ಶುರುವಾಗಿದೆ ಮುಂಗಾರಿನ ಹನಿಗಳ ಪಯಣ
ಬಿಸಿಯಾದ ನೆಲಕೆ ನೀಡಲು ತಂಪಿನ ಚುಂಬನ
ಆ ಧಾರೆಗೆ ದಾರಿಯಲ್ಲಿ ಸಿಲುಕಿದೆ ಎರಡು ಮೌನ
ಕೊಡೆಯಡಿಯಲ್ಲಿ ಸೆರೆಯಾಗಿದೆ ಅವರಿಬ್ಬರ ಗಮನ
ಕಾಯುತಿವೆ ಕಾರ್ಮೋಡಗಳು ಕಾಣಲು ಮೇಲಿಂದ
ಕಾಮನ ಬಿಲ್ಲು ಮೂಡಲು ಇವರಿಬ್ಬರ ಮನಸಿನಿಂದ
ನಡು ದಾರಿಯಲ್ಲಿ ಅಪಹರಣವಾಗಿತ್ತು ಇಬ್ಬರ ಒಲವು
ಸಂಕೋಚದ ಈ ಸಂಚಲ್ಲಿ ಸಿಕ್ಕಿತ್ತು ಇಬ್ಬರಿಗೂ ಗೆಲುವು
ಇದ್ದಲೇ ನಡೆಯುತಿದೆ ಸಂದೇಶಗಳ ವಿನಿಮಯ
ಅಂತರವಿದ್ದರೂ ಅಂತರಂಗಗಳು ಪೂರ್ಣ ತನ್ಮಯ
ಆಲಿಂಗನದ ಆಸ್ವಾದದ ರುಚಿಯನ್ನು ಬೇಡಿತ್ತು ಉಭಯ ಹೃದಯ
ಆಕರ್ಷಣೆಯ ಆಚರಣೆಗೆ ಇದೇ ಸುಂದರ ಸಮಯ
ತಂಗಾಳಿ ಸೆರೆ ಮಾಡಿ ಸರಿಸಿತ್ತು ಎರಡು ಕೊಡೆಗಳನ್ನು
ದಟ್ಟ ಇರುಳಲ್ಲಿ ಮಿಂಚು ಹಚ್ಚಿತ್ತು ಕಂಗಳಲ್ಲಿ ಪ್ರೀತಿಯ ಕಿಡಿಗಳನ್ನು
ಮುಂಗುರುಳ ಸರಿಸಿ ಅವಳ ಹಣೆಯ ಮೇಲೆ ಹುಡುಕಿತ್ತು ನೋಟ ಅಕ್ಷರಗಳನ್ನು
ಚುಂಬಿಸಿದರೆ ಮಾತ್ರ ಅರ್ಥವಾಗುವ ಸಂಭಾಷಣೆಯ ಪುಟಗಳನ್ನು
ಬಿಸಿ ಉಸಿರಿನ ನಡುವಲ್ಲಿ ಆವಿಯಾದವು ಹನಿಗಳು
ಬಿಗಿ ಅಪ್ಪುಗೆಯ ಬೆಸುಗೆಯಲ್ಲಿ ಒಂದಾದವು ಜೀವಗಳು
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
ಕಾಳಿದಾಸನ ಮೇಘ ಸಂದೇಶ್ ಕೇಳಿ ಪುಲಾಕಿತಾನಾಗಿದ್ದೆ. ಈಗ ಕೆ ಪಿ ಕಲ್ಲೋಡಿ ಅವರ ಮುಂಗಾರು ಹನಿಯ ಸಂಭಾಷಣೆ ಒಂದುತರ ಮಜವಾಗಿದೆ. ಪದ ಪುಂಜ, ಸಾಲುಗಳ ಜೋಡಣೆ
ಅಂತರಂಗದಲ್ಲಿ ತನ್ಮಯವಾಗಿ ಭಾವನೆಗಳನ್ನು
ಯುವಕರ ಹೃದಯ ತಟ್ಟುವಂತಿದೆ.