ಎರಿಹೊಲದಾಗ ಬಿತ್ತಿದಾರ
ಮುಂಗಾರುಜೋಳ ಎಲ್ಲಡೆ
ಹಚ್ಚಹಸಿರಿನಲ್ಲಿ ಕಂಗೊಳಿಸಿ
ನಿಂತೈತೆ ಮುತ್ತಿನ ತೆನೆಗಳು
ತೆನೆಬಾಗಿದ ಸಾಲುಗಳಲಿ
ಅಡ್ಡಾಡಿ ಬರಲು ಹಿತವು
ಉಪ್ಪುಪ್ಪು ಮೆತ್ತುವುದು ಮೈಗೆ
ಮರೆಯದ ಸಿಹಿನೆನಪು ಅನುದಿನವು
ದೊಡ್ಡ ಕಣದಾಗ ರಾಶಿ
ಮಾಡಿರಲು
ಬಂಡಿತುಂಬೆಲ್ಲ ಜೋಳದ
ಚೀಲಗಳು
ಹೊಸಜೋಳ ಕೊಟ್ಬಂದು
ಕೈ ತುಂಬಾ ಹಣ ತಂದು
ಹಳೆ ಜೋಳಕೆ ಮನಸೋತು
ರೊಟ್ಟಿ ಮಾಡ್ಯಾಳ ನಮ್ಮವ್ವ
ಬಿಸಿರೊಟ್ಟಿ ತಟ್ಟಿ ತಟ್ಟಿ ದಿನವು
ಬಿಸಿತುಪ್ಪ, ಕೆನೆಮೊಸರು
ತಿನ್ನುವ ಕಾಲವು
ರೊಟ್ಟಿ ತಿಂದಷ್ಟು ಗಟ್ಟಿ
ಈದೇಹ ಎನ್ನುತ್ತಾ
ಬುಟ್ಟಿ ತುಂಬಾ ರೊಟ್ಟಿ ಮಾಡಿ
ಬುತ್ತಿ ಕಟ್ಟುತ್ತಾ
ಹೊಲದಲ್ಲಿ ಕೂತು
ಊಟ ಮಾಡುತ
ಮನಸಿನ ದುಗುಡವೆಲ್ಲ
ದೂರದೂಡುತ
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಹೆರಿಹೊಲ ಎಂದರೇನು?
ರೊಟ್ಟಿ ತಿಂದರೆ ಗಟ್ಟಿ... ತುಂಬಾ ಚೆನ್ನಾಗಿ ಇದೆ.
ಮೇಡಂ ಹೇರಿ ಅಲ್ಲಾ ಎರಿ ಆಗಬೇಕಿತ್ತು. ಸುಂದರ ಕವನ ಮೇಡಂ...
ರೊಟ್ಟಿ ತಿನ್ನುವಾಗ ನಿಮ್ಮ ಕವಿತೆ ಸ್ವಲ್ಪ ಸಾಲುಗಳು ನೆನಪಿಗೆ ಬರುವುದು ಸಹಜ... ಚೆನ್ನಾಗಿದೆ ಜೋಳದ ರೊಟ್ಟಿ...
ನನ್ನ ಕವನ ಪ್ರಕಟಿಸಿದ ಮಿಂಚುಳ್ಳಿ ಸಂಪಾದಕ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏🏻😊
ಉತ್ತಮ