ವಿಮರ್ಶೆಗಳು

ಸವಿತಾ ಮುದ್ಗಲ್ ಅವರು ಬರೆದ ಲೇಖನ ‘ಅಪ್ಪಂದಿರ ದಿನ’

ಜವಾಬ್ದಾರಿಯೊತ್ತ ಪ್ರತಿಯೊಬ್ಬ ತಂದೆ ಸ್ಥಾನದಲ್ಲಿರುವವರಿಗೆ “ಅಪ್ಪಂದಿರ ದಿನದ ವಿಶೇಷ ಅಭಿನಂದನೆಗಳು”.

ಪ್ರಪಂಚಕ್ಕೆ ಜೀವವೊಂದು ಕಾಲಿಡಲು ಅಪ್ಪ,ಅಮ್ಮ ಇಬ್ಬರು ಇರಬೇಕು. ಉಸಿರು ನೀಡಲು ಒಬ್ಬರಾದರೆ, ಹೆತ್ತುಹೊತ್ತು ಸಾಕಲು ಇನ್ನೊಂದು ಜೀವ ಅದುವೇ ತಾಯಿ. ಒಂದು ಮಗುವಿಗೆ ತಂದೆ ತಾಯಿ ಇಬ್ಬರು ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣು ಮುಚ್ಚಿ ಇನ್ನೊಂದು ಕಣ್ಣಿಂದ ನೋಡಲು ತುಂಬಾ ಕಷ್ಟ ಅನಿಸುತ್ತದೆ. ಆದರೆ ಎರಡು ಕಣ್ಣನ್ನು ಪಡೆಯಲು ಎಲ್ಲರಿಂದಲೂ ಸಾಧ್ಯವಿಲ್ಲ.

ಹೊಟ್ಟೆಯಲ್ಲಿ (ಗರ್ಭದಿ )ಹೆಣ್ಣು ಮಗುವೆಂದು ತಿರಸ್ಕರಿಸಿ ಅಥವಾ ಹೆಣ್ಣು ಮಗು ಜನನವಾದ ಕೂಡಲೇ ಅಯ್ಯೋ ಇದು ಹೆಣ್ಣೆಂದು ಜರಿಯುತ್ತಲೇ ದೂರ ಸರಿಯುವ ಎಷ್ಟೋ ಅಪ್ಪಂದಿರು ಈ ಭೂಮಿಯಲ್ಲಿ ಇದ್ದಾರೆ. ಒಂದು ತಾಯಿಯ ಉದರದಲ್ಲಿ ಜನಿಸಿದವನು, ತನಗೆ ಮಡದಿಯಾಗಿ ಹೆಣ್ಣು ಬೇಕು ಆದ್ರೆ ಮಕ್ಕಳಾಗಲು ಹೆಣ್ಣು ಮಾತ್ರ ಬೇಡ ಅನ್ನುವ ಬುದ್ಧಿ ಅವರಲ್ಲಿರುತ್ತದೆ. ನಮ್ಮ ಕಣ್ಮುಂದೆ ಇಂದಿಗೂ ಎಷ್ಟೋ ತಂದೆ ತಾಯಿಯವರಿಂದ ದೂರಾದ ಅನಾಥ ಮಕ್ಕಳು ಸಾಕ್ಷಿಯಾಗಿದ್ದಾರೆ. ಇಂತಹ ಮಕ್ಕಳಿಗೆ ಎಲ್ಲಿಯಾ ಅಪ್ಪನ ಆಚರಣೆ?, ಅಮ್ಮಂದಿರ ಆಚರಣೆ ಹೇಳಿ?.

ಒಂದು ಪತ್ರಿಕೆ ತೆರೆದರು, ಒಂದು ವಾಟ್ಸಪ್ ಸ್ಟೇಟಸ್ ನೋಡಿದರೂ ಎಲ್ಲೆಂದರಲ್ಲಿ ಅಪ್ಪನ ಬಗ್ಗೆ ಪ್ರಶಂಸೆಯ ಬರಹಗಳು, ಚಿತ್ರಗಳು, ಸೆಲ್ಫಿಗಳು ರಾರಾಜಿಸುತ್ತವೆ. ಆದರೆ ಒಂದು ಮುಗ್ಧ ಮಗುವನ್ನು ಅನಾಥರನ್ನಾಗಿ ಮಾಡಿ ದೂರದಿಂದ ನೋಡಿ ವ್ಯಥೆ ಪಡದ ಮನಸ್ಸಿನವರು ತಂದೆಯಾಗಿ ಈ ಭೂಮಿಯಲ್ಲಿ ಉಳಿದಿದ್ದಾರೆ.

ಕೆಲವರು ತಂದೆಯಿಂದಲೇ ಜೀವನದಲ್ಲಿ ತೊಂದರೆಯನ್ನು ಅನುಭವಿಸಿರುತ್ತಾರೆ, ಇನ್ನೂ ಕೆಲವರು ತಂದೆಯಿಂದಲೇ ಜೀವನದಲ್ಲಿ ಮುಂದೆ ಬಂದಿರುತ್ತಾರೆ, ಅಂತವರಿಗೆ ಜೀವನದಲ್ಲಿ ತಂದೆಯೇ ಆಧಾರ ಸ್ತಂಭ, ಅವರಿಲ್ಲದೆ ಅವರ ಬದುಕಿರುವುದಿಲ್ಲ!.

ಕೇವಲ ಹುಟ್ಟಿಸಿದ ಮಾತ್ರಕ್ಕೆ ತಂದೆಯಾಗಲು ಸಾಧ್ಯವಿಲ್ಲ!…
ಒಂದು ಮಗು ಹೆಣ್ಣಾಗಲಿ,ಗಂಡಾಗಲಿ ಜನಿಸಿದ ಮೇಲೆ ಅದರ ಸಂಪೂರ್ಣ ಜವಾಬ್ದಾರಿಯೊತ್ತು ಮುಂದೆ ನಿಂತು ಅದರ ಹಾಗೂ ಹೋಗುಗಳನ್ನು ನೋಡಿಕೊಂಡು, ವಿದ್ಯಾಭ್ಯಾಸ, ಆರೋಗ್ಯ, ಮದುವೆ ಹೀಗೆ ಎಲ್ಲದರಲ್ಲೂ ತನ್ನ ಜವಾಬ್ದಾರಿಯನ್ನು ತೋರಿಸಿ ಬೆಳೆಸಿದವನು ನಿಜವಾದ ಅಪ್ಪನಾಗಲು ಸಾಧ್ಯ!.

ಅಪ್ಪ ಅನ್ನೋದು ಒಂದು ಶಕ್ತಿ ನಿಜ. ಆ ಶಕ್ತಿ ಕಳೆದುಕೊಂಡ ಮಕ್ಕಳು ಸಮಾಜದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ತುಂಬಾ ಶ್ರಮ ವಹಿಸಬೇಕಾಗುತ್ತದೆ,ಅದನ್ನು ಕೇವಲ ಬರಹದಲ್ಲಿ ವ್ಯಕ್ತಪಡಿಸಲು ಸಾಧ್ಯವಾಗೋದಿಲ್ಲ ನಿಜ ಜೀವನದಲ್ಲಿ ಅನುಭವಿಸಿದಾಗ ಅದು ತುಂಬಾ ವಿಚಿತ್ರವೆನಿಸಿದರು ತುಂಬಾ ಕಠಿಣವಾಗಿರುತ್ತದೆ ಅಂತವರ ಜೀವನ.

ಬೆಳೆಯುವ ಮಗುವಿಗೆ ತಾಯಿಯಾದವಳು ಇವನೇ ನಿನ್ನ ತಂದೆ ಎಂದು ಹೇಳಿದಾಗ ಅದು ಅಪ್ಪ ಎಂದು ನುಡಿಯುತ್ತದೆ. ತೊದಲು ನುಡಿಯಲಿ ಕೇಳುವ ಅಪ್ಪ ಎನ್ನುವ ಪದವು ಹೃದಯಕ್ಕೆ ಹತ್ತಿರವಾಗುತ್ತದೆ ಅಂತಹ ಸನ್ನಿವೇಶವನ್ನು ಸಹ ಕಾಣದ ಹೃದಯದವರು ನಮ್ಮ ಜೊತೆಗಿದ್ದಾರೆ. ತಂದೆಯಾದವರು ಕೇವಲ ಜನ್ಮ ನೀಡಿದರೆ ಸಾಲದು ಆ ಮಗುವಿನ ಪ್ರತಿಯೊಂದು ಬೆಳವಣಿಗೆಯಲ್ಲಿ ಸಹ ಅವನು ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ.

ಮನೆಯಲಿ ಒಂದು ಮಗುವಿಗೆ ತಂದೆ ತಾಯಿ ಇದೆ ಪ್ರಪಂಚ! ಅದಕ್ಕೆ ಇನ್ನಿತರ ಸಂಬಂಧಗಳು ಹೇಳಿಕೊಳ್ಳಲು ಮಾತ್ರವೆನಿಸುತ್ತದೆ. ಆದರೆ ಈ ತಂದೆ ಅನ್ನುವ ಪ್ರಪಂಚವೇ ಮಗುವಿನಿಂದ ದೂರಾದ ಮೇಲೆ ಆ ಮಗುವಿಗೆ ಇನ್ನೆಲ್ಲಿಯ ನಿರೀಕ್ಷೆಗಳು ಜೀವನದಲ್ಲಿ ಉಳಿಯಲು ಸಾಧ್ಯವೇ? ಒಂದು ಸಂಬಂಧದಲ್ಲಿ ಕಾರಣಾಂತರಗಳಿಂದ ದೂರಾದ ಮಗು ಅದರ ಮನೋವೈಕಲ್ಯತೆಗೆ ಕಾರಣವಾಗುತ್ತದೆ. ಅದಕ್ಕೂ ತನ್ನ ತಂದೆಯ ಬಗ್ಗೆ ಅಪಾರವಾದ ಪ್ರೀತಿ ಹೃದಯದಲ್ಲಿ ಅಡಗಿರುತ್ತದೆ. ಅದು ಕೂಡ ಬೇರೆಯವರಂತೆ ತನ್ನ ತಂದೆಯ ಬಗ್ಗೆ ಅಭಿವ್ಯಕ್ತ ಪಡಿಸಲು ಹಾತೊರೆಯುತ್ತದೆ. ಸಮಾಜದಲ್ಲಿ ಆ ಮಗು ಒಂದು ತಂದೆಯಿಂದ ದೂರವಿದೆ ಎಂದಾಗ ಎಲ್ಲರ ಕಣ್ಣಿಗೆ ಕಾಣುವುದು ಅಲ್ಲೊಂದು ಪ್ರಶ್ನೆ ಮಾತ್ರ! ವಿನಃ ಅನುಕಂಪ ಪ್ರೀತಿಯಲ್ಲ. ಅನೇಕರು ಮನನೋಯಿಸಿ ಮಾತನಾಡುವವರು ಇದ್ದಾರೆ, ಪ್ರೀತಿ ತೋರಿಸಿ ಉದಾರತೆಯನ್ನು ನೀಡುವ ಮನದವರು ನಮ್ಮಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆದ ಮಗು, ಮಾನಸಿಕವಾಗಿ ತುಂಬಾ ನೋವನ್ನು ಅನುಭವಿಸಿ ಅಥವಾ ಮುಂದೆ ಬರಲು ಸಮಾಜದಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ.

ಜೀವನದಲ್ಲಿ ಹಲವರಿಗೆ ತಂದೆ ಅವರ ಜೊತೆ ಸದಾ ಇದ್ದರು ಅವರಿಗೆ ತಂದೆ ಪ್ರೀತಿ ಸಿಕ್ಕಿರುವುದಿಲ್ಲ, ಇನ್ನು ಹಲವರು ಚಿಕ್ಕವರಿದ್ದಾಗಲೇ ತಂದೆಯನ್ನು ಕಳೆದುಕೊಂಡಿರುತ್ತಾರೆ ಮತ್ತು ಮನೆಯಲ್ಲಿ ಉಂಟಾದ ತೊಂದರೆಗಳಿಂದ ಮಕ್ಕಳು ತಂದೆಯಿಂದ ದೂರಾದವರು ಸಮಾಜದಲ್ಲಿ ಇದ್ದಾರೆ. ಇಂಥವರನ್ನು ನೋಡಿ ದಯವಿಟ್ಟು ಹೀಯಾಳಿಸಿ ಮಾತನಾಡುವುದಾಗಲಿ, ನೋಯಿಸುವಂತೆ ಮಾತುಗಳನ್ನು ಆಡಬೇಡಿ.

ಪ್ರತಿಯೊಂದು ಮಗುವಿಗೆ ತನ್ನ ತಂದೆಯ ಜೊತೆಗೆ ಆಟವಾಡಬೇಕು, ದೂರ ಪ್ರಯಾಣ ಮಾಡಬೇಕು, ಅವನ ಹೆಗಲೇರಿ ದೂರದ ಪ್ರಪಂಚವನ್ನು ಕಾಣಬೇಕೆಂಬ ಆಸೆ ಆ ಕಣ್ಣಿನಲ್ಲಿ ತುಂಬಿರುತ್ತದೆ. ಇದೆಲ್ಲದಕ್ಕೂ ಮಣ್ಣೆರಚಿ ದೂರ ಉಳಿದ ತಂದೆಯಂದಿರು ತುಂಬಾ ಇದ್ದಾರೆ. ಅವಕಾಶವಿದ್ದರೆ ಒಮ್ಮೆಯಾದರೂ ನಿಮ್ಮ ಮಕ್ಕಳ ಜೊತೆಗೆ ಪ್ರೀತಿಯಿಂದ ಕಾಲಕಳೆದು ಜೀವನವನ್ನು ಸಾಗಿಸಿ.
ಇರುವುದೊಂದೇ ಜೀವ, ಇರುವುದೊಂದೇ ಜೀವನ ಇರುವುದರೊಳಗೆ ಇದ್ದುದರಲ್ಲಿ ಒಳ್ಳೆಯವರಾಗಿ ಬದುಕು ಕಟ್ಟಿಕೊಳ್ಳೋಣ.

SHANKAR G

View Comments

  • ನನ್ನ ಲೇಖನ ಪ್ರಕಟಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🏻💐

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago