ಕವಿತೆಗಳು

ಶಾರದಾ ಶ್ರಾವಣಸಿಂಗ ರಜಪೂತ ಅವರು ಬರೆದ ಕವಿತೆ ‘ಮೌನದಿಂದ ಶಬ್ದದೆಡೆಗೆ..’

ಮೌನ ಹೆಜ್ಜೆ ಇಟ್ಟಿತು ಶಬ್ದದೆಡೆಗೆ
ತನ್ನೋಡಲಾಳದ ಭಾವ ಹೆಕ್ಕಿ ತೆಗೆದು
ಕಾಲಗರ್ಭದ ಕತ್ತಲೆಯಲಿ ಹೂತೋದ
ಸತ್ಯಾಸತ್ಯತೆಗಳಿಗೆ ಕರಿ ಕಬ್ಬಿಣದ ಮುಖವಾಡ!
ತೊಡಿಸಿದವರು ತೊಟ್ಟರು’ಸುವರ್ಣ ಮೊಗ’
ಫಳಫಳನೆ ಹೊಳೆದು ಜಗಕೆನಿಸಿದರಿವರು ದೊಡ್ಡವರು!
ಧರಣಿಯಲ್ಲುಂಟು’ಚಲನೆ’ ಇದು ಪ್ರಜ್ಞಾದೃಷ್ಟಿ
ಕಂಡವರ ಕರುಳಿಗೆ ಕೈಹಾಕುವರೆಲ್ಲ ಅಸುರಸೃಷ್ಟಿ!
‌ಅಸ್ತಿತ್ವಕೆ ಬೆಲೆ ಕೊಟ್ಟು, ಪಡೆದಾಗ
ನಿನಗುಂಟು ಕಾಣದ ನೆಲೆಯಲ್ಲಿ ಸ್ಥಾನ!

ಉತ್ತರಿಸಲಾಗದೇ ಉಳಿದ ಮೌನವೂ ಉತ್ತರವೇ
ದೃಷ್ಟಿ ಕೊಟ್ಟ ಕಣ್ಣಿಗೆ ದೃಷ್ಟಿಕೋನ ನೀಡಿ ನೋಡು
ಸ್ಥಿರ ಮನಸ್ಸಿನಲ್ಲಿ ವಾಸ್ತವದ ಪ್ರತಿಬಿಂಬವಿದೆ!
ರೆಕ್ಕೆಗಳು ಸೋತರೂ ಹಾರುವುದ ನಿಲ್ಲಿಸದ ಹಕ್ಕಿಗೆ
ಗುರುತಿನ ಕೊರತೆಗಳಿವೆ,ಭಾಗ್ಯಗಳಿಲ್ಲದ ಹೊತ್ತಿನಲಿ..
ತಲ್ಲಣಗಳ ಮಧ್ಯೆ ಕಟ್ಟಿಕೊಂಡಷ್ಟೆ ಬದುಕೆಂಬ
ನಂಬಿಕೆ ಅಳಿಸಲು ಮುಂದಾಗುವ ಮುನ್ನ
ಸವಾಲಿನ ಪಥದಲಿ ಹೆಜ್ಜೆ ಇಟ್ಟ”ಮೌನ”
ನಂಬಿಕೆಯ ಬೆನ್ನಟ್ಟಿ,ಸವಾಲುಗಳ ಬಡಿದಟ್ಟಿ
ಬೌದ್ದಿಕ ಸಮಚಿತ್ತತೆಯ ಮಾತಿಗೆ ಸಮಾಧಿ ಕಟ್ಟಿ
ಮಾತಿಗೆ ಮತ್ತೇ ಘನತೆ ತರುವೆಡೆ
ಗೋರಿಯ ಮೇಲೆ ಹೆಜ್ಜೆಯಿಟ್ಟು ನಡೆದಿದೆ
‘ಸೀತೆ’ಮೌನವನ್ನೇ ಪ್ರತಿಭಟನೆಯ ಅಸ್ತ್ರವನ್ನಾಗಿಸಿದಂತೆ..
“ಮೌನಂ ಸಮ್ಮತಿ ಲಕ್ಷಣಂ”ಸೀಮಾರ್ಥದಲ್ಲಿರಬೇಡ
ಮೌನದಲ್ಲುಂಟು ನೀನರ್ಥೈಸಿಕೊಳ್ಳಲಾಗದೆತ್ತರ
ಪದಗಳ ಆಳದಲಿ ‘ಕಾವ್ಯ ಶಬ್ದಗಳು’ಇಳಿದಿಟ್ಟ ಹೆಜ್ಜೆ
ಹೊರಟಿವೆ ಮನಸುಗಳ ಕಳೆ ಕೀಳಲು
ಚಡಪಡಿಸಿ ಕಿಡಿ ಹೊತ್ತ ಶಬ್ದಗಳ ಗುಚ್ಛ ಹಿಡಿದು!

SHANKAR G

View Comments

Share
Published by
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago