ಬಾಲ್ಯದಾ ಮರುಳ ಪೋರನು ನಾನು
ಕಾಲದಾ ಹುಸಿ ದುಂಬಾಲಕೆ ಬಿದ್ದು
ಬಾಲವನೆತ್ತಿ ಕರು ಪುಟಿದಂತಿತ್ತು
ನಯನಗಳ ಹರುಳೊಂದು ನೆಟ್ಟಂತಿತ್ತು
ಸ್ವರ ವ್ಯಂಜನಗಳೂ ಬಾರದಾ ಸಮಯವದು
ಸರಸ್ವತಿ ಜ್ಞಾನದ ವೀಣೆ ಮೀಟುವ ಕ್ಷಣವದು
ಅದೇನೋ ಮೋಹದ ಚಿಟ್ಟೆ ರೆಪ್ಪೆಯ ತಟ್ಟುವಂತಿತ್ತು
ಮನವು ಮಕರಂದ ಹೀರುವ ನೊಣವ ನೋಡಿ ಬಿಕ್ಕುವಂತಿತ್ತು
ಕಾಣದಾ ‘ಲತೆ’ಯೊಂದು ಘಳಿಗೆಯ ಕಂಡಳವಳು
ರೆಪ್ಪೆಗಳ ಹುಡುಕಾಟ ತೆಪ್ಪದಾ ಹುಟ್ಟ ಕಳಚಿದಂತಿತ್ತು
ಘಳಿಗೆಗಳ ಘನತೆಯ ಅರಿವಾಯಿತಂದು
ಸಾಗರದ ಸುಳಿಯಲ್ಲಿ ಸಿಕ್ಕಿತ್ತು ಹೃದಯ ಒಂದು
ಮೊಗ್ಗು ಚಿಗುರುವ ಹೊತ್ತಲಿ ರತ್ನ ಪಕ್ಷಿಯೊಂದು
ಕಾಯಿಗಳ ಕಚ್ಚಿ ಕೂಗುತಿರಲಂದು
ಕಲರವ ಕೇಳಿ ಹಂಬಲಿಸಿ ಬಂದಳವಳಂದು
ಕಣ್ಣರಳಿಸಿ ಕಂಡನೆರಡು ರತ್ನ ಪಕ್ಷಿಗಳಂದು
ಅರಿಯದ ಮನಗಳ ನಯನ ಸಂಗಮವಾಗಿ
ತುಟಿಗಳ ಬಿಚ್ಚದ ಸಂವಾದಗಳಾಗಿ
ಕಣ್ಣು ರೆಪ್ಪೆಗಳಿಬ್ಬರ ಕಾದಾಟದಲಿ
ಗೆದ್ದವರ್ಯಾರು ಅರಿಯದಾದರಿಂದು
ಜಾತಿ ಮತ ಧರ್ಮಗಳ ನೆರಳಲ್ಲಿ ನೊಂದು
ತೀರೊಂದು ಕಾಣದೆ ಕುಳಿತಿಹರಿಂದೂ
ನದಿಗಳು ಬತ್ತಿ, ಮತ್ತೇ ನೆರೆಹಾವಳಿಗಳ ಬಂದು
ಕಾಲಗಳು ಗತಿಸಿದ್ದೆ ಅರಿವಾಗದಿವರಿಗೆಂದೂ
ಪರರ ವಧುವಾಗಿ ನಕ್ಕಳವಳು ಹುಸಿ ನಗೆಯ
ನಗುವಿನ ನಗೆಯಲ್ಲಿ ಕಂಡೆನವಳ ನಿಜ ಬಗೆಯ
ಬ್ರಹ್ಮ ಗೀಚಿದ ಗೆರೆಯನ್ನಳಿಸಲಾಗದೆಂದೂ
ಅಳಿಸಲೆತ್ನಿಸಿಹ ಮೂರ್ಖ ನಾವೀರ್ವರಿಂದು
ಅವಳ ಪತಿ ,ಯನ್ನ ಸತಿ,
ಬಲು ಮುಗ್ಧ ಮಕ್ಕಳಿಹರಿಂದು
ದೀಪಾವಳಿ ದೀಪಗಳು ಬೆಳಗುತಿಹ ಮನಗಳಿಂದು
ಬತ್ತದಿರಲಿ ಹಣತೆಗಳೆಂದೂ ಅಮವಾಸ್ಯೆ ಇರುವುದಿಂದು
ಹೃದಯಗಳ ಕಾಯುತಿಹ ಎದೆಗೂಡಿಂದು ಹೇಳುತಿದೆ
ನಿನ್ನ ಸತಿ ಅವಳ ಪತಿ ಇನುಕುವರೊಮ್ಮೆ ನನ್ನಡಿ
ಕಂಡು ಇಲ್ಲಿ ಪರರ, ಕಾಣದಿರಲು ತಮ್ಮಯ,
ಕಳಚಿ ತನ್ನ ಕೊಂಡಿಯ ಜರಿಸಿ ಬಿಡುವರು ಜೀವವ
ಸಮಯ ಸರಿವ ಮುಂಚೆಯೆ ಎಚ್ಚರಿಸಿತು ಘಂಟೆಯು
ಅಂಗಿ ಮೇಲೊಂದಗಿಯ ಧರಿಸದಿರು ಎಂದಿತು
ತುಕ್ಕು ಹಿಡಿವ ಸರಳನು ಸರಿಸಿ ಬಿಡು ಎಂದಿತು
ನಂಬಿ ನಡೆವಳ ಬಾಳನು ಹಳಸದಿರು ಎಂದಿತು
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…