ಬಡವರ ಮಕ್ಕಳು ಶಿಕ್ಷಣ ಕಲಿಯುವ ಸರ್ಕಾರಿ ಶಾಲೆಗಳ ಸ್ಥಿತಿ ರಾಜ್ಯದಲ್ಲಿ ಅಯೋಮಯವಾಗಿದೆ. ಏಕೆಂದರೆ ಸರ್ಕಾರಿ ಶಾಲೆಗಳು ಎಂದಾಗಲೆಲ್ಲಾ ಜನರು ಭಾವಿಸುವುದು ಮುರಿದ ಛಾವಣಿ, ಕಳಪೆ ಮೂಲಸೌಕರ್ಯ, ಅಸ್ಥಿರ ಶಾಲಾ ವ್ಯವಸ್ಥೆ ಮತ್ತು ಶಿಕ್ಷಕರಿಲ್ಲ ಎಂದು ಹೇಳಲಾಗುತ್ತದೆ.
ಅದರಲ್ಲಿ ನಮ್ಮೂರು ಶಾಲೆಯು ಒಂದು. ನಮ್ಮ ಊರಿನ ಶಾಲೆಯನ್ನು ಮಾಲಿನ್ಯ, ಶಬ್ದ, ಕೊಳಕು ಇರುವ ರೋಡ ಪಕ್ಕದ ಸ್ಥಳದಲ್ಲಿ ನಿರ್ಮಿಸಲಾಗಿದೆ. ಇದರಿಂದ ಮಕ್ಕಳು ಶಾಂತಿಯುತ ಶ್ರದ್ಧೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಶಾಲೆಯಲ್ಲಿ ಮೊದಲು ಅನೇಕ ಮರಗಳಿದ್ದವು. ಅದರ ನೆರಳಿನಲ್ಲಿ ಮಕ್ಕಳು ಊಟದ ಸಮಯದಲ್ಲಿ ಒಟ್ಟಿಗೆ ಕುಳಿತು ಊಟವನ್ನು ಮಾಡುತ್ತಿದರು. ಆದರೆ ಈಗ ರೋಡುಗಳನ್ನು ದೊಡ್ಡದಾಗಿ ಮಾಡಿ ಇದ್ದಿದ್ದ ಮರಗಳನ್ನೆಲ್ಲ ಕಡಿದು ಹಾಕಿದ್ದಾರೆ. ಮಕ್ಕಳು ಹೊರಗಡೆ ಬಂದು ಆಟ ಆಡಲು, ಅಥವಾ ಊಟ ಮಾಡಲು ಕುಳಿತುಕೊಳ್ಳಲು, ನೆರಳೆ ಇಲ್ಲದಂತಾಗಿದೆ. ಕೇವಲ ಶಿಥಿಲಗೊಂಡ ಕಟ್ಟಡ ಮಾತ್ರವಲ್ಲ ಸಾವಿರಾರು ಶಾಲೆಗಳಲ್ಲಿ ಮಕ್ಕಳಿಗೆ ಆಟದ ಮೈದಾನವೂ ಇಲ್ಲ. ಆಟದ ಜೊತೆಗೆ ಕಲಿಕೆಯು ಇದ್ದರೆ ಮಕ್ಕಳು ತುಂಬಾ ಖುಷಿಯಿಂದ ಪಾಠವನ್ನು ಕೇಳುತ್ತಾರೆ. ಮತ್ತೆ ನಮ್ಮ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಓದಲು ಒಂದು ಗ್ರಂಥಾಲಯವು ಸಹ ನಿರ್ಮಿಸಿಲ್ಲ, ಓದುವುದಕ್ಕೆ ಸರಿಯಾದ ಕೊಠಡಿಗಳು ಸಹ ಇಲ್ಲ. ಇದು ಕೇವಲ ಒಂದು ಶಾಲೆಯ ಸ್ಥಿತಿಗತಿ ಮಾತ್ರವಲ್ಲ. ರಾಜ್ಯದಲ್ಲಿ ಬಹುತೇಕ ಸರ್ಕಾರಿ ಶಾಲೆಗಳ ಸ್ಥಿತಿಯೂ ಹೀಗೇ ಇದೆ. ರಾಜ್ಯದಲ್ಲಿ ಒಟ್ಟು 20,440 ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ 21,799 ಹಿರಿಯ ಪ್ರಾಥಮಿಕ ಶಾಲೆಗಳು ಇದ್ದು, ಈ ಪೈಕಿ 29,904 ಕಟ್ಟಡಗಳು ಶಿಥಿಲಗೊಂಡಿವೆ.
ಯಾವುದೇ ಮಗುವಿನ ಭವಿಷ್ಯವನ್ನು ಸರಿಯಾದ ಶಿಕ್ಷಣದಿಂದ ನಿರ್ಧರಿಸಲಾಗುತ್ತದೆ ಮತ್ತು ಸರಿಯಾದ ಶಿಕ್ಷಣವು ಶಾಲೆಯಿಂದಲೇ ಪ್ರಾರಂಭವಾಗಬೇಕಾಗುತ್ತದೆ. ಮನುಷ್ಯನು ತನ್ನ ಜೀವನದಲ್ಲಿ ಏನನ್ನಾದರೂ ಕಲಿಯುತ್ತಿರುತ್ತಾನೆ. ಯಾವ ಮನುಷ್ಯನೂ ಹುಟ್ಟಿನಿಂದ ಜ್ಞಾನವನ್ನು ಹೊಂದಿರುವುದಿಲ್ಲ, ಆದರೆ ಈ ಭೂಮಿಗೆ ಬಂದ ನಂತರವೇ, ಅವನು ಯಾವುದಾದರೂ ವಿಷಯದ ಬಗ್ಗೆ ಜ್ಞಾನವನ್ನು ಪಡೆಯುತ್ತಾನೆ. ಮಾನವ ಜೀವನವನ್ನು ಸುಸಂಸ್ಕೃತವಾಗಿಸುವಲ್ಲಿ ದೊಡ್ಡ ಕೊಡುಗೆ ಶಾಲೆಯಾಗಿದೆ. ಶಾಲೆ ಎಂದರೆ ಜ್ಞಾನ ನೆಲೆಸಿರುವ ಸ್ಥಳ. ವಿದ್ಯಾಭ್ಯಾಸ ಪಡೆಯಲು ನಾವು ಶಾಲೆಗೆ ಹೋಗಬೇಕು. ಏಕೆಂದರೆ ಶಾಲೆಯಲ್ಲಿ ನಾವು ಪ್ರತಿದಿನ ಹೊಸದನ್ನು ಕಲಿಯುವ ಸ್ಥಳವಾಗಿದೆ. ಆದರೆ ಸರ್ಕಾರಿ ಶಾಲೆಯಲ್ಲಿ ಹೇಳಲಾರದಸ್ತು ಸಮಸ್ಯಗಳು ಕಂಡುಬರುತ್ತವೆ.
ಕೆಲವು ಶಾಲೆಗಳಲ್ಲಿ ಸರಿಯಾದ ಸೌಚಾಲಯಗಳ ವ್ಯವಸ್ಥೆ ಇಲ್ಲ, ಮತ್ತೆ ಕುಡಿಯಲು ನೀರಿನ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ಅದರ ಬಗ್ಗೆ ಜನಸಾಮಾನ್ಯರು ಏನಾದರೂ ಕೇಳಿದರೆ ಇದು ಸರ್ಕಾರಿ ಶಾಲೆ ಮಾ ಇಷ್ಟಿರೋದೇ ಹೆಚ್ಚು ಇನ್ನೇನು ಮಾಡಬೇಕು ನಿಮ್ಮ ಮಕ್ಕಳಿಗೆ ಅಂತ ಊರಿನ ಅಧ್ಯಕ್ಷರು ಹೇಳ್ತಾರೆ. ಮತ್ತೆ ಮಕ್ಕಳಿಗೆ ಒಂದೇ ವಿಷಯಗಳ ಬಗ್ಗೆ ಕಲಸಿಕೊಡುತ್ತಾರೆ. ಸ್ಕೂಲ್ ಬಿಟ್ಟು ಮಕ್ಕಳು ಮನೆಗೆ ಬಂದ ನಂತರ ನಾವೇನಾದ್ರೂ ನಿಮಗೆ ಹೋಂವರ್ಕ್ ಕೊಟ್ಟಿಲ್ಲ ನಿಮ್ಮ ಟೀಚರ್ ಅಂತ ಕೇಳಿದ್ರೆ ಇವತ್ತು ನಮ್ ಟೀಚರ್ ಶಾಲೆಗೆ ಬಂದಿಲ್ಲ ಅಂತ ಹೇಳುತ್ತಾರೆ.
ಶಾಲೆಯ ಟೀಚರ್ ಗಳು ಸರಿಯಾಗಿ ಶಾಲೆಗೆ ಬಂದು ಪಾಠ ಕಲಿಸದಿದ್ದರೆ ಇನ್ನು ಮಕ್ಕಳು ಏನು ಕಲಿಯುತ್ತಾರೆ? ಮೊದಲು ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ಶಿಕ್ಷಕರನ್ನು ನೇಮಕ ಮಾಡಬೇಕು. ಒಂದೊಂದು ಊರಿನ ಶಾಲೆಯಲ್ಲಿ ಕಡಿಮೆ ಜನ ಶಿಕ್ಷಕರಿದ್ದು ಅವರು ಮಕ್ಕಳಿಗೆ ಏನು ಕಲಿಸುತ್ತಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ!?
ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂಬ ಘೋಷಾವಾಕ್ಯಗಳು ಕೇಳಿಬರುತ್ತಿವೆ. ಆದರೆ ವಾಸ್ತವದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ನಾವು ಗಮನಿಸಿದರೆ ನಿಜಕ್ಕೂ ಪರಿಸ್ಥಿತಿ ಅಯೋಮಯವಾಗಿದೆ. ಸರ್ಕಾರಿ ಶಾಲೆಗಳಿಗೆ ಬರುವುದು ಬಹುತೇಕ ಬಡವರ ಮಕ್ಕಳು. ಈ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಒತ್ತು ನೀಡಬೇಕಾಗಿದೆ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…