ಕವಿತೆಗಳು

ರವಿಕುಮಾರ ಜಾಧವ ಅವರು ಬರೆದ ಕವಿತೆ ‘ಮಾತೃತ್ವ ಪ್ರೇಮ’

ನನ್ನೊಳಗಿನ ಜಡಗೊಂಡ ಕತ್ತಲನ್ನು ಕದಲಿಸುವ,
ಪ್ರೀತಿ ಪ್ರೇಮದ ಮೋಹದ ಬೆಳಕನ್ನು ನಿಂದಿಸುವ,
ಜೀವಂತ ಪ್ರೇಮವನ್ನು ಹದಗೆಡಿಸುವ ಸಂಬಂಧ,
ಅವ್ವನ ಇರುವಿಕೆಯ ಹೆಣ್ತನವನ್ನು ಹೀಯಾಳಿಸುತ್ತಿದೆ

ಯಾರಿಲ್ಲದ ಹೊತ್ತಲ್ಲಿ ಹಾವಿನಂತೆ ಬಂದನಾತ,
ಅವ್ವನ ಸೆರಗಿನ ಕೆಂಡವನ್ನು ಎಳೆದೆಳೆದು,
ಕಾಮದ ಹೊತ್ತಲ್ಲಿ ದೇಹಗಳೆರಡು ಮುಳುಗಿ,
ಸರಸು ಸಲ್ಲಾಪದ ಮತ್ತಲ್ಲಿ ಬೆಳಕನ್ನು ಮರೆತು,

ಇನ್ಯಾರದೋ ನೆರಳಿನ ಕಾಮದ ಸ್ಪರ್ಶಕ್ಕೆ ಅವ್ವ,
ತಂದೆಯಿಲ್ಲದ ಏಕಾಂತ ಗಳಿಗೆಯಲ್ಲಿ ಬೆಂದಿರುವ
ಮಾತಿಲ್ಲದೆ, ಆತಂಕವಿಲ್ಲದೆ ಒಂದಾಗಿ ಬೆರೆತು,
ಬೆತ್ತಲೆಯಾಗಿ ಮೈ ಮರೆತ ಅವ್ವನ ಕಳಾಹೀನತೆ,

ಕಣ್ಣಲ್ಲಿ ಬೆಂಕಿಯಂತಹ ಕತ್ತಲನ್ನು ಆವರಿಸಿಕೊಂಡು,
ಅವ್ವನ ಅಸ್ತಿತ್ವವನ್ನು ಹೀಯಾಳಿಸುವ ಸರಹದ್ದು,
ಕಣ್ಣಾರೆ ಕಂಡು, ಕಂಡರೆ ವಿಚಲಿತಳಾದ ಹೊತ್ತು,
ನನ್ನೊಳಗಿನ ಕೋಪವನ್ನೆಲ್ಲ ಕಣ್ಣಲ್ಲೇ ಹರಿಸಿದೆ

ಅಪ್ಪನ ಸ್ಪರ್ಶವಾದಾಗಲೆಲ್ಲ ಮುಳ್ಳಂತಿರುವ ಕಟುಸತ್ಯ,
ಹೊರಗೂ ಬರದೆ, ಒಳಗೂ ಇರಲಾರದೆ ಅಣಕಿಸಿ,
ನನ್ನೊಳಗಿನ ವಿಚಿತ್ರ ಹೊಲಸನ್ನು ದ್ವೇಷಿಸುವ ನಾಲಿಗೆ,
ಅಧರಗಳಡಿ ಕಳಹೀನಗೊಂಡು ಮೌನತಾಳಿ,

ಅವ್ವನ ನೆರಳು ಕಂಡರೆ ಹಾವಿನಂತ ಕೋಪ,
ಅಪ್ಪನ ಕೊರಳು ಕಂಡರೆ ಮಗುವಿನಂತ ಸೆಳೆತ,
ಅವ್ವನ ಹೇಸಿಗೆಯ ಬೆವರಿನ ವಾಸನೆ ಕಾಡಿ,
ನನ್ನೊಳಗಿನ ಮಾತೃತ್ವ ಪ್ರೇಮವನ್ನು ದ್ವೇಷಿಸುತ್ತಿದೆ.

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago