ನಡೆವ ಹಾದಿಯ ಎದುರಿಗಿದೆ ದೊಡ್ಡ ಪರ್ವತ
ನನ್ನ ಗಮ್ಯವೆಲ್ಲ ಅದನ್ನು ಏರುವುದಷ್ಟೇ
ಕಲ್ಲು ಮರ ಅಥವಾ ಹಿಮದಿಂದಲೋ ಅದು ಆವೃತ
ದೂರದಿಂದ ಕಾಣುವುದು ನುಣ್ಣಗಷ್ಟೇ
ನಡೆವ ಹಾದಿಯಲ್ಲಿ ಹುಲ್ಲು ಮುಳ್ಳು ಗಳಿರಬಹುದು
ಗಮನವೆಲ್ಲ ಗುರಿಯ ಮೇಲಷ್ಟೇ
ಬಿರುಗಾಳಿ ಅಥವಾ ತಂಗಾಳಿ ಬೀಸುತಿರಬಹುದು
ಹೆಜ್ಜೆಯ ಮುಂದೆ ಇಡುತಿರಬೇಕಷ್ಟೆ
ಮಧ್ಯಾಹ್ನದ ಬಿಸಿಲು ಇಲ್ಲ ಸಂಜೆಯ ತಂಪಿರಬಹುದು
ಹಾದಿಯ ತಿರುವುಗಳು ತಿಳಿದಿರಬೇಕಷ್ಟೆ
ಮಳೆಗಾಲವಿರಬಹುದು ಸುಡು ಬೇಸಿಗೆ ಬರಬಹುದು
ಕ್ರಮಿಸಿದ ಕಾಲದ ಬಗ್ಗೆ ನೆನಪಿರಬೇಕಷ್ಟೆ
ಬಿದ್ದಾಗ ತಳ್ಳುವರಿರಬಹುದು, ಕೈ ನೀಡಿ ಎತ್ತುವವರಿರಬಹುದು
ಮುಂದಿಡುವ ಹೆಜ್ಜೆಗಳ ನಿಲ್ಲಿಸಬಾರದಷ್ಟೇ
ಮುಂದೆ ಚಪ್ಪಾಳೆ ಕೇಳಬಹುದು, ಹಿಂದೆ ಕೈ ತೋರಿಸಿ ನಗುವವರಿರಬಹುದು
ಮನಸ್ಸು ಸ್ಥಿಮಿತವಾಗಿರಬೇಕಷ್ಟೆ
ಪರ್ವತದ ತುದಿಯನೇರಿ ನೀ ನಡೆದ ಹಾದಿಯ ಕಾಣಬಹುದು
ಕೊನೆಗೆ ಕಾಣುವುದು ನೀ ನಡೆದ ಹೆಜ್ಜೆಗಳಷ್ಟೇ…
ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…
ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…
(ದಿನಾಂಕ 6 ಏಪ್ರಿಲ್ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…