ಅವಳು ಸುಂದರಿ…
ಬಳುಕುವ ವಯ್ಯಾರಿ
ಕಣ್ಣ ನೋಟದಲ್ಲೇ
ಕೊಂದು ಬಿಡುವಳಲ್ಲೆ?
ಬಾರಿ ಬಾರಿ ಸತ್ತು
ಮತ್ತೆ ಚೇತರಿಸಿ ಎದ್ದು
ಅವಳಲ್ಲಿ ಯಾಚಿಸುವೆ
ಪ್ರೇಮಭಿಕ್ಷೆಯ ಮದ್ದು
ಅದೇ ತೀಕ್ಷ್ಣ ನೋಟ
ಕಣ್ಣ ಭರ್ಜಿಯಿಂದ
ಎದೆಯ ತಿವಿಯುವ
ಕಠೋರ ಆಟ
ಮಂದಹಾಸವಿಲ್ಲ
ಮುಗುಳ್ನಗೆಯ ಸುಳಿವಿಲ್ಲ
ನಡೆಯೆಲ್ಲಾ ಒಗಟು
ಬಿಡಿಸಲಾಗದ ಕಗ್ಗಂಟು
ನಾ ಮನಸೋತೆನೆ
ಮಯಾಂಗನೆಗೆ?
ನನ್ನನ್ನೇ ನಾ ಪರೀಕ್ಷಿಸಿಕೊಳ್ಳುವ ಪರಿ
ಅವಳ ಗಮನಕ್ಕೆ ಬಾರದೆ?
ಅವಳ ಪ್ರತಿ ನಡೆ ನುಡಿ
ನಿಗೂಢ
ಹೆಣ್ಣಿನ ಹೆಜ್ಜೆ ನಡೆ ನುಡಿ
ನಿಗೂಢ!
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
ವಿದ್ಯಾ ಜೋಷಿ ಯವರ ಕವನ ಅರ್ಥ ಪೂರ್ಣ.
ಧನ್ಯವಾದಗಳು sir
ಮಿಂಚುಳ್ಳಿ ಸಾಹಿತ್ಯ ಪತ್ರಿಕೆ
ತನ್ನ ಹೆಸರಿನಂತೆ ಸರ್ವಲಂಕೃತ
ಸಾಹಿತ್ಯಲಂಕಾರದಲ್ಲಿ ಮಿಂಚುತ್ತಿದ್ದಾಳೆ.
ಕಥೆ ಕವಿತೆ ಗಜಲ್... ಎಲ್ಲವು ಮತ್ತು
ಅವುಗಳ ಚಿತ್ರಬರಹ ಸುಂದರವಾಗಿ
ಮೂಡಿಬಂದಿದೆ. ಚೆಂದದ ಕವಿತೆ ನಿಗೂಢ ಸುಂದರಿ ಓದಿದ್ದು
ಆಯ್ತು.. ಮುಂದಿನದು ಓದಬೇಕು...🙂
ಸುಂದರ ಕವನ
Thank u girijakka
ನನ್ನ ಕವನ ನಿಗೂಢ ಸುಂದರಿ ಪ್ರಕಟಿಸಿದ್ದಕ್ಕೆ ಪತ್ರಿಕಾ ವೃಂದಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು,