ವಿಮರ್ಶೆಗಳು

ಚೇತನ ಭಾರ್ಗವ ಅವರು ಬರೆದ ಲೇಖನ ‘ಗೃಹಿಣಿಯ ಆದಾಯ’

“ಗೃಹಿಣಿ ಗೃಹಮುಚ್ಯತೆ” ಎಂಬ ಸಂಸ್ಕೃತ ನಾಣ್ಣುಡಿಯಂತೆ ಗೃಹಕ್ಕೆ ಗೃಹಿಣಿಯೇ ಭೂಷಣ. ಒಂದು ಮನೆ ಉತ್ತಮ ಗೃಹವೆನ್ನಿಸಿಕೊಳ್ಳಬೇಕಾದರೆ ಆ ಮನೆಯಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಇರಬೇಕು. ಗೃಹದಲ್ಲಿ ಸದ್ಗೃಹಿಣಿಯಿದ್ದರೆ ಆ ಮನೆಗೆ ಒಂದು ಕಳೆ.

ಸರಳಾ ತುಂಬಾ ಸರಳವಾದ ವ್ಯಕ್ತಿತ್ವವುಳ್ಳ ಗೃಹಿಣಿ. ತನ್ನ ಸಂಸಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಛಾತಿ ಉಳ್ಳವಳು. ಅವಳಿಗೆ ಸಂಸಾರವೇ ಪ್ರಪಂಚ. ಅವಳು ತನ್ನ ಅತ್ತೆ, ಮಾವ, ಗಂಡ, ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಂಡು ಹೋಗುತ್ತಿದ್ದಳು. ಅವಳು ಬುದ್ಧಿವಂತೆ. ಇಂಜಿನಿಯರ್ ಪದವಿ ಹೊಂದಿದ್ದರೂ ಸಂಸಾರಕ್ಕಾಗಿ ಉದ್ಯೋಗವನ್ನು ತ್ಯಜಿಸಿ ಅಪ್ಪಟ ಗೃಹಿಣಿಯಾಗಿದ್ದಳು.

ಪಕ್ಕದ ಮನೆಯ ಶಾಂತಮ್ಮನಿಗೆ ಸರಳಾನ ಕಂಡರೆ ಸ್ವಲ್ಪ ಅಸಡ್ಡೆ. ಏಕೆಂದರೆ ಸರಳ ಪದವೀಧರೆಯಾಗಿದ್ದರೂ ದುಡಿದು ಸಂಪಾದಿಸದೆ ಮನೆಯ ಗೃಹಿಣಿಯಾಗಿದ್ದಾಳೆ ಎಂದು. ಶಾಂತಮ್ಮನವರ ಸೊಸೆ ಉದ್ಯೋಗಸ್ಥೆ. ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಳು. ಆದ್ದರಿಂದ ಶಾಂತಮ್ಮ ತನ್ನ ಸೊಸೆಯ ಕೆಲಸ ಹಾಗೂ ದೊಡ್ಡ ಸಂಬಳದ ಬಗ್ಗೆ ಹೆಮ್ಮೆಯೊಡನೆ ಸಲ್ಪ ದೊಡ್ಡಸ್ಥಿಕೆಯ ಹಮ್ಮೂ ಸೇರಿಕೊಂಡಿತ್ತು. ಯಾವಾಗಲೂ ಸರಳಾನ ಉದ್ದೇಶಿಸಿ ಆಕ್ಷೇಪಣೆ ತೆಗೆಯುತ್ತಿದ್ದಳು . ಹೊರಗಡೆ ಹೋಗಿ ನಾಲ್ಕು ಕಾಸು ಸಂಪಾದಿಸದೆ ಗೃಹಿಣಿಯಾಗಿ ಮನೆಯಲ್ಲಿಯೇ ಇರುವುದಕ್ಕೆ ವ್ಯಂಗ್ಯ ಭರಿತ ಮಾತು ಇದ್ದೇ ಇರುತ್ತಿತ್ತು. ಆದರೆ ಸರಳಾ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುತ್ತಿರಲ್ಲಿಲ್ಲ. ನಕ್ಕು ಸುಮ್ಮನಾಗಿಬಿಡುತ್ತಿದ್ದಳು.

ಹೀಗೆ ಇರಲಾಗಿ ಒಮ್ಮೆ ಶಾಂತಮ್ಮನವರಿಗೆ ಆರೋಗ್ಯದ ಸಮಸ್ಯೆ ಎದುರಾಯಿತು. ಅವರಿಗೆ ಅವರ ಕೆಲಸವನ್ನು ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಸೊಸೆಯು ಕೆಲಸಕ್ಕೆ ಹೋಗುತ್ತಿದ್ದರಿಂದ ಅವರನ್ನು ನೋಡಿಕೊಳ್ಳಲು ಅನಿವಾರ್ಯವಾಗಿ ಒಬ್ಬ ನರ್ಸ್ ಅನ್ನು ಇಟ್ಟುಕೊಳ್ಳಬೇಕಾಯಿತು. ಅವಳು ತಿಂಗಳಿಗೆ 25000 ಸಂಬಳದ ಬೇಡಿಕೆ ಇಟ್ಟಳು . ಇವರಿಗೆ ಕೊಡದೆ ಬೇರೆ ದಾರಿ ಇರಲಿಲ್ಲ. ಹಾಗೆ ಚಿಕ್ಕ ಮೊಮ್ಮಗನನ್ನು ನೋಡಿಕೊಳ್ಳಲು ಹೀಗೆ , ಮನೆಗೆಲಸದ ಒಟ್ಟು ಬಾಬ್ತು 50000 ದಾಟಿತು. ಮಗ ಸೊಸೆ ದುಡಿದ ಅರ್ಧ ಸಂಬಳ ಈ ಖರ್ಚು ವೆಚ್ಚ ತೂಗಿಸುವಲ್ಲಿಯೇ ಸರಿಯಾಯಿತು. ಜೊತೆಗೆ ಆಸ್ಪತ್ರೆ ಹಾಗೂ ಔಷಧಿಗಳ ಖರ್ಚು ಬೇರೆ.

ಆಗ ಶಾಂತಮ್ಮನಿಗೆ ಒಂದು ವಿಚಾರ ಅರಿವಾಯಿತು. ಸರಳಾ ಅಷ್ಟೊಂದು ಓದಿದ್ದರೂ ಗೃಹಿಣಿಯಾಗಿ ಸಂಸಾರವನ್ನು ಅಚ್ಚುಕಟ್ಟಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ , ಹಿರಿಯರ ಆರೋಗ್ಯದ ಕಾಳಜಿ , ಮನೆಯ ಬಹಳಷ್ಟು ಕೆಲಸಗಳನ್ನು ಅವಳೇ ಮಾಡಿ ಮುಗಿಸಿರುತ್ತಾಳೆ. ಮನೆಯ ಖರ್ಚನ್ನು ಜಾಣ್ಮೆಯಿಂದ ನಿಭಾಯಿಸಿ ಗಂಡನ ಆದಾಯದಲ್ಲಿ ಬಹಳಷ್ಟನ್ನೂ ಉಳಿಸಿ ಬ್ಯಾಂಕಿನ ಖಾತೆಯಲ್ಲಿಟ್ಟಿದ್ದಾಳೆ. ಮುಂದೆ ಅವಳ ಮಗಳ ಓದಿಗೆ ಈ ಹಣವೂ ಉಪಯೋಗಕ್ಕೆ ಬರಲಿ ಎಂಬ ಮುಂದಾಲೋಚನೆ ಅವಳದು . ಅದಲ್ಲದೆ ವಿರಾಮದ ಸಮಯದಲ್ಲಿ ಮಕ್ಕಳಿಗೆ ಪಾಠ ಹೇಳುವುದರ ಜೊತೆಗೆ ಮನೆಯ ಸುತ್ತಲಿನ ಮಕ್ಕಳಿಗೆ ಸಂಗೀತ ಪಾಠವನ್ನೂ ಹೇಳಿಕೊಡುತ್ತಾಳೆ. ಈ ವಿಚಾರಗಳನ್ನೆಲ್ಲಾ ಮಥಿಸಿದ ಶಾಂತಮ್ಮನಿಗೆ ಗೃಹಿಣಿಯ ಕೆಲಸವನ್ನು ಆದಾಯದ ಚೌಕಟ್ಟಿನಲ್ಲಿ ಹೋಲಿಕೆ ಮಾಡಿದ್ದು ತಪ್ಪು ಎನಿಸಿತು. ಕರ್ತವ್ಯದ ಜೊತೆ ಪ್ರೀತಿಯಿಂದ ಮನೆಮಂದಿಯನ್ನೆಲ್ಲ ಪೊರೆಯುವ ಸರಳಾಳ ಜೊತೆ ದುಡಿಯುತ್ತಾ ಸದಾ ಗಡಿಬಿಡಿಯಲ್ಲಿರುವ ಸೊಸೆಯ ಜೊತೆ ಹೋಲಿಕೆ ಮಾಡಿ ಹೀಗಳೆದದ್ದು ತಪ್ಪು ಎಂದು ಅರಿವಾಯಿತು.

ದುಡಿಯುವ ಹೆಣ್ಣು ಮಕ್ಕಳು ಹೆಚ್ಚಲ್ಲ, ಹಾಗೆ ಮನೆಯ ಗೃಹಿಣಿಯ ಪಾತ್ರವೂ ಕಮ್ಮಿಯಿಲ್ಲ ಎಂದು ಅರಿವಾಯಿತು. ಸಮಯ ಸಹಕಾರವಿದ್ದರೆ ಸರಳಾ ಎರಡನ್ನೂ ನಿಭಾಯಿಸಬಲ್ಲಳು ಎಂದು ಮೆಚ್ಚುಗೆಯ ಜೊತೆ ಆದರ್ಶ ಗೃಹಿಣಿಯಾಗಿರುವ ಅವಳ ಬಗ್ಗೆ ಹೆಮ್ಮೆಯೂ ಆಯಿತು.

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago