ಸುಮ್ಮನಲ್ಲ ತೋಡುವ ಬಳೆ,
ತಿಳಿ ನೀ ಹಿರಿದಿದೆ ಅದರ ಬೆಲೆ,
ಹೀಯಾಳಿಸಿದರೆ ಸುರಿವುದು ಕಷ್ಟಗಳ ಸುರಿಮಳೆ.
ಹೀಯಾಳಿಸಿ ಕಡೆಗಣಿಸಬೇಡ
ನೀನದಕ್ಕೆ ಅಗೌರವ ತೋರಬೇಡ,
ಶಕ್ತಿಯ ರೂಪ ಅದು ನೀ ಮರಿಬೇಡ.
ಆ ಬಳೆ ಇಲ್ಲದೆ ನೀ ಜನಿಸಿಲ್ಲ,
ಅದರ ಸದ್ದಿಲ್ಲದೆ ನೀ ಬೆಳೆದಿಲ್ಲ,
ಕಷ್ಟದಲ್ಲಿ ಅದು ನಿನ್ನ ಕೈ ಬಿಟ್ಟಿಲ್ಲ.
ಬದುಕಲ್ಲಿ ಬಳೆಗೆ ನೀ ಗೌರವ ತೋರು,
ಕೊನೆವರೆಗೂ ನಿನಗೆ ಶ್ರೀರಕ್ಷೆಯಾಗಿ ಕಾಯುವುದು,
ಇಲ್ಲ ನೆನಪಿಟ್ಟುಕೊ ನಿನಗದೆ ಮಹಾಮಾರಿಯಾಗುವುದು…
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…