ಕವಿತೆಗಳು

ಶೇಖರಗೌಡ ವೀ ಸರನಾಡಗೌಡರ್ ಅವರು ಬರೆದ ಕವಿತೆ ‘ಧರೆ ಹತ್ತಿ ಉರಿದಡೆ’

ಓ ಮಳೆರಾಯ, ನೀನೆಲ್ಲಿ ಇರುವೆ…?
ದೂರದ ಆಕಾಶದಲ್ಲಿ ಮೇಘರಾಜನೊಳಗೆ
ಅವಿತು ಕುಳಿತಿರುವಿಯಾ…?
ದೇವಲೋಕದ ಅಪ್ಸರೆಯರ
ಚೆಲುವಿಗೆ ಮನಸೋತು ಅವರ
ಬೆನ್ನತ್ತಿ ಓಡುತ್ತಿರುವಿಯಾ…?
ಅಥವಾ ಅವರ ತೆಕ್ಕೆಯೊಳಗೆ
ಸೇರಿಕೊಂಡು ಚೆಲ್ಲಾಟವಾಡುತ್ತಿರುವೆಯಾ…?
ಇಲ್ಲಿ ಧರೆ ಹತ್ತಿ ಉರಿಯುತ್ತಿರುವುದು
ಕಂಡೂ ಕಾಣದಂತೆ
ಜಾಣ ಕುರುಡನಾಗಿರುವಿಯಾ…?

ಜಗದ್ರಕ್ಷಕ, ಜೀವರಾಶಿಗಳ ಸಂಜೀವಿನಿ
ಸೂರ್ಯದೇವನ ಆಟಾಟೋಪ, ಪ್ರತಾಪಕ್ಕೆ
ಭೂದೇವಿ ಕಾದ ಹಂಚಿನಂತಾಗಿದ್ದಾಳೆ,
ತಳಮಳಿಸುತ್ತಿದ್ದಾಳೆ, ತತ್ತರಿಸುತ್ತಿದ್ದಾಳೆ,
ಚಡಪಡಿಸುತ್ತಿದ್ದಾಳೆ, ನಲುಗಿ ಹೋಗಿದ್ದಾಳೆ…
ಕೆಂಡಾಮಂಡಲವಾಗಿದ್ದಾಳೆ…
ಮಳೆರಾಯ… ಭೂದೇವಿ ನಿನ್ನ ಬರುವಿಗೆ
ಕಾತರಿಸಿ ಕಾಯುತ್ತಿರುವುದು
ನಿನ್ನರಿವಿಗೆ ಬರದಿರುವುದು
ವಿಷಾದನೀಯ, ಖಂಡನೀಯ!
ಮಳೆರಾಯ… ಈ ನಿಸರ್ಗದ
ನಿನ್ನ ಸಹಪಾಠಿ ಸೂರ್ಯದೇವ
ಕೆಂಡದ ಮಳೆಯನ್ನೇ ಸುರಿಸುತ್ತಿರುವುದು
ನಿನಗೆ ಕಾಣುತ್ತಿಲ್ಲವೇ…?

ಭೂಮಂಡಲದ ಸಕಲ ಜೀವರಾಶಿ,
ಮನುಜ, ಪಶು, ಪಕ್ಷಿ, ಪ್ರಾಣಿಗಳು,
ಸಸ್ಯ ಸಂಕುಲಗಳು ಕೆಂಡದಂಥಹ
ಸೂರ್ಯನ ಉರಿ ಬಿಸಿಲಿಗೆ,
ಬಿಸಿಲ ತಾಪಕ್ಕೆ…
ಭೂದೇವಿಯ ಶಾಖದ ಸ್ಪರ್ಶಕ್ಕೆ…
ತತ್ತರಿಸುತ್ತಿವೆ, ಚಡಪಡಿಸುತ್ತಿವೆ…
ನೀರಿಲ್ಲದೇ ಸಸ್ಯ ಸಂಕುಲಗಳು
ಕಮರಿ ಹೋಗುತ್ತಿವೆ, ಮುದುಡುತ್ತಿವೆ…
ಮರಗಿಡಗಳು ಬಾಡುತ್ತಿವೆ… ಒಣಗುತ್ತಿವೆ
ಪಶು, ಪಕ್ಷಿ, ಪ್ರಾಣಿಗಳು ನೀರಿನ ದಾಹಕ್ಕೆ…
ಪರಿತಪಿಸುತ್ತಿವೆ, ತಳಮಳಿಸುತ್ತಿವೆ…
ಜೀವನ್ಮರಣಗಳ ನಡುವೆ ಹೋರಾಡುತ್ತಿವೆ…
ತನ್ನದೆಯ ಕುಡಿಗಳ ಅಳಿವು, ಉಳಿವುಗಾಗಿ…
ಭೂದೇವಿ ಮೊರೆ ಇಡುತ್ತಿರುವುದು
ನಿನಗೆ ಕೇಳಿಸುತ್ತಿಲ್ಲವೇ ಮಳೆರಾಯ…?

ಓ ಮಳೆರಾಯ, ಅಷ್ಟು ಕಠಿಣನಾಗಬೇಡ
ಬಾ ಬೇಗ ಧರೆಗಿಳಿದು ಬಾ…
ನಿನ್ನೊಲವಿನ ಪ್ರೇಯಸಿ, ಜೀವನಾಡಿ
ಭೂದೇವಿಯ ತನು ಮನಗಳ ತಣಿಸು…
ಮರೆತೆಯಾದರೆ ಭೂದೇವಿಯ
ಮಕ್ಕಳ ಶಾಪಕ್ಕೆ ಗುರಿಯಾಗುವಿ…
ಅದಕ್ಕೂ ಮುಂಚೆ ಬೇಗ ಬಂದುಬಿಡು
ನಿನ್ನ ಬರುವೆಮಗೆ ಖುಷಿಯ
ಹರ್ಷದಾಯಕ ಸಂಗತಿ…
ನಮ್ಮೆಲ್ಲ ತಪ್ಪು, ಒಪ್ಪುಗಳನು…
ಹೊಟ್ಟೆಗೆ ಹಾಕಿಕೊಂಡು
ಬೇಗ ಬಂದುಬಿಡು…

ಕರುಣೆ ಇರಲಿ,
ಕಾಯಿಸಬೇಡ ಮಳೆರಾಯ…
ಇಳಿದು ಬಿಡು ಇಳೆಗೆ ಬೇಗ…
ನೀನಲ್ಲದೇ ಬೇರೆ ಯಾರಿಗೆ ಸಾಧ್ಯ
ಭೂದೇವಿಯ ಬೇಗೆ ತಣಿಸಲು…?
ಕರುಣಾಳು ಬೇಗ ಬಂದುಬಿಡು
ದೊರೆಯೇ… ಭೂರಮೆಗೆ
ನವಚೈತನ್ಯ ತುಂಬಲು…
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ನೆಲ ಹತ್ತಿ ಉರಿದಡೆ ನಿಲಬಹುದೇ…?

SHANKAR G

View Comments

  • ಮಳೆರಾಯನಿಗೆ ಕೊಟ್ಟ ಕರೆ ವಾಸ್ತವಿಕೆಯ ಹಿನ್ನೆಲೆಯಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.
    ಇಂತಹ ಕರೆಯದ ಹಿನ್ನೆಲೆಯಲ್ಲಿ ಮನಷ್ಯನು
    ಎಚ್ಚತ್ತುಕೊಂಡು ಪ್ರಕೃತಿಗೆ ಪೂರಕವಾಗಿ ನಡೆದುಕೊಳ್ಳಲೆ ಬೇಕಾಗುತ್ತದೆ

  • ಧರೆ ಕಾಯುತ್ತಿರುವುದು ಮಳೆಯ ಆಗಮನಕ್ಕಾಗಿ.
    ಧೀರ್ಘವಾದ ಕವನ ಚೆನ್ನಾಗಿದೆ ಸಾರ್.

  • ಅರ್ಥಪೂರ್ಣವಾದ ಕವಿತೆ ಸರ್🌹🌹

  • ರೈತರ ಜೀವನಾಡಿ ಮಳೆರಾಯಣ್ಣನ ಬರುವಿಕೆಕೆ ಮನನೋಂದು ಬರೆದ ಅತಿ ಸುಂದರ ಕವನ 🙏🙏

  • ಸರ್, "ಧರೆ ಹತ್ತಿ ಊರಿದೊಡೆ" ತಮ್ಮ ಕವನ ಪ್ರಸ್ತುತ ಪ್ರಕೃತಿಯ ನಿಜ ಸ್ವರೂಪವನ್ನು ನಿರೂಪಿಸುತ್ತದೆ. ಮೇಘರಾಜನಿಗೆ ಮನುಕುಲದ ಮನವಿಯನ್ನ, ರೈತ ಮನಸ್ಥಿತಿಯ ನಿಮ್ಮ ವ್ಯಕ್ತಿತ್ವದ ಮನದಾಳದ ಮನಕಲುಕುವ ಅನುಭಾವದ ಪದಪುಂಜಗಳಿಗೆ ಮನಸ್ಸು ಮಾಡಿ ಮಳೆರಾಯ ಧರೆಗಿಳಿದು ಬಂದು ಬಿಡುವಂತಿದೆ. ಮಳೆರಾಯನ ಜವಾಬ್ದಾರಿಯನ್ನು ಎಚ್ಚರಿಸಿ ,ವಸುಂಧರೆಯ ಮಡಿಲಿ ತುಂಬಿಸಿ ಹಸಿರು ಉಸಿರಾಗುವಂತೆ ಓದುಗ ಸಹೃದಯನ ಮನವನ್ನು ಅರಿವಿಲ್ಲದಂತೆ ಆವರಿಸಿಕೊಂಡು ಆಲೋಚನೆ ಮಾಡುವಂತಿದೆ.

  • ಮಳೆರಾಯನ ಕುರಿತಾದ ಕವಿತೆ ಸೊಗಸಾಗಿದೆ.
    ಅಭಿನಂದನೆಗಳು

  • ಮಳೆರಾಯನ ಕರೆ ಮನಮುಟ್ಟುವಂತೆ ಮೂಡಿದೆ ಸರ್

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago