ಸ್ವಾಮಿರಾಚಾರ್ಯರೆಂಬೋ ಕಲ್ಪವೃಕ್ಷವೇ
ನನ್ನಪ್ಪ ನನ್ನ ಗುರು ಪ್ರೀತಿ ವಾತ್ಸಲ್ಯದ ಬೇರು
ಶಕುಂತಲಾ ತುಪ್ಪಸಕ್ರಿಯ ಪ್ರೀತಿಯ ಅಪ್ಪ
ಎಲ್ಲರ ಮನದ ಆರಾಧ್ಯ ಮೂರುತಿ ನನ್ನಪ್ಪ!
ಸರಸ್ವತಿಬಾಯಿ ತಾಯಿ ಕುಟುಂಬದ ಕಳಶ
ಎಲ್ಲರ ಹೊಟ್ಟೆ ನೆತ್ತಿ ತಣ್ಣಗಿಟ್ಟಾಕಿ ಹಡೆದಮ್ಮ
ಅಪ್ಪನ ಬೇಕು ಬೇಡಗಳನೆಲ್ಲ ಪೂರೈಸಿದವಳು
ಹೆಮ್ಮೆಯ ಬಳೂಂಡಗಿಯ ವರ ಪುತ್ರಿ ಇವಳು!
ಜಾಲವಾದಿ ಭೀಮಾಚಾರ್ಯರ ಸೊಸೆ ನಾನು
ಶ್ರೀನಿವಾಸರ ಮನದೊಡತಿಗೇನೂ ಕೊರತೆ ?
ಅತ್ತೆ ಶಕುಂತಲಾಬಾಯಿ ಅವರೂ ಗುರುಮಾತೆ
ಮಾವನವರು ತಂದೆಯವರು ಎಲ್ಲ ಗುರುಗಳೇ!
ಅಪ್ಪ ದೈಹಿಕ ಸದೃಢತೆ ಇಲ್ಲದಿರೂ ಸಾಧನೆಗಳ
ಮೆಟ್ಟಿಲು ಏರಿ ಸ್ನಾತಕೋತ್ತರ ಪದವಿ ಪಡೆದರು
ಕನ್ನಡ ಇಂಗ್ಲೀಷ ಉರ್ದು ಅವರಿಗೆ ಕರಗತವು
ನಿಗರ್ವಿ ಪಂಡಿತೋತ್ತಮ ವಿನಯವು ಇವರೇ!
ಸಹಸ್ರಾರು ಶಿಷ್ಯ ಬಳಗದ ಮಧ್ಯೆ ಗುರು ಕಿರೀಟ
ಸದಾ ಸಹಾಯ ಹಸ್ತದ ನಿಜ ಆಚಾರ್ಯ ಸ್ವಾಮಿ
ಸಮಾಜದ ಎಲ್ಲರೂ ತನ್ನವರೆಂಬ ಅಭಿಮಾನ
ಅದುವೇ ಅವರ ಕೀರ್ತಿ ಶಿಖರದ ನಿಜ ಮುಕುಟ!
ಏಳು ಮಕ್ಕಳನು ಸರಿಯಾದ ಮಾರ್ಗದಿ ಬೆಳೆಸಿ
ತಾನು ದೀಪ ಬೆಳಗಿ ಕತ್ತಲಲಿ ನಿಂತ ಸಂತರಾಗಿ
ಬದುಕು ಕರೆದೊಯ್ದತ್ತ ಸಾಗಿದ ಪರಮ ಗುರು
ಬಂಧುಗಳಿಗೂ ಆಶ್ರಯ ನೀಡಿದ ಗೋನಂದನ!
ತಂದೆ ನಿನ್ನ ಋಣ ತೀರಿಸಲರಿಯೇ ನಾ ಎಂದಿಗೂ
ಅದಕೆ ಅಕ್ಷರ ಬಿತ್ತುವ ಕಾಯಕದಿ ತೊಡಗಿರುವೆ
ನಿಮ್ಮ ಕುಡಿಗಳು ಎಂದಿಗೂ ನಿಮ್ಮ ಎದೆಯಕ್ಷರ
ಅಲ್ಲವೆ ಎಂದರು ಶಕ್ಕು ವಿಜು ಪುಷ್ಪಾ ನಗುತಾ
ಅದಕೆ ಸುಬ್ಬಣ್ಣ ವೆಂಕು ಶ್ರೀಗಂಧದ ಮಂದಹಾಸ
ಬೀರಿ ಜಗಕೆ ಎಮ್ಮ ತಂದೆ ಜಗದ್ವಂದ್ಯರೆಂದರು!
ಅಪ್ಪ ನನ್ನ ಹೃದಯದಲಿ ಸದಾ ನಿಮ್ಮ ಮೂರುತಿ
ಅದೇ ನನ್ನ ಬಾಳಿನ ಶುಭ್ರತೆ ಶಾಕುಂತಲೆಯ ಪರಿ!
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
So nice poem