ವಿಮರ್ಶೆಗಳು

ಸಾಹಿತ್ಯಕ್ಕಾಗಿ ನೊಬೆಲ್ ಬಹುಮಾನ ಪಡೆದ ಅಮೆರಿಕದ ಮೊಟ್ಟಮೊದಲ ಲೇಖಕ “ಸಿಂಕ್ಲೇರ್ ಲೂಯಿಸ್” – ಉದಂತ ಶಿವಕುಮಾರ್

ಮಿನ್ನೆ ಸೋಟಾ ಸಂಸ್ಥಾನದ ಸಾಕ್ ಸೆಂಟರ್ ಎಂಬಲ್ಲಿ ಸಿಂಕ್ಲೇರ್ ಲೂಯಿಸ್ 1885 ಫೆಬ್ರವರಿ 7ರಂದು ಜನಿಸಿದ. ಯೇಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದ. ಸದಾ ಏಕಾಂತವನ್ನು ಬಯಸುತ್ತಿದ್ದ ಈತ ಹೆಚ್ಚಿನ ಕಾಲವನ್ನು ಓದುವುದರಲ್ಲಿ ಕಳೆಯುತ್ತಿದ್ದ. 1908ರಲ್ಲಿ ಪದವೀಧರನಾದ ಈತ ದೇಶದ ಹಲವು ಭಾಗಗಳ ವೃತ್ತ ಪತ್ರಿಕೆಗಳಲ್ಲಿ ಪುಸ್ತಕ ಪ್ರಕಾಶಕರಲ್ಲಿ ಕೆಲಸ ಮಾಡುತ್ತ, ಸಿಂಕ್ಲೇರ್ ಲೂಯಿಸ್ ನಾಲ್ಕಾರು ವರುಷ ಕಳೆದ.

ಇವನ ಪ್ರಥಮ ಕಾದಂಬರಿ “ಅವರ್ ಮಿಸ್ಟರ್ ರೆನ್” 1914ರಲ್ಲಿ ಪ್ರಕಟವಾಯಿತು. ಹಲವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಈತನು ಬರೆಯುತ್ತಿದ್ದ ಸಣ್ಣ ಕಥೆಗಳು ಜನಪ್ರಿಯವಾದವು. ತನ್ನ ಬರವಣಿಗೆಯ ಆದಾಯದಿಂದಲೇ ಜೀವನ ನಡೆಸಬಹುದು ಎಂದು ತಿಳಿದ ಮೇಲೆ ಕೆಲಸ ಬಿಟ್ಟು ಪೂರ್ಣವಾಗಿ ಲೇಖನ ವೃತ್ತಿಯನ್ನು ಅವಲಂಬಿಸಿದ. ಅಮೆರಿಕ ಜನ ಜೀವನದ ಹಲವು ಮುಖಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಅವುಗಳನ್ನು “ಮೇಯ್ನ ಸ್ಟ್ರೀಟ್’ ಎನ್ನುವ ಕಾದಂಬರಿಯನ್ನು 1920 ರಲ್ಲಿ ಪ್ರಕಟಿಸಿದ. ಸಮಾಜದ ಜನರ ಸಂಕುಚಿತ ಮನೋಭಾವದ ಈ ವಿಡಂಬನೆ ಬಹಳ ಬೇಗನೆ ಜನಪ್ರಿಯವಾಯಿತು.

1922 ರಲ್ಲಿ ಸಿಂಕ್ಲೇರ್ ಲೂಯಿಸ್ ಬರೆದ ಕಾದಂಬರಿ “ಬ್ಯಾಬಿಟ್” ಹಣ ಗಳಿಸುವುದರಲ್ಲಿ ನಿರತನಾಗಿದ್ದ, ಇತರ ವಿಷಯಗಳನ್ನು ಕುರಿತು ಯೋಚಿಸಲು ಸಮಯವೇ ಇಲ್ಲದ ವ್ಯಾಪಾರಿಯ ಕಥೆಯನ್ನು ಹೊಂದಿರುವ ಈ ಕಾದಂಬರಿಗೆ 1930ರಲ್ಲಿ ನೊಬೆಲ್ ಬಹುಮಾನ ದೊರಕಿತು. 1926ರಲ್ಲಿ ಇವನ ಕಾದಂಬರಿ “ಆರೋಸ್ಮಿತ್” ಗೆ ಪುಲಿಟ್ಜರ್ ಬಹುಮಾನ ಬಂದಾಗ ಸಮಾಜದ ವಿಡಂಬನೆಯನ್ನು ನಾನು ನಿಲ್ಲಿಸುವಂತೆ ಮಾಡಬೇಕೆಂದೇ ಈ ಬಹುಮಾನ ಕೊಡುವ ತಂತ್ರ ಹೂಡಿದ್ದಾರೆ ಎಂದು ಭಾವಿಸಿ ಸಿಂಕ್ಲೇರ್ ಲೂಯಿಸ್ ಇದನ್ನು ತಿರಸ್ಕರಿಸಿದ.

1928 ರಲ್ಲಿ ಸಿಂಕ್ಲೇರ್ ಲೂಯಿಸ್ ಡೊರೊಥಿ ಥಾಮ್ಸನ್ ಎಂಬ ಲೇಖಕಿಯನ್ನು ವಿವಾಹವಾದ. ಈ ದಾಂಪತ್ಯ 14 ವರ್ಷಗಳ ನಂತರ ವಿಚ್ಛೇದನದಲ್ಲಿ ಕೊನೆಗೊಂಡಿತು. ಇವನು ಬರೆದ ಒಟ್ಟು ಕಾದಂಬರಿಗಳು 22. ಇವುಗಳಲ್ಲಿ ಆರೋಸ್ಮಿತ್, ಎಲ್ಮರ್ ಗ್ಯಾಂಟ್ರೀ, ಡಾಡ್ಸ್ ವರ್ತ್ ಪ್ರಮುಖ ಕಾದಂಬರಿಗಳು. ಈತನ ಕಾದಂಬರಿಗಳಲ್ಲಿ ಸುಂದರ ಕಥನ ಶೈಲಿ ಬಹಳ ಮನೋರಂಜಕ. ವ್ಯಾಪಾರಿಗಳು, ವಿಜ್ಞಾನಿಗಳು, ಧರ್ಮಬೋಧಕರು ಮತ್ತು ಸಮಾಜ ಸುಧಾರಕರನ್ನು ಕುರಿತು ಬರೆದಿದ್ದಾನೆ.

ತನ್ನ ಜೀವನದ ಬಹು ಭಾಗವನ್ನು ಯುರೋಪಿನಲ್ಲಿ ಕಳೆದ ಈತ 1951 ಜನವರಿ 10ರಂದು ರೋಮ್ ನಗರದಲ್ಲಿ ನಿಧನ ಹೊಂದಿದ. 2024 ಫೆಬ್ರವರಿ 7ಕ್ಕೆ ಈತನಿಗೆ 139ನೇ ಜನ್ಮ ದಿನವಾಗಿದೆ. ಈ ನೆನಪಿನಲ್ಲಿ ಸಿಂಕ್ಲೇರ್ ಲೂಯಿಸ್ ಕಿರುಪರಿಚಯ ನಿಮಗಾಗಿ.

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago