ವಿಮರ್ಶೆಗಳು

ಮಮತಾ ಶೃಂಗೇರಿ ಅವರು ಬರೆದ ಲೇಖನ ‘ಸಮಯದ ಮಹತ್ವ’

ಸಮಯ ಯಾರಿಗೂ ಯಾವುದಕ್ಕೂ ಕಾಯುವುದಿಲ್ಲ, ನನ್ನ ಸಮಯ ಬರುತ್ತದೆ, ಎಂದು ಕಾಯುತ್ತಾ ಕುಳಿತರೆ, ಸಮಯ ಕಳೆದು ಹೋಗುತ್ತದೆ. ಅದಕ್ಕೆ ಸಮಯದ ಹಿಂದೆ ನಾವು ಓಡುತ್ತಲೇ ಇರಬೇಕು, ಬೆಂಬಿಡದೇ. ಹಾಗೆಯೇ ಕಳೆದು ಹೋಗುವ ಸಮಯಕ್ಕಾಗಿ ಅತಿಯಾಗಿ ಚಿಂತೆ ಮಾಡಬಾರದು, ಇಲ್ಲವೇ ಅತಿಯಾದ ಸಂತಸ ಕೂಡ ಒಳ್ಳೆಯದಲ್ಲ.

ಒಮ್ಮೆ ಕೃಷ್ಣನಿಗೆ, “ನೋವಿನಲ್ಲಿ ಇರುವವರು ಓದಿ ಸಂತಸಪಡುವಂತೆ, ಹಾಗೂ, ಸುಖದಲ್ಲಿ ಇರುವವನು, ಓದಿ ಬೇಸರಪಡುವಂತಹ ವಾಕ್ಯ ಒಂದನ್ನು ಬರೆ,” ಎಂದು ಹೇಳಿದಾಗ.. ಕೃಷ್ಣ ಒಂದು ಸಾಲು ಬರೆದನಂತೆ. ಅದೇನೆಂದರೆ “ಈ ಸಮಯ ಕಳೆದು ಹೋಗುತ್ತದೆ” ಎಂದು. ನೋವಿನಲ್ಲಿ ಇರುವವನು ತನ್ನ ಕಷ್ಟ ಕಳೆದು ಹೋಗುತ್ತದೆ ಎಂದು ಸಮಾಧಾನ ಪಟ್ಟುಕೊಂಡರೆ, ಸುಖದಲ್ಲಿ ತನ್ನನ್ನೇ ಮರೆತವನು ಅದನ್ನು ಓದಿದರೆ, ತನಗಿರುವ ಸುಖ ಶಾಶ್ವತ ಅಲ್ಲ,ಎನ್ನುವುದನ್ನು ಅರಿತುಕೊಳ್ಳುತ್ತಾನೆ. ಹಾಗೂ ತನ್ನ ಒಳ್ಳೆಯ ಸಮಯ ಮುಗಿದು ಹೋದರೆ ಎಂದು ಭಯ ಪಡುತ್ತಾನೆ. ಹೀಗೆ ಬದುಕಿನಲ್ಲಿ ಯಾವುದು ಶಾಶ್ವತ ಅಲ್ಲ. ಎಂಬುದಕ್ಕೆ ಇದು ಒಂದು ಉತ್ತಮ ನಿದರ್ಶನ.

ನಾವು ಗುರಿ ಮುಟ್ಟಲು ಸಮಯಕ್ಕಾಗಿ ಕಾಯಬೇಕಿಲ್ಲ, ಆದರೆ ಅದರ ಫಲ ಪಡೆಯಲು ಖಂಡಿತ ಸಮಯಕ್ಕೆ ಕಾಯಬೇಕು. ಎಲ್ಲವೂ ಪಡೆಯಲು ಕಾಲ ಬರಬೇಕು.. ಆದರೆ ಪ್ರಯತ್ನ ಮಾತ್ರ ಅವಿಚ್ಛಿನ್ನವಾಗಿರಬೇಕು. ಹಾಗೆಯೇ ಸಮಯ ಎಲ್ಲವನ್ನೂ ನಮಗೆ ಅರ್ಥ ಮಾಡಿಸುತ್ತದೆ.. ಯಾರು ತನ್ನವರು, ಯಾರು ಪರರು,ಎಂದು ನಮಗೆ ಕಾಲ ಸರಿದಂತೆ ಅರಿವಾಗುತ್ತದೆ.. ಹಣವಿರುವ ಕಾಲದಲ್ಲಿ ನಮ್ಮ ಜೊತೆ ಇರುವವರು, ಕಷ್ಟ ಕಾಲದಲ್ಲಿ ನೀನು ಯಾರೆನ್ನುವರು, ಹಾಗಾಗಿ ಸುಖದಲ್ಲಿ ಇರುವ ದೊಡ್ಡ ಗುಂಪನ್ನು ನೋಡಿ ಅಹಂಕಾರ ಪಡಬಾರದು. ಹಾಗೆಯೇ ನಮ್ಮ ಕಷ್ಟದಲ್ಲಿ ನಿಂತವರನ್ನು ಎಂದೂ ಮರೆಯಬಾರದು..

ಹಾಗೆಯೇ ನಮ್ಮ ದಿನ ನಿತ್ಯದ ಬದುಕಿನಲ್ಲಿ ಸಮಯ ಪಾಲನೆ ಮಹತ್ವಪೂರ್ಣವಾದದ್ದು. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಹಾಗೂ ಸಮಯವಿರುತ್ತದೆ. ಹಾಗಾಗಿ ಸಮಯ ಮೀರಿದ ಮೇಲೆ ಮಾಡುವ ಕೆಲಸಗಳಿಗೆ ಮೌಲ್ಯವಿರುವುದಿಲ್ಲ ಹಾಗಾಗಿ ನಮ್ಮ ಜೀವನದಲ್ಲಿ ಬಾಲ್ಯದಿಂದಲೇ ಸಮಯ ಪಾಲನೆಯನ್ನು ಅಭ್ಯಾಸ ಮಾಡಿಕೊಂಡರೆ ನಮ್ಮ ದಿನಚರಿ ಸುಲಲಿತವಾಗಿರುತ್ತದೆ. ಇಲ್ಲವಾದಲ್ಲಿ ನಾವು ಯಾವ ಕೆಲಸವನ್ನು ಶ್ರದ್ಧೆಯಿಂದ ಮಾಡಲು ಸಾಧ್ಯವಾಗುವುದಿಲ್ಲ.. ಯಾವುದೇ ಕೆಲಸವನ್ನು ಮಾಡಲು ಇನ್ನೂ, ಸಮಯ ಬಾಕಿ ಇದೆ ಎಂದು ಕಾಯುತ್ತಾ ಕುಳಿತರೆ, ಕೊನೆಗೆ ಅಂತಿಮ ಸಮಯದಲ್ಲಿ ತರಾತುರಿಯಲ್ಲಿ ಕೆಲಸ ಮಾಡುವಾಗ ತಪ್ಪಾಗುವುದೇ ಅಧಿಕ.

ವಿದ್ಯಾರ್ಥಿಗಳಲ್ಲಿ ಪರೀಕ್ಷಾ ತಯಾರಿಯ ಬಗ್ಗೆ ಉತ್ತಮ ಸಮಯ ಪಾಲನೆ, ವೇಳಾಪಟ್ಟಿ ಇಲ್ಲದೆಯೇ ಹೋದಲ್ಲಿ ಉತ್ತಮ ಫಲಿತಾಂಶವನ್ನು ಗಳಿಸಲು ಸಾಧ್ಯವಿಲ್ಲ. ಕೊನೆ ಸಮಯದಲ್ಲಿ ಒಂದಷ್ಟು ಅವಲೋಕನವನ್ನು ಮಾಡಬಹುದೇ ಹೊರತು ಎಲ್ಲವನ್ನು ಕಲಿತುಕೊಳ್ಳಲು ಸಾಧ್ಯವಿರುವುದಿಲ್ಲ. ಹಾಗಾಗಿ ನಾವು ಸಮಯವಿದ್ದಾಗ, ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ಹಾಗೆಯೇ ನಾವು ಯಾವಾಗಲೂ ನಮ್ಮ ಕೆಲಸಗಳಲ್ಲಿ ಒತ್ತಡದ ಜೀವನದಲ್ಲಿ ಮುಳುಗಿ ಹೋಗಿ ಸಂಬಂಧಗಳಿಗೆ, ಸ್ನೇಹಕ್ಕೆ ಸಮಯ ಕೊಡದಿದ್ದಲ್ಲಿ ಮುಂದೆ ನಮಗೆ ಸಮಯವಿದ್ದಾಗ, ನಮ್ಮ ಬಳಿ ಮಾತನಾಡಲು ಯಾರು ಇರುವುದಿಲ್ಲ.. ಅಂತೆಯೇ ಮಕ್ಕಳು ಸಣ್ಣವರಿರುವಾಗ ಅವರಿಗಾಗಿ ನಾವು ಒಂದಷ್ಟು ಸಮಯವನ್ನು ಕೊಡಲೇಬೇಕಾಗುತ್ತದೆ. ಏಕೆಂದರೆ ಪುಟ್ಟ ಮಕ್ಕಳು ಯಾವಾಗ ಬೆಳೆದು ದೊಡ್ಡವರಾಗುತ್ತಾರೋ ಎನ್ನುವುದು ನಮ್ಮ ಗಮನಕ್ಕೆ ಬರುವುದಿಲ್ಲ, ಮಕ್ಕಳು ಅಪ್ಪ ಅಮ್ಮನ ಒಡನಾಟವನ್ನು ಬಯಸುವಾಗ ನಾವು ಕೆಲಸದಲ್ಲಿ ವ್ಯಸ್ತರಾಗಿ ಒತ್ತಡದಲ್ಲಿ ಮುಳುಗಿ ಹೋಗಿದ್ದರೆ ಮಕ್ಕಳು ಒಂಟಿಯಾಗಿ ಖಿನ್ನತೆಗೆ ಒಳಗಾಗುತ್ತಾರೆ, ಹಾಗೆಯೇ ಒಂದಷ್ಟು ವರ್ಷಗಳ ಬಳಿಕ ಮಕ್ಕಳು ಅವರ ಸ್ನೇಹಿತರೊಡನೆ ಅವರ ಸಮಾನ ವಯಸ್ಕರೊಡನೆ ಆಟವಾಡಲು, ಸಮಯ ಕಳೆಯಲು ಇಚ್ಛೆ ಪಡುತ್ತಾರೆ. ಆಗ ನಮಗೆ ಸಮಯವಿದ್ದರೂ ಮಕ್ಕಳು ನಮಗೆ ಸಮಯ ಕೊಡುವುದು ಕಷ್ಟವಾಗುತ್ತದೆ.. ಹಾಗೆ ವಯಸ್ಸಾದ ತಂದೆ ತಾಯಿಗಳು, ಹಿರಿಯರು ನಮಗಾಗಿ ಅವರ ಜೀವನದ ಸುಖ ಸಂತೋಷಗಳನ್ನು ಎಷ್ಟೋ ಬಾರಿ ತ್ಯಾಗ ಮಾಡಿರುತ್ತಾರೆ. ಮಕ್ಕಳ ಬೆಳವಣಿಗೆಯಲ್ಲಿ ತಮ್ಮ ಜೀವನವನ್ನು ಸವೆಸಿರುತ್ತಾರೆ. ಹಾಗಾಗಿ ಅವರನ್ನು ಕಾಳಜಿ ಮಾಡುವುದು ಕೂಡ ನಮ್ಮ ಕರ್ತವ್ಯವಾಗಿರುತ್ತದೆ.

ಮಾನವನ ಜೀವನ ನೀರ ಮೇಲಣ ಗುಳ್ಳೆಯಂತೆ, ಎಂಬ ಮಾತೇ ಇದೆ. ಹಾಗಾಗಿ ನಾವು ಪ್ರತಿಕ್ಷಣವೂ ಖುಷಿಯಿಂದ ಕಳೆಯಲು ಪ್ರಯತ್ನಿಸಬೇಕು. ಕಡಲೆ ಇದ್ದಾಗ ಹಲ್ಲಿಲ್ಲ, ಹಲ್ಲಿದ್ದಾಗ ಕಡಲೆ ಇಲ್ಲ, ಎಂಬಂತಹ ಪರಿಸ್ಥಿತಿ ಆಗಬಾರದು.. ಜೀವನದಲ್ಲಿ ನಡೆದು ಹೋದ ಘಟನೆಗಳ ಬಗ್ಗೆ ಚಿಂತಿಸುತ್ತಾ ಕುಳಿತರೆ, ನಮ್ಮ ವರ್ತಮಾನವೂ ಕೂಡ ಚಿಂತೆಯಲ್ಲೇ ಕಳೆದು ಹೋಗುತ್ತದೆ. ಹಾಗಾಗಿ ಆದಷ್ಟು ನಮ್ಮ ಸಮಯ ಚೆನ್ನಾಗಿರುವಾಗ ಎಲ್ಲರೊಂದಿಗೆ ಆದಷ್ಟು ಚೆನ್ನಾಗಿ ಬದುಕೋಣ ನಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳೋಣ.

SHANKAR G

View Comments

  • 👌👌ಮಿಂಚುಳ್ಳಿ ತಂಡಕ್ಕೆ ಅಭಿನಂದನೆಗಳು

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago