ಕವಿತೆಗಳು

ಪ್ರೀತಿ ಹರೀಶ್ ಅವರು ಬರೆದ ಕವಿತೆ ‘ಗ್ರಂಥಾಲಯದಲ್ಲಿ ಒಂದು ದಿನ’


ಗ್ರಂಥಾಲಯಕ್ಕೆ ಹೋಗಿದ್ದೆ
ನಾ ಇಂದು,
ಅಲ್ಲೇ ಕಪಾಟಿನಲ್ಲಿ ಅವಿತು
ಕುಳಿತಿದ್ದ ಪುಸ್ತಕಗಳು
ಮಾತಾಡುತ್ತಿದ್ದವು
ಒಂದಕ್ಕೊಂದು,
ಪಿಸು ಪಿಸು ಗುಸು ಗುಸು
ಅದನ್ನು ಕೇಳಿ ಬೆರಗಾದೆ!!
ನಾ ಇಂದು

ತಮ್ಮ ನೋವಿನ ಕಥೆಯ
ವ್ಯಥೆಯನ್ನು ಹಂಚಿಕೊಳ್ಳುತ್ತಿದ್ದವು
ಒಂದಕ್ಕೊಂದು,
ನಮ್ಮನ್ನು ಮೆಚ್ಚಿ ಓದುವ ಓದುಗರಿಲ್ಲ,
ನಮಗಾಗಿ ಹಪಾಹಾಪಿಸುವ ಪ್ರೇಮಿಗಳಿಲ್ಲ,
ನಮ್ಮನ್ನು ಆರಾಧಿಸುವ ಕಲಾ ರಸಿಕರಿಲ್ಲ,
ನಾವು ಇರುವುದು ಯಾರಿಗಾಗಿ??
ಯಾರ ಸಂತೋಷಕ್ಕಾಗಿ
ಎಂದು ಕೊರಗುತ್ತಿದ್ದವು
ಒಂದಕ್ಕೊಂದು

ಈ ಕಪಾಟಿನಲ್ಲೇ ಕೂತು ಕೂತು
ಮೈಯೆಲ್ಲಾ ಜಿಡ್ಡು ಜಿಡ್ಡು,
ಮೈತುಂಬಾ ಧೂಳು ಧೂಳು
ನನಗಾಗಿ ಹಪಾಹಪಿಸಿ
ತಡಕಾಡುವ ಕೈಗಳಿಲ್ಲ,
ಮೈಗೆ ಮೆತ್ತಿಕೊಂಡಿರುವ
ಧೂಳನ್ನೆಲ್ಲ ಕೊಡುವುವ,
ಸಾಹಿತ್ಯಾಸಕ್ತರ ಬೆಚ್ಚಗಿನ
ಸ್ಪರ್ಶಕ್ಕಾಗಿ
ಹವಣಿಸುತ್ತಿರುವೆವು
ನಾ ಇಂದು

ಈ ಹಾಳು ಮೊಬೈಲ್ ಬಂದು
ನಮ್ಮ ಆಸ್ತಿತ್ವವೇ ಬುಡಮೇಲಾಗಿದೆ,
ಇಂದು ಎಲ್ಲರ ಕೈ ಬೆರಳಂಚಲ್ಲೂ
ಆ ಮಾಯಾಂಗಿಣಿ ಸೆರೆಯಾಗಿರುವಳು,
ಇಣುಕಿ ನೋಡಿದರೆ ಸಾಕು
ಮಾಯಾಲೋಕವೇ ತೆರೆದುಕೊಳ್ಳುತ್ತದೆ
ಜನರ ಮೈಮನವನ್ನೆಲ್ಲ,
ಇಂತಹ ನವಯುಗದಲ್ಲಿ
ನಮಗೆ ಎಲ್ಲಿದೆ ಬೆಲೆ??
ಎಂದು ಮಮ್ಮುಲ ಮರಗುತ್ತಿದ್ದವು
ಒಂದಕ್ಕೊಂದು

ಅಲ್ಲೇ ಇದ್ದು ಎಲ್ಲಾ ಆಲಿಸುತ್ತಿದ್ದ
ಹಿರಿಯ ಹೊತ್ತಿಗೆಯೊಂದು,
ಕೊರಗದಿರಿ ಮುದ್ದು ಮಕ್ಕಳೇ,
ಇದು ಎಲ್ಲಾ ಕ್ಷಣಿಕ
ಈ ಭ್ರಮಲೋಕದಿಂದ ಒಂದಲ್ಲಾ
ಒಂದು ದಿನ ಭ್ರಮನಿರಾಶನಗೊಂಡು,
ನಿನ್ನಲ್ಲೇ ಬಂದು ಸೆರೆಯಾಗುವರು,
ನಮಗಿರುವ ಅಸ್ತಿತ್ವವು ಎಂದಿಗೂ
ಕೊನೆಯಾಗುವುದಿಲ್ಲ,
ನವ ಕವಿಗಳು,ನವ ಓದುಗರು
ಹುಟ್ಟಿಕೊಳ್ಳುವರು,
ಬದಲಾವಣೆ ಜಗದ ನಿಯಮ
ನಮಗಿರುವ ಅತ್ಯಮೂಲ್ಯ ಬೆಲೆ
ಎಂದಿಗೂ ಕಡಿಮೆಯಾಗಿವುದಿಲ್ಲ,
ನಾವೇ ಒಂದು ಜ್ಞಾನದ ಕಣಜ,
ನಮ್ಮ ಮುಂದೆ ಎಲ್ಲಾ ನಗಣ್ಯ
ಎಂದು ಸಮಾಧಾನಿಸುತಿತ್ತು

ಈ ಎಲ್ಲಾ ಸಂಭಾಷಣೆಯ ಕೇಳಿ
ಬೆರಗಾದೆ ನಾ ಇಂದು!!
ಹಿರಿಯಜ್ಜನ ಬುದ್ದಿಮಾತು
ಸರ್ವಕಾಲಿಕ ಸತ್ಯವೆನಿಸಿತು
ನನಗೆ ಇಂದು.

SHANKAR G

Share
Published by
SHANKAR G

Recent Posts

2024ನೇ ಸಾಲಿನ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಗೆ ವಿವಿಧ ಪ್ರಕಾರದ ಕೃತಿಗಳ ಆಹ್ವಾನ

ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ. ಜಿ. ಬಾಗಲಕೋಟೆ, ಇವರಿಂದ ರಾಜ್ಯಮಟ್ಟದ "ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024"ಕ್ಕೆ ಕೃತಿಗಳನ್ನು ಆಹ್ವಾನಿಸಿದೆ.…

55 years ago

Latest Update; International Poetry Meet; “The Poet’s Village” (One World, Many Poets)

Dear Poets, As per many poets' requests, we have changed the timings a little bit;…

55 years ago

ಕೊಪ್ಪಳದಲ್ಲಿ ನಡೆದ ಗವಿಸಿದ್ಧ ಎನ್. ಬಳ್ಳಾರಿ ಕಾರ್ಯಕ್ರಮದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಕೃತಿ ಲೋಕಾರ್ಪಣೆಗೊಂಡಿತು.

ಕೊಪ್ಪಳದಲ್ಲಿ ನಡೆದ ಗವಿಸಿದ್ಧ ಎನ್. ಬಳ್ಳಾರಿ ಕಾರ್ಯಕ್ರಮದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ, ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಪ್ರಕಟಿಸಿರುವ "ಇನ್ನು…

55 years ago