಬೋಧಕರು, ವೈದ್ಯರು, ಕೃಷಿಕರು, ಉದ್ಯಮಿಗಳು ಮತ್ತು ಸೈನಿಕರು. ಇವರೆಲ್ಲರೂ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆಯ ಕ್ರಾಂತಿಗೆ ಕಾರಣರಾಗಬಹುದಾದ ಶಕ್ತಿಯ ಸಮುದಾಯ. ಸ್ವಾಮಿ ವಿವೇಕಾನಂದರು ಹೇಳಿದಂತೆ: “ಏಳಿರಿ, ಎದ್ದೇಳಿರಿ, ಗುರಿ ಮುಟ್ಟುವವರೆಗೆ ಮುನ್ನುಗ್ಗಿರಿ” ಎಂಬ ಮಾತು ಯುವಕರಲ್ಲಿ ಉರಿಯುವ ಅಗ್ನಿಯನ್ನು ಮತ್ತಷ್ಟು ಬೆಂಕಿಯಾಗಿಸುವ ಶಕ್ತಿಯನ್ನು ಹೊಂದಿದೆ. ಈ ಮಾತುಗಳು ಕೇವಲ ಸ್ಫೂರ್ತಿ - [2025ನೇ ಸಾಲಿನ ಮಕ್ಕಳ ಕಥಾ ಸ್ಪರ್ಧೆಗೆ ಕಥೆಗಳ ಆಹ್ವಾನ](https://minchulli.com/makkalakathasparde2025/) - [ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ](https://minchulli.com/april2025sanchike/): ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ - [ಜಾಗತಿಕ ಮಟ್ಟದ ಬೂಕರ್ ಪ್ರಶಸ್ತಿಯ ಕೊನೆಯ ಪಟ್ಟಿಯಲ್ಲಿ ಹಿರಿಯ ಲೇಖಕಿ, ಕನ್ನಡತಿ ಬಾನು ಮುಷ್ತಾಕ್ ಅವರ "ಹಾರ್ಟ್ ಲ್ಯಾಂಪ್" ಸಣ್ಣ ಕಥೆಗಳ ಪುಸ್ತಕ](https://minchulli.com/bookeraward2025finallist/) - [ಚಿಗುರುತ್ತಿರುವ ಕಾವ್ಯದ ʼಹೊನಲುʼ - ನಾ ದಿವಾಕರ](https://minchulli.com/suddi300/): (ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ ರೂಪ) ಶ್ರೀಮತಿ ಭಾಗ್ಯ ಗೌರೀಶ್‌ ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸುವ ತಮ್ಮ ವೃತ್ತಿಯೊಂದಿಗೇ, ತಾವು ಬದುಕಿನ ಹಾದಿಯಲ್ಲಿ ಕಲಿತ ಅಥವ ಕಲಿಯಬೇಕೆಂದೆನಿಸುವ, ಜೀವನ ಸಾರ್ಥಕತೆಯ ಹಲವು ಸೂಕ್ಷ್ಮ ಸಂಗತಿಗಳಿಗೆ ಒಂದು ಸಂಕ್ಷಿಪ್ತ ಅಕ್ಷರ ನೀಡುವ ಮೂಲಕ, ಕಾವ್ಯಾತ್ಮಕ ಸ್ಪರ್ಶದೊಂದಿಗೆ ತಮ್ಮ ಪ್ರಥಮ ಕವನ ಸಂಕಲನ ʼ ಹೊನಲು ʼ ಹೊರತರುತ್ತಿರುವುದು ಹೆಮ್ಮೆಯ ವಿಚಾರ. ಕಾವ್ಯ ಎನ್ನುವುದು ಒಂದು ಅನುಭಾವಕ ಸ್ಥಿತಿಯ ಅಕ್ಷರಾಭಿವ್ಯಕ್ತಿ. ಆದರೆ ಕವಿಮನಸ್ಸಿನಲ್ಲಿ ಬೀಜಾಕ್ಷರಗಳು ಹುಟ್ಟಿಕೊಳ್ಳುವುದು ಅನುಭವದ ನೆಲೆಯಲ್ಲಿ. ಬದುಕಿನ ಪ್ರತಿಯೊಂದು ಕ್ಷಣವನ್ನೂ, ಕಷ್ಟ ಸುಖಗಳ ಚೌಕಟ್ಟಿನೊಳಗೇ, ಸಹನೆಯಿಂದ ಅಥವಾ ಅನಿವಾರ್ಯತೆಯ ಕಾರಣ, ಅನುಭವಿಸುವ ವ್ಯಕ್ತಿಯ ಮನದಾಳದಲ್ಲಿ ಸಹಜವಾಗಿಯೇ ಕೆಲವು ಅಭಿವ್ಯಕ್ತಿಗಳು ಹುಟ್ಟಿಕೊಳ್ಳುತ್ತಾ ಹೋಗುತ್ತವೆ. ಈ ಸಹಜ ಬಿತ್ತನೆಯನ್ನು ಮತ್ತಷ್ಟು ಪೋಷಿಸಿ ಬೆಳೆಸಲು ಯೋಚಿಸಿದಾಗ, ಸಾಮಾನ್ಯ ಮನಸ್ಸು ದಿನಚರಿ ಬರೆದರೆ, ಸೂಕ್ಷ್ಮ ಮನಸ್ಸು ಆ ಆಲೋಚನೆಯ ಬೀಜಗಳನ್ನು ಸಸಿಯಾಗಿ ಬೆಳೆಸುವ - [ಸವಿರಾಜ್ ಆನಂದೂರು ಮತ್ತು ದಸ್ತಗೀರಸಾಬ್ ದಿನ್ನಿ ಅವರುಗಳಿಗೆ ೨೦೨೪ನೇ ಸಾಲಿನ ರಾಜ್ಯ ಮಟ್ಟದ ಸಹೃದಯ ಕಾವ್ಯ ಪ್ರಶಸ್ತಿ](https://minchulli.com/sahrudayakavyaprashasti2024/) - [ಗುರುರಾಜ ಕುಲಕರ್ಣಿ ಅವರ "Codeಗನ ಕಥೆಗಳು" ಹಸ್ತ ಪ್ರತಿಗೆ ೨೦೨೫ನೇ ಸಾಲಿನ ಛಂದ ಪುಸ್ತಕ ಬಹುಮಾನ](https://minchulli.com/chandapustakabahumana2025/): ಛಂದ ಪುಸ್ತಕ ಪ್ರಕಾಶನ ನಡೆಸುವ ೨೦೨೫ನೇ ಸಾಲಿನ ಛಂದ ಪುಸ್ತಕ ಬಹುಮಾನಕ್ಕೆ ಕಥೆಗಾರರಾದ ಗುರುರಾಜ ಕುಲಕರ್ಣಿ ಅವರ “Codeಗನ ಕಥೆಗಳು” ಹಸ್ತಪ್ರತಿ ಭಾಜನವಾಗಿದೆ. ಈ ಪ್ರಶಸ್ತಿಯು ಸಂಕಲನ ಪ್ರಕಟಣೆಯ ಜೊತೆಗೆ ನಲವತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಹಿರಿಯ ಸಾಹಿತಿಗಳಾದ ಡಾ. ಬಸವರಾಜ ಕಲ್ಗುಡಿ ಅವರು ಬಹುಮಾನವನ್ನು ವಿತರಿಸಿದರು. ಇದರ ಜೊತೆಗೆ ಈ ಬಾರಿ ಆರು ಜನ ಕಥೆಗಾರರಿಗೆ ಮೆಚ್ಚುಗೆ ಬಹುಮಾನವನ್ನು ನೀಡಲಾಗಿದೆ. ಹಿರಿಯ ಸಾಹಿತಿಗಳಾದ ವಸುಮತಿ ಉಡುಪ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಮೆಚ್ಚುಗೆಯ ಬಹುಮಾನ ಪಡೆದವರು: ದೀಪಾ ಹಿರೇಗುತ್ತಿ  ಮೋಹನ್ ಕುಮಾರ್ ಬಣಕಾರ ಸಣ್ಣಳ್ಳಿ ಹನುಮಂತ ಶೀಲಾ ಪೈ ಕುಸುಮಾ ಆಯರಹಳ್ಳಿ ಶ್ರೀಧರ ಹೆಗಡೆ - [ಪ್ರೀತಿಗೆ ಈ ಪದಗಳು ಅನಿವಾರ್ಯವೇ? - ಲಿಖಿತ್ ಹೊನ್ನಾಪುರ](https://minchulli.com/yuvaloka1/): ಪ್ರೀತಿ ಎಂದರೆ “ಐ ಲವ್ ಯು” ಎಂಬ ಮೂರು ಶಬ್ದಗಳಲ್ಲ. ಅದಕ್ಕಿಂತ ಅದೆಷ್ಟೋ ಹೆಚ್ಚು, ಆಳವಾದ ಭಾವನೆ. ಯಾರೋ ನಿಮಗಾಗಿ ಶತಮೈಲುಗಳ ದೂರ ಸಾಗಿಬಂದು ನಿಮ್ಮ ಮುಖದಲ್ಲಿ ಒಂದು ನಗುವನ್ನು ಮೂಡಿಸುವ ಪ್ರಯತ್ನ ಮಾಡುತ್ತಾರೆ – ಅದು ಪ್ರೀತಿಯೇ ಅಲ್ಲವೇ? ನಿಮ್ಮ ಗಂಟೆಗಳ ಸಂಕಟ, ಒತ್ತಡ, ದುಃಖಗಳೆಲ್ಲಾ ಒಂದು ಮಾತಿನಲ್ಲಿ ಅರಿತುಕೊಳ್ಳುವ ಆ ಸಹಜತೆ – ಅದು ಪ್ರೀತಿ ಅಲ್ಲವೇ? ನೀವು ತಿಂದಿರುವೆನೆಂದು ಕೇಳಿ, ನೀವೂ ತಿನ್ನಲು ಮರೆತಿರಬಹುದು ಎಂದು ಮನಪೂರ್ವಕವಾಗಿ ಕಾಳಜಿ ತೋರಿಸುವ ವ್ಯಕ್ತಿಯನ್ನೊಮ್ಮೆ ನೆನೆಸಿ. ಅವರು ಪ್ರೀತಿಯನ್ನು ಏನಾದರೂ ಹೇಳಬೇಕೆ? ಸಣ್ಣ ಪುಟ್ಟ ವಿಷಯಗಳಲ್ಲಿ ನಿಮ್ಮನ್ನ ಉಳಿಸಿ, ಪ್ರೀತಿಸಿ, ಬೆಳೆಸುವಂತ ವ್ಯಕ್ತಿಯ ಪ್ರತಿ ಕಣ್ಣೋಟದಲ್ಲೂ ಪ್ರೀತಿ ಇದೆ. ಮಳೆಗಾಲದ ಸಂಜೆ, ಒಲೆಯ ಹತ್ತಿರ ಕುಳಿತು ತಣ್ಣನೆಯ ಗಾಳಿ ತಟ್ಟಿದಾಗ, ನಿಮ್ಮ ನೆನಪು ಮಾಡಿಕೊಂಡು ಕೈಯಲ್ಲಿ ಕಾಫಿ ಪ್ಯಾಲೆಟ್ ಹಿಡಿದು ಕೂತು, ನಿಮ್ಮ ಅಭಾವವನ್ನು ಅನುಭವಿಸುವವರೆಗೂ ಪ್ರೀತಿಯ ಮಾತುಗಳೇನು? ನೀವು ಕೇಳಿದ ಒಂದೇ ಒಂದು ಬೇಡಿಕೆಗೆ “ಸರಿ” ಎಂದು ಉತ್ತರಿಸುತ್ತಿರುವ ಅವುಗಳ - [ಯುಗಾದಿ ಹಬ್ಬದ ಪ್ರಯುಕ್ತ ಧಾರವಾಡ ಕಟ್ಟೆ (ರಿ.) ಇವರಿಂದ ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿ](https://minchulli.com/dharavadakatteyugadi/): ದಿನಾಂಕ: 30/03/2025, ರವಿವಾರ, ಸಂಜೆ 6 ಗಂಟೆ ಆಶಯ ನುಡಿ: ಡಾ. ಬಸವರಾಜ ಸಾದರ ಲೇಖಕರು, ಬೆಂಗಳೂರು ವಿಷಯ: ಯುಗಾದಿಯ ಸಂದೇಶ ಶ್ರೀ ಪುಟ್ಟು ಕುಲಕರ್ಣಿ ಲೇಖಕರು, ಕುಮಟಾ ವಿಷಯ: ಯುಗಾದಿಯಲ್ಲಿನ ಬೆರಗು: ಬೇಂದ್ರೆ ದೃಷ್ಟಿಕೋನದ ವಿಜ್ಞಾನ ಡಾ. ರಾಜೀವ ಜೋಶಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಕವಿಗೋಷ್ಠಿ:- ಅಧ್ಯಕ್ಷತೆ:- ಪ್ರೊ. ಬಸವರಾಜ ಡೋಣೂರ ನಿರ್ದೇಶಕರು, ಅಧ್ಯಯನಾಂಗ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಭಾಗವಹಿಸುವ ಕವಿಗಳು:- ಡಾ. ಸಂಜೀವರಾಯಪ್ಪ ಸುಖದೇವಾನಂದ ಚವತ್ರಿಮಠ ಶಿವಾನಂದ ಮರಿಗುದ್ದಿ ಡಾ. ಬಸಯ್ಯಸ್ವಾಮಿ ರೇಖಾ ಬಿಳಗಲಿ ಶಾಂತಾ ಕಾಕಲ್ವಾರ ವಾಣಿಶ್ರೀ ಕಲ್ಲೂರ ಡಾ. ವಿಜಯಲಕ್ಷ್ಮಿ ದಾನರಡ್ಡಿ ಸರ್ವರಿಗೂ ಆದರದ ಸ್ವಾಗತ ಡಾ. ವಿಜಯಲಕ್ಷ್ಮಿ ದಾನರಡ್ಡಿ ಪ್ರಧಾನ ಕಾರ್ಯದರ್ಶಿ ಶಿವರಾಜ್ ಸಣಮನಿ ಕಾರ್ಯದರ್ಶಿ ಡಾ. ಪ್ರಕಾಶ ಬಾಳಿಕಾಯಿ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ಖಜಾಂಚಿ ಸದಸ್ಯ ಕಾರ್ಯದರ್ಶಿಗಳು: ವಾಣಿಶ್ರೀ ಕಲ್ಲೂರ, ಡಾ. ಬಸಯ್ಯಸ್ವಾಮಿ, ಶಾಂತಾ ಕಾಕಲ್ವಾರ. ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ https://meet.google.com/boj-msrp-gnf - [ಬೆಂಗಳೂರಿನಲ್ಲಿ ಏಪ್ರಿಲ್ 5ರಂದು ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರು ಮತ್ತು ಹಿರಿಯ ಕಥೆಗಾರರಾದ ಚನ್ನಪ್ಪ ಕಟ್ಟಿ ಅವರ "ಬೇರು ಚಿಗುರು" ಮತ್ತು "ರೂಟ್ಸ್ ಅಂಡ್ ಶೂಟ್ಸ್" ಪುಸ್ತಕಗಳ ಬಿಡುಗಡೆ.](https://minchulli.com/neleprakashanabookrelease/): ಎರಡು ಕವನ ಸಂಕಲನಗಳ ಲೋಕಾರ್ಪಣೆ: ದಿನಾಂಕ:  ಏಪ್ರಿಲ್ 5, 2025 ಶನಿವಾರ, ಸಂಜೆ: 5 ಗಂಟೆಗೆ ಅಧ್ಯಕ್ಷತೆ: • ನಾಡೋಜ ಪ್ರೊ. ಹಂಪನಾಗರಾಜಯ್ಯ ಹಿರಿಯ ಸಂಸ್ಕೃತಿ ಚಿಂತಕರು ಗ್ರಂಥಗಳ ಲೋಕಾರ್ಪಣೆ: ಶ್ರೀ ಕಾ.ತ. ಚಿಕ್ಕಣ್ಣ ಅಧ್ಯಕ್ಷರು, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ಗ್ರಂಥಗಳ ಅವಲೋಕನ: • ಡಾ.ಎನ್.ಆರ್. ಲಲಿತಾಂಬ ಕನ್ನಡ ಪ್ರಾಧ್ಯಾಪಕರು ವಿಜಯನಗರ ಸರಕಾರಿ ಪದವಿ ಕಾಲೇಜು, ಬೆಂಗಳೂರು ಉಪಸ್ಥಿತಿ: ಡಾ.ಎಂ.ಎಂ.ಪಡಶೆಟ್ಟಿ ಹಿರಿಯ ಸದಸ್ಯರು, ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ. ಸ್ಥಳ: ಕ್ಲಬ್ ಹೌಸ್, ಎಸ್.ಜೆ.ಆರ್. ಬ್ಲೂವಾಟರ್ಸ್ ಸಿಲ್ವರ್ ಕೌಂಟಿ ರೋಡ್, ಬೆಂಗಳೂರು. ನೆಲೆ ಪ್ರಕಾಶನ ಸಂಸ್ಥೆಯ ಸರ್ವ ಸದಸ್ಯರು. ೯೪೦೧೦೮೨೫೧೮, ೯೯೭೨೭೭೯೨೨೨, ೯೬೨೦೦೦೭೫೧೮ - [ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮತ್ತು ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರಿಗೆ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ](https://minchulli.com/kapaseprashasti2025/): ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ ೧೯೨೮ರ ಏಪ್ರಿಲ್ ೨ ರಂದು ವಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಲೋಣಿಯಲ್ಲಿ ಜನಿಸಿದ ಗುರುಲಿಂಗ ಕಾಪಸೆ ಅವರು, ಎಂ.ಎ. ಪಿಎಚ್.ಡಿ., ಡಿಪ್ಲೊಮಾ ಇನ್ ಎಪಿಗ್ರಾಫಿ ಪೂರೈಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರವಾಚಕರಾಗಿ, ಕ.ವಿ.ವಿ ಬೆಳಗಾವಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿಯಾಗಿ ಮತ್ತು ಧಾರವಾಡದ ಹುರಕಡ್ಲಿ ಅಜ್ಜ ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಕೆಲಸ ಮಾಡಿದ್ದಾರೆ. ಕನ್ನಡದ ಪ್ರಾಚೀನ ಸಾಹಿತ್ಯದಿಂದ ಹಿಡಿದು, ಹೊಸಗನ್ನಡದ ವಿವಿಧ ಘಟ್ಟಗಳ ವರೆಗಿನ ಎಲ್ಲ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಡಾ. ಗುರುಲಿಂಗ ಕಾಪಸೆ ಅವರು, ಬಹಳ ಮುಖ್ಯವಾಗಿ ಕನ್ನಡ ಅನುಭಾವ ಸಾಹಿತ್ಯ ಪರಂಪರೆಯ ಬಗ್ಗೆ ವಿಶೇಷ ಗಮನ ಹರಿಸಿದವರು. ಶ್ರೀ ಅರವಿಂದರು, ಶ್ರೀಮಾತಾಜಿ ಅವರು, ಮಧುರಚೆನ್ನರು ಮತ್ತು ಬಸವಾದಿ ಶರಣರು ಅವರ ಅಂತರಂಗವನ್ನು ಬೆಳಗಿದ ಮಾಹಾಚೇತನರು. ಶುದ್ಧ ಸಾತ್ವಿಕ ಸ್ವಭಾವದ ಡಾ. ಗುರುಲಿಂಗ ಕಾಪಸೆ ಅವರು ಅಂತರಂಗದ ಅನುಭಾವಿಗಳಾಗಿ ಸಾಧನೆ ಮಾಡಿದವರು. ತಮ್ಮ ಅಪಾರ ಓದಿನಿಂದ ದಕ್ಕಿದ - [ಮಾರ್ಚ್ 21ರಂದು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 2023ನೇ ಸಾಲಿನ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ](https://minchulli.com/kasapa2023dattiprashastipradana/) - [ರೇವಣಸಿದ್ಧಪ್ಪ ಜಿ.ಆರ್. ಅವರಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ](https://minchulli.com/ksaaward2022kavya/): ರೇವಣಸಿದ್ಧಪ್ಪ ಜಿ.ಆರ್. ಅವರ “ಬಾಳ ನೌಕೆಗೆ ಬೆಳಕಿನ ದೀಪ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನವಕವಿಗಳ ಪ್ರಥಮ ಕೃತಿ ಪ್ರಶಸ್ತಿ. ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳ ವಿವರ - [ಯುವ ವಿಮರ್ಶಕ ವಿನಯ ನಂದಿಹಾಳ ಅವರಿಗೆ 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿ](https://minchulli.com/ksaaward2022/): ವಿನಯ್ ನಂದಿಹಾಳ್ ಅವರ “ಕಣ್ಣಂಚಿನ ಕಿಟಕಿ” ವಿಮರ್ಶಾ ಕೃತಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ ಪ್ರಕಟವಾಗಿದೆ. ಇದರ ಜೊತೆಗೆ ಗೌರವ ಮತ್ತು ಸಾಹಿತ್ಯಶ್ರೀ ಪ್ರಶಸ್ತಿಗಳನ್ನು ಅಕಾಡೆಮಿಯು ಪ್ರಕಟಿಸಿದೆ. ೨೦೨೨ನೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿವರಗಳು - [ಈ ಹೊತ್ತಿಗೆ ಪ್ರಶಸ್ತಿ ಪ್ರದಾನ ಸಮಾರಂಭ: ಮಾರ್ಚ್ 09, 2025](https://minchulli.com/eehottigeprashasti2025/): ಸಾಹಿತ್ಯಾಸಕ್ತರೆಲ್ಲರಿಗೂ ಆತ್ಮೀಯ ಸ್ವಾಗತ. ದಿನಾಂಕ: ೦೯ ಮಾರ್ಚ್ ೨೦೨೫ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ ಈ ಹೊತ್ತಿಗೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮವಿದೆ. ಕಾರ್ಯಕ್ರಮದಲ್ಲಿ ೨೦೨೫ನೇ ಸಾಲಿನ ಈ ಹೊತ್ತಿಗೆ ಕಥಾಪ್ರಶಸ್ತಿ ಹಾಗೂ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ಪ್ರದಾನವಿದ್ದು, ಪ್ರಶಸ್ತಿ ಪ್ರದಾನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ. ಎಲ್ ಎನ್ ಮುಕುಂದರಾಜ್ ನೆರವೇರಿಸಲಿದ್ದಾರೆ. ಈ ವರ್ಷದ ಕಾವ್ಯ ಪ್ರಶಸ್ತಿ ವಿಜೇತರು, ಡಾ. ಲಕ್ಷ್ಮಣ ವಿ ಎ ಹಾಗೂ ಕಥಾಪ್ರಶಸ್ತಿ ವಿಜೇತರು ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರಾಗಿದ್ದು, ಇದೇ ಸಮಯದಲ್ಲಿ ಪ್ರಶಸ್ತಿ ವಿಜೇತ ಕೃತಿಗಳ ಲೋಕಾರ್ಪಣೆಯಾಗಲಿದೆ. ಕೃತಿ ಪರಿಚಯವನ್ನು ಆನಂದ ಕುಂಚನೂರ್ ಮತ್ತು ಸಂಗೀತಾ ಚಚಡಿ ಮಾಡಿಕೊಡಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಒಂದು ಗೋಷ್ಠಿ ಹಾಗೂ ಒಂದು ಸಂವಾದವಿದೆ. ‘ಅಕ್ಷರ ಜಾನಪದ’ ಎಂಬ ಗೋಷ್ಠಿಯಲ್ಲಿ, ಖ್ಯಾತ ಗಾಯಕರಾದ ಜನಪದಶ್ರೀ. ಅಪ್ಪಗೆರೆ ತಿಮ್ಮರಾಜು ಹಾಗೂ ಜಾನಪದ ತಜ್ಞೆ, ಕವಿ ರೇಣುಕಾ ಕೋಡಗುಂಟಿ ಅವರು ಮಾತನಾಡಲಿದ್ದಾರೆ, ಈ ಗೋಷ್ಠಿಯ ಅಧ್ಯಕ್ಷ್ಯತೆಯನ್ನು - [ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ](https://minchulli.com/sahityaakademitprize2024/): ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ “ವಿದಿಶಾ ಪ್ರಹಸನ” ಅನುವಾದದ ನಾಟಕ ಕೃತಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಪ್ರಕಟವಾಗಿದೆ. ಮುಖ್ಯ ತೀರ್ಪುಗಾರರ ತಂಡದಲ್ಲಿ ಹಿರಿಯ ಸಾಹಿತಿಗಳಾದ ಧರಣೇಂದ್ರ ಕುರ್ಕುರಿ, ಪುಷ್ಪಾ ಎಚ್.ಎಲ್. ಮತ್ತು ಡಾ. ನಾ. ದಾಮೋದರ ಶೆಟ್ಟಿ ಇದ್ದರು. ಕೊನೆಯ ಹಂತದಲ್ಲಿ ಚಿದಾನಂದ ಸಾಲಿ ಅವರ “ಸ್ವಪ್ನಲಿಪಿ”, ಎಚ್.ಎಸ್. ನಾಗಭೂಷಣ ಅವರ “ಚಾಂಡಾಳನೊಬ್ಬನ ಆತ್ಮವಿಮರ್ಶೆ”, ವಿಕ್ರಮ ವಿಸಾಜಿ ಅವರ “ದೇಹವೇ ದೇಶ”, ಮೇಟಿ ಮಲ್ಲಿಕಾರ್ಜುನ ಅವರ “ಕನ್ನಡವೇ ಕಣ್ಣಾಗಿ, ಕಣ್ಣೇ ಕನ್ನಡಿಯಾಗಿ”, ದು. ಸರಸ್ವತಿ ಅವರ “ನಾವು ಇತಿಹಾಸ ಕಟ್ಟಿದೆವು: ಅಂಬೇಡ್ಕರ್ ಚಳುವಳಿಯ ಮಹಿಳೆಯರು” ಸೇರಿದಂತೆ ಒಟ್ಟು ೬ ಕೃತಿಗಳು ಇದ್ದವು. ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ವಿವರ - [ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಸಾಹಿತ್ಯ ಅಕಾಡೆಮಿಯ ಏಷ್ಯಾದ ಅತಿದೊಡ್ಡ ಅಕ್ಷರಗಳ ಹಬ್ಬ "ಫೆಸ್ಟಿವಲ್ ಆಫ್ ಲೆಟರ್ಸ್" ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕನ್ನಡ ಸಾಹಿತಿಗಳು ಮತ್ತು ಕಾರ್ಯಕ್ರಮದ ಪಟ್ಟಿ.](https://minchulli.com/festivalofletters2025/): 1. ಕಾರ್ಯಕ್ರಮದ ಹೆಸರು: What We See, We Weave Magic: Multilingual Poetry Readings ಭಾಗವಹಿಸುತ್ತಿರುವ ಕನ್ನಡದ ಲೇಖಕ: Chair: ಚಂದ್ರಶೇಖರ ಕಂಬಾರ 2. ಕಾರ್ಯಕ್ರಮದ ಹೆಸರು: Dharma Literature: Flame for All Ages ಭಾಗವಹಿಸುತ್ತಿರುವ ಕನ್ನಡದ ಲೇಖಕ: Chair : ಎಚ್.ಎಸ್. ಶಿವಪ್ರಕಾಶ್ 3. ಕಾರ್ಯಕ್ರಮದ ಹೆಸರು: In a Nutshell – Multilingual Short Story Readings ಭಾಗವಹಿಸುತ್ತಿರುವ ಕನ್ನಡದ ಲೇಖಕ: Chair: ಮನು ಬಳಿಗಾರ್ 4. ಕಾರ್ಯಕ್ರಮದ ಹೆಸರು: What Makes Specific Stories as Timeless Tales ಭಾಗವಹಿಸುತ್ತಿರುವ ಕನ್ನಡದ ಲೇಖಕ: Chair: ವಿವೇಕ ಶಾನಭಾಗ 5. ಕಾರ್ಯಕ್ರಮದ ಹೆಸರು: Nari Chetnam: Efforescense of Women’s Writing ಭಾಗವಹಿಸುತ್ತಿರುವ ಕನ್ನಡದ ಲೇಖಕಿ: ಎಂ.ಎಸ್. ಆಶಾದೇವಿ 6. ಕಾರ್ಯಕ್ರಮದ ಹೆಸರು: Knitting India: Readings of Short Stories ಭಾಗವಹಿಸುತ್ತಿರುವ ಕನ್ನಡದ ಲೇಖಕ: ಅಮರೇಶ ನುಗಡೋಣಿ 7. ಕಾರ್ಯಕ್ರಮದ ಹೆಸರು: Asmita: We Weave - [ಅರಳಿ ನೆರಳು ಕೃತಿ ಲೋಕಾರ್ಪಣೆ](https://minchulli.com/aralineralulokarpane/): ಅಭಿಜ್ಞಾನ ಪ್ರಕಾಶನ ಹಿಪ್ಪರಗ ಬಾಗ್ ತಾಲೂಕ ಬಸವಕಲ್ಯಾಣ ಜಿಲ್ಲಾ ಬೀದರ. ಹಾಗೂ ಸಾರನಾಥ ಪ.ಜಾ. ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ (ನಿ) ಇವರ ಸಂಯುಕ್ತಾಶ್ರಯದಲ್ಲಿ ಕವಿ ದೇವೇಂದ್ರ ಕಟ್ಟಿಮನಿ ಬರೆದಿರುವ “ಅರಳಿ ನೆರಳು” ಕೃತಿ ಲೋಕಾರ್ಪಣೆ ಮತ್ತು “ಸಮ್ಯಕ್ ಜ್ಞಾನ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 22/2/2025 ರಂದು ಕಲಬುರ್ಗಿ ನಗರದ ಜಿಲ್ಲಾ ಪಂಚಾಯತ್ ಆವರಣದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದು, ಪೂಜ್ಯ ಭಂತೆ ಸಂಘಾನಂದ ಥೆರೋ ಅವರ ದಿವ್ಯ ಸಾನಿಧ್ಯದಲ್ಲಿ, ಶ್ರೀ ಡಿ.ಜಿ.ರಾಜಣ್ಣ ಎ.ಸಿ.ಪಿ. ಸಬ್ ಅರ್ಬನ್ ಕಲಬುರ್ಗಿ ಅವರು ಉದ್ಘಾಟಿಸಲಿದ್ದು, ಪ್ರೊ. ಅಪ್ಪೆಗೆರೆ ಸೋಮಶೇಖರ್, ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ ಇವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶ್ರೀ ವೆಂಕಟೇಶ್ ಬೇವಿನ ಬೆಂಚಿ, ಅಧ್ಯಕ್ಷರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಹಾಗೂ ಕಾರ್ಯಕ್ರಮ ನಿರ್ವಾಹಣಾಧಿಕಾರಿಗಳು ಆಕಾಶವಾಣಿ ರಾಯಚೂರು. ಶ್ರೀ ರಾವುತರಾವ್ ಬರೂರ್ ರಾಯಚೂರು, ಶ್ರೀ ಸತೀಶ್ ಬಿ ಹಳ್ಳಿ , ಪ್ರಕಾಶ್ ನರೋಣ ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ - [೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.](https://minchulli.com/kendrasahityaakademiaward2025/): ೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಯ ನಿಯಮಗಳಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು, ಇದೆ ಮೊದಲಬಾರಿಗೆ ಸಾರ್ವಜನಿಕವಾಗಿ ಅರ್ಜಿಯನ್ನು ಕರೆಯಲಾಗಿದೆ. ಸಾಹಿತ್ಯ ಅಕಾದೆಮಿಯು 2025ನೇ ಸಾಲಿನ ಸಾಹಿತ್ಯ ಅಕಾದೆಮಿ ಪ್ರಶಸ್ತಿಗಾಗಿ ಭಾರತೀಯ ಲೇಖಕರು, ಲೇಖಕರ ಹಿತೈಷಿಗಳು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸುತ್ತದೆ. 2019, 2020, 2021, 2022 ಮತ್ತು 2023 (ಅಂದರೆ, 1 ಜನವರಿ 2019 ಮತ್ತು 31 ಡಿಸೆಂಬರ್ 2023ರ ನಡುವೆ) ಈ ವರ್ಷಗಳಲ್ಲಿ ಮೊದಲು ಪ್ರಕಟವಾದ ಪುಸ್ತಕವನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ. ಅರ್ಜಿ ನಮೂನೆಯೊಂದಿಗೆ ಪ್ರತಿ ಪುಸ್ತಕದ ಪ್ರತಿಯನ್ನು 28 ಫೆಬ್ರವರಿ 2025 ರೊಳಗೆ ಸಲ್ಲಿಸಬೇಕು. ಕೇಂದ್ರ ಸಾಹಿತ್ಯ ಅಕಾಡೆಮಿ ಮುಖ್ಯಪ್ರಶಸ್ತಿಯ ಬದಲಾವಣೆಗೊಂಡ ನಿಯಮಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. Application Form Kendra Sahitya Akademi Award 2025 - [ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು" ವಿಮರ್ಶಾ ಸಂಕಲನಕ್ಕೆ ೨೦೨೪ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.](https://minchulli.com/kedrasahityaakademyprashasti2024/): ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ “ನುಡಿಗಳ ಅಳಿವು” ಕೃತಿಗೆ ಸಂದಿದೆ. ಹಿರಿಯ ಸಾಹಿತಿ ಓ.ಎಲ್. ನಾಗಭೂಷಣಸ್ವಾಮಿ ಸೇರಿದಂತೆ ಡಾ. ಹಳೆಮನೆ ರಾಜಶೇಖರ್ ಮತ್ತು ಡಾ. ಸರಜೂ ಕಾಟ್ಕರ್ ಮುಖ್ಯ ತೀರ್ಪುಗಾರರ ಸಮಿತಿಯಲ್ಲಿದ್ದರು. ನರಹಳ್ಳಿ ಬಾಲಸುಬ್ರಮಣ್ಯ, ಎಚ್.ಎಸ್.ಅನುಪಮಾ, ಮಲ್ಲಿಕಾರ್ಜುನ್  ಹಿರೇಮಠ , ವಿಜಯಶ್ರೀ ಸಬರದ, ತೇಜಸ್ವಿ ಕಟ್ಟಿಮನಿ, ಎಚ್.ಆರ್. ಸುಜಾತಾ, ಕೆ.ವಿ. ನಾರಾಯಣ, ಎಚ್.ಎಲ್. ಪುಷ್ಪ, ವಸುಧೇಂದ್ರ, ಸಿದ್ಧಲಿಂಗ ಪಟ್ಟಣಶೆಟ್ಟಿ, ರಾಜೇಂದ್ರ ಚೆನ್ನಿ, ಎಸ್.ಜಿ. ಸಿದ್ಧರಾಮಯ್ಯ, ಲಲಿತಾ ಕೆ. ಹೊಸಪ್ಯಾಟಿ ಅವರ ಪುಸ್ತಕವು ಸೇರಿ ಒಟ್ಟು ೧೩ ಪುಸ್ತಕಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಯ ಕೊನೆಯ ಹಂತದಲ್ಲಿದ್ದವು.   - [ಕನ್ನಡ ಸಾಹಿತ್ಯ ಸಮ್ಮೇಳನ 2024 ಮಂಡ್ಯ ಆಹ್ವಾನ ಪತ್ರಿಕೆ](https://minchulli.com/kannadasahityasammelana2024/) - [ಡಿಸೆಂಬರ್ 8 ಭಾನುವಾರದಂದು ಬೆಂಗಳೂರಿನಲ್ಲಿ ಕರ್ನಾಟಕ ಲೇಖಕಿಯರ ಸಂಘದಿಂದ ಅನುಪಮಾ ನಿರಂಜನ ಮತ್ತು ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ](https://minchulli.com/anupamasavitrammaprashasti2024/) - [ಡಿಸೆಂಬರ್ 7, ಶನಿವಾರದಂದು ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ](https://minchulli.com/kottigeharapustakaparishe/): ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ ಕಾರ್ಯಕ್ರಮ. ಚಿಕ್ಕಮಗಳೂರಿನ ಕಡೆಯೋ, ಕೊಟ್ಟಿಗೆಹಾರದ ಕಡೆ ಬರುತ್ತಿದ್ದರೆ ಒಂದು ಸಣ್ಣ ಭೇಟಿ ನೀಡಿ. ನಿಮ್ಮ ಇರುವಿಕೆಯೇ ನಮಗೆ ಧೈರ್ಯ, ನಂಬಿಕೆ, ಭರಸವೆ. ಪ್ರೀತಿಯಿಂದ ಪೃಥ್ವಿ ಸೂರಿ ಕನಸುಗಳ ಇನ್ಫಿನಿಟಿ - [International Poetry Meet; About the Poets (The Poet's Village: One World, Many Poets) Program](https://minchulli.com/international-poetry-meet/) - [2024ನೇ ಸಾಲಿನ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಗೆ ವಿವಿಧ ಪ್ರಕಾರದ ಕೃತಿಗಳ ಆಹ್ವಾನ](https://minchulli.com/2024trivenishellikeriprashati/): ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ. ಜಿ. ಬಾಗಲಕೋಟೆ, ಇವರಿಂದ ರಾಜ್ಯಮಟ್ಟದ “ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024″ಕ್ಕೆ ಕೃತಿಗಳನ್ನು ಆಹ್ವಾನಿಸಿದೆ. ಆಸಕ್ತ ಲೇಖಕರು, ಪ್ರಕಾಶಕರು ಕಥೆ,  ಕವನ,  ಕಾದಂಬರಿ ಈ ಮೂರು ಪ್ರಕಾರಗಳ ಕೃತಿಗಳನ್ನು ಕಳುಹಿಸಬಹುದು. 2024 ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡಿರುವ ಕೃತಿಗಳ ಮೂರು ಪ್ರತಿಗಳನ್ನು ಕಳುಹಿಸಬೇಕು. ಕೃತಿಗಳ ಲಕೋಟೆಯ ಮೇಲೆ ರಾಜ್ಯಮಟ್ಟದ “ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ- 2024” ಎಂಬುದನ್ನು ನಮೂದಿಸಬೇಕು. ಕೃತಿಗಳು ಜನವರಿ 10, 2025 ರೊಳಗೆ ತಲುಪಬೇಕು. ನಂತರ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. ಫೆಬ್ರವರಿ ತಿಂಗಳು ಬಾಗಲಕೋಟೆಯಲ್ಲಿ ಆಯೋಜಿಸುವ ಸಮಾರಂಭದಲ್ಲಿ ಆಯ್ಕೆಯಾದ ಕೃತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಮೂರು ಪ್ರಕಾರಗಳಿಗೆ ತಲಾ ರೂ, 10,000/- ನಗದು ಬಹುಮಾನ, ಪ್ರಶಸ್ತಿಫಲಕ ಹಾಗೂ ಸನ್ಮಾನ ಒಳಗೊಂಡಿರುತ್ತದೆಯೆಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷರು ತಿಳಿಸಿರುತ್ತಾರೆ. ಕೃತಿಗಳನ್ನು ಮಲ್ಲಿಕಾರ್ಜುನ ಶೆಲ್ಲಿಕೇರಿ, #19/1/1, ಸಿರಿ, ಈಶ್ವರ ದೇವಸ್ಥಾನ ಹತ್ತಿರ, 22 ನೇಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102 ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.8310518841, - [ಡಿಸೆಂಬರ್ 8ರಂದು ಬೆಂಗಳೂರಿನಲ್ಲಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರ ಬದುಕು-ಬರಹ ರಾಜ್ಯಮಟ್ಟದ ವಿಚಾರ ಸಂಕಿರಣ | ಗಾಯನ | ಪುಸ್ತಕ ಬಿಡುಗಡೆ | ರಂಗ ಗೌರವ](https://minchulli.com/prosgsiddharamaiahvicharasankirana/) - [Latest Update; International Poetry Meet; "The Poet's Village" (One World, Many Poets)](https://minchulli.com/internationalpoetrymeet/): Dear Poets, As per many poets’ requests, we have changed the timings a little bit; now that could be convenient for all of you. Please find the updated timing details below. - [2024ನೇ ಸಾಲಿನ ಮಿಂಚುಳ್ಳಿ ಸಾಹಿತ್ಯ ಮಾಸಿಕ ಸಂಚಿಕೆಗಳು](https://minchulli.com/minchulli2024sanchikegalu/) - [ಕೊಪ್ಪಳದಲ್ಲಿ ನಡೆದ ಗವಿಸಿದ್ಧ ಎನ್. ಬಳ್ಳಾರಿ ಕಾರ್ಯಕ್ರಮದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ "ಇನ್ನು ಕೊಟ್ಟೆನಾದೊಡೆ" ಕೃತಿ ಲೋಕಾರ್ಪಣೆಗೊಂಡಿತು.](https://minchulli.com/innukottenadodelokarpane/): ಕೊಪ್ಪಳದಲ್ಲಿ ನಡೆದ ಗವಿಸಿದ್ಧ ಎನ್. ಬಳ್ಳಾರಿ ಕಾರ್ಯಕ್ರಮದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ, ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಪ್ರಕಟಿಸಿರುವ “ಇನ್ನು ಕೊಟ್ಟೆನಾದೊಡೆ” ಕೃತಿಯು, ಕೊಪ್ಪಳ ವಿಶ್ವವಿದ್ಯಾಲದ ಕುಲಪತಿಗಳಾದ ಪ್ರೊ.ಬಿ.ಕೆ. ರವಿ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರುಗಳಿಂದ ಲೋಕಾರ್ಪಣೆಗೊಂಡಿತು. ಇದೆ ಕಾರ್ಯಕ್ರಮದಲ್ಲಿ ೨೦೨೪ನೇ ಸಾಲಿನ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಯನ್ನು ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಮತ್ತು ರವಿ ಹಂಪಿ ಅವರ “ಪಿರಿಯಡ್ ಮಿಸ್ಸಾದಾಗ” ಕೃತಿಗಳಿಗೆ ಪ್ರದಾನ ಮಾಡಲಾಯಿತು. - [ಇದೇ ಭಾನುವಾರ ಕೊಪ್ಪಳದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ "ಇನ್ನು ಕೊಟ್ಟೆನಾದೊಡೆ" ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.](https://minchulli.com/channpaangadipustaka/): ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ “ಬಿದಿರ ತಡಿಕೆ”, “ಮಳೆ ಪ್ರಬಂಧಗಳು”, “ಇರುವೆ ಮತ್ತು ಗೋಡೆ”, “ಬೆನ್ನೇರಿದ ಬಯಲು”, “ಪ್ರೇಮ ದೈವಿಕ ಪರಿಮಳ” ಮತ್ತು “Love is a Divine Fragrance” ಪುಸ್ತಕಗಳಿಗೆ ನೀವು ತೋರಿದ ಪ್ರೀತಿ ಮರೆಯಲಾಗದ್ದು. ಬಹಳಷ್ಟು ಪ್ರತಿಗಳು ರಾಜ್ಯದ ಪ್ರತಿಷ್ಠಿತ ಪುಸ್ತಕ ಮಳಿಗೆಯಾದ ಸಪ್ನಾದಲ್ಲಿಯು ಮಾರಾಟವಾಗಿವೆ. ನಿಜ ಹೇಳಬೇಕೆಂದರೆ ಪ್ರಕಾಶನದ ಮೂಲಕ ಹಣ ಕಳೆದುಕೊಂಡೆವು ಎಂದೇ ಎಲ್ಲರು ಲೋಕರೂಢಿಯಾಗಿ ಹೇಳುತ್ತಾರೆ, ಆದರೆ ನಮಗಂತೂ ಈ ಅನುಭವವಾಗಿಲ್ಲ! ತಕ್ಕಮಟ್ಟಿಗೆ ಹಾಕಿದ ಹಣದ ವಾಪಾಸಿನ ಜೊತೆಗೆ, ಅರ್ಧದಷ್ಟು ಲಾಭವಂತು ಆಗಿದೆ. ಇದೇ ಹುಮ್ಮಸ್ಸಿನಿಂದಾಗಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕದ ಜೊತೆ ಮತ್ತೆ ಬಂದಿದ್ದೇವೆ. ಈ ಮಹತ್ವದ ಪುಸ್ತಕವನ್ನು ಖರೀದಿಸುವ ಮೂಲಕ ಅದೇ ರೀತಿಯ ಪ್ರೋತ್ಸಾಹವನ್ನು ಕೊಡುವಿರಿ ಎಂದು ನಂಬಿಕೊಂಡಿದ್ದೇವೆ. ಸಮಕಾಲೀನ ಹಿರಿಯ ಕವಿಗಳಲ್ಲಿ ಚನ್ನಪ್ಪ ಅಂಗಡಿ ಅವರು ಪ್ರಮುಖರು. ೨೦೨೪ನೇ ಸಾಲಿನ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ - [ಕೊಪ್ಪಳದಲ್ಲಿ 2024ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ](https://minchulli.com/gavisiddhanballarisahityostava2024/): ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕದ ಜೊತೆಗೆ, “ನೂರೆಂಟು ಹೆಜ್ಜೆಗಳು” ಮತ್ತು “ಮನುಷ್ಯರಿಲ್ಲದ ನೆಲ” ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. - [ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ; ಡಾ. ಮಲ್ಲಿನಾಥ ಎಸ್. ತಳವಾರ](https://minchulli.com/vimarshe101/): ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಗಜಲ್ ಗಂಗೋತ್ರಿಯಲ್ಲಿ ಮೀಯಲು… “ನೀವು ಜೀವನದ ಆಟದಲ್ಲಿ ಯಾವಾಗಲೂ ಆಡುತ್ತಿರಿ ಸೋಲು-ಗೆಲುವು ಯಾವುದೂ ಅಂತಿಮವಲ್ಲ” -ಹಸ್ತಿಮಲ್ ಹಸ್ತಿ ಆಟ ಎಂದಾಗ ಏಳುವುದು, ಬೀಳುವುದು ಸಹಜ. ಅದು ಆಟದ ಮೈದಾನದಲ್ಲಾಗಬಹುದು ಅಥವಾ ಜೀವನದ ಹೋರಾಟದಲ್ಲಾಗಬಹುದು. ಆದರೆ ಗೆಲುವು ನಿರ್ಧಾರವಾಗುವುದು ನಾವು ಬಿದ್ದಾಗ ಏಳುವ ಪ್ರಕ್ರಿಯೆಯ ಆಧಾರದ ಮೇಲೆ. ಇದಕ್ಕೆ ಬೇಕಿರುವುದು ಆತ್ಮವಿಶ್ವಾಸವೆಂಬ ಚಿರಾಗ್. ಹಠವು ವೈಫಲ್ಯವನ್ನು ಅಸಾಮಾನ್ಯ ಸಾಧನೆಯಾಗಿ ಬದಲಾಯಿಸುವ ಅದಮ್ಯ ಶಕ್ತಿಯನ್ನು ಹೊಂದಿದೆ. ಆಟ ಆಡುವಾಗ ವ್ಯಕ್ತಿ ಬೀಳುವುದು ಅಂಥಹಾ ಪ್ರಮಾದವೇನಲ್ಲ, ಪ್ರಯತ್ನಿಸದೆ ಬೀಳುವುದು, ಸೋಲುವುದು ಇದೆಯಲ್ಲ ; ಅದೊಂದು ಸ್ವಯಂಕೃತ ಅಪರಾಧವೇ ಸರಿ! ಇಲ್ಲಿ “ವಿಜೇತರು ಎಂದಿಗೂ ತೊರೆಯುವುದಿಲ್ಲ ಮತ್ತು ತೊರೆದವರು ಎಂದಿಗೂ ಗೆಲ್ಲುವುದಿಲ್ಲ” – ಎಂಬ ಅಮೇರಿಕನ್ ವೃತ್ತಿಪರ ಫುಟ್ಬಾಲ್ ತರಬೇತುದಾರ ವಿನ್ಸ್ ಲೊಂಬಾರ್ಡಿ ಯವರ ಮಾತನ್ನು ಸ್ಮರಿಸಬಹುದು.‌ ಈ ನೆಲೆಯಲ್ಲಿ - [ಡಾ.ಎಮ್.ಜಿ. ಮಂಜುನಾಥ್ ಸೇರಿದಂತೆ ಹತ್ತು ಜನ ಸಾಧಕರಿಗೆ 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ ಪ್ರಕಟ](https://minchulli.com/sahityasri2022/) - [ಹಿರಿಯ ಸಂಸ್ಕೃತಿ ಚಿಂತಕರಾದ ಅಗ್ರಹಾರ ಕೃಷ್ಣಮೂರ್ತಿ ಸೇರಿದಂತೆ ಐದು ಜನ ಸಾಧಕರಿಗೆ 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವರ್ಷದ ಗೌರವ ಪ್ರಶಸ್ತಿ ಪ್ರಕಟ](https://minchulli.com/sahityaakademigowravaprashasti2022/):   - [ವಿಮರ್ಶಕ ಡಾ. ಎಚ್.ಎಸ್. ಸತ್ಯನಾರಾಯಣ ಸೇರಿದಂತೆ ಹಲವರಿಗೆ 2021ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಕಟ](https://minchulli.com/pustakabahumana2021/) - [ಅರುಣಾ ರಾವ್ ಬೆಂಗಳೂರು ಅವರು ಬರೆದ ಮಕ್ಕಳ ಕವಿತೆ "ಅಪ್ಪಾರಳ್ಳಿ ತಿಪ್ಪಣ್ಣ"](https://minchulli.com/mkapparallitippanna/):   ಅಪ್ಪಾರಳ್ಳಿ ತಿಪ್ಪಣ್ಣ ಕಸವನು ಬುಟ್ಟಿಗೆ ಹಾಕಣ್ಣ ಕಸವನು ಎಲ್ಲೆಂದರಲ್ಲಿ ಎಸೆದರೆ ಕಾಯಿಲೆ ಬರುವುದು ಕೇಳಣ್ಣ ಅಪ್ಪಾರಳ್ಳಿ ತಿಪ್ಪಣ್ಣ ಸೈಕಲ್‌ ನೀನು ಏರಣ್ಣ ಪೆಟ್ರೋಲ್‌ ವಾಹನ ಬಳಸಿದರೆ ವಾಯುವು ಮಲಿನ ತಿಳಿಯಣ್ಣ| ಅಪ್ಪಾರಳ್ಳಿ ತಿಪ್ಪಣ್ಣ ಮಳೆ ನೀರನ್ನು ಹಿಡಿಯಣ್ಣ ನೀರು ಇರದಿದ್ದರೆ ಅಯ್ಯೊ ಧರೆಯದು ಉರಿವುದು ನೋಡಣ್ಣ| ಅಪ್ಪಾರಳ್ಳಿ ತಿಪ್ಪಣ್ಣ ಶೌಚಾಲಯವ ಬಳಸಣ್ಣ ಬಯಲಲಿ ಶೌಚ ಮಾಡಿದರೆ ರೋಗ ಹರಡುವುದು ಕೇಳಣ್ಣ| ಅಪ್ಪಾರಳ್ಳಿ ತಿಪ್ಪಣ್ಣ ಶಾಲೆಗೆ ತಪ್ಪದೆ ಹೋಗಣ್ಣ ಓದು ಬರಹ ಲೆಕ್ಕವ ಕಲಿತರೆ ಬಾಳು ಬೆಳಗುವುದು ಕೇಳಣ್ಣ ಅಪ್ಪಾರಳ್ಳಿ ತಿಪ್ಪಣ್ಣ ನೈತಿಕ ಮೌಲ್ಯವ ಕಲಿಯಣ್ಣ ಮಾನವೀಯತೆಯನ್ನು ಮರೆತರೆ ವಿದ್ಯೆಯು ವ್ಯರ್ಥ ಕೇಳಣ್ಣ - [ಸಾಹಿತ್ಯ ವಿಭಾಗದಲ್ಲಿ ಬಿ.ಟಿ. ಲಲಿತಾ ನಾಯಕ್, ಬೈರಮಂಗಲ ರಾಮೇಗೌಡ ಮತ್ತು ಡಾ.ಎಮ್. ವೀರಪ್ಪ ಮೊಯ್ಲಿ ಸೇರಿದಂತೆ ಒಟ್ಟು ಏಳು ಜನರಿಗೆ ೨೦೨೪ನೇ ಸಾಲಿನ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ](https://minchulli.com/rajyostvaprashasti2024/): ಸಾಹಿತ್ಯ ವಿಭಾಗ: 1. ಬಿ.ಟಿ. ಲಲಿತಾ ನಾಯಕ್ 2. ಅಲ್ಲಮಪ್ರಭು ಬೆಟ್ಟದೂರು 3. ಡಾ.ಎಮ್. ವೀರಪ್ಪ ಮೊಯ್ಲಿ 4. ಹನುಮಂತರಾವ್ ದೊಡ್ಡಮನಿ 5. ಡಾ. ಬಾಳಾಸಾಹೇಬ್ ಲೋಕಾಪುರ 6. ಡಾ.ಬೈರಮಂಗಲ ರಾಮೇಗೌಡ 7. ಡಾ. ಪ್ರಶಾಂತ್ ಮಾಡ್ತಾ - [2024ನೇ ಸಾಲಿನ ಜಿ. ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿಗೆ ರಾಜಶೇಖರ ಕುಕ್ಕುಂದಾ ಅವರ 'ಬಿಸಿ ಬಿಸಿ ಬಾತು' (ಮಕ್ಕಳ ಪದ್ಯಗಳು) ಕೃತಿ ಆಯ್ಕೆ](https://minchulli.com/makkalasahityaprahasti2024/): ಧಾರವಾಡದ ನಿವೃತ್ತ ಜಿಲ್ಲಾ ಗ್ರಂಥಾಲಯ ಅಧಿಕಾರಿಗಳಾದ ಜಿ. ಬಿ. ಹೊಂಬಳ ಅವರು, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಕಾರ್ಯ ನಿರ್ವಹಿಸುವಂತಹ ಕ್ರಿಯಾಶೀಲ ಉತ್ಸಾಹಿ ಲೇಖಕರ ಕೃತಿಗಳಿಗೆ  ಕೊಡಮಾಡುವ 2024 ನೇ ಸಾಲಿನ ‘ಜಿ. ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ’ಗೆ ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಮತ್ತು ಮಕ್ಕಳ ಸಾಹಿತಿಗಳೂ ಆದ ರಾಜಶೇಖರ ಕುಕ್ಕುಂದಾ ಅವರ ‘ಬಿಸಿ ಬಿಸಿ ಬಾತು’ (ಮಕ್ಕಳ ಪದ್ಯಗಳು) ಕೃತಿ ಆಯ್ಕೆಯಾಗಿದೆ. ದಿನಾಂಕ 10 ನವಂಬರ 2024 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಲಾಗುವ ಸಮಾರಂಭದಲ್ಲಿ ಪ್ರಶಸ್ತಿಯ ಮೊತ್ತ  15,000 (ಹದಿನೈದು ಸಾವಿರ) ರೂಪಾಯಿ ನಗದು  ಹಾಗೂ ಪ್ರಶಸ್ತಿಪತ್ರ ಮತ್ತು ಸ್ಮರಣಫಲಕ ನೀಡಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಿ. ಬಿ. ಹೊಂಬಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿ. ಬಿ. ಹೊಂಬಳ, ಧಾರವಾಡ ( ಮೊ:9880142632) - [2025ನೇ ಸಾಲಿನ ಈ ಹೊತ್ತಿಗೆ ಕಥಾ ಮತ್ತು ಕಾವ್ಯ ಪ್ರಶಸ್ತಿಗೆ ಹಸ್ತ ಪ್ರತಿಗಳ ಆಹ್ವಾನ](https://minchulli.com/eehottige2025/) - [ಯುವಕವಿಗೋಷ್ಠಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿದೆ.](https://minchulli.com/sahityaakademiyuvakavigosti2024/): ಕವಿತೆಗಳನ್ನು ಕಳುಹಿಸಲು ಕೊನೆಯ ದಿನಾಂಕ: 30 ಅಕ್ಟೋಬರ್ 2024. ಕಂದಾಯ ವಲಯಗಳು; ೧ ಬೆಂಗಳೂರು ವಲಯ; ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು. ೨ ಮೈಸೂರು ವಲಯ; ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ. ೩ ಕಲಬುರಗಿ ವಲಯ; ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ವಿಜಯನಗರ. ೪ ಬೆಳಗಾವಿ ವಲಯ; ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ. - [ಯುವಜನರಿಗೆ ಬೇಕಿದೆ ವೃತ್ತಿ ಮಾರ್ಗದರ್ಶನದ ಬೆಂಬಲ - ಮೇಘ ರಾಮದಾಸ್ ಜಿ](https://minchulli.com/lekhana84/): ಯುವಜನತೆ ಅತ್ಯಂತ ಕ್ರಿಯಾಶೀಲರು. ಅವರಲ್ಲಿ ಅಗಾಧವಾದ ಯೋಚನಾ ಶಕ್ತಿ ಇದೆ. ಎಲ್ಲೇ ಹೋದರು ಸಾಧಿಸಿ ತೋರಿಸುವ ಛಲ ಇರುವವರು. ತಮ್ಮ ಆಸಕ್ತಿಗೆ ಅನುಗುಣವಾಗಿ ಬದುಕು ಕಟ್ಟಿಕೊಳ್ಳಲು ತವಕಿಸುತ್ತಿರುವ ಮನಸ್ಸುಗಳಿವು. ಆದರೆ ಈ ತವಕ ಸಾಧನೆಯಾಗುವ ಹಾದಿ ಕಷ್ಟವಾಗಿದೆ. ಅದಕ್ಕಾಗಿ ಯುವಜನರ ಸುತ್ತಲ ಸಮಾಜದ ಒಂದಷ್ಟು ಬೆಂಬಲದ ಅಗತ್ಯವಿದೆ. ಯುವ ಜನತೆಗೆ ಕೆಲವು ನಿರ್ದಿಷ್ಟ ಸೂಕ್ತ ಸಮಯಗಳಲ್ಲಿ ಉತ್ತಮ ಮಾರ್ಗದರ್ಶನ ದೊರೆಯುವುದು ಮುಖ್ಯವಾಗಿದೆ. ಕೆಲವೊಂದು ಬಾರಿ ಈ ಸಲಹೆಗಳು ಅವರ ಜೀವನದ ದಿಕ್ಕನ್ನೇ ಬದಲಿಸಿ ಸಾಧನೆ ಹಾದಿಗೆ ಕೊಂಡೊಯ್ಯಬಲ್ಲವು. ಹಾಗಾಗಿ ಯುವ ಜನತೆಗೆ ಶಿಕ್ಷಣದ ಜ್ಞಾನದ ಜೊತೆ ಜೊತೆಗೆ ವೃತ್ತಿಗಳ ಮಾಹಿತಿ ಸಿಗುವುದು ಈಗಿನ ಕಾಲಘಟ್ಟಕ್ಕೆ ಹೆಚ್ಚು ಅವಶ್ಯಕವಾಗಿದೆ. ವೃತ್ತಿ ಮಾರ್ಗದರ್ಶನ/ಮಾಹಿತಿ ಎಂದರೆ ಯಾವುದೇ ನಿರ್ದಿಷ್ಟ ಓದಿನ ನಂತರ ಆಯ್ಕೆ ಮಾಡಿಕೊಳ್ಳಬಹುದಾದ ಓದು ಅಥವಾ ವೃತ್ತಿಯ ಮಾಹಿತಿ ನೀಡುವುದಾಗಿದೆ. ಇದು ವ್ಯಕ್ತಿಯ ಆಸಕ್ತಿ, ಕೌಶಲ್ಯ ಮತ್ತು ಓದುತ್ತಿರುವ ಅಥವಾ ಓದಿರುವ ಶಿಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ. ಇದೇ ಕಾರಣಕ್ಕೆ ಈ ಮಾಹಿತಿಗಳು ಅತ್ಯಂತ ಮಹತ್ವ ಪಡೆದಿವೆ. - [ಅಂಬೇಡ್ಕರ್ ಕನಸಿನ ಜನಪ್ರಭುತ್ವ ಸ್ಥಾಪಿತವಾಗಲಿ - ಮೇಘ ರಾಮದಾಸ್ ಜಿ](https://minchulli.com/lekhana83/):   ಸ್ವತಂತ್ರ, ಸಮಾನತೆ, ಬಂಧುತ್ವವೆಂಬುದು ಸರ್ವಜನರ ಮೌಲ್ಯ ನೆನಪಿರಲಿ ಸೆಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿದೆ. ಈ ದಿನದಂದು ವಿಶ್ವದ  ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಎಲ್ಲಾ ರಾಷ್ಟ್ರಗಳು ಹೆಮ್ಮೆಯಿಂದ ಈ ದಿನವನ್ನು ಆಚರಿಸುತ್ತವೆ. ಪ್ರಜಾಪ್ರಭುತ್ವದ ಮೌಲ್ಯಗಳು, ಸುಸ್ತಿರ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಈ ಪ್ರಜಾಸತ್ತಾತ್ಮಕ ವ್ಯವಸ್ಥೆ ಎಷ್ಟು ಮುಖ್ಯ, ದೇಶಗಳಲ್ಲಿ ಈ ಮೌಲ್ಯ ಎಷ್ಟು ಪ್ರಭಾವ ಬೀರಿದೆ ಎನ್ನುವುದರ ಕುರಿತಾಗಿ ಈ ದಿನ ಅವಲೋಕನ ನಡೆಸಲಾಗುತ್ತದೆ. ಈ ದಿನವನ್ನು ನಮ್ಮ ದೇಶದಲ್ಲಿ ಮತ್ತಷ್ಟು ಘನತೆಯಿಂದ ಆಚರಿಸಬೇಕಿದೆ. ಕಾರಣ ನಮ್ಮದು ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಸತ್ತಾತ್ಮಕ ವ್ಯವಸ್ಥೆ ಹೊಂದಿರುವ ದೇಶ. ಆದರೆ ದೇಶದ ಜನರಿಗೆ ಈ ಮೌಲ್ಯದ ಅರ್ಥ ಇನ್ನೂ ಸ್ಪಷ್ಟವಾದಂತೆ ಕಾಣದಿರುವುದು ವಿಪರ್ಯಾಸ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ರಚನಾ ಸಮಯದಲ್ಲಿ ಈ ಪ್ರಜಾಪ್ರಭುತ್ವ ಎನ್ನುವ ಮೌಲ್ಯಕ್ಕೆ ಬಹಳ ಒತ್ತು ನೀಡಿದ್ದರು. ಈ ಮೌಲ್ಯದಿಂದ ದೇಶವು ಉತ್ಕೃಷ್ಟ ಮಟ್ಟಕ್ಕೆ ಏರುತ್ತದೆ ಎಂದು ಅವರು ನಂಬಿದ್ದರು. ಈ ವ್ಯವಸ್ಥೆಯಿಂದ ಜನರು ಆಡಳಿತದಲ್ಲಿನ ಸರ್ಕಾರಗಳನ್ನು - [ಶಿವಮೊಗ್ಗ ಕರ್ನಾಟಕ ಸಂಘ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಈ ತಿಂಗಳ ಅತಿಥಿಯಾಗಿ ನಿವೃತ್ತ ಡಿ.ಜಿ.ಪಿ. ಮತ್ತು ಸಾಹಿತಿ ಶ್ರೀ ಡಿ.ವಿ. ಗುರುಪ್ರಸಾದ್](https://minchulli.com/sksseptembertingalaatiti/) - [ಹಿರಿಯ ಸಾಹಿತಿ ಡಾ. ರಹಮತ್ ತರೀಕೆರೆ ಸೇರಿದಂತೆ ಒಟ್ಟು 12 ಜನರಿಗೆ ಶಿವಮೊಗ್ಗ ಕರ್ನಾಟಕ ಸಂಘ 2023ನೇ ಸಾಲಿನ ಪುಸ್ತಕ ಬಹುಮಾನ ಘೋಷಣೆ.](https://minchulli.com/skspustakabahumana2023/):   1 ಕುವೆಂಪು (ಕಾದಂಬರಿ) – ಕೊಳ್ಳ – ಡಾ ಕೆ.ಬಿ. ಪವಾರ 2 ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ (ಅನುವಾದ) – ಎಂ. ಡಾಕ್ಯುಮೆಂಟ್ – ಶ್ರೀ ರಾಜಾರಾಂ ತಲ್ಲೂರು 3 ಶ್ರೀಮತಿ ಎಂ.ಕೆ. ಇಂದಿರಾ (ಮಹಿಳಾ ಸಾಹಿತ್ಯ) – ಇರವಿನ ಅರಿವು – ಡಾ. ಕಾತ್ಯಾಯನಿ ಕುಂಜಿಬೆಟ್ಟು 4 ಶ್ರೀ ಪಿ. ಲಂಕೇಶ್ (ಮುಸ್ಲಿಂ ಬರಹಗಾರರು) – ಸಂಪಿಗೆಯ ಪರಿಮಳ – ಶ್ರೀ ಅದೀಬ್ ಅಕ್ತರ್ 5 ಡಾ. ಜಿ. ಎಸ್. ಶಿವರುದ್ರಪ್ಪ (ಕವನ ಸಂಕಲನ) – ಒದ್ದೆಗಣ್ಣಿನ ದೀಪ – ಶ್ರೀ ಚಾಂದ್ ಪಾಷ ಎನ್. ಎಸ್. 6 ಡಾ. ಹಾ.ಮಾ. ನಾಯಕ (ಅಂಕಣ) – ಹಸಿರು ಮಂಥನ – ಶ್ರೀ ಗುರುರಾಜ್ ಎಸ್. ದಾವಣಗೆರೆ 7 ಡಾ. ಯು.ಆರ್. ಅನಂತಮೂರ್ತಿ (ಸಣ್ಣ ಕಥಾ ಸಂಕಲನ) – ನಕ್ಶತ್ರಕ್ಕಂಟಿದ ಮುತ್ತಿನ ನೆತ್ತರು – ಶ್ರೀ ಗೋವಿಂದರಾಜು ಎಂ. ಕಲ್ಲೂರು 8 ಡಾ. ಕೆ.ವಿ. ಸುಬ್ಬಣ್ಣ (ನಾಟಕ) – ಒಂದು ಕಾನೂನಾತ್ಮಕ - [ಸುಪ್ರಸಿದ್ಧ ಕವಿಗಳು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ೭೦ನೇ ವರ್ಷದ ಜನ್ಮ ದಿನಾಚರಣೆ - ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸುಸ್ವಾಗತ](https://minchulli.com/drmudnakuduchinnaswamy70/): ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರಿಗೆ 70 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ “ಮೂಡ್ನಾಕೂಡು ಚಿನ್ನಸ್ವಾಮಿ ಅಭಿನಂದನಾ ಸಮಿತಿ”ಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. - [ಕನ್ನಡ ಸಂಶೋಧನ ಅಕಾಡೆಮಿ (ನೋ) ರಾಷ್ಟ್ರಮಟ್ಟದ ಬಹುಶಿಸ್ತೀಯ ಸಂಶೋಧನ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ](https://minchulli.com/rastriyasamshodanalekhanasparde2024/): ಅನ್ವೇಷಣೆ ಕನ್ನಡ ಸಂಶೋಧನ ಲೇಖನ ಸ್ಪರ್ಧೆ 2024 ಇದರಲ್ಲಿ ವಿಜೇತರಾದವರೆಲ್ಲರಿಗೂ ಮತ್ತು ಮಾರ್ಗದರ್ಶನ ಮಾಡಿದವರಿಗೂ ಅಭಿನಂದನೆಗಳು. - [ಸಾಕ್ಷರತೆ - ದಮನಿತ ಮಹಿಳೆಯರ ಸಾಮಾಜಿಕ ಸಮಾನತೆ ಕನಸಿಗೆ ಮುನ್ನುಡಿಯಾಗಬೇಕು - ಮೇಘ ರಾಮದಾಸ್ ಜಿ](https://minchulli.com/lekhana82/): ವನಿತಾ ಒಂದು ಪುಟ್ಟ ಹಳ್ಳಿಯ ಬಡ ದಲಿತ ಕುಟುಂಬದ ಹುಡುಗಿ. ತನ್ನೂರಿನ ಎಲ್ಲಾ ಅನುಕೂಲಸ್ಥ ಕುಟುಂಬದ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿ ತಾನು ಓದಬೇಕು ಅಕ್ಷರಸ್ಥೆಯಾಗಬೇಕು ಎನ್ನುವ ಹಂಬಲ ಆಕೆಯಲ್ಲಿ ಹೆಚ್ಚಾಯಿತು. ತಾಯಿ ಇಲ್ಲದ ಕುಟುಂಬದ ಹಿರಿ ಮಗಳಾಗಿದ್ದ ವನಿತಾ ಅಪ್ಪನಿಗೆ ಹೆಗಲಾಗಿ ತಮ್ಮನಿಗೆ ತಾಯಿಯಾಗಿ ತನ್ನ ಜವಾಬ್ದಾರಿಯನ್ನು ಪ್ರಬುದ್ಧವಾಗಿ ನಿಭಾಯಿಸುತ್ತಿದ್ದಳು. ಅಮ್ಮನ ಸಾವಿನ ಕಾರಣಕ್ಕೆ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ್ದ ಆಕೆ ಈಗ ಪಿಯುಸಿ ಓದಬೇಕಿತ್ತು. ಅಪ್ಪ ಅರೇವಾದ್ಯ ಹಾಗೂ ಅಂಗೈ ಅಗಲದ ಜಮೀನನ್ನು ನಂಬಿ ಜೀವನ ಸಾಗಿಸುತ್ತಿದ್ದರು. ಮಗಳ ಓದುವ ತುಡಿತ ಅವರಿಗೂ ಚೆನ್ನಾಗಿಯೇ ಅರ್ಥವಾಗಿತ್ತು. ಅದೇ ಕಾರಣಕ್ಕೆ 10ನೇ ತರಗತಿ ಪರೀಕ್ಷೆ ಕಟ್ಟಿಸಿ ಮನೆಯಲ್ಲಿಯೇ ಓದಲು ಹೇಳಿದರು. ವನಿತಾಳಿಗೆ ಇದು ದೊಡ್ಡ ಹುಮ್ಮಸ್ಸು ನೀಡಿತು. ಆಕೆ ಚೆನ್ನಾಗಿ ಓದಿ 80% ಅಂಕದೊಂದಿಗೆ ಉತ್ತೀರ್ಣಳಾದಳು. ಇಲ್ಲಿಂದ ಆಕೆಯ ಜೀವನದ ದಿಕ್ಕೇ ಬದಲಾಯಿತು. ಹಳ್ಳಿಯ ತನ್ನ ಸಮುದಾಯದಲ್ಲಿ 10ನೇ ತರಗತಿಯನ್ನು ಮುಗಿಸಿದ ಮೊದಲ ಹುಡುಗಿಯಾಗಿ ವನಿತಾ ಗುರುತಿಸಿಕೊಂಡಳು. ಶಿಕ್ಷಕಿಯಾಗಬೇಕೆಂಬ ಆಕೆಯ ಕನಸಿಗೆ - [ಮಲೆನಾಡಿನ ಸಾಂಸ್ಕೃತಿಕ ಹೆಬ್ಬಾಗಿಲು ಶಿವಮೊಗ್ಗ ಕರ್ನಾಟಕ ಸಂಘ](https://minchulli.com/shivamoggakarnatakasangha/): ನವೆಂಬರ್ 8, 1930 ರಂದು ಸ್ಥಾಪನೆಯಾಗಿರುವ, ಸರಿ ಸುಮಾರು 95 ವರ್ಷಗಳ ಇತಿಹಾಸವಿರುವ ಶಿವಮೊಗ್ಗದ ಕರ್ನಾಟಕ ಸಂಘವು ಮಲೆನಾಡಿನ ಹೆಮ್ಮೆಯು ಹೌದು. ಕರ್ನಾಟಕ ಏಕೀಕರಣದಿಂದ ಹಿಡಿದು ಮಲೆನಾಡಿನ ಭಾಗದ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಮಹಾಮನೆ ಎಂದೆ ಹೇಳಬಹುದು. ಮುಂದಿನ ಹೊಸ ತಲೆಮಾರಿನವರನ್ನು ಗಮನದಲ್ಲಿರಿಸಿಕೊಂಡಿರುವ ಸಂಘವು ಸಾಹಿತ್ಯ, ಸಂಸ್ಕೃತಿ ಮತ್ತು ನಾಡು ನುಡಿಯ ಬಗ್ಗೆ ಆಸಕ್ತಿ ಮೂಡಿಸಲು ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಪ್ರತಿವರ್ಷವೂ ಅದರ ಹಿಂದಿನ ವರ್ಷ ಪ್ರಕಟ ಆಗಿರುವ ಸಣ್ಣಕತೆ, ಕಾದಂಬರಿ, ಕಾವ್ಯ, ಅಂಕಣ ಬರೆಹ ಸೇರಿದಂತೆ ವಿವಿಧ ಪ್ರಕಾರದ ಅತ್ಯುತ್ತಮ ಪುಸ್ತಕಗಳಿಗೆ ಪ್ರಶಸ್ತಿಗಳನ್ನು ನೀಡುವ ಮೂಲಕ ಹೊಸ ಲೇಖಕರನ್ನು ಪ್ರೋತ್ಸಾಹಿಸುತ್ತಿದೆ. ಇದರ ಜೊತೆಗೆ ಉತ್ತಮ ಗ್ರಂಥಗಳ ಪ್ರಕಟಣೆ ಮತ್ತು ಕನ್ನಡ ಪುಸ್ತಕಗಳ ಮಾರಾಟಕ್ಕೆ ಸಹಕಾರಿಯಾಗುವಂತೆ ಕನ್ನಡ ಪುಸ್ತಕ ಪ್ರದರ್ಶನವನ್ನು ಹಮ್ಮಿಕೊಳ್ಳುತ್ತಿದೆ. ಕುವೆಂಪು ಅವರ ‘ನವಿಲು’ ಕವನ ಸಂಕಲನದಿಂದ ಪ್ರೇರಣೆ ಪಡೆದು, ಸಂಘದ ಲಾಂಛನವಾಗಿ ನವಿಲನ್ನು ಬಳಸಲಾಗುತ್ತಿದೆ. ಜನಪ್ರಿಯ ಕತೆಗಾರರಾಗಿದ್ದ ಶ್ರೀ ಆನಂದ ಅವರು ನವಿಲಿನ ವಿನ್ಯಾಸವನ್ನು - [ಮಿಂಚುಳ್ಳಿ ಸಾಹಿತ್ಯ ಪತ್ರಿಕೆ/ಪ್ರಕಾಶನದ ಕಳೆದ 8 ವರ್ಷಗಳಿಂದ ಇದುವರೆಗಿನ ಕನ್ನಡದ/ಸಾಹಿತ್ಯದ ಕಾರ್ಯಚಟುವಟಿಕೆಗಳು:-](https://minchulli.com/karyachatuvatikegalu/): ೧. 2017ರಲ್ಲಿ ಚೈತ್ರಾಕ್ಷಿ ರಂಗಭೂಮಿ ತಂಡದ ಮೂಲಕ ಕುವೆಂಪು ಅವರ “ಜಲಗಾರ” ನಾಟಕ ಪ್ರದರ್ಶನ. ೨. 2018ರಲ್ಲಿ 114ನೇ ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ಕನ್ನಡ ಮನಸುಗಳ ಪ್ರತಿಷ್ಠಾನದೊಂದಿಗೆ ನಮ್ಮ “ಕಾವ್ಯಮರ” ಸಹಯೋಗದೊಂದಿಗೆ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕರಾದ ಡಾ. ಎಮ್.ಎಸ್. ಆಶಾದೇವಿಯವರು ವಹಿಸಿಕೊಂಡಿದ್ದರು. ಕೆ.ಎ.ಎಸ್. ಅಧಿಕಾರಿಗಳಾದ ಡಾ. ನೆಲ್ಲುಕುಂಟೆ ವೆಂಕಟೇಶ್ ಅವರು “ಯುವ ಸಮುದಾಯಕ್ಕೆ ಬೇಕಾದ ಕುವೆಂಪು” ವಿಷಯದ ಮೇಲೆ ಉಪನ್ಯಾಸವನ್ನು ನೀಡಿದ್ದರು. ೩. 2018ರಲ್ಲಿ ಹಿಂದಿಯ ಖ್ಯಾತ ಕಥೆಗಾರರಾದ ಪ್ರೇಮಚಂದರ ಕಥೆಯಾಧರಿತ “ಹೆಣದ ಬಟ್ಟೆ” ನಾಟಕ ಪ್ರದರ್ಶನ. ೪. 2018ರಲ್ಲಿ ಹಿರಿಯ ಕವಿ ‘ಗೋಪಾಲ ಕೃಷ್ಣ ಅಡಿಗ’ರಿಗೆ ನೂರು ವಸಂತಗಳು ತುಂಬಿದ ಸಂದರ್ಭದಲ್ಲಿ ಗೆಳೆಯರು ಸೇರಿ “ನೂರು ಅಡಿ ನೂರು ಮಡಿ” ಎಂಬ ಫೇಸ್‌ಬುಕ್‌ ಲೈವ್ ಕಾರ್ಯಕ್ರಮ ಏರ್ಪಡಿಸಿ ಒಂದೇ ಸಮಯದಲ್ಲಿ ನೂರು ಜನ ಯುವಕವಿಗಳು ಅಡಿಗರ ಕವಿತೆಗಳನ್ನು ವಾಚನ ಮಾಡಿ ಕಾವ್ಯ ನಮನ ಸಲ್ಲಿಸಿದ್ದಾರೆ. ೫. 2019ರಲ್ಲಿ ಜಾರ್ಜ್ ಆರ್ವೆಲ್ ಅವರ ‘ಅನಿಮಲ್ ಫಾರ್ಮ್’ ಕಾದಂಬರಿ ಆಧಾರಿತ - [ನವಿಲುಕಲ್ಲು ಗುಡ್ಡದ ಚಾರಣ - ಅಮರೇಗೌಡ ಪಾಟೀಲ ಜಾಲಿಹಾಳ](https://minchulli.com/navilukallu/): ನವಿಲುಕಲ್ಲು ಗುಡ್ಡ ಅದು ಮಾನ್ಯ ಕುವೆಂಪುರವರ ತಾಯಿಯ ತವರೂರು ಹಿರೇಕೊಡಿಗೆಗೆ ಸಮೀಪದ ನಿಸರ್ಗದ ಮಡಿಲು. ಅಲ್ಲಿ ಆಡಿ ಬೆಳೆದವರು ಮಾನ್ಯ ಕುವೆಂಪುರವರು. ಅಲ್ಲಿಗೆ ಸಮೀಪವಿರುವ ನವಿಲುಕಲ್ಲು ಪ್ರದೇಶ ನಮ್ಮ ರಾಷ್ಟ್ರಕವಿಯವರ, ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಗಳಿಸಿದ ಕವಿವರ್ಯರ ಅಚ್ಚುಮೆಚ್ಚಿನ ಮತ್ತು ಅವರ ಉತ್ಸಾಹಕ್ಕೆ ಕಾರಣವಾದ ನಿಸರ್ಗದ ತಾಣವದು. ಆ ತಾಣದ ಸವಿ ಸವಿಯಲು ಮತ್ತು ನೋಡಬೇಕೆಂಬ ತವಕದಿಂದ ನಮ್ಮ ಮಿಂಚುಳ್ಳಿ ತಂಡವು ಶ್ರೀ ಶಂಕರ ಸಿಹಿಮೊಗ್ಗೆ ಹಾಗೂ ಶ್ರೀ ಸೂರ್ಯಕೀರ್ತಿ ಅವರ ಸಾರಥ್ಯದಲ್ಲಿ ಸಜ್ಜಾದದ್ದು. ಅಲ್ಲಿಗೆ ಹೋಗಲು ಕಾಲ್ನಡಿಗೆಯ ಚಾರಣಕ್ಕೆ ಬೆಳಗಿನ ಜಾವವೇ ಪ್ರಶಸ್ತವಾದ ಸಮಯ. ಹಾಗಾಗಿ ‘ನವಿಲುಕಲ್ಲು’ ಎಂಬ ರಮ್ಯ ತಾಣದ ಸೊಬಗು ಕಣ್ತುಂಬಿಕೊಳ್ಳಲು ಮಿಂಚುಳ್ಳಿ ಸಾಹಿತ್ಯ ಬಳಗವು ದಿನಾಂಕ 11.08.2024ರ ನಸುಕಿನ ಜಾವ ತೀರ್ಥಹಳ್ಳಿ ತಾಲ್ಲೂಕಿನ ನವಿಲುಕಲ್ಲು ಗುಡ್ಡಕ್ಕೆ ಹೊರಟ್ಟಿತ್ತು. ಸುಮಾರು 2.20ಕಿ.ಮೀ. ಕಾಡಲ್ಲಿ ಕಾಲ್ನಡಿಗೆ. ಅಲ್ಪ ಸ್ವಲ್ಪ ಶ್ರಮದೊಂದಿಗೆ ನಡೆದೆವು. ದಟ್ಟ ಕಾಡು ಅಲ್ಲಲ್ಲಿ ಜಾರುವ, ದಟ್ಟಕಾಡನ್ನು ಸೀಳಿಕೊಂಡು ಹೋಗಬಹುದಾದ ಕಾಲು ರಸ್ತೆ ಮಾತ್ರ. ಸ್ವಲ್ಪ ದೂರ ಸಾಗುತ್ತಿದ್ದಂತೆ - [ಕನ್ನಡ ಸಾಹಿತ್ಯ ಕೃಷಿ ಕಾನನದ ಹೊಸ ಪ್ರೇಮಾಂಕುರ “ಗಜಲ್” - ದೇವೇಂದ್ರ ಕಟ್ಟಿಮನಿ](https://minchulli.com/lekhana81gajal/): (ಕನ್ನಡದಲ್ಲಿ ಗಜಲ್ ಬೆಳಕಿಗೆ ಬರಲು ಕಲ್ಯಾಣ ಕರ್ನಾಟಕ ಭಾಗದ ಶಾಂತರಸ ಹೆಂಬೇರಾಳೂ, ಎಚ್ಎಸ್ ಮುಕ್ತಾಯಕ್ಕ, ಜಂಬಣ್ಣ ಅಮರಚಿಂತ, ಇವರ ಶ್ರಮದ ಫಲವಾಗಿ ಕನ್ನಡ ಸಾಹಿತ್ಯದಲ್ಲಿ ಗಜಲನ ಹೊಸ ಅಧ್ಯಾಯವೇ ಪ್ರಾರಂಭವಾಯಿತು. ಈಗ ಯುವ ಗಜಲ್‌ ಕಾರರು ಹೊಸ ಚಿಗುರಂತೆ, ಬಿರುಗಾಳಿಯಲ್ಲಿ ರೆಕ್ಕೆ ಬೀಸುವ ಹೊಸ ಹಕ್ಕಿಯಂತೆ ಗುರಿಯತ್ತ. ಗಜಲ್ ನ ಮೂಲ ರಸವೇ ಪ್ರೇಮ, ಅನುರಾಗ, ಮೋಹ ,ಹತಾಶೆ, ಬಂಡಾಯದ ಭಾವನೆಗಳು ವ್ಯಕ್ತಪಡಿಸುವುದು. ಹಾಗೆ ಈಗ ಮೊದಲ ಗಜಲ್‌ ಸಂಭ್ರಮ) ಕವಿತೆ ಪ್ರತಿಯೊಂದು ಭಾಷೆ ಹಾಗೂ ಪ್ರತಿಯೊಬ್ಬರ ಭಾವನೆಯ ಉಪಯೋಗಿತ ಬರವಣಿಗೆಯ ಒಂದು ವಿಶಿಷ್ಟ ಪದ ಪುಂಜ ಕಲೆಯೇ ಕವಿತೆ. ವಿವಿಧ ವೈಶಿಷ್ಟತೆಯ, ಹಲವು ಪ್ರಕಾರದ ಸಾಹಿತ್ತಿಕ ಕೌಶಲ್ಯಗಳಾದ ಚಿತ್ರಕಲೆ, ನಾಟಕ, ಕಥೆ, ಹಾಡುಗಳಂತಹ ಭಾವನಾತ್ಮಕ ಭಾಷ್ಯ ಕಲೆಯೇ ಸಾಹಿತ್ಯ ಅದರಲ್ಲೂ ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳ ಬಳಸಿ ರಚಿಸುವ ಕಲೆ ಈ ಕವಿತೆ ತನ್ನದಾಗಿಸಿಕೊಂಡಿದೆ. ಕನ್ನಡ ಸಾಹಿತ್ಯ ಲೋಕದ ಪರಂಪರೆಯಲ್ಲಿ, ಪ್ರಾಚೀನ ಕಾಲದ ಶಾಸನಗಳ ಹಿಡಿದು ಇಂದಿನ ಆಧುನಿಕ ಶೈಲಿಯ ಹನಿಗವನಗಳ - [ಕ್ಲಿಕ್ ಟು ಪ್ರೋಗ್ರೆಸ್ : ಸುಸ್ಥಿರತೆಯೆಡೆಗೆ ಯುವ ಸಮುದಾಯ - ಮೇಘ ರಾಮದಾಸ್ ಜಿ](https://minchulli.com/lekhana80/): ಯುವ ಜನತೆ ದೇಶದ ಜನಶಕ್ತಿಯಾಗಿ ಮಾತ್ರವಲ್ಲದೆ, ಪ್ರಗತಿಯ ಹರಿಕಾರರಾಗಿ ತಮ್ಮ ಕಾಯಕ ಮಾಡುತ್ತಿದ್ದಾರೆ. ನಮ್ಮದು ಯುವ ರಾಷ್ಟ್ರ, 420 ಮಿಲಿಯನ್  ಜನಸಂಖ್ಯೆಯ ಯುವಜನರನ್ನು ಹೊಂದಿರುವ ರಾಷ್ಟ್ರ. ಇಲ್ಲಿ ದೇಶದ ಪ್ರಗತಿ ಯುವಜನತೆಯ ಪ್ರಗತಿಯ  ಮೇಲೆ ನೇರವಾಗಿ ಅವಲಂಬಿತವಾಗಿದೆ. ಯುವ ಜನತೆಯನ್ನು ದೇಶದ ಆಸ್ತಿ, ಮಾನವ ಸಂಪತ್ತು, ಬಲ, ಬೆನ್ನೆಲುಬು ಎಂದೆಲ್ಲ ಗುರುತಿಸಲಾಗುತ್ತಿದೆ. ಇಂತಹ ಯುವ ಸಮುದಾಯವನ್ನು ಹೆಚ್ಚಿನ ಕಾಳಜಿ ವಹಿಸಿ, ಗಮನಹರಿಸಿ ಬೆಳೆಸುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಿಂದ ಹಿಡಿದು ದೇಶಗಳವರೆಗೆ ಯುವ ಜನರಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂಥ ಕಾರ್ಯಕ್ರಮಗಳಲ್ಲಿ ಬಹಳ ಪ್ರಮುಖವಾದದ್ದು ” ಯುವ ದಿನ “. ಈ ದಿನವನ್ನು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಾಗಿ ಎರಡೂ ಹಂತಗಳಲ್ಲಿಯೂ ಆಚರಿಸಲಾಗುತ್ತಿದೆ. ಈ ಅಂತರಾಷ್ಟ್ರೀಯ ಯುವ ದಿನಕ್ಕೆ ತನ್ನದೇ ಆದ ಇತಿಹಾಸವಿದೆ. 8 ರಿಂದ 12 ಆಗಸ್ಟ್ 1998ರಲ್ಲಿ ಪೋರ್ಚುಗಲ್ ನಲ್ಲಿ ನಡೆದ ಯುವಜನ ವ್ಯವಹಾರಗಳ ಮಂತ್ರಿಗಳ ವಿಶ್ವ ಸಮ್ಮೇಳನವು ಆಗಸ್ಟ್ 12 ಅನ್ನು ” - [2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪುಸ್ತಕಗಳನ್ನು ಆಹ್ವಾನಿಸಿದೆ.](https://minchulli.com/kendrasahityaakademiyuvapursakar2025/): ಯುವ ಲೇಖಕರ ವಯಸ್ಸು ಜನವರಿ 1, 2025 ರಂದು 35 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 31, 2024 ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರದ ನಿಯಮಗಳು:- 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಅರ್ಜಿಯನ್ನು Download ಮಾಡಲು ಇಲ್ಲಿ ಕ್ಲಿಕ್ ಮಾಡಿ. Yuva Puraskar 2025_Application_Format     - [2025ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪುರಸ್ಕಾರಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪುಸ್ತಕಗಳನ್ನು ಆಹ್ವಾನಿಸಿದೆ.](https://minchulli.com/kendrabalasahityapuraskara2025/): ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಜನವರಿ 1, 2019 ರಿಂದ ಡಿಸೆಂಬರ್ 31, 2023ರ ಒಳಗೆ ಪ್ರಕಟಿಸರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 16, 2024 ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರದ ನಿಯಮಗಳು:-   2025ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪುರಸ್ಕಾರ ಅರ್ಜಿಯನ್ನು Download ಮಾಡಲು ಇಲ್ಲಿ ಕ್ಲಿಕ್ ಮಾಡಿ. BSP-2025_Application_Format ಕೃಷ್ಣಮೂರ್ತಿ ಬಿಳಿಗೆರೆ ಅವರ “ಛೂ ಮಂತ್ರಯ್ಯನ ಕಥೆಗಳು” ಮಕ್ಕಳ ಕಥೆಗಳಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ (minchulli.com) - [ಕುಪ್ಪಳಿಯಲ್ಲೊಂದು ಕಲರವದ ಮಿಂಚುಳ್ಳಿ ಕಮ್ಮಟ - ಪಿ. ವೆಂಕಟೇಶ್ ಬಾಗಲವಾಡ](https://minchulli.com/minchullikammata2024pvb/): ಎಂದಿನಂತೆ ಹಾಗೆ ಮೊಬೈಲ್ನಲ್ಲಿ ಕಣ್ಣಾಡಿಸುವಾಗ ಯಾವುದೋ ಗುಂಪಿನಲ್ಲಿ ಮಿಂಚುಳ್ಳಿಯವರ ಕಮ್ಮಟದ ಬಗ್ಗೆ ಓದಿದೆ. ಅದೇ ತಾನೆ ವಾರದ ಹಿಂದೆ ರಾಯಚೂರು ಹತ್ತಿರ ಮಲಯಾಬಾದ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಜರುಗಿದ ಕಾವ್ಯ ಕಮ್ಮಟದಲ್ಲಿ ಭಾಗವಹಿಸಿ ಬಂದಿದ್ದೆ. ಇದಕ್ಕೆ ಹೋಗುವುದೋ, ಬೇಡವೋ ಎಂದು ಮನಸ್ಸು ಹೊಯ್ದಾಡುತಿತ್ತು. ಕೊನೆಗೆ ನಾನು ಹೋಗದಿದ್ದರೇನಾಯಿತು ನನ್ನ ಸಾಹಿತ್ಯ ಗೆಳೆಯರಾದರೂ ಹೋಗಲಿ ಎಂದು ಸುಮಾರು ಹದಿನೈದು ಜನಕ್ಕೆ ತಿಳಿಸಿದೆ. ಕೆಲವರು ಹೋಗೋಣ ಎಂದರು, ಇನ್ನು ಕೆಲವರು ದೂರದ ದಾರಿ ಎಂದು ನೋಡೋಣ ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟರು, ಇನ್ನೂ ಕೆಲವರು ನೀವು ಬರುವುದಾದರೆ ನಾವು ಬರುತ್ತೇವೆ ಎಂದು ಷರತ್ತು ಹಾಕಿದರು. ಅಷ್ಟರಲ್ಲಿ ಗೆಳೆಯ ಶಿವರಾಜ್ ದಿನ್ನಿ ಕೆಲವರಿಗೆ ಮಾಹಿತಿ ನೀಡಿ ಬರಲು ಓಪ್ಪಿಸಿದ್ದಾಗಿ ವರದಿ ಒಪ್ಪಿಸಿದ ನಂತರ ಸರಿ ಎಂದು ಒಪ್ಪಿಕೊಂಡು ಬಸ್ ಮುಂಗಡ ಟಿಕೇಟ್-ಗಾಗಿ ತಿಳಿಸಿದೆ. ನಂತರ ಮಿಂಚುಳ್ಳಿಯವರಿಗೆ ಸಂಪಕಿ೯ಸಿ ನನ್ನ ಹೆಸರನ್ನು ನೊಂದಾಯಿಸಿದೆ. ನಂತರ ಶುರುವಾಯಿತು ತಾಕಲಾಟ, ಟಾಗೆ೯ಟ್ ಪೂರೈಸುವ ಗೂಗಲ್ - [ನಾ ಕಂಡಂತೆ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ 2024 - ಶಂಕುಸುತ ಮಹಾದೇವ ರಾಯಚೂರು](https://minchulli.com/naakandanteminchullikammata2024/): ಮೊದಲನೆಯದಾಗಿ ಮಿಂಚುಳ್ಳಿ ಸಾಹಿತ್ಯ ಬಳಗದ ರೂವಾರಿಗಳಾದ ಶಂಕರ್ ಸಿಹಿಮೊಗ್ಗೆ ಮತ್ತು ಸೂರ್ಯಕೀರ್ತಿ ತಮ್ಮೀರ್ವರಿಗೂ ಮನದಾಳದ ಧನ್ಯವಾದಗಳ ಜೊತೆಗೆ ಅಭಿನಂದನೆಗಳು. 2024 ಆಗಸ್ಟ್ 10 ಮತ್ತು 11ನೆಯ ತಾರೀಕುಗಳು ನನ್ನ ಜೀವನದಲ್ಲಿ ವಿಶೇಷ ದಿನಗಳಾಗಿದ್ದು, ಅಚ್ಚಳಿಯದೆ ಸದಾ ನೆನಪಿನಾಳದೊಳಗೆ ಉಳಿಯುತ್ತವೆ. ಮಿಂಚುಳ್ಳಿ ಬಳಗ ಹಮ್ಮಿಕೊಂಡ ಎರಡು ದಿನಗಳ ಕಥಾ-ಕಾವ್ಯ ಕಮ್ಮಟವು ಬಹು ಅರ್ಥಪೂರ್ಣವಾಗಿ ನೆರವೇರಿತು. ಹಿರಿಯ ಸಾಹಿತಿಗಳು ತಮ್ಮ ಅನುಭವಗಳ ಬುತ್ತಿಯ ಸವಿ ಹೂರಣವನ್ನು ಉಣಬಡಿಸಿದ ಪರಿ ಅಮೋಘ. ಮೊದಲ ದಿನದ ಕಮ್ಮಟವು ಸೂರ್ಯಕೀರ್ತಿಯವರ ನಿರೂಪಣೆಯೊಂದಿಗೆ ಆರಂಭಗೊಂಡು, ಶ್ರೀಯುತ ಎಲ್.ಎನ್ . ಮುಕುಂದರಾಜ್ ಅವರು ಉದ್ಘಾಟನಾ ಭಾಷಣದೊಂದಿಗೆ ರಸವತ್ತಾಗಿ ಕಾರ್ಯಕ್ರಮ ಮುಂದುವರೆಯಿತು. ಇವರು ತಮ್ಮ ಭಾಷಣದುದ್ದಕ್ಕೂ “ಕವಿಯಾಗಬೇಕಾದವನು ಹಿರಿಯರ ಬರಹಗಳನ್ನು ಓದಬೇಕು. ಆದರೆ ಯಥಾವತ್ತಾಗಿ ಅವರನ್ನು ಅನುಸರಿಸದೆ, ವಿಭಿನ್ನ ರೀತಿಯಲ್ಲಿ ನಾಲ್ಕು ಜನ ಓದಿ ಗುರುತಿಸುವಂತೆ ಬರೆಯಬೇಕೆಂದು ತಿಳಿಸಿದ ರೀತಿ ನಿಜಕ್ಕೂ ವಿಶೇಷ”. ಜೊತೆಗೆ ಹಳಗನ್ನಡದ ಕವಿಗಳ ಬರಹಗಳನ್ನು ಮೆಲಕು ಹಾಕುತ್ತಾ, ಹಾಸ್ಯಮಯವಾಗಿ ಪ್ರಸ್ತುತಪಡಿಸುತ್ತಾ, ಎಲ್ಲರನ್ನೂ ನಗೆಗಡಲಿನೊಳಗೆ ತೇಲಿಸುವುದರ ಜೊತೆಗೆ “ಕವಿಯಾಗಬೇಕಾದವನು ಎಲ್ಲರೊಳಗೆ ಬೆರೆತು, - [ಕುಪ್ಪಳಿಯಲ್ಲಿ ನಡೆದ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟ 2024 ಫೋಟೋ ಆಲ್ಬಮ್](https://minchulli.com/minchullikammata2024/): ಸಾಹಿತ್ಯದ ಓದು, ಶ್ರದ್ಧೆ, ಶಿಸ್ತು, ಸಂಯಮ ಮತ್ತು ಸಂವಾದ ನಮ್ಮನ್ನು ಮತ್ತೆ ಮತ್ತೆ ಪೊರೆಯುತ್ತವೆ. ಮೊದಲ ಕಮ್ಮಟದ ಅಭಿಪ್ರಾಯದಿಂದಾಗಿ ಈ ಬಾರಿ ಬಂದ ಅರ್ಜಿಗಳ ಸಂಖ್ಯೆಯು ಹೆಚ್ಚಿತ್ತು. ವಿಶೇಷವಾಗಿ ಈ ಬಾರಿ ಉತ್ತರ ಕರ್ನಾಟಕ ಭಾಗದ ಗೆಳೆಯರು ಅತಿ ಹೆಚ್ಚು ಇದ್ದರು. ಒಟ್ಟಾರೆಯಾಗಿ ಕರ್ನಾಟಕದ ಎಲ್ಲಾ ಭಾಗದ ಗೆಳೆಯರು ಇದ್ದರು. ಪರಸ್ಪರ ಸಹಕಾರ, ಗೌರವ ಮತ್ತು ಪ್ರೀತಿ ಕೂಡ ನಮ್ಮನ್ನು ಮತ್ತೆ ಮತ್ತೆ ಪೊರೆಯುತ್ತವೆ. ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳ ಸಹಕಾರದಿಂದಾಗಿ ಕುಪ್ಪಳಿಯಲ್ಲಿ ನಡೆದ ಎರಡು ದಿನಗಳ ಮಿಂಚುಳ್ಳಿ ಕಮ್ಮಟವು ಬಹಳ ಯಶಸ್ವಿಯಾಗಿದೆ, ವಿಶೇಷವಾಗಿ ಮಾರ್ಗದರ್ಶನ ನೀಡಿದ ನಾಡಿನ ಖ್ಯಾತ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್. ಎನ್. ಮುಕುಂದರಾಜ್ ಮತ್ತು ಕಥಾ ಗೋಷ್ಠಿಗಳ ಸಂಪನ್ಮೂಲ ವ್ಯಕ್ತಿಗಳಾದ ಡಾ. ಕರೀಗೌಡ ಬೀಚನಹಳ್ಳಿ, ಡಾ. ಅಮರೇಶ ನುಗಡೋಣಿ,  ಕಾವ್ಯ ಮತ್ತು ಕಥಾ ಸಂವಾದ ಗೋಷ್ಠಿಗಳ ಸಮನ್ವಯ ಮಾಡಿದ ಡಾ. ರವಿಕುಮಾರ್ ಪಿ.ಜಿ. ಮತ್ತು ಡಾ. ಗುರುಸ್ವಾಮಿ ಸಿ. - [ರೇಖಾ ಪ್ರಕಾಶ್ ಅವರು ಬರೆದ ಶಿಶು ಕವಿತೆ "ಪುಟ್ಟನ ಪ್ರಶ್ನೆ"](https://minchulli.com/makkalakavite65/): ಅಮ್ಮ ಅಮ್ಮ ನನ್ನಮ್ಮ ನನ್ನ ಪ್ರಶ್ನೆಗೆ ಉತ್ತರ ಹೇಳಮ್ಮ ಇರುಳಲಿ ಹೊಳೆಯುವ ಶಶಿ ತಾರೆಗಳು ಹಗಲಲಿ ಕಾಣದೆ ಮರೆಯಾಗುವವು ಸೂರ್ಯನು ಅವರ ನುಂಗುವನಂತೆ! ಅಜ್ಜಿಯು ಹೇಳಿತು ಈ ಕಥೆಯ ನಿಜವೇನಮ್ಮ ಅಮ್ಮ ಅಮ್ಮ ನನ್ನಮ್ಮ ನನ್ನ ಪ್ರಶ್ನೆಗೆ ಉತ್ತರ ಹೇಳಮ್ಮ ಕೇಳೋ ಕಂದ ನಿನ್ನ ಪ್ರಶ್ನೆಗೆ ನನ್ನ ಉತ್ತರವಿದು ಹಗಲಲಿ ಸೂರ್ಯನ ಬೆಳಕಿನ ಹೊಳಪಿಗೆ ಶಶಿ ತಾರೆಗಳು ಕಾಣುವುದಿಲ್ಲ ಸೂರ್ಯನು ಅವರ ನುಂಗುವುದೂ ಇಲ್ಲ ತಿಳಿದುಕೋ ಕಂದ, ಅಜ್ಜಿಗೆ ವಿಜ್ಞಾನ ಗೊತ್ತಿಲ್ಲ ಪುಸ್ತಕ ಓದು, ಜ್ಞಾನವ ಬೆಳೆಸಿಕೊ ಮೌಡ್ಯವ ನಂಬದಿರು ಎಲೆ ಕಂದ! ತಿಳಿಯಿತು ಅಮ್ಮ ಬೆಳಕಲಿ ಬೆಳಕಿಗೆ ಬೆಲೆ ಇಲ್ಲಾ ಕತ್ತಲೆಯಲಿ ಕಿರು ಹಣತೆಗೂ ಬೆಲೆಯೆಂದು ಅರಿತೆನು ನಾನಿoದು ಅಜ್ಜಿಯು ಹೇಳಿತು ಕಟ್ಟು ಕಥೆಯನ್ನ ನೀನು ಹೇಳಿದೆ ವಿಜ್ಞಾನವನ್ನ ನಾ ಕಲಿತೆ ಇದರಿಂದ ಸುಜ್ಞಾನವನ್ನ ಅಮ್ಮ ಅಮ್ಮ ನನ್ನಮ್ಮ ನೀನೆಂದರೆ ನನಗೆ ಅಚ್ಚುಮೆಚ್ಚಮ್ಮ. - [ಉದ್ಯಮಶೀಲತೆ ಎಂಬ ಭರವಸೆ - ಮೇಘ ರಾಮದಾಸ್ ಜಿ](https://minchulli.com/lekhana79/): ಯುವ ಜನರು ರಾಷ್ಟ್ರದ ಭವಿಷ್ಯ ಕಟ್ಟುವವರು ಮತ್ತು ಅಭಿವೃದ್ಧಿಯ ರಾಯಭಾರಿಗಳು. ಒಂದು ದೇಶವು ಆರೋಗ್ಯಕರ ಯುವ ಸಮುದಾಯವನ್ನು ಹೊಂದಿದ್ದಾಗ, ಅಭಿವೃದ್ಧಿ ಮತ್ತು ಪ್ರಗತಿಯ ವಿಷಯದಲ್ಲಿ ದೇಶವು ಮುನ್ನಡೆಯುವುದನ್ನು ನಾವು ಕಾಣಬಹುದು. ಈ ರೀತಿಯದ್ದೇ ಆದ ಸಕಾರಾತ್ಮಕ ಹಾಗೂ ಭರವಸೆಯ ಸಂದರ್ಭ ನಮ್ಮ ದೇಶದಲ್ಲಿದೆ. ಇಂದು ಭಾರತ ವಿಶ್ವದಲ್ಲಿ ಅತಿ ಹೆಚ್ಚು ಯುವ ಸಮುದಾಯವನ್ನು ಹೊಂದಿರುವ ರಾಷ್ಟ್ರವಾಗಿದೆ. ಈ ಯುವ ಸಮುದಾಯವು ಒಂದು ನಿರ್ದಿಷ್ಟ ಗುರಿ ತಲುಪುವ ಹಾದಿಯಲ್ಲಿ ನಡೆದಾಗ ಖಂಡಿತ ದೇಶ ‘ ಅಭಿವೃದ್ಧಿ ಹೊಂದಿದ ‘ ರಾಷ್ಟ್ರವಾಗಿ ಹೊರಹೊಮ್ಮುತ್ತದೆ. ಜಗತ್ತು ಇಂದು ‘ ತಂತ್ರಜ್ಞಾನ ಯುಗ ‘ ವಾಗಿ ಪರಿವರ್ತನೆಗೊಂಡಿದೆ. ತಂತ್ರಜ್ಞಾನವು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿಯನ್ನು ತರುತ್ತಿದೆ. ತಾಂತ್ರಿಕ ಕ್ರಾಂತಿಯು ಜನರ ಜೀವನದ ದಿಕ್ಕನ್ನೇ ಬದಲಿಸಿದೆ. ಆರೋಗ್ಯ, ರಕ್ಷಣೆ, ಮಾಹಿತಿ ಮತ್ತು ಸಂಪರ್ಕ ಇದ್ಯಾವುದೂ ಸುಲಭಕ್ಕೆ ಸಿಗದೇ ಇರುವ ಸ್ಥಳಗಳನ್ನು ಸಹ ತಂತ್ರಜ್ಞಾನ ಇಂದು ತಲುಪಿದೆ. ಆದ್ದರಿಂದಲೇ ಇಂದು ಎಲ್ಲರಿಗೂ ಎಲ್ಲಾ ವ್ಯವಸ್ಥೆಗಳು ಒಂದು ಮಟ್ಟಕ್ಕೆ ಸಿಗುವಂತಾಗಿದೆ. ಜಾಗತೀಕರಣವು ದೇಶಗಳನ್ನು ಒಗ್ಗೂಡಿಸಿದೆ - [ಸಂಗೀತ ಮತ್ತು ಸಾಹಿತ್ಯ ಮಾತ್ರ ನಮ್ಮನ್ನು ಉನ್ನತೀಕರಿಸಬಲ್ಲದು - ಕೆ.ಎಸ್. ಈಶ್ವರಪ್ಪ](https://minchulli.com/sahityasuddi65/): ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಒಂದು ಮಾಧ್ಯಮವಿದೆಯೆಂದರೆ, ಅದು ಸಂಗೀತ ಮತ್ತು ಸಾಹಿತ್ಯ. ಇವೆರಡನ್ನೂ ಸಮೀಕರಿಸಿ ಇಂದು ಹೆಮ್ಮೆಯ ಗಾಯಕ ಶಂಕರ ಶಾನುಭೋಗ ಅವರು ನಾಡಿನಾದ್ಯಂತ “ಕಾವ್ಯ ಸಂಗೀತ” ಹೆಸರಿನಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಅದರ ಅಂಗವಾಗಿ ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಸಹಯೋಗದೊಡನೆ ಈ ಅದ್ಭುತ ನಡೆಯುತ್ತಿರುವುದು ಶ್ಲಾಘನೀಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಅವರು ಕರ್ನಾಟಕ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಖ್ಯಾತ ಸುಗಮ ಸಂಗೀತಗಾರ ಶಂಕರ ಶಾನುಭೋಗ ಮಾತನಾಡಿ ಸಂಗೀತ ಮನರಂಜನೆಗೆ ಸಂಗೀತ ಕೇಳದೆ ಅದನ್ನು ಅರ್ಥಮಾಡಿಕೊಂಡು ಕೇಳಿದರೆ ಮಾತ್ರ ಸಂಗೀತಕ್ಕೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ತಿಳಿಸಿದರು. ತಮ್ಮ ಉದ್ದೇಶ ಮನರಂಜನೆ ಜೊತೆಗೆ ಸಾಹಿತ್ಯದ ಹಿರಿಮೆಯನ್ನು ಎತ್ತಿ ಹಿಡಿಯುವುದೇ ಆಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ಅವರು ಮಾತನಾಡಿ, ಕಾವ್ಯ ಸಂಗೀತ ಎಂಬ ಪರಿಕಲ್ಪನೆಯೇ ಆಕರ್ಣಕವಾಗಿರುವಂತಹದ್ದು. ಉತ್ತಮ ಸಾಹಿತ್ಯ - [ಶಾಂತಿ ಮತ್ತು ಅಭಿವೃದ್ಧಿಗಾಗಿ ಯುವ ಕೌಶಲ್ಯಗಳು - ಮೇಘ ರಾಮದಾಸ್ ಜಿ](https://minchulli.com/lekhana78/): ಭಾರತ ಯುವ ರಾಷ್ಟ್ರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 29ರಷ್ಟು ಅಂದರೆ ಪ್ರಸ್ತುತ 420 ದಶ ಲಕ್ಷ ಯುವ ಜನರು ಭಾರತದಲ್ಲಿದ್ದಾರೆ. ಈ ಎಲ್ಲ ಯುವಜನತೆಯು ಕೂಡ ವಿವಿಧ ಪ್ರದೇಶ, ಜನಾಂಗ, ಭಾಷೆ, ಸಂಸ್ಕೃತಿ, ಜಾತಿ, ವರ್ಗ, ವರ್ಣದವರಾಗಿದ್ದಾರೆ. ಎಲ್ಲರ ಮನಸ್ಥಿತಿಗಳು ಹಾಗೂ ಪರಿಸ್ಥಿತಿಗಳು ಬಹಳ ವಿಭಿನ್ನವಾಗಿವೆ. ಆದರೆ ಈ ಎಲ್ಲಾ ಯುವಜನತೆ ಎದುರಿಸುತ್ತಿರುವ ಸಮಸ್ಯೆಗಳು ಮಾತ್ರ ಒಂದೇ ಆಗಿವೆ. ಈ ಎಲ್ಲಾ ಸಮಸ್ಯೆಗಳಿಗೂ ಅವರೇ ಪರಿಹಾರದ ಧ್ವನಿಯಾಗುವ ಅವಶ್ಯಕತೆ ಇದೆ. ಈ ಯುವ ಧ್ವನಿಗೆ ಸಾತ್ ನೀಡಲೆಂದೇ ವಿಶ್ವಸಂಸ್ಥೆ ಯುವ ಜನರಿಗಾಗಿಯೇ ಕೆಲವು ವಿಶೇಷ ದಿನಗಳನ್ನು ನಿಗದಿಪಡಿಸಿದೆ. ಅದರಲ್ಲಿ  ” ವಿಶ್ವ ಯುವ ಕೌಶಲ್ಯ ದಿನ ” ಕೂಡ ಒಂದಾಗಿದೆ. ಯುವಜನತೆಯನ್ನು ಮುಖ್ಯವಾಗಿ ಬಾಧಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ‘ ನಿರುದ್ಯೋಗ ‘. ಹೆಚ್ಚಿನ ಶಿಕ್ಷಣ ಪಡೆಯದೇ ಇರುವುದು, ವೃತ್ತಿ ಮಾರ್ಗದರ್ಶನ ಸಿಗದಿರುವುದು, ಕೌಶಲ್ಯಗಳ ಕೊರತೆ, ಆರ್ಥಿಕ ಸಮಸ್ಯೆ ಹೀಗೆ ಈ ನಿರುದ್ಯೋಗ ಸಮಸ್ಯೆಗೆ ಹಲವು ಕಾರಣಗಳಿವೆ. ಇವುಗಳಿಗೆ ಪರಿಹಾರೋಪಾಯಗಳನ್ನು - [ಅಂಚೆ ನಡೆದು ಬಂದ ದಾರಿ; ಒಂದು ನೆನಪು - ಉದಂತ ಶಿವಕುಮಾರ್](https://minchulli.com/lekhana77/):   “ಪೋಸ್ಟ್!” ಎಂಥ ಮಾಂತ್ರಿಕ ಶಕ್ತಿ ಇದೆ ಆ ಕೂಗಿನಲ್ಲಿ! ದೊಡ್ಡವರು, ಚಿಕ್ಕವರು, ಕಾತರದಿಂದ ಕಾಯುತ್ತಿದ್ದರು ಅಂಚೆಯವನು ತರುವ ಕಾಗದಕ್ಕಾಗಿ. ಅಂಚೆ, ಹಂಸ ಎಂಬುದರ ತದ್ಭವ. ಹಂಸವನ್ನು ಸಂದೇಶ ಒಯ್ಯುವ ಪಕ್ಷಿಯೆಂದು ನಮ್ಮ ಪುರಾಣ ಕಥೆಗಳಲ್ಲಿ ವರ್ಣಿಸಲಾಗಿದೆ. ಹಂಸ ಪಕ್ಷಿ ಪ್ರೇಮ ಸಂದೇಶಗಳನ್ನು ಕೊಂಡೊಯ್ಯುವ ಸನ್ನಿವೇಶ ನಳ ದಮಯಂತಿ ಕಥೆಯಲ್ಲಿದೆ. ಪ್ರಪಂಚದ ಮೊದಲ ಓಲೆಕಾರರು ಬ್ಯಾಬಿಲೋನಿಯ ಸಾಮ್ರಾಜ್ಯದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆ ಮಣ್ಣಿನ ಫಲಕಗಳನ್ನು ಕೊಂಡೊಯ್ಯುತ್ತಿದ್ದರು. ಸುಮಾರು ಇದೇ ಕಾಲದಲ್ಲಿ ಈಜಿಪ್ಟಿನಲ್ಲಿಯೂ ದೂತರ ಮೂಲಕ ಓಲೆಗಳನ್ನು ಕಳುಹಿಸುವ ವ್ಯವಸ್ಥೆ ಇದ್ದಿತು. ಕ್ಷಿಪ್ರಗಾಮಿಗಳು, ಧೈರ್ಯಶಾಲಿಗಳು ಆದ ಈ ಓಲೇಕಾರರ ಹೋರೆಯ ತೂಕ ಹೆಚ್ಚು. ಮುಂದೆ ಕಂಚಿನ ಫಲಕಗಳನ್ನು ಕೊಂಡೊಯ್ಯಬೇಕಾಯಿತು. ಕುದುರೆಯ ಮೇಲೆ ಒಯ್ಯುವ ಅಂಚೆಯ ಇತಿಹಾಸ ದೀರ್ಘವಾದದ್ದು. ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಪರ್ಷಿಯಾದ ಸೈರಸ್ ದೊರೆ ಕುದುರೆಗಳ ಮೇಲೆ ಸಂಚರಿಸುವ ಓಲೆಕಾರರನ್ನು ನೇಮಿಸಿದ. ನೂರಾರು ಹರದಾರಿ, ಕಾಡು, ಮೇಡು, ಚಳಿಗಾಳಿ ಎನ್ನದೆ ಪ್ರಾಣ ಪಣವೊಡ್ಡಿ ಈ ಹರಿಕಾರರು ತಮ್ಮ ಕರ್ತವ್ಯ ಪಾಲಿಸುತ್ತಿದ್ದ ನಿದರ್ಶನಗಳಿವೆ. - [ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದವರ ಪಟ್ಟಿ (ಕನ್ನಡ)](https://minchulli.com/kendrayuvapuraskarapatti/): ವರ್ಷ ಕೃತಿ ಲೇಖಕರು 2011 Nelada Karuneya Dani (Poetry) Veeranna Madiwalara 2012 Jangama Fakeerana Jolige (Poetry) Arif Raja 2013 Batavadeyagada Raseethi (Poetry) Lakkur Ananda 2014 Dhyanake Thaareekhina Hangilla (Poetry) Kavya Kadame 2015 Mayakolahala (Short Stories) Mounesh Badiger 2016 Zero Mathu Ondu (Short Stories) Vikrama Hatwara 2017 Manasu Abhisaarike  (Short Stories) Shanthi K. Appanna 2018 Kepina Dabbi (Short Stories) Padmanabha Bhat 2019 Beru (Novel) Fakeer (Shridhar Banvasi G.C.) 2020 Dhoopada Makkalu (Short Stories) K. S. Mahadevaswamy 2021 Togala Cheelada Karna (Poetry) H. Lakshmi Narayan Swamy 2022 Neelakurinji (Short Stories) Dadapeer Jyman 2023 Phoo Mattu Ithara Kathegalu (Short Stories) Manjunayak Challur 2024 Zero Balance (Poetry) - [ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ರಾಜ್ಯಮಟ್ಟದ ಎರಡು ದಿನಗಳ ಯುವ ಸಾಹಿತ್ಯ ಸಮಾವೇಶ](https://minchulli.com/yuvasahityasamavesha2024/) - [ಕವಿಗಳಾದ ಚನ್ನಪ್ಪ ಅಂಗಡಿ ಮತ್ತು ರವಿ ಹಂಪಿ ಅವರಿಗೆ 2024ನೇ ಸಾಲಿನ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ](https://minchulli.com/sahityasuddi64/) - [ಕೃಷ್ಣಮೂರ್ತಿ ಬಿಳಿಗೆರೆ ಅವರ "ಛೂ ಮಂತ್ರಯ್ಯನ ಕಥೆಗಳು" ಮಕ್ಕಳ ಕಥೆಗಳಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ](https://minchulli.com/balasahityapuraskara2024/) - [ಶ್ರುತಿ ಬಿ.ಆರ್. ಅವರ "ಜೀರೋ ಬ್ಯಾಲೆನ್ಸ್" ಕವನ ಸಂಕಲನಕ್ಕೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ](https://minchulli.com/kendrasahityaacedemyyuvapuraskar2024/) - [ಆಧುನಿಕ "ಕಾಮಿಡಿ"ಗಳ ಸೃಷ್ಟಿಕರ್ತ "ಮೋಲಿಯೇರ್" - ಉದಂತ ಶಿವಕುಮಾರ್](https://minchulli.com/lekhana76/): ಮೋಲಿಯೇರ್ ಫ್ರಾನ್ಸಿನ ಸುಪ್ರಸಿದ್ಧ ನಾಟಕಕಾರ. ಮೋಲಿಯೇರ್ ಎಂಬುದು ಅವನ ಪ್ರಸಿದ್ಧ ಸಂಕ್ಷಿಪ್ತ ನಾಮ. ಆತನ ನಿಜವಾದ ಹೆಸರು ಜೀನ್ ಬ್ಯಾಪ್ಟಿಸ್ಟ್ ಫೋಕಿಲಾನ್ ಮೋಲಿಯೇರ್. 1622 ರಲ್ಲಿ ಮೋಲಿಯೇರ್ ಪ್ಯಾರಿಸಿನಲ್ಲಿ ಜನಿಸಿದ. ಅವನು ಚಿಕ್ಕ ವಯಸ್ಸಿನವನಿದ್ದಾಗ ಅವನ ಅಜ್ಜ ಅವನನ್ನು ಪ್ಯಾರಿಸಿನ ನಾಟಕ ಮಂದಿರಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಮೋಲಿಯೇರ್ 15 ವರ್ಷದವನಿದ್ದಾಗ ಕ್ರೈಸ್ತರ ಜೆಸ್ಸೂಟ್ ಪಂಗಡದ ಕಾಲೇಜೊಂದನ್ನು ಸೇರಿದ. ಲ್ಯಾಟಿನ್ ನಾಟಕಗಳ ಅಧ್ಯಯನ ಮತ್ತು ಅಭಿನಯಗಳಲ್ಲಿ ಆಸಕ್ತಿ ತೋರಿದ. ಇವೆಲ್ಲವೂ ಮೋಲಿಯೇರನ ನಾಟಕ ಕಲಾಸಕ್ತಿ ಬೆಳೆಯಲು ಸಹಾಯಕವಾದವು; ನಾಟಕ ಸಂಸ್ಥೆಯೊಂದನ್ನು ಕಟ್ಟಬೇಕೆಂಬ ಆಸೆಯನ್ನು ಅವನಲ್ಲಿ ಕೆರಳಿಸಿದವು. ತನ್ನ ತಾಯಿಯ ಕಡೆಯಿಂದ ಹಣ ಪಡೆದು ಮೋಲಿಯೇರ್ ನಾಟಕ ಸಂಸ್ಥೆಯೊಂದನ್ನು ಸ್ಥಾಪಿಸಿದ. ಆ ಸಂಸ್ಥೆ ಕೆಲವು ಟ್ರಾಜಿಡಿಗಳನ್ನು ಪ್ರದರ್ಶಿಸಲು ಪ್ರಾರಂಭಿಸಿತು. ಆ ಮೊದಲೇ ಬಹಳ ವ್ಯವಸ್ಥಿತವಾಗಿ ಪ್ರಬಲವಾಗಿ ಬೆಳೆದಿದ್ದ ಕೆಲವು ನಾಟಕ ಸಂಸ್ಥೆಗಳ ತೀವ್ರ ಸ್ಪರ್ಧೆಯಿಂದ ಮೋಲಿಯೇರನ ನಾಟಕ ಪ್ರದರ್ಶನಗಳು ಲಾಭದಾಯಕವಾಗಲಿಲ್ಲ. ತುಂಬಾ ನಷ್ಟವೂ ಆಯಿತು. ಮಾಡಿದ ಸಾಲವನ್ನು ತೀರಿಸಲಾಗದೆ ಅವನು ಒಂದೆರಡು ಸಲ ಸೆರೆಮನೆವಾಸವನ್ನು ಅನುಭವಿಸಬೇಕಾಯಿತು. - [ಚೇತನ ಭಾರ್ಗವ ಅವರು ಬರೆದ ಕವಿತೆ "ಮೂರು ಗಂಟಿನ ನಂಟು"](https://minchulli.com/kavite204/): ಮದುವೆಯಲಿ ನೆರೆದಿಹರು ಜನರು ಸಾವಿರದೆಂಟು ಹೊಸ ಕನಸುಗಳ ಮೆರಗು ನವಜೋಡಿಗಳಲುಂಟು ನೋವು ನಲಿವು ನೂರೆಂಟು ಒಂಟಿತನಕೆ ಕೊನೆಹೇಳುವ ಬಂಧ ಇಲ್ಲುಂಟು ಗಂಡು ಕಟ್ಟುವನು ಹೆಣ್ಣಿಗೆ ಮೂರು ಗಂಟು ಏಳೇಳು ಜನುಮದ ಅನುಬಂಧದ ನಂಟು ಪ್ರೀತಿ ಪ್ರೇಮ ಸ್ನೇಹ ನಂಬಿಕೆ ಉಂಟು ಮನಸುಗಳು ಅರಿತರೆ ನೆಮ್ಮದಿಯುಂಟು ಬದುಕಲಿ ಕಷ್ಟ ಸುಖದ ತಿರುವುಂಟು ಅರಿತು ನಡೆದರೆ ಜೀವನದಲ್ಲಿ ಸೊಗಸುಂಟು ಹೊಂದಾಣಿಕೆ ಇದ್ದರೆ ಬಾಳಲಿ ಸಾಮರಸ್ಯವುಂಟು ಸಮರಸದ ಸಂಗೀತ ಮದುವೆ ಎಂಬ ಬಂಧನದಲುಂಟು ಸಂಬಂಧವಾಗದಿರಲಿ ಕಗ್ಗಂಟು ನೆಮ್ಮದಿಯ ಬದುಕಲ್ಲಿ ಹಿತವುಂಟು - [ಪರಶುರಾಮನ ಎಸ್ ನಾಗುರು ಅವರು ಬರೆದ ಕವಿತೆ "ಕೇಳುವರಾರು?"](https://minchulli.com/kavite203/): ಬಡವನ ಒಡಲದನಿ ವರಸುವರಾರು ನೊಂದ ಜನರ ಕಂಬನಿ ಬರುವರು ಯಾರು ಎಂದು ಕಾಯ್ದೆವು ಇನಿತು ದಿನ ಬಂದರು ಬಹಳ ಜನ ಇಲ್ಲ ಹೃದಯ ಕಿವಿ ಕಣ್ಣು ಉಂಡವರು ಉಂಡುಂಡು ಅರಗಿಸಿಕೊಂಡ್ರು ನಮ್ಮ ಹಕ್ಕನ್ನೆ ,ನಾವು ಕೇಳಿದಾಗ ಯಾರ್ಗೆ ಹೇಳ್ತಿ ಹೇಳು, ನಡೆ ಮುಂದೆ ಅಂದ್ರು ಆಗೂ ಹೋಗುಗಳ ನೋಡುತ್ತಿದೆ ಬಡವ ನಿನ್ನ ಬಿಡುಗಣ್ಣು ನಿನ್ನ ಬಾಯಿಗೆ ಉಳ್ಳವರು ಹಾಕುವರು ಹಿಡಿಮಣ್ಣು ಭ್ರಷ್ಟಾಚಾರ ಮರವಾಗಿದೆ ಬಡವನ ಬದುಕು ಕನಸು ನೆತ್ತರನೀರಿ ಈ ಹಳ್ಳಿಗಳಲ್ಲಿ ಆ ದಿಲ್ಲಿಯಲ್ಲಿ ಟಿಸಿಲೊಡೆದಿದೆ ದೇಶವನ್ನಾವರಿಸಿದೆ ಭ್ರಷ್ಟಾಚಾರದಿಂದ ಬಲವಂತರಾದರು ಕೆಲವರು ಭ್ರಷ್ಟಾಚಾರದಿಂದ ಬಳಲಿದರು ಹಲವರು - [ದೇವರಾಜ್ ಬೆಜ್ಜಿಹಳ್ಳಿ ಅವರು ಬರೆದ ಕವಿತೆ "ನಲುಗಿದ ಹೆಣ್ಣಿನ ಅಂತರಾಳ"](https://minchulli.com/kavite202/): ಓ.. ದೇವಾ.. ಎಲ್ಲವನ್ನು ನನ್ನಿಂದ ಕಸಿದುಕೊಂಡ ಮೇಲೆ ನನಗಾಗಿ ಉಳಿಸಿದ್ದಾದರೂ ಏನು..? ಬರೀ ಶೂನ್ಯ ನೋವುಗಳ ಹೊರತೂ ಅಷ್ಟು ಅವಸರವೇನಿತ್ತು..? ಆ ಜವರಾಯನಿಗೆ ಹೆತ್ತವರ ಮೇಲೆ ಕಣ್ಣು ತಾಕಿಸಿ ಅನಾಥಳೆಂಬ ಹೊದಿಕೆ ಹೊದಿಸಿ ಪ್ರೀತಿ,ವಾತ್ಸಲ್ಯಗಳಿಂದ ದೂರವಾಗಿಸಿಬಿಟ್ಟ ಬಯಸಿದ ಬಯಕೆಗಳಿಗೆ ಇಲ್ಲಿ ಬೆಲೆಯೇ ಇಲ್ಲ ಆಸೆಗಳನ್ನು ಮೂಟೆ ಕಟ್ಟಿ ಅಟ್ಟಕ್ಕೇರಿಸಿ ವರುಷಗಳೇ ಉರುಳಿವೆ ಒಬ್ಬಬ್ಬರಾಗಿ ಮೆಲ್ಲಗೆ ಸರಿದು ದೂರಾಗುತಿಹರು ನೆರೆಹೊರೆಯವರು ಮಾತಿಗಷ್ಟೇ ಸೀಮಿತ ಬಂಧುಗಳನ್ನಂತೊ ಕೇಳಲೇಬೇಡಿ ವ್ಯಾಪ್ತಿ ಪ್ರದೇಶದಿಂದ ಬಹುದೂರ ನೊಂದು ಬೆಂದ ಜೀವಕೆ ಸಾಂತ್ವನದ ನುಡಿಗಳಿಗೂ ಬರ ಸಿರಿತನವೇನು ಬೇಡ ದೇವಾ.. ಅತ್ತಾಗ ಕಣ್ಣೊರೆಸುವ ಸಿರಿವಂತಿಕೆಯ ಕೈಗಳೇ ಸಾಕು ಆಂತರ್ಯದ ಬೇಗುದಿಯ ನುಡಿಗಳಿಗೆ ಕಿವಿಯಾಗುವವರು ಬೇಕು ಜೊತೆಗೆ ದನಿಯಾಗುವವರಿದ್ದರೆ ಸಾಕು ಈ ದೀನಳ ಬದುಕು ಹಸನಾದೀತು… - [ರವಿ ಅಗ್ರಹಾರ ಅವರು ಬರೆದ ಕವಿತೆ "ಕೃಷ್ಣ ಕಾಯ"](https://minchulli.com/kavite201/): ಕಲ್ಪನೆಗೆ ಎಟುಕದ ಎತ್ತರ ಊಹೆಗೆ ನಿಲುಕದ ವಿಸ್ತಾರ ಬೆಳಕನ್ನು ಸೆಳೆವ ಚುಂಬಕ ಅಭೇಧ್ಯ ಕೃಷ್ಣ ಕಾಯ ವೇಷ ಕಳಚಿ ಅಸ್ತಿತ್ವ ಅಳೆಸಿ ಕಾಯುತಿಹ ಶೃಷ್ಟಿಯ ಗರ್ಭಕ್ಕೆ ಹಿಂದಿರುಗುವ ದಾರಿ ಕೃಷ್ಣ ಕಾಯ ಕಪ್ಪು ಬಾಗಿಲ- ಬಿಳಿ ಹಿತ್ತಲು -ಮಹಾಮಾಯ ಚಲನೆಗೆನೋ ಹುರುಪು ಶಾಂತಿ ಕದಡುವ ಧಾರಣೆ ಹುಟ್ಟು ಎಡವಟ್ಟು ಸಾವು ಇದರ ಗುಟ್ಟು ಹೃದಯ ಗುಹೆಯಲ್ಲಿಹ ರಹಸ್ಯ ಅಭಯ ನಿಶ್ಚಲ ಕೃಷ್ಣ ಕಾಯ - [ಮಂಜುಶ್ರೀ ಮುರಳೀಧರ್ ಅವರು ಬರೆದ ಕವಿತೆ "ಬಂಧನವಾಗದಿರಲಿ ಈ ಸಂಬಂಧ"](https://minchulli.com/kavite200/): ಗಂಡೆಂದ ಮಾತ್ರಕ್ಕೆ ಅವನ ಮನಸ್ಸು ಕಲ್ಲು ಬಂಡೆಯೇ ಅವನನ್ನು ಸಿಲುಕಿಸಿ ನಲುಗಿಸಿದೆ ಬಂಧಗಳ ಬಲೆ ಸಂಬಂಧಗಳ ಸ್ವಾರ್ಥದಲಿ ಅವನ ಅನಿಸಿಕೆಗೆ ಎಲ್ಲಿದೆ ಬೆಲೆ. ತಾಯಿಗೆ ತಕ್ಕ ಮಗ, ಮಕ್ಕಳಿಗೆ ಆದರ್ಶ ಅಪ್ಪನಾಗಬೇಕು ಪತ್ನಿಗೆ ಒಪ್ಪುವ ಪತಿ, ಸಮಾಜಕ್ಕೆ ಸತ್ಪ್ರಜೆಯಾಗಬೇಕು ಆದರೆ,ಯಾರು ಸಹ ಕೇಳರು ಅವನಿಗೆ ಏನು ಬೇಕು? ಓದಿ ಒಳ್ಳೆಯ ಕೆಲಸ ಸೇರಿ ಜೀವನದಲ್ಲಿ ಯಶಸ್ಸು ಕಾಣಬೇಕು ಕಷ್ಟವೆನಿಸಿದರೂ ತನ್ನವರ ಹಿತಕ್ಕಾಗಿ ದುಡಿಯಬೇಕು ಒಂದಲ್ಲ, ಎರಡಲ್ಲ ಎಲ್ಲ ಜವಾಬ್ದಾರಿ ಹೊತ್ತು ಸಾಗಬೇಕು. ಅತ್ತರಷ್ಟೇ ನೋವಾಗಿದೆ ಎಂದು ಅರ್ಥವೇ! ತನ್ನವರೊಂದಿಗೆ ಪ್ರೀತಿಯ ಮಾತನಾಡದಿದ್ದರೆ ಅಕ್ಕರೆಯಿಲ್ಲವೇ? ಎಲ್ಲವೂ ಅವನಲ್ಲಿ ಉದುಗಿದೆ ನವಿರು ಭಾವನೆ ಅರಿತಿಲ್ಲವೇ? ಎಷ್ಟೇ ಬಲಶಾಲಿಯಾದರೂ ಶಕ್ತಿ ತುಂಬಲು ಸಂಬಂಧ ಬೇಕು ದಣಿದ ದೇಹ ಮನಸ್ಸಿಗೆ ಸ್ಪಂದಿಸುವ ಪ್ರೀತಿಯ ಮನ ಬೇಕು ಸಂಬಂಧಗಳ ಬಂಧವೂ ಆಗಲಿ ಅನುಬಂಧ ಬಂಧನವಾಗದಿರಲಿ ಈ ಸಂಬಂಧ. - [ಉತ್ತರ ಕರ್ನಾಟಕದಲ್ಲಿ ಕನ್ನಡ ರಂಗಭೂಮಿಗೆ ಗೌರವ ಸ್ಥಾನ ತಂದುಕೊಟ್ಟ ಮೊದಲಿಗ "ಶಿರಹಟ್ಟಿ ವೆಂಕೋಬರಾಯರು" - ಉದಂತ ಶಿವಕುಮಾರ್](https://minchulli.com/lekhanan75/): “ಎಲ್ಲಿ ನೋಡಲು ಮರಾಠಿ ನಾಟಕಮಯಂ ತಾನಾಯ್ತು ಕರ್ನಾಟಕಂ” ಎಂದು ಧಾರವಾಡದ ಶಾಂತಕವಿ ಉದ್ಗರಿಸಿದರು. ಇದು ಕಳೆದ ಶತಮಾನದ ಅಂತ್ಯ ಭಾಗದಲ್ಲಿ ಉತ್ತರ ಕರ್ನಾಟಕದ ಪರಿಸ್ಥಿತಿ. ಅಂಥ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ರಂಗಭೂಮಿಯ ಸಾರ್ವಭೌಮತ್ವವನ್ನು ಎದುರಿಸಿ ಕನ್ನಡ ನಾಟಕ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಾಹಸಿ, ಶಿರಹಟ್ಟಿ ವೆಂಕೋಬರಾಯರು. ಹೈದರಾಬಾದ್ ಸಂಸ್ಥಾನಕ್ಕೆ ಸೇರಿದ್ದ ಕೊಪ್ಪಳದಲ್ಲಿನ ಸುಪ್ರಸಿದ್ಧ ವಕೀಲ ಹಣಮಂತರಾಯರ ಪುತ್ರ ವೆಂಕೋಬರಾವ್ ಜನಿಸಿದ್ದು 1885ರಲ್ಲಿ. ತಾಯಿ ಕೃಷ್ಣವೇಣಿ ಬಾಯಿ. ಸಾಂಗಲಿ ಸಂಸ್ಥಾನದ ಶಿರಹಟ್ಟಿಯಲ್ಲಿ ಪ್ರಸಿದ್ಧ ನರಗುಂದ ನಾಯಕರ ಮನೆತನದವರು. 12 ನೇ ವರ್ಷ ವಯಸ್ಸಿನಲ್ಲೇ ವೆಂಕೋಬರಾವ್ ತಂದೆಯನ್ನು ಕಳೆದುಕೊಂಡರು. ತಾಯಿಯು ಮಗನೊಂದಿಗೆ ತವರಿಗೆ ಬಂದು ಶಿರಹಟ್ಟಿಯಲ್ಲಿ ಸೋದರ ತಮ್ಮಣ್ಣನಾಯಕ ನೊಡನೆ ವಾಸಿಸತೊಡಗಿದರು ತಮ್ಮಣ್ಣ ನಾಯಕರಿಗೆ ಬಾಲಕ ವೆಂಕೋಬನ ಮೇಲೆ ಅಪಾರ ವಾತ್ಸಲ್ಯ. ಮುಂದೆ ವೆಂಕೋಬರಾವ್ ನಾಟಕ ಕಂಪನಿ ಪ್ರಾರಂಭಿಸುವಾಗ ಹಳೆಯ ಪೀಳಿಗೆಯ ಜನರಲ್ಲಿ ತಮ್ಮಣ್ಣನಾಯಕರೇ ಬೆಂಬಲದ ರಕ್ಷೆ ನೀಡಿದವರು. ಅವರು ವೆಂಕೋಬರಾಯ ರ ಕಂಪನಿಯು ನಾಟಕ ಆಡುವುದಕ್ಕೆ ಊರ ಮಧ್ಯದಲ್ಲಿ ಒಂದು ಚಿಕ್ಕ ನಾಟಕ ಗೃಹ ಕಟ್ಟಿಸಿಕೊಟ್ಟರು. - [ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ ಅವರು ಬರೆದ ಕಥೆ 'ಭವಿಷ್ಯದ ಬೆಳಕು'](https://minchulli.com/kathe77/): ಧನ್ ಧನ್ ಧನ್ ಎಂದು ಶಬ್ಧ ಬಂದ ದಿಕ್ಕಿಗೆ ಥಟ್ ಎಂದು ತಿರುಗಿ ಹಿಂದಕ್ಕೆ ಬಾಗದಿದ್ದರೆ ಕ್ಷಣದಲ್ಲಿ ಹೆಣವಾಗುತ್ತಿದ್ದ ಧರ್ಮ. ಕ್ಷಣಮಾತ್ರವೂ ಯೋಚಿಸದೇ “ಬದ್ಮಾಶ್” ಎಂದು ಬೈಯುತ್ತಾ ತಾನೂ ಎದುರಾಳಿಯ ಮೇಲೆ ಗುಂಡು ಹಾರಿಸಿ ನೆಲಕ್ಕುರುಳಿಸಿದ. ಮೀಸೆಯ ಮೇಲೆ ಕೈ ಇಟ್ಟು ತಿರುವುತ್ತಾ ” ಈ ಭಾರತ ದೇಶದ ಧರ್ಮನ ಮೇಲೆ ಶೂಟ್ ಮಾಡೋದು ಅಂದ್ರೇನು….ಈ ಜನ್ಮದಲ್ಲಿ ಆಗದ ಕೆಲಸಾನೋ….ಹಾಗೇ ಧರ್ಮನ ಕಣ್ಣಿಗೆ ಬಿದ್ದ ಮೇಲೆ ಸಾಯಲ್ಲಾ ಅಂದ್ರೇನು….ಗುರಿ ಇಟ್ಟ ಮೇಲೆ ಧರ್ಮ ಯಾವತ್ತೂ ಉಳಿಸಲ್ಲ”… ಎನ್ನುತ್ತಾ ಹತ್ತಿರ ಬಂದು ಉಗ್ರನನ್ನು ಕಾಲಲ್ಲಿ ತಿರುಗಿಸಿ ಜಾಡಿಸಿ ಒದೆಯುತ್ತಾನೆ. ಇವನು ಒದ್ದ ವೇಗಕ್ಕೆ ಉರುಳಿಕೊಂಡು ಯಾವ ಮೂಲೆಸೇರಿದನೋ……? ನಡುಗುವ ಹಿಮರಾಶಿಯಲ್ಲೂ ಅವನ ರಕ್ತ ಕುದಿಯುತ್ತಿತ್ತು. ಸ್ವಲ್ಪವೂ ವಿಚಲಿತವಾಗದ ದೇಹ ಮನಸ್ಸು. ಎರಡೂ ಖಡಕ್ ಆಗಿದ್ದವು. “ಸದಾ ಒಂದಿಲ್ಲೊಂದು ಕ್ಯಾತೆ ತೆಗೆದು, ಕಾಲು ಕೆರೆದುಕೊಂಡು ಬರುವ ಶತೃದೇಶದವರಿಗೆ ನಮ್ಮ ದೇಶ ಸದರವಾಗಿದೆ ಅಂತ ಅನಿಸುತ್ತದೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ನಾವು ಸುಮ್ಮನೆ ಶಾಂತಿಯಿಂದ ಇದ್ದೇವೆ ಎಂದರೆ - [ಬಸವರಾಜ ಶಿರಹಟ್ಟಿ ಅವರು ಬರೆದ ಕವಿತೆ "ಮಹಿಳಾ ಮಣಿ"](https://minchulli.com/kavite199/): ಹೆಣ್ಣು ಹೆಣ್ಣೆಂದರಷ್ಟೇ ಸಾಕೆ ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ ಮನೆಗೆ , ಮನಕ್ಕೆ ಬಂದೆ ಭಾಗ್ಯಳಾಗಿ ಭಾಗ್ಯಲಕ್ಷ್ಮಿಯಾದೇ ನವಮಾಸ ಹೊತ್ತೆ , ಹೆತ್ತು ಮರುಜನ್ಮ ಪಡೆದೆ ಜನನಿಯಾಗಿ ಸಾರ್ಥಕವಾದೆ ಕೈಹಿಡಿದು ನಡೆದೆ, ತಿದ್ದಿ ತಿಡಿದೆ ಊರುಗೋಲಾಗಿ ಆಸರೆಯಾದೆ ಜೊತೆಯಾಗಿ ಬೆಳೆದೆ , ಆಟ ಹುಡುಗಾಟವಾಡಿದೆ ಸೊಸೆಯಾಗಿ ಪರರಿಗೆ ನೀ ಜ್ಯೋತಿಯಾದೆ ದಾರಿ ತೋರಿದೆ, ಮಾರ್ಗದರ್ಶಿಯಾದೆ ಗುರಿಯಾಗಿ ನೀ ಗುರುವಾದೆ ಧೃತಿಯ ಗೆಡದೆ , ಹೆಜ್ಜೆಯ ಹಿಂದೆ ಸರಿಯದೆ ಮುನ್ನಡೆಯಾಗಿ ಮುಂದಾಳುವಾದೆ ತಾಳ್ಮೆಯ ತಾಳಿನೀ ಧರಿತ್ರಿ ದಾಹವನು ತೀರಿ ನೀ ಗಂಗೆ ಎಲ್ಲವನ್ನು ನುಂಗಿ ನೀ ಸಾಗರಿ ಹೆಣ್ಣುಹೆಣ್ಣೆಂದರಷ್ಟೆಸಾಕೆ ಆಕೆಯ ಹೊಗಳಲು ಇನ್ನೆಷ್ಟು ಪದಗಳು ಬೇಕೆ - [ಸಂತೋಷ್ ಟಿ ಅವರು ಬರೆದ ಕವಿತೆ "ಚಿರ -ಪರಿಚಿತರು"](https://minchulli.com/kavite198/): ಜಾಣ ಕಣ್ಣೀದ್ದು ಚಾಳೀಸುಧಾರಿಗಳು ಜಾಣ ಕಿವಿಯಿದ್ದು ಸೇಲ್ ಫೋನ್ ಕಿವುಡರು ವಾಕ್ ಸರಿಯಿದ್ದು ಮಾತಿನ ಚೌಕಸಿಗರು ನೋಡುತ್ತಿಲ್ಲ ನೊಂದು ಬೆಂದವರ ಬದುಕು ಕೇಳುತ್ತಿಲ್ಲ ಕರುಳ ವೀಣೆಯ ಕೂಗು ಮನುಕುಲದ ಮಾನವೀಯತೆ ಕೊಂದ ಇವರುˌ ಹ್ರದಯ ಶ್ರೀಮಂತರು ಸೌಜನ್ಯಕ್ಕೆ ಸೂತ್ರಧಾರಿಗಳು ಸಭ್ಯತೆಗೆ ಪಾರ್ಟಿ ವಿನೋದಗಳು ವ್ಯಕ್ತಿತ್ವವಿದ್ದರೂ ಬೇಕೆಂದೆ ಕಳೆದುಕೊಂಡ ಇವರುˌಯಾವಾಗಲೂ ಶಿಸ್ತಿಗೆ ಬದ್ಧರು ಅನ್ಯಾಯಕ್ಕೆ ಪ್ರಬುದ್ಧರು ತಂಪಾದ ಪರಿಸರವನ್ನು ಪಿತೂರಿಯಿಂದಲೆ ವಿಷಾನಿಲ ಮಾಡುವ ಸಾಹಸಿಗರು ಇವರುˌ ತುಂಬಾ ಜಾಣರು ಬುದ್ಧ – ಬಸವ – ಗಾಂಧಿಯರನ್ನು ಜಯಂತಿ ಭಜಂತ್ರಿಗಳಲ್ಲಿ ಪೂಜಿಸಿ ಜಂಗಮವಾಗಿ ಮೆರೆಯುವರು ಮಲಿನವಾದ ಮಡುವಿನಲ್ಲಿ ಮುಳುಗಿ ಭ್ರಷ್ಟವಾದ ದೋಷಗಳಲ್ಲಿ ತೇಲಿ ಇಲ್ಲಸಲ್ಲದ ಸುಖವ ಸಂಪಾದಿಸುವ ಚಪಲದಲಿ ರಣರಂಗ ಕಟ್ಟಿದವರು ಭರವಸೆಯ ಸ್ಯಾಂಪಲ್ಲಿಗೆ ಭಾಷಣ ಬಿಗಿದು ಮಿಕ್ಕಂತೆ ಮೌನವಾಗುವ ಇವರು ಎಲ್ಲರಿಗೂ ಚಿರ – ಪರಿಚಿತರು. - [ಗೃಹಿಣಿಗೆ ಆದಾಯವೆಂದರೆ ಬರೀ ಹಣವೊಂದೆಯೇ...?! - ಅಚಲ ಬಿ ಹೆನ್ಲಿ](https://minchulli.com/lekhana74/): ಹೌದು, ಇಂತಹದ್ದೊಂದು ಪ್ರಶ್ನೆ ಪ್ರತಿಯೊಂದು ಮನೆಯಲ್ಲಿಯೂ, ಪ್ರತಿಯೊಬ್ಬ ಗೃಹಿಣಿಯೂ ಕೇಳಿಕೊಂಡು ಅದಕ್ಕೆ ಸಮರ್ಪಕವಾದ ಉತ್ತರವನ್ನು ಕಂಡುಕೊಂಡರೆ, ಪ್ರಾಯಶಃ ಮದುವೆಯಾದ ನಂತರ ಅಥವಾ ಮಕ್ಕಳಾದ ನಂತರ ಮನೆಯ ಪರಿಸ್ಥಿತಿಗೋಸ್ಕರ ತಾವು ಮಾಡುತ್ತಿರುವ ಕೆಲಸವನ್ನು ಬಿಟ್ಟು ಅಥವಾ ಮೊದಲಿನಿಂದಲೂ ಹೌಸ್ ವೈಫ್ ಆಗಿಯೇ ಇರುವಂತಹ ಹೆಣ್ಣು ಮಕ್ಕಳನ್ನು ಅಕ್ಕ ಪಕ್ಕದವರು “ವರ್ಕಿಂಗ್ ಅಥವಾ ಹೌಸ್ ವೈಫ್..?” ಎಂಬ ಪ್ರಶ್ನೆ ಕೇಳಿದಾಗ, ಗೃಹಿಣಿಯರು ಸಂಕೋಚ ಪಟ್ಟುಕೊಳ್ಳುವುದಿಲ್ಲ ಅನಿಸುತ್ತೆ..! ಮೊದಲೆಲ್ಲ ಹೀಗಿರಲಿಲ್ಲ. ಹೆಣ್ಣೆಂದರೆ ನಾಲ್ಕು ಗೋಡೆಗಳ ಮಧ್ಯಕ್ಕಷ್ಟೇ ಸೀಮಿತಳಾಗಿದ್ದಳು. ತಾನು, ತನ್ನ ಸಂಸಾರ ಮತ್ತು ಅಡುಗೆ ಮನೆ ಇವಿಷ್ಟೇ ಅವಳ ಪ್ರಪಂಚವಾಗಿತ್ತು. ಆದರೆ ಬರುಬರುತ್ತಾ ಹೆಣ್ಣು ಸುಶಿಕ್ಷಿತಳಾದಳು. ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಇರುವಿಕೆಯನ್ನು ಯಶಸ್ವಿಯಾಗಿ ತೋರ್ಪಡಿಸಿದಳು. ಇದರಿಂದ ಹೆಣ್ಣೆಂದರೆ ಮನೆ ಕೆಲಸ, ಅಡುಗೆ, ಸಂಸಾರ ಇವಿಷ್ಟೇ ಅಲ್ಲ, ಅವಳು ಹೊರಗೆ ಹೋಗಿ ದುಡಿಯುವ ತಾಕತ್ತು ಇರುವವಳು ಎಂದು ಸಾಧಿಸಿ ತೋರಿಸಿದಳು. ಆದರೆ ಈ ಒಂದು ಅಭಿಪ್ರಾಯ ಒಂದು ವರ್ಗದ ಹೆಣ್ಣು ಮಕ್ಕಳಿಗೆ ವರದಾನವಾದರೆ, ಇನ್ನೊಂದು ವರ್ಗದ ಹೆಣ್ಣು ಮಕ್ಕಳಿಗೆ - [ರಾಜೇಂದ್ರ ಹೆಗಡೆ ಹಾವೇರಿ ಅವರು ಬರೆದ ಕವಿತೆ "ಯಾರಿಗೆ ಫಲ"](https://minchulli.com/kavite197/): ಬರೆದರೇನು ಫಲ ಬೆಳೆದರೇನು ಫಲ ಹಳ್ಳಿಗಳಿಂದ ತುಂಬಿ ತುಳುಕುವ ಭಾರತಾಂಬೆಯ ಮಡಿಲು ಅನ್ನದಾತ ಬೆಳೆಗೆ ಫಲ ಬಂದರು ಹಿಡಿ ಅನ್ನ ಮಾತ್ರ ಭಾವಚಿತ್ರಕ್ಕಾಗಿ ಕಾಯದ ಕಾಯಕ ಜೀವಿ ಛಾಯಾಗ್ರಾಹಕರಿಗೆ ಫಲ ಬರೆಯುವ ಲೇಖನಿಗೆ ಫಲ ಇವನ ಬಗ್ಗೆ ಕವನ ಲೇಖನ ಬರೆದರೆನು ಫಲ ಸದಾ ಕೆಂಪು, ಕಪ್ಪು ಕಲ್ಲು ಬಂಡೆ ಸುಣ್ಣಬುರಲಿ ಭೂಮಿಯಲಿ ಉತ್ತು ಬಿತ್ತಿ ಬೆಳೆದು ಫಲ ದಕ್ಕುವದ್ ಯಾರಿಗೆ ಹಂಚಿ ತಿನ್ನುವನಿಗೆ ಉಳಿವದು ಫಲ ಅದೇ ರಂಟೆ, ಕುಂಟೆ, ಬಾರಕೋಲು ಮುಂಜಾನೆ ರವಿ, ತಂಪು ಗಾಳಿ ಬೀಜ ಗೊಬ್ಬರ, ಜೋಡೆತ್ತು, ಮೂಗುದಾರ ಅದಿಲ್ಲದಿರೆ ಮಾತು ಕೆಳವು ಆಕಾಶ ಕೂಡಾ ಗೋಣಿ ಚೀಲ ತುಂಬುವದು ಒಂದು ಕೆಜಿ ಬೀಜದೀ ಒಕ್ಕಿ, ಹಸನಮಾಡಿ ಚಕ್ಕಡಿಯಲಿ ಹೊತ್ತು ಸಾಗಿದಾಗ ಸಿಗುವ ಫಲ ಕನಸು ಕಂಗಳ ತುಂಬಾ ನನಸು ಸಾಲದ ಶೂಲ ಮನೆಯಲ್ಲಿ ಮಕ್ಕಳ ಓದು ಮಗಳ ಮದುವೆ, ಕಾಯಿಲೆ ಅಪ್ಪ, ಅಮ್ಮ ಜೊತೆಗೆ ಬೇಕುಗಳು ಮೋಬೈಲ್ , ಟಿವಿ ಕಾರು, ಹೀರೋಹೋಂಡಾ, ಯಾರಿಗೆ ಫಲ? - [ಕನ್ನಡ ರಂಗಭೂಮಿಯನ್ನು ಬೆಳಗಿದ "ಗುಬ್ಬಿ ವೀರಣ್ಣ" - ಉದಂತ ಶಿವಕುಮಾರ್](https://minchulli.com/lekhana73/): ನಾಟಕರತ್ನ, ವಿನೋದ ರತ್ನಾಕರ, ವರ್ಷಟೈಲ್ ಕಾಮಿಡಿಯನ್, ಕರ್ನಾಟಕ ನಾಟಕ ಕಂಠೀರವ, ಕರ್ನಾಟಕಾಂಧ್ರ ನಾಟಕ ಸಾರ್ವಭೌಮ, ಮುಂತಾದವು ಗುಬ್ಬಿ ವೀರಣ್ಣನವರಿಗೆ ದೊರೆತಿದ್ದ ಬಿರುದುಗಳು; ರಾಜರು, ಜನತೆ ಅವರಿಗೆ ತೋರಿದ ಗೌರವದ ಸಂಕೇತಗಳು. ಆರು ವರ್ಷದ ಬಾಲಕನಾಗಿದ್ದಾಗಲೇ ನಾಟಕರಂಗವನ್ನು ಪ್ರವೇಶಿಸಿದ ವೀರಣ್ಣ ನಾಟಕದ ಕಂಪನಿಯಲ್ಲಿ ಸೇವಕರಾಗಿ, ಅಡುಗೆಯವರಾಗಿ, ಬಣ್ಣ ಹಾಕುವವರಾಗಿ, ನಟರಾಗಿ, ಪ್ರಚಾರಕರಾಗಿ, ಟಿಕೇಟು ಕೊಡುವವರಾಗಿ, ಖಜಾಂಚಿಯಾಗಿ, ವ್ಯವಸ್ಥಾಪಕರಾಗಿ, ಪಾಲುದಾರರಾಗಿ, ಕೊನೆಗೆ ಮಾಲೀಕರಾಗಿ ಮುಕ್ಕಾಲು ಶತಮಾನ ಕಾಲ ಕನ್ನಡ ನಾಟಕ ರಂಗದಲ್ಲಿ ಬೆಳೆದು ಬಾಳಿದವರು; ಕನ್ನಡ ರಂಗಭೂಮಿಯನ್ನು ಬೆಳಗಿದರು. ವೀರಣ್ಣನವರು ಹುಟ್ಟಿದ್ದು 1891 ಜನವರಿ 24 ರಲ್ಲಿ. ತಂದೆ ತುಮಕೂರು ಜಿಲ್ಲೆಯ ಗುಬ್ಬಿಯ ಹಂಪಣ್ಣನವರು. ವೀರಣ್ಣನವರ ವಿದ್ಯಾಭ್ಯಾಸ ಆರಂಭವಾದದ್ದು ರಂಗಭೂಮಿಯಲ್ಲೇ, ಚಂದಣ್ಣ ಮತ್ತು ಅಬ್ದುಲ್ ಅಜೀಜ್ ಸಾಹೇಬರು ಸ್ಥಾಪಿಸಿದ್ದ ಗುಬ್ಬಿ ಕಂಪನಿಯನ್ನು ಅವರು 1896ರಲ್ಲಿ ಸೇರಿದರು. ಸಿರಿಯಾಳಕುಮಾರ, ರೋಹಿತಾಶ್ವ ಮುಂತಾದ ಬಾಲ ಪಾತ್ರಗಳನ್ನು ಅಭಿನಯಿಸಿದರು. ಎಲ್ಲರ ಮೆಚ್ಚುಗೆ ಗಳಿಸಿದ ಕಾರಣ ಇವರಿಗೆ ತಿಂಗಳಿಗೆ ಐದು ರೂಪಾಯಿ ಸಂಬಳವೂ ಸಿಕ್ಕಿತು. ಸ್ವಲ್ಪ ಕಾಲಾ ನಂತರ ಸ್ತ್ರೀ ಪಾತ್ರಗಳನ್ನು, - [ಶಿಕ್ಷಣ ಮಾನವೀಯ ಮಾಲ್ಯಗಳನ್ನು ಬೆಳೆಸಲಿ - ಮೇಘ ರಾಮದಾಸ್ ಜಿ](https://minchulli.com/lekhana72/): ಶಿಕ್ಷಣ ನಮ್ಮಲ್ಲಿನ ಜ್ಞಾನವೇ ಹೊರತು ಹೊರಗಡೆಯಿಂದ ತುಂಬುವಂತಹ ವಸ್ತುವಲ್ಲ. ನಮ್ಮಲ್ಲಿನ ಜ್ಞಾನಕ್ಕೆ ಪುಷ್ಟಿ ತುಂಬುವ ಪ್ರಕ್ರಿಯೆಯೇ ಶಿಕ್ಷಣ. ಅಕ್ಷರಗಳನ್ನು ಕಲಿಸಿ, ಅವುಗಳನ್ನು ಪೋಣಿಸಿ, ಪದ ರಚಿಸಿ ನಂತರ ವಾಕ್ಯ ರಚನೆ ಮಾಡಿ ಕೊನೆಯಲ್ಲಿ ಒಂದು ಪರೀಕ್ಷೆ ಎದುರಿಸುವಂತೆ ಮಾಡಿದರೆ ಶಿಕ್ಷಣದ ಜವಾಬ್ದಾರಿ ಮುಗಿಯುವುದಿಲ್ಲ. ಬದಲಿಗೆ ಶಿಕ್ಷಣ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ಮೌಲ್ಯಗಳನ್ನು ನೀಡಬೇಕು. ಅದು ಮೂರು ಗಂಟೆಗಳ ತಾತ್ಕಾಲಿಕ ಪರೀಕ್ಷೆಯನ್ನು ಎದುರಿಸುವ ಧೈರ್ಯವನ್ನು ಅಷ್ಟೇ ಅಲ್ಲದೆ, ಜೀವನ ಎಂಬ ದೊಡ್ಡ ಸಾಗರವನ್ನು ಈಜುವ ಚಾಣಾಕ್ಷತೆ ಕಲಿಸಬೇಕು. ಬದುಕನ್ನು ಬಂದಂತೆ ಎದುರಿಸುವ ಗಟ್ಟಿತನ ಬೆಳೆಸಬೇಕು. ಜೀವಿಸಲು ಅಗತ್ಯವಾದ ನೈತಿಕ ಮೌಲ್ಯಗಳನ್ನು ತಿಳಿಸಬೇಕು. ಈ ಎಲ್ಲಾ ಕಾರ್ಯಗಳು ಶಿಕ್ಷಣದ ಮೂಲ ಅಡಿಪಾಯಗಳಾಗಬೇಕು. ಆದರೆ ಇಂದಿನ ಶಿಕ್ಷಣ ಕೇವಲ ಪುಸ್ತಕದಲ್ಲಿನ ಅಕ್ಷರಗಳನ್ನು ಕಣ್ಣಿಂದ ಆರಂಭಿಸಿ ತಲೆಗೆ ತುಂಬುವ ಕೆಲಸ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಪಠ್ಯಕ್ರಮದ ಚೌಕಟ್ಟಿನಲ್ಲಿರುವಷ್ಟು ಮಾತ್ರ ಮಕ್ಕಳ ತಲೆಗೆ ತುರುಕುವ ಕೆಲಸ ಆಗುತ್ತಿದೆ ಹೊರತು, ಮಕ್ಕಳಲ್ಲಿನ ಜ್ಞಾನ, ಕಲೆ, ಆಸಕ್ತಿ, ಬುದ್ಧಿವಂತಿಕೆಯನ್ನು ಗುರುತಿಸುವ ಸಣ್ಣ ಪ್ರಯತ್ನವೂ - [2024ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ](https://minchulli.com/sahityasuddi63/): ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-೨೦೨೪’ಕ್ಕಾಗಿ ಕನ್ನಡದ ಕವಿ/ಕವಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು, ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. ೧೦,೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ಕೋರಿದೆ. #ಹಸ್ತಪ್ರತಿ_ಕಳುಹಿಸಲು_ಕೊನೆಯ_ದಿನಾಂಕ: ಜೂನ್ 30 #ಹಸ್ತಪ್ರತಿಯನ್ನು_ಕಳುಹಿಸಬೇಕಾದ_ವಿಳಾಸ: ಸುನಂದಾ & ಪ್ರಕಾಶ ಕಡಮೆ ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-೨೦೨೪ ನಂ. 90, ‘ನಾಗಸುಧೆ ಜಗಲಿ’ 6/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ ಹುಬ್ಬಳ್ಳಿ- 580031 ದೂರವಾಣಿ; 9380613683, 9845779387 - [ನಾಳೆ ಉಡುಪಿಯಲ್ಲಿ ಡಾ. ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ](https://minchulli.com/sahityasuddi62/): ನಾಳೆ ಉಡುಪಿಯ ಯಕ್ಷಗಾನ ಕಲಾ ರಂಗ ಐವೈಸಿ ಹವಾ ನಿಯಂತ್ರಿತ ಸಭಾಂಗಣದಲ್ಲಿ ಸಂಜೆ ಸರಿಯಾಗಿ 5:30 ರಿಂದ ದಿ | ಮೇಟಿ ಮುದಿಯಪ್ಪ ನೆನಪಿನ ಉಡುಪಿ ಜಿಲ್ಲಾಮಟ್ಟದ ಯುವ ಕಥಾ ಸ್ಪರ್ಧ ವಿಜೇತರರಿಗೆ ಬಹುಮಾನ ವಿತರಣೆ ಹಾಗೂ ಡಾ. ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ. - [ಸಂವಿಧಾನದಲ್ಲೂ ಅಡಕವಾದ ಬುದ್ಧನ ಮೈತ್ರಿಭಾವ - ಮೇಘ ರಾಮದಾಸ್‌ ಜಿ](https://minchulli.com/lekhana71/): ’ಮನುಜ ಜಾತಿ ತಾನೊಂದೇ ವಲಂ’ ಎಂದು ಆದಿ ಕವಿ ಪಂಪ ಶತಮಾನಗಳ ಹಿಂದೆಯೇ ಹೇಳಿದ್ದಾರೆ. ನಾವು ಇಂದು ಮಾದರಿಗಳು ಎಂದು ಭಾವಿಸುವ ಎಲ್ಲಾ ಮಾಹಾನ್‌ ವ್ಯಕ್ತಿಗಳೂ ಹೇಳಿರುವುದು ಇದನ್ನೇ. ಶಾಂತಿಧೂತ ಎಂದೇ ಕರೆಸಿಕೊಳ್ಳುವ ಭಗವಾನ್‌ ಗೌತಮ ಬುದ್ಧ ಹೇಳಿರುವ ಮೈತ್ರಿಭಾವವೂ ಸಹಾ ಇದ್ದನ್ನೇ ಸಾರುತ್ತದೆ. ಎಲ್ಲಾ ಮನುಷ್ಯರು ಒಂದೇ, ಯಾವುದೇ ವಿಧದ ಅಸಮಾನತೆ ಸಲ್ಲದು, ಎಲ್ಲರೂ ಒಂದಾಗಿ ಪ್ರೀತಿಯಿಂದ ಇರಬೇಕು, ಆಗ ಮಾತ್ರ ಕನಸಿನ ಸಮಸಮಾಜವನ್ನು ನಿರ್ಮಿಸಲು ಸಾಧ್ಯವೆಂಬುದು ಅವರೆಲ್ಲರ ಭಾವನೆಯಾಗಿತ್ತು. ಇದನ್ನು ತಿಳಿಸುವ ಮಾರ್ಗವೇ ನಿಜವಾದ ಧಮ್ಮ ಎಂದು ಅವರೆಲ್ಲರು ನಂಬಿದ್ದರು. ಆದರೆ ಇಂದು ’ಧಮ್ಮ’ ಮನುಜರನ್ನು ಪ್ರೀತಿಯ ಭಾವದಲ್ಲಿ ಸೇರಿಸಿ ಒಂದಾಗಿ ಇರಿಸುವ ಬದಲಿಗೆ ಪ್ರತಿಷ್ಠೆಯಾಗಿ, ರಾಜಕೀಯ ದಾಳವಾಗಿ, ಉಳ್ಳವರ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂದರೆ ತಪ್ಪಾಗಲಾರದು. ಇಂಥ ಸಮಾಜ ವ್ಯವಸ್ಥೆಯನ್ನು ಸದ್ಧಮ್ಮ ಒಪ್ಪುವುದಿಲ್ಲ. ಮನುಷ್ಯರ ನಡುವೆ ಸಮಾನತೆಯನ್ನು ಹೆಚ್ಚಿಸುವುದೇ ಸದ್ಧಮ್ಮ ಎಂದು ಬುದ್ಧ ಹೇಳುತ್ತಾರೆ. ಇಲ್ಲವಾದಲ್ಲಿ ಆ ಧಮ್ಮ ತನ್ನ ನೆಲೆಯನ್ನು ಕಳೆದುಕೊಳ್ಳುತ್ತದೆ ಎಂದು ಹೇಳುತ್ತಾರೆ. ಅಂದು ಬುದ್ಧ ಹೇಳಿದ - [ಕಥೆಗಾರರಾದ ಅನುಪಮಾ ಪ್ರಸಾದ್ ಅವರ "ಚೋದ್ಯ" ಕಥಾ ಸಂಕಲನಕ್ಕೆ ೨೦೨೩ನೇ ಸಾಲಿನ ಸಂಗಂ ಸಾಹಿತ್ಯ ಪುರಸ್ಕಾರ.](https://minchulli.com/sahityasuddi61/): ಕೊನೆಯ ಹಂತದಲ್ಲಿ ಒಟ್ಟು ಐದು ಕಥಾಸಂಕಲನಗಳು ಸ್ಪರ್ಧೆಯಲ್ಲಿದ್ದವು. 1 ದಾರಿ ತಪ್ಪಿಸುವ ಗಿಡ: ಸ್ವಾಮಿ ಪೊನ್ನಾಚಿ 2 ಬುದ್ಧನ ಕಿವಿ: ದಯಾನಂದ 3 ಕಲ್ಲು ಹೂವಿನ ನೆರಳು: ಅನಿಲ್ ಗುನ್ನಾಪುರ 4 ಲೆಟ್ಸ್ ಬ್ರೇಕಪ್: ಸಂಪತ್ ಸಿರಿಮನೆ 5 ಚೋದ್ಯ: ಅನುಪಮಾ ಪ್ರಸಾದ್ - ['ನನ್ನ ಗೋಪಾಲ' ಮಕ್ಕಳ ನಾಟಕದ ಪ್ರದರ್ಶನ ದಿನಾಂಕ 12/05/2024 ಭಾನುವಾರ ಸಂಜೆ 6 ಗಂಟೆಗೆ](https://minchulli.com/sahityasuddi58/): ಸಿವಗಂಗ ರಂಗಮಂದಿರದಲ್ಲಿ ನಡೆದ ‘ಬಣ್ಣದ ಬೇಸಿಗೆ – ಮಕ್ಕಳ ರಂಗ ಶಿಬಿರ ‘ದ ಸಮಾರೋಪ ಹಾಗೂ ನಿರ್ಮಲ ನಾದನ್ ಅವರು ನಿರ್ದೇಶಿಸಿರುವ ಕುವೆಂಪು ಅವರ ‘ನನ್ನ ಗೋಪಾಲ’ ಮಕ್ಕಳ ನಾಟಕದ ಪ್ರದರ್ಶನ ದಿ.12/05/2024 ಭಾನುವಾರ ಸಂಜೆ 6ಕ್ಕೆ ಇದೆ. ಅತಿಥಿಗಳಾಗಿ ಡಾ.ಬೈರಮಂಗಲ ರಾಮೇಗೌಡ ..ವಿಜಯ ಕುಮಾರ್ ..ರಮೇಶ್ ಎನ್ ..ಪ್ರಶಾಂತ ಸಿದ್ಧಿಯವರು ಆಗಮಿಸುತ್ತಿದ್ದಾರೆ. ## Pages - [EverCompare](https://minchulli.com/evercompare/) - [ThemeNcode PDF Viewer SC [Do not Delete]](https://minchulli.com/themencode-pdf-viewer-sc/): This page is used for Viewing PDF. - [ThemeNcode PDF Viewer [Do not Delete]](https://minchulli.com/themencode-pdf-viewer/): This page is used for Viewing PDF. - [Shipping & Delivery Policy](https://minchulli.com/shipping-delivery-policy/): Last updated on Jun 9th 2023 For International buyers, orders are shipped and delivered through registered international courier companies and/or International speed post only. For domestic buyers, orders are shipped through registered domestic courier companies and /or speed post only. Orders are shipped within 6-8 days or as per the delivery date agreed at the time of order confirmation and delivering of the shipment subject to Courier Company / post office norms. Minchulli Sahitya Patrike is not liable for any delay in delivery by the courier company / postal authorities and only guarantees to hand over the consignment to the courier - [Cancellation & Refund Policy](https://minchulli.com/cancellation-refund-policy/): Cancellation & Refund Policy Last updated on Jun 9th 2023 Minchulli Sahitya Patrike believes in helping its customers as far as possible, and has therefore a liberal cancellation policy. Under this policy: Cancellations will be considered only if the request is made immediately after placing the order. However, the cancellation request may not be entertained if the orders have been communicated to the vendors/merchants and they have initiated the process of shipping them. Minchulli Sahitya Patrike does not accept cancellation requests for perishable items like flowers, eatables etc. However, refund/replacement can be made if the customer establishes that the quality of - [My Account](https://minchulli.com/my-account/) - [ಪುಸ್ತಕದಂಗಡಿ](https://minchulli.com/books/) - [Order Tracking](https://minchulli.com/order-tracking/) - [Checkout](https://minchulli.com/checkout/) - [Cart](https://minchulli.com/cart/) - [Terms and Conditions](https://minchulli.com/terms-and-conditions/): Terms and Conditions Welcome to Minchulli Sahitya Patrike! These terms and conditions outline the rules and regulations for the use of Minchulli Sahitya Patrike’s Website, located at https://minchulli.com. By accessing this website we assume you accept these terms and conditions. Do not continue to use Minchulli Sahitya Patrike if you do not agree to take all of the terms and conditions stated on this page. The following terminology applies to these Terms and Conditions, Privacy Statement and Disclaimer Notice and all Agreements: “Client”, “You” and “Your” refers to you, the person log on this website and compliant to the Company’s terms - [Privacy Policy](https://minchulli.com/privacy-policy/): Privacy Policy Last updated: April 07, 2025 This Privacy Policy describes Our policies and procedures on the collection, use and disclosure of Your information when You use the Service and tells You about Your privacy rights and how the law protects You. We use Your Personal data to provide and improve the Service. By using the Service, You agree to the collection and use of information in accordance with this Privacy Policy. Interpretation and Definitions Interpretation The words of which the initial letter is capitalized have meanings defined under the following conditions. The following definitions shall have the same meaning regardless - [Contact Us](https://minchulli.com/contact/): E-mail: editor@minchulli.com Address: 6th Cross, Indira Badavane, Gurupura, Shivamogga – 577203 Mobile: +91-9591367320 - [Blog](https://minchulli.com/blog/) - [Home](https://minchulli.com/): Whatsapp ಸಾಹಿತ್ಯಾಸಕ್ತರು ನಮ್ಮ ವಾಟ್ಸಪ್ಪ್ ಗುಂಪನ್ನು ಸೇರಲು ಇಲ್ಲಿ ಒತ್ತಿ. ## Products - [ಸಮುದ್ರ ಉಗಿದ ಉಪ್ಪು](https://minchulli.com/product/%e0%b2%b8%e0%b2%ae%e0%b3%81%e0%b2%a6%e0%b3%8d%e0%b2%b0-%e0%b2%89%e0%b2%97%e0%b2%bf%e0%b2%a6-%e0%b2%89%e0%b2%aa%e0%b3%8d%e0%b2%aa%e0%b3%81/): ಲೇಖಕರು: ಡಾ.ಸೂರ್ಯಕೀರ್ತಿ ಪ್ರಕಾರ: ಕವಿತೆಗಳು ಪ್ರಕಾಶನ: ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಬೆಲೆ: ₹150 ಸಪ್ನ ಮಲ್ಲಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ(5%offer) - [ನೀರ ಮೇಲೆ ಬೆಂಕಿ ಹೆಜ್ಜೆ](https://minchulli.com/product/%e0%b2%a8%e0%b3%80%e0%b2%b0-%e0%b2%ae%e0%b3%87%e0%b2%b2%e0%b3%86-%e0%b2%ac%e0%b3%86%e0%b2%82%e0%b2%95%e0%b2%bf-%e0%b2%b9%e0%b3%86%e0%b2%9c%e0%b3%8d%e0%b2%9c%e0%b3%86/): ಲೇಖಕಿ : ವೀಕ್ಷಾ ಹುಲ್ಲುಗಾರು  ಪ್ರಕಾರ: ಕವಿತೆಗಳು ಪ್ರಕಾಶನ: ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಬೆಲೆ: ₹150 ಸಪ್ನ ಮಳಿಗೆಯಲ್ಲಿ  ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ   (5%offer ) - [ಹೇಳಲಾರೆ ಶುಭಾಶಯ](https://minchulli.com/product/%e0%b2%b9%e0%b3%87%e0%b2%b3%e0%b2%b2%e0%b2%be%e0%b2%b0%e0%b3%86-%e0%b2%b6%e0%b3%81%e0%b2%ad%e0%b2%be%e0%b2%b6%e0%b2%af/): ಲೇಖಕರು: ಎಸ್. ಜಿ. ಸಿದ್ಧರಾಮಯ್ಯ ಪ್ರಕಾರ: ಕವಿತೆಗಳು ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಬೆಲೆ: ₹150 ಸಪ್ನ ಮಳಿಗೆಯಲ್ಲಿ  ಪುಸ್ತಕ ಕರೀದಿಸಲು ಇಲ್ಲಿ  ಕ್ಲಿಕ್ ಮಾಡಿ   - [ಮೀನು ಕುಡಿದ ಕಡಲು](https://minchulli.com/product/%e0%b2%ae%e0%b3%80%e0%b2%a8%e0%b3%81-%e0%b2%95%e0%b3%81%e0%b2%a1%e0%b2%bf%e0%b2%a6-%e0%b2%95%e0%b2%a1%e0%b2%b2%e0%b3%81/): ಲೇಖಕರು: ಡಾ.ಸೂರ್ಯಕೀರ್ತಿ ಪ್ರಕಾರ: ಕವಿತೆಗಳು ಪ್ರಕಾಶನ: ಮಿಂಚುಳ್ಳಿ  ಪ್ರಕಾಶನ ಬೆಲೆ: ₹150 - [ನೀಲಿ ಕಾಗದದ ಮೇಲೆ ಗುಲಾಬಿ ಕನಸು](https://minchulli.com/product/%e0%b2%a8%e0%b3%80%e0%b2%b2%e0%b2%bf-%e0%b2%95%e0%b2%be%e0%b2%97%e0%b2%a6%e0%b2%a6-%e0%b2%ae%e0%b3%87%e0%b2%b2%e0%b3%86-%e0%b2%97%e0%b3%81%e0%b2%b2%e0%b2%be%e0%b2%ac%e0%b2%bf-%e0%b2%95%e0%b2%a8/): ಅನುವಾದ: ಕಮಲಾಕರ ಕಡವೆ  ಪ್ರಕಾರ: ಕವನ ಸಂಕಲನ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಬೆಲೆ: ₹180/- - [ಮೋಡ ಕಟ್ಟುವ ಕನಸು](https://minchulli.com/product/%e0%b2%ae%e0%b3%8b%e0%b2%a1-%e0%b2%95%e0%b2%9f%e0%b3%8d%e0%b2%9f%e0%b3%81%e0%b2%b5-%e0%b2%95%e0%b2%a8%e0%b2%b8%e0%b3%81/): ಲೇಖಕಿ:  ಹೆಚ್ .ಆರ್. ಸುಜಾತ  ಪ್ರಕಾರ: ಕವನ ಸಂಕಲನ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಬೆಲೆ: ₹150/- - [ಕ್ಷಮಿಸು ಗೊಮ್ಮಟನಂತೆ](https://minchulli.com/product/%e0%b2%95%e0%b3%8d%e0%b2%b7%e0%b2%ae%e0%b2%bf%e0%b2%b8%e0%b3%81-%e0%b2%97%e0%b3%8a%e0%b2%ae%e0%b3%8d%e0%b2%ae%e0%b2%9f%e0%b2%a8%e0%b2%82%e0%b2%a4%e0%b3%86/): ಲೇಖಕಿ : ಡಾ. ಪದ್ಮಿನಿ ನಾಗರಾಜು ಪ್ರಕಾರ : ಕವನ ಸಂಕಲನ ಪ್ರಕಾಶನ : ಮಿಂಚುಳ್ಳಿ ಪ್ರಕಾಶನ ಬೆಲೆ : ₹130/- - [ಚೌಕಟ್ಟಿ ನಾಚೆಯವರು](https://minchulli.com/product/%e0%b2%9a%e0%b3%8c%e0%b2%95%e0%b2%9f%e0%b3%8d%e0%b2%9f%e0%b2%bf-%e0%b2%a8%e0%b2%be%e0%b2%9a%e0%b3%86%e0%b2%af%e0%b2%b5%e0%b2%b0%e0%b3%81/): ಚೌಕಟ್ಟಿ ನಾಚೆಯವರು ಲೇಖಕಿ: ಗೀತಾ ವಸಂತ್ ಪ್ರಕಾರ: ಕಥೆಗಳು ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಬೆಲೆ: ₹150/-   - [ಒಂದು ಹೆಣ್ಣು ಒಂಟೆಯ ಹತ್ಯೆ](https://minchulli.com/product/%e0%b2%92%e0%b2%82%e0%b2%a6%e0%b3%81-%e0%b2%b9%e0%b3%86%e0%b2%a3%e0%b3%8d%e0%b2%a3%e0%b3%81-%e0%b2%92%e0%b2%82%e0%b2%9f%e0%b3%86%e0%b2%af-%e0%b2%b9%e0%b2%a4%e0%b3%8d%e0%b2%af%e0%b3%86/): ಮಿಂಚುಳ್ಳಿ ಮಾತು ಕನ್ನಡದ ಮಹತ್ವದ ಕವಿಯಾಗಿರುವ ಪ್ರತಿಭಾ ನಂದಕುಮಾರ್ ಅವರ ಅನುವಾದ ಸಂಕಲನವಾದ ‘ಒಂದು ಹೆಣ್ಣು ಒಂಟೆಯ ಹತ್ಯೆ ‘ ಸಂಕಲನವು ಕಾಲ, ಸಮಾಜ ಮತ್ತು ಮಾನವೀಯ ಅನುಭವಗಳ ಸೂಕ್ಷ್ಮ ಅಲೆಯನ್ನೇ ಓದುಗರ ಮುಂದೆ ತೆರೆದಿಡುತ್ತದೆ. ವಿಭಿನ್ನ ದೇಶ–ಭಾಷೆ ಕವಿಗಳ ಧ್ವನಿಗಳು ಇಲ್ಲಿ ಒಂದೇ ವೇದಿಕೆಯಲ್ಲಿ ಸಂಗಮಗೊಂಡು, ಬದುಕಿನ ನೋವು–ನಲಿವು, ಅಸಮಾನತೆ, ಸ್ತ್ರೀ-ತತ್ವ, ಹಿಂಸೆ, ಪ್ರೀತಿ ಮತ್ತು ಪ್ರತಿರೋಧಗಳ ಕುರಿತು ಆಳವಾದ ಸಂವಾದವನ್ನು ನಿರ್ಮಿಸುತ್ತವೆ. ಪ್ರತಿ ಕವಿತೆಯೂ ತನ್ನದೇ ಆದ ಭಾಷಿಕಸೌಂದರ್ಯ ಮತ್ತು ವಿಚಾರದ ತೀವ್ರತೆಯೊಂದಿಗೆ ಓದುಗರ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತದೆ. ಮೂಲ ಕವಿತೆಗಳ ಆತ್ಮವನ್ನು ಕಾಪಾಡಿಕೊಂಡು ಕನ್ನಡಕ್ಕೆ ತಂದಿರುವ ಅನುವಾದಗಳು, ಭಾಷಾಂತರವೆಂಬುದು ಕೇವಲ ಪದಗಳ ವರ್ಗಾವಣೆ ಅಲ್ಲ; ಅದು ಸಂಸ್ಕೃತಿಗಳ ಮಧ್ಯೆ ಸೇತುವೆಯನ್ನು ನಿರ್ಮಿಸುವ ಸೃಜನಾತ್ಮಕ ಕ್ರಿಯೆಯೆಂಬುದನ್ನು ಸಾಬೀತುಪಡಿಸುತ್ತವೆ. ಈ ಸಂಕಲನದ ಕವಿತೆಗಳು ಸುಲಭ ಓದಿಗೆ ಸಿಗುವುದಿಲ್ಲ, ಚಿಂತನೆಗೆ, ಪ್ರಶ್ನೆಗೆ ಮತ್ತು ಸಂವೇದನೆಗೆ ಒಳಗೊಳ್ಳುತ್ತವೆ. ಸಮಕಾಲೀನ ಜಗತ್ತಿನ ಸಂಕೀರ್ಣತೆಯನ್ನು ಕವಿತೆಯ ಮೂಲಕ ಅರಿಯಲು ಆಸಕ್ತರಾದ ಎಲ್ಲರಿಗೂ ಇದು ಅರ್ಥಪೂರ್ಣವಾದ ಕವಿತಾ ಸಂಕಲನವಾಗಲಿದೆ ಎಂಬ - [ಮೂವತ್ತು ಕ್ರಾಂತಿಕಾರಿ ವಚನಗಳು](https://minchulli.com/product/muvattukrantikarivachanagalu/): ವಿಭಾಗ: ವಚನ ಸಾಹಿತ್ಯ ಲೇಖಕ: ಡಾ. ಬಸವರಾಜ ಸಾದರ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಸಪ್ನ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (10% OFF) - [ಇನ್ನು ಕೊಟ್ಟೆನಾದೊಡೆ](https://minchulli.com/product/innukottenadode/): ವಿಭಾಗ: ಕವಿತೆಗಳು ಲೇಖಕ: ಚೆನ್ನಪ್ಪ ಅಂಗಡಿ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಸಪ್ನ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (10% OFF) - [ಕರ್ವಾಲೊ, ಚಿದಂಬರ ರಹಸ್ಯ ಮತ್ತು ಜುಗಾರಿ ಕ್ರಾಸ್ 3 ಪುಸ್ತಕಗಳು](https://minchulli.com/product/tejasvi3books/): ವಿಭಾಗ: ಕಾದಂಬರಿ ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ - [ಚಿದಂಬರ ರಹಸ್ಯ ಮತ್ತು ಜುಗಾರಿ ಕ್ರಾಸ್ 2 ಪುಸ್ತಕಗಳು](https://minchulli.com/product/chidambararahasyajugaricross/): ವಿಭಾಗ: ಕಾದಂಬರಿ ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (9% OFF) - [ವಿಸ್ಮಯ 3 ಪುಸ್ತಕಗಳು](https://minchulli.com/product/vismaya3pustakagalu/): ವಿಭಾಗ: ಪರಿಸರ ಕಥನಗಳು ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ - [ಕಾಡಿನ ಕಥೆಗಳು (4 ಪುಸ್ತಕಗಳು)](https://minchulli.com/product/kadinakathegalu/): ವಿಭಾಗ: ಕಥೆಗಳು ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ - [ರುದ್ರಪ್ರಯಾಗದ ಭಯಾನಕ ನರಭಕ್ಷಕ](https://minchulli.com/product/rudraprayagadabhayanakanarabhakshaka/): ವಿಭಾಗ: ಜಿಮ್ ಕಾರ್ಬೆಟ್ ಕೃತಿಯ ಸಂಗ್ರಹಾನುವಾದ ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ - [ಕಾಡು ಮತ್ತು ಕ್ರೌರ್ಯ](https://minchulli.com/product/kadumattukrourya/): ವಿಭಾಗ: ಕಾದಂಬರಿ ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ - [ಅಣ್ಣನ ನೆನಪು](https://minchulli.com/product/annananenapu/): ವಿಭಾಗ: ಕುವೆಂಪು ಆತ್ಮಚರಿತ್ರೆ ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ - [ಪರಿಸರದ ಕಥೆ](https://minchulli.com/product/parisaradakathe/): ವಿಭಾಗ: ಕಥೆಗಳು ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ - [ಪಾಕಕ್ರಾಂತಿ](https://minchulli.com/product/pakakranti/): ವಿಭಾಗ: ಕಥೆಗಳು ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ - [ಕೆ.ಪಿ. ಪೂರ್ಣಚಂದ್ರ ತೇಜಸ್ವಿ 16 ಪುಸ್ತಕಗಳು](https://minchulli.com/product/tejasvi16books/): ವಿಭಾಗ: ಕಾದಂಬರಿ/ಕಥೆಗಳು ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ - [ಕಿರಗೂರಿನ ಗಯ್ಯಾಳಿಗಳು](https://minchulli.com/product/kiragurinagayyaligalu/): ವಿಭಾಗ: ಕಥೆಗಳು ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (16% OFF) - [ಅಬಚೂರಿನ ಪೋಸ್ಟಾಫೀಸು](https://minchulli.com/product/abachurinapostoffice/): ವಿಭಾಗ: ಕಥೆಗಳು ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ - [ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು](https://minchulli.com/product/tejasvisamagrajagattu/): (Set of 14 Volumes) With ಮತ್ತೆ ಮತ್ತೆ ತೇಜಶ್ವರಿ Documentary DVD ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (1% OFF)   - [ಚಿದಂಬರ ರಹಸ್ಯ](https://minchulli.com/product/chidambararahasya/): ವಿಭಾಗ: ಕಾದಂಬರಿ ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (2% OFF) - [ಕರ್ವಾಲೊ](https://minchulli.com/product/karvalo/): ವಿಭಾಗ: ಕಾದಂಬರಿ ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ - [ಜುಗಾರಿ ಕ್ರಾಸ್](https://minchulli.com/product/jugaricross/): ವಿಭಾಗ: ಕಾದಂಬರಿ ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಮೆಜಾನ್ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (2% OFF)   - [ಮಳೆ ಪ್ರಬಂಧಗಳು](https://minchulli.com/product/maleprabandhagalu/): ವಿಭಾಗ: ಪ್ರಬಂಧಗಳು ಲೇಖಕ: ಸೂರ್ಯಕೀರ್ತಿ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಸಪ್ನ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (10% OFF) - [ಬಿದಿರ ತಡಿಕೆ](https://minchulli.com/product/bidirinatadike/): ವಿಭಾಗ: ಲಲಿತ ಪ್ರಬಂಧಗಳು ಲೇಖಕ: ಡಾ.ಎಚ್.ಎಸ್. ಸತ್ಯನಾರಾಯಣ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಸಪ್ನ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (10%) - [ಬೆನ್ನೇರಿದ ಬಯಲು](https://minchulli.com/product/benneridabayalu/): ವಿಭಾಗ: ಕಥೆಗಳು ಲೇಖಕ: ಶಂಕರ್ ಸಿಹಿಮೊಗ್ಗೆ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಸಪ್ನ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (10% OFF) - [ಇರುವೆ ಮತ್ತು ಗೋಡೆ](https://minchulli.com/product/iruvemattugode/): ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಕೊಡುವ, ೨೦೨೩ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದ ಕೃತಿ. ಕವಿ: ಶಂಕರ್ ಸಿಹಿಮೊಗ್ಗೆ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಸಪ್ನ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (10% OFF)   - [ಕಿರಂ ಹೊಸಕವಿತೆ - 2023](https://minchulli.com/product/kiramhosakavite2023/): ಸಂಪಾದಕರು: ಶಂಕರ್ ಸಿಹಿಮೊಗ್ಗೆ ಸೂರ್ಯಕೀರ್ತಿ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳ ಕವಿಗಳ ಕವಿತೆಗಳು, ಆಯಾ ಗೋಷ್ಠಿಯ ಅಧ್ಯಕ್ಷರ ವಿಮರ್ಶೆಯ ಜೊತೆಗೆ… ಸಪ್ನ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (10% OFF)   - [ಪ್ರೇಮ ದೈವಿಕ ಪರಿಮಳ](https://minchulli.com/product/premadaivikaparimala/): ಲೇಖಕ: ಸೂರ್ಯಕೀರ್ತಿ ಮುಂಗಡವಾಗಿ ಖರೀದಿಸಿ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಸಪ್ನ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (10% OFF) - [Love is a Divine Fragrance](https://minchulli.com/product/love-is-a-divine-fragrance/): An Anthology of World Poetry Publication: Minchulli Publications Editors: Suryakeerthy & Shankar Sihimogge Poems by contemporary English poets from 25 countries. India, Kenya, Vietnam, France, Malta, Italy, Nigeria, Philippines, Poland, Ghana, Madagascar, Bhutan, Croatia, Germany, Cameroon, Turkey, Puerto Rico, Morocco, Slovakia, Serbia, Mauritius, Israel, Portugal, Taiwan, United States of America (USA). Click here to buy a book at Sapna’s store - [ಚೈತ್ರಾಕ್ಷಿ](https://minchulli.com/product/chaitrakshi/): ಲೇಖಕ: ಸೂರ್ಯಕೀರ್ತಿ ಪ್ರಕಾಶನ: ಮಿಂಚುಳ್ಳಿ ಪ್ರಕಾಶನ ಪುಟಗಳು: 100 - [ಮೀನು ಕುಡಿದ ಕಡಲು](https://minchulli.com/product/meenukudidakadalu/): ಲೇಖಕ: ಸೂರ್ಯಕೀರ್ತಿ ಪ್ರಕಾಶನ: ಅಲ್ಲಮ ಪ್ರಕಾಶನ ಸಪ್ನ ಮಳಿಗೆಯಲ್ಲಿ ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (10% OFF) [comment]: # (Generated by Hostinger Tools Plugin)