ಯೋಗವು ಅತ್ಯಂತ ಪ್ರಾಚೀನವಾದುದು. ಇದಕ್ಕೆ 5000 ವರ್ಷಕ್ಕಿಂತಲೂ ಹಿಂದಿನ ಇತಿಹಾಸವಿದೆ. ಯೋಗವು ಋಗ್ವೇದದಲ್ಲಿ ಮಂತ್ರಗಳ ಮೂಲಕ ಪರಿಚಯಿಸಲ್ಪಟ್ಟಿದೆ. ಕತ್ತಲೆಯಿಂದ ಕೂಡಿದ್ದ ಜಗತ್ತಿಗೆ ಬೆಳಕು ಆಗಮಿಸಿ ಓಂ ಕಾರ ನಾದವು ಹೊರಹೊಮ್ಮಿತು. ಹೀಗೆ ಓಂಕಾರದ ಮೂಲಕ ವೇದಗಳು ಆರಂಭವಾಯಿತು. ವೇದಗಳೇ ನಮ್ಮ ಹಿಂದೂ ಧರ್ಮದ ಮೂಲ. ಪ್ರಮುಖವಾಗಿ ನಾಲ್ಕು ವೇದಗಳಿವೆ. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ.ಇದರಲ್ಲಿ ಪ್ರತಿಯೊಂದರಲ್ಲೂ ನಾಲ್ಕು ಭಾಗಗಳಿವೆ. ನಂತರ ಬಂದದ್ದು ಅಷ್ಟಾಂಗ ಯೋಗ. ಅಷ್ಟಾಂಗ ಯೋಗದ ಮೂರನೆಯ ಹಂತ ಯೋಗ. ಅಷ್ಟಾಂಗ ಯೋಗದ ಎಂಟು ಅಂಗಗಳೆಂದರೆ – ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.
ಯೋಗಕ್ಕೆ ಯೋಗಸೂತ್ರಗಳ ಮೂಲಕ ಸರಿಯಾದ ರೂಪ ನೀಡಿದವರು ಪಂತಂಜಲಿ ಮಹರ್ಷಿಗಳು. ಇವರನ್ನು ಯೋಗ ಪಿತಾಮಹ ಎಂದು ಕರೆಯುತ್ತಾರೆ. ನಮ್ಮ ಪೂರ್ವಜರು ಯೋಗದ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಋಷಿಮುನಿಗಳು ತಮ್ಮ ಯೋಗವಿದ್ಯೆಯ ಮೂಲಕ ಹಲವಾರು ವರ್ಷ ತಪಸ್ಸಿನಲ್ಲಿಯೇ ಮಗ್ನವಾಗಿರುತ್ತಿದ್ದರು. ಮಾನಸಿಕವಾಗಿಯೂ ಶಾರೀರಿಕವಾಗಿಯೂ ನಮ್ಮನ್ನು ನಾವು ಧೃಢಪಡಿಸಿಕೊಳ್ಳುವುದರಲ್ಲಿ ಯೋಗವಿದ್ಯೆಯೂ ಒಂದು. ಇದು ಜಗತ್ತಿಗೆ ಭಾರತೀಯರ ಕೊಡುಗೆ.
ಯೋಗಃ ಕರ್ಮಸು ಕೌಶಲಮ್. ನಿಷ್ಕಾಮ ಕರ್ಮ ಮಾಡುವ ಕೌಶಲ್ಯವೆ ಯೋಗ ಎಂದು ಭಗವದ್ಗೀತೆ ಹೇಳುತ್ತದೆ. ಹಿಂದೂ ತತ್ವ ಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಯೋಗದ ಪ್ರಮುಖ ಪಾಠಗಳು ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ರಾಜಯೋಗ, ಹಠಯೋಗ, ಮಂತ್ರಯೋಗ, ಶಿವಯೋಗ, ನಾದಯೋಗ, ಲಯಯೋಗ ಮುಂತಾದವು. ಇದರಲ್ಲಿ ಹಠಯೋಗವು ನಮ್ಮ ಆರೋಗ್ಯಕ್ಕೆ ಉತ್ತಮವಾಗಿದ್ದು ನಮ್ಮ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಿ ಖಾಯಿಲೆಗಳಿಂದ ಮುಕ್ತಗೊಳಿಸಲು ಸಹಕಾರಿಯಾಗಿದೆ.
ಈ ಒತ್ತಡ ಜೀವನ ಶೈಲಿಯಲ್ಲಿ ಯೋಗ ಮಾಡುವುದು ಬಹಳ ಮುಖ್ಯ . ಧ್ಯಾನ ಪ್ರಾಣಾಯಾಮ ಮಾಡುವುದರಿಂದ ಸ್ವಸ್ಥ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗ ಮಾಡುವುದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ನಕಾರಾತ್ಮಕ ಅಲೆಗಳು ನಮ್ಮ ಹತ್ತಿರವೂ ಸುಳಿದಾಡುವುದಿಲ್ಲ.
ಸರಿಯಾಗಿ ಕ್ರಮಬದ್ಧವಾಗಿ ಯೋಗವನ್ನು ಅಭ್ಯಾಸ ಮಾಡುವುದರಿಂದ ಜೀವನದಲ್ಲಿ ಸುಖ ಮತ್ತು ಶಾಂತಿಯನ್ನು ಪಡೆಯಬಹುದು ಹಾಗೂ ನೋವು ಮತ್ತು ದುಃಖಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯೋಗ ಮಾನಸಿಕ ನೆಮ್ಮದಿಯ ಮೂಲ
ಈ ಆಧುನಿಕ ಯುಗದಲ್ಲಿ ಬದಲಾದ ಜೀವನಶೈಲಿ , ಆಹಾರ ಪದಾರ್ಥಗಳಿಂದಾಗಿ ಮನುಷ್ಯನ ಆರೋಗ್ಯದ ಏರುಪೇರು ಸರ್ವೇಸಾಮಾನ್ಯವಾಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಪರಿಣಾಮಕಾರಿ ಮಾರ್ಗವೆಂದರೆ ಯೋಗ ಮತ್ತು ಅದರ ನಿಯಮಿತ ಅಭ್ಯಾಸ.
ಯೋಗಾಭ್ಯಾಸದಿಂದ ಏಕಾಗ್ರತೆ ಹೆಚ್ಚುತ್ತದೆ. ನಮ್ಮ ದೇಹದ ತೂಕ ನಿಯಂತ್ರಣದಲ್ಲಿ ಇರುತ್ತದೆ. ರಕ್ತದೊತ್ತಡ ಹಾಗೂ ಇನ್ನಿತರ ಭಾದೆಗಳು ಇಲ್ಲವಾಗುತ್ತದೆ. ಹಾಗೂ ನಮ್ಮ ಮಾನಸಿಕ ಒತ್ತಡ ಮತ್ತು ಆತಂಕದಿಂದ ಬಿಡುಗಡೆ ಮಾಡುವ ಮಾಧ್ಯಮವಾಗಿದೆ.
ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯ ಅಂಗ ರಾಷ್ಟ್ರಗಳ ಸಭೆಯಲ್ಲಿ ಯೋಗದ ಕುರಿತು ಪ್ರಸ್ಥಾಪಿಸಿ ಭವ್ಯ ಇತಿಹಾಸವಿರುವ ಯೋಗವನ್ನು ಜಾಗತಿಕ ಮಟ್ಟಕ್ಕೇರಿಸಿದರು. ಯೋಗ ಭಾರತದ ಸಂಸ್ಕೃತಿಯ ಕೊಡುಗೆ. ಯೋಗಾಭ್ಯಾಸ ದೇಹ-ಮನಸ್ಸು , ಆರೋಗ್ಯ-ಕ್ಷೇಮ , ಮಾನವ – ಪ್ರಕೃತಿ ನಡುವಿನ ಕೊಂಡಿಯಾಗಿದೆ ಎಂದು ವಿಶ್ವಕ್ಕೆ ಸಾರಿದರು. ಯೋಗ ಬರಿಯ ವ್ಯಾಯಾಮವಲ್ಲ ನಮ್ಮನ್ನು ನಾವು ಅರಿತುಕೊಳ್ಳುವ ಸಾಧನ ಎಂದು ವರ್ಣಿಸಿದರು. ವಿಶ್ವಸಂಸ್ಥೆಯು ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಿತು. ಇದಕ್ಕೆ ವಿಶ್ವದ 170 ಅಂಗ ರಾಷ್ಟ್ರಗಳು ಅಂಗೀಕರಿಸಿದವು. ಜೂನ್ 21 ರಂದು ದೆಹಲಿಯ ರಾಜ ಪಥದಲ್ಲಿ ಮೊದಲ ಯೋಗ ದಿನಾಚರಣೆ ನಡೆಯಿತು.
ಯೋಗಶ್ಚಿತ್ತವೃತ್ತಿ ನಿರೋಧ….
ನಿಯಮಿತ ಯೋಗಾಭ್ಯಾಸದಿಂದ ನಾವು ಚಿತ್ತ ವೃತ್ತಿಯನ್ನು ಕಳೆದುಕೊಂಡು ಮಾನವತೆಯನ್ನು ಮೈಗೂಡಿಕೊಳ್ಳುತ್ತ, ದೈವತ್ವಕ್ಕೆ ಏರೋಣ..
೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು"…
ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ…