ಅದುರ ಬೇಡ ಮನವೇ ನೀನು
ಬಿಡದೀ ಮೋಹ ಜೀವ ನದಿ ಹಾಡು
ಹರಿವ ತೊರೆಯಲಿ ಮಿಂದು
ಬರುವ ಕಸವನು ದೂಡಿ
ಕನುಸುಗಳ ಗೋಪುರವ ಕಟ್ಟಿ
ಬಣ್ಣದ ಬಾವುಟಗಳು ಹಾರುವ
ತೇರು ಎಳೆಯುವಾ ನಾವು
ಜೋಡಿ ಯಾಗಿಹೆಹು ನೋಡು
ಜೀವನ ರಥ ಎಳೆಯಲು
ಹೊಸತನದ ಹೊಲಿಗೆ ಹಾಕುತಲಿ
ನೆಯ್ಗೆಯ ಮಾಡುತಾ
ಸೂಜಿಯಲಿ ದಾರ ಪೋನಿಸುತಾ
ಜೇಡರ ಬಲೆ ಹೆಣೆಯುವಾ
ಕಾಡುವ ಗಂಟನು ಬಿಡಿಸುತಾ
ಬೆಚ್ಚಗೆ ಮೈ ಕಾಸಿಕೊಳ್ಳುವಾ ಹೊಡಿಸಿನೊಳಗೆ
ಭಾವನೆಯ ಕುಸುರೊಳಗೆ
ಹರಿದಾಡಿವೆ ಎರಡು ಕುಸುಮಗಳು
ಖುಷಿಯಲಿ ಗ್ರಾಣಿಸಿದೆವು , ಹರುಸದಿ ನುಲಿದೆವು
ಕಾಡು ಹಾದಿಯಲಿ ಮುಳ್ಳನು ಸರಿಸಿ
ಸಮಗೊಳಿಸಿದ ದಾರಿಯನು
ಹರಿವ ನೀರಲಿ ದೋಣಿಯ
ಹುಟ್ಟನು ಹಾಕಿ ತೆಲಿಸಿದೆವು ನೋಡು
ರಾತ್ರಿ ಹಗಲನು ಕಳೆದು ಬೆವರಿನ ಹನಿಯನು ಸುರಿಸಿ
ಕಪ್ಪು ಬಿಳುಪಿನ ಗೆರೆ ಎಳೆದು
ಕೆಂಪು ಕಾರ್ಪೆಟ್ಟಿನ ಮೇಲೆ , ಹಸಿರು ಸ್ಪಂಜನು ಹಾಸಿ
ಸಾಕಿನ್ನು ಎನ್ನುತ ಸೋತ ಜೀವಕೆ
ಹಾಕಿದೆವು ನೋಡು ಲಂಗುರವಾ
ನದಿಯ ದಡದಲಿ ಹಗ್ಗವಾ ಗೂಟಕೆ ಕಟ್ಟಿ
ಇನ್ನು ನಕ್ಷತ್ರಗಳ ಸರದಿ
ಬೆಳಕನ್ನು ಹರಸಿ, ಹುಳುಕಗಳ ಕಾಣದೆ
ಸೆಳಕನ್ನು ಕೊಟ್ಟು , ಅಂತರಂಗವ ಇಟ್ಟು
ಬತ್ತಳಿಕೆಯಲಿ ತುಂಬಿದೆ ಸಂಸ್ಕಾರ
ಬಾಣದಲಿ ಅಡಗಿದೆ ಪ್ರತಿಭೆ
ಸುಖ ಕೊಟ್ಟಿತು , ದುಃಖ ಇಟ್ಟೀತು
ಅನುಭವಿಸು ವ ಕಾಲ ನಮ್ಮಬ್ಬಿರದು
ಕಾಲಚಕ್ರದ ಉರುಳು ನಮ್ಮಿಂದ ಅವರಿಗೆ
ಮರುಕಳಿಸಿದ ಭಾವ ವರ್ಗವಾಯಿತು
ಊರದ್ವಮುಖದತ್ತ ಬುದ್ದಿಮಟ್ಟದ ಜಾಲ
ಹೊಂದಿಕೊಳ್ಳಲೇಬೇಕು ಬಂದಿಖಾನೆಯೊಳಗೆ
ಅದುರ ಬೇಡಾ ಮನಸೇ ಅದುರ ಬೇಡಾ
ನೀನು ಬಹಿರ್ಮುಖಿ, ಕಂಡದ್ದನ್ನು ಹೇಳಿಬಿಡುವವಳು
ನಾನೂ ಅಂತರಮುಖಿ , ಅನುಭವಿಸಿ ಮನದಲ್ಲೇ ನುಂಗುವವನು
ಸರಿಯಾಗಿದೆ ಜೋಡಿ ತಗೋ
ನಿನ್ನ ಬಹಿರಂಗ ನನ್ನ ಅಂತರಂಗ
ನನ್ನ ಅಂತರಂಗ ನಿನ್ನ ಬಹಿರಂಗ
ಹೀಗೆ ಕಳೆಯಿತು ಜೀವ
ಆದರೆ ಕಪ್ಪೆಯ ಗುಟುರು ಮಳೆಗೆ ಕೇಳಿಸಲೆಯಿಲ್ಲ
ಈಗ ಬೆಳಗಾಗಲು ಕೋಳಿಯೇ ಕೂಗಬೇಕೆಂದಿಲ್ಲ
ಕಾರಣ ಕಾಲ ಬದಲಾಗಿದೆ
ಅದರಬೇಡ ಮನವೇ ಅದರಬೇಡಾ
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…