ಜನನ ಮರಣದ ನಡುವೆ
ಜೀವನದ ಪಾರಮಾರ್ಥವ
ಅರಿಯಲಾರದ ಅಂಧಕಾರ
ಆವರಿಸಿ ಅಳಿಸುತಿದೆ ಮನವು ||
ಮಾನವೀಯ ಮೌಲ್ಯಗಳ
ಮರೆತು ಮೆರೆಯುತಿದೆ ಮತಿಯು
ಕಾಮಕ್ರೋಧಲೋಭ ಗಳ
ಬಲೆಗೆ ಸಿಕ್ಕಿ ಸೊರಗಿದೆ ಮನವು ||
ಸಂಸಾರ ಸಮಾಜದಲ್ಲಿನ ಪ್ರೇಮ
ಪ್ರೇತವಾಗಿ ಪರಿವರ್ತಿಸುವ ಮುನ್ನ
ಸಾಧನೆಯ ಶಿಖರವೆರುವ ಸಾಹಸ
ಅಸಾದ್ಯವೆಂದು ಕೊರಗಿದೆ ಮನವು ||
ಬಡವನಿಗೆ ಬುದ್ಧಿಯಿದ್ದರೇನು ಫಲ
ಬಲವಂತನಿಗೆ ಧನವಿದ್ದರೇನು ಫಲ
ಗುಣವಿಲ್ಲದ ಸಾಧಕನಾದರೇನು ಫಲ
ಇದಾವುದು ಇಲ್ಲದಿರುವ ಈ ಮನವು ||
ಹಸಿವಿಗಾಗಿ ಅಂಗಲಾಚಿದ ಕೈಗಳು
ಆಸ್ತಿಗಾಗಿ ಹೊಡೆದಾಡಿದ ದೇಹಗಳು
ಸ್ತ್ರೀಗಾಗಿ ಮತಿಹೀನರಾದ ಮನುಜರ
ಮದ್ಯೆ ಅವರಿಗಿಂತ ಹೀನನಾದ ಮನವು ||
ನಿಸರ್ಗ ಸೌಂದರ್ಯದ ಸೊಬಗು
ಜಗದ ಸೂಕ್ಷ್ಮ ವಿಸ್ಮಯ ಬೆಡಗು
ಸಕಲ ಜೀವರಾಶಿಗಳ ಸೃಷ್ಟಿಯು
ಅಂತರಂಗವ ತಣಿಸದಾದ ಮನವು ||
ಸುಖ ಸಂಭ್ರಮದ ಕ್ಷಣದಲಿ ಕೇಕೆಯಾಕಿ
ಕಷ್ಟ ದುಃಖವು ಬಂದಾಗ ಬೇಸರವಾಗಿ
ಎಲ್ಲ ಕಾಲವು ಸಿರಿಸಂತೋಷವ ವರಿಸುವ
ಮಂದಿಯ ಮದ್ಯೆ ಮರುಗಿದೆ ಮನವು ||
ಇದಾವುದು ಬೇಡವೆನ್ನಲು ಬೈರಾಗಿ
ಇದನೆಲ್ಲಾ ತೊರೆದವನು ವೈರಾಗಿ
ಇವುಗಳ ತ್ಯಜಿಸಿದವ ಯೋಗಿ
ಇದರ ಸುತ್ತ ಜೀವಿಸಬೇಕೆ ? ಮನವು ||
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…